Diganth Health Update: ಆಪರೇಷನ್ ಬಳಿಕ ದಿಗಂತ್ ಹೇಗಿದ್ದಾರೆ? ಗಂಡನ ಆರೋಗ್ಯದ ಕುರಿತು ಮಾಹಿತಿ ನೀಡಿದ ಐಂದ್ರಿತಾ

ನಿನ್ನೆ ಗೋವಾದಲ್ಲಿ (Goa) ಕುತ್ತಿಗೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ಸ್ಯಾಂಡಲ್​ವುಡ್​ ನಟ ದಿಗಂತ್​​ (Diganth) ಆರೋಗ್ಯದ ಕುರಿತು ನಟ ದಿಗಂತ್ ಪತ್ನಿ ಐಂದ್ರಿತಾ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿನ್ನೆ ಗೋವಾದಲ್ಲಿ (Goa) ಕುತ್ತಿಗೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ಸ್ಯಾಂಡಲ್​ವುಡ್​ ನಟ ದಿಗಂತ್​​ (Diganth) ಆರೋಗ್ಯದ ಕುರಿತು ನಟ ದಿಗಂತ್ ಪತ್ನಿ ಐಂದ್ರಿತಾ ಮಾಧ್ಯಮಗಳ ಎದುರು ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ಐಂದ್ರಿತಾ (Aindrita Ray), ‘ಈಗಾಗಲೇ ಸರ್ಜರಿ ಆಗಿದೆ. ಅಲ್ಲದೇ ದಿಗಂತ್ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಈಗಾಗಲೇ ಡಾಕ್ಟರ್​ಗೆ ದಿಗಂತ್ ನಾನು ಸಮ್ಮರ್ ಸಾಲ್ಟ್ ಗೆ ರೆಡಿ ಆಗಿದ್ದೀನಿ ಎಂದು ಹೇಳಿದ್ದಾರೆ. ಅವರು ನಿಧಾನವಾಗಿ ಚೇತರಿಸಿಕೋ್ಳುತ್ತಿದ್ದು, ವೈದ್ಯರು ಇಂದು ಅಥವಾ ನಾಳೆ ಅವರನ್ನು ಡಿಸ್ಚಾರ್ಜ್​ ಮಾಡುವುದಾಗಿ ಹೇಳಿದ್ದಾರೆ‘ ಎಂದು ಮಾಹಿತಿ ನೀಡಿದರು.  ಗೋವಾದಿಂದ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಏರ್​ ಲಿಫ್ಟ್​ ಮಾಡಿದ ಬಳಿಕ ನಿನ್ನೆ ದಿಗಂತ್​ಗೆ 3 ಗಂಟೆಗಳ ಕಾಲ ಆಪರೇಷನ್ ಮಾಡಲಾಗಿದೆ. ಸರ್ಜರಿ ಬಳಿಕ ದಿಗಂತ್​​ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಐಂದ್ರಿತಾ:

ನಿನ್ನೆ ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದ ನಟ ದಿಂಗತ್ ಅವರನ್ನು ಬೆಂಗೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರಂತೆ ಕಳೆದ ರಾತ್ರಿ ಅವರಿಗೆ ಸತತ 3 ಗಂಟೆಗಳ ಕಾಲ ಅಪರೇಷನ್ ಮಾಡಲಾಗಿದ್ದು, ಇಂದು ಅವರ ಆರೋಗ್ಯದಲ್ಲಿ ಕೊಂಚ ಮಟ್ಟಿಗಿನ ಚೇತರಿಕೆ ಕಂಡುಬಂದಿದೆ ಎಂದು ದಿಗಂತ್ ಪತ್ನಿ ಐಂದ್ರಿತಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಅಲ್ಲದೇ ಮುಂದುಮುವರೆದು ಮಾತನಾಡಿದ ಅವರು, ‘ದಿಗಂತ್ ನಾವು ವೆಕೆಷನ್ ಗೆ ಅಂತಾ ಗೋವಾಗೆ ಹೋಗಿದ್ದೇವು. ಆ ವೇಳೆ ದಿಗಂತ್ ಸಮ್ಮರ್ ಶಾಟ್ ಮಾಡುವಾಗ ಈ ಅಚಾತುರ್ಯ ನಡೆದಿದೆ. ತಕ್ಷಣ ನಾವು ಗೋವಾದ ಮಣಿಪಾಲ್ ಆಸ್ಪತ್ರೆ ಗೆ ಹೋಗಿದ್ವಿ . ಆದರೆ ಪೆಟ್ಟು ಹೆಚ್ಚಾಗಿದ್ದರಿಂದ ಅವರನ್ನು ಗೋವಾದಿಂದ ಬೆಂಗಳೂರಿಗೆ ಏರ್ ಲೀಪ್ಟ್ ಮಾಡಬೇಕಾಯಿತು. ಈ ವೇಳೆ ಸಹಕರಿಸಿದ ಗೋವಾ ಸರ್ಕಾರಕ್ಕೆ ಧನ್ಯವಾದಗಳು‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Diganth Health Report: 3 ಗಂಟೆಗಳ ಕಾಲ ಆಪರೇಷನ್ ಬಳಿಕ ದಿಗಂತ್ ಹೇಳಿದ್ದೇನು? ಈಗ ಹೇಗಿದ್ದಾರೆ ‘ಮನಸಾರೆ’ ನಟ?

ಗೋವಾದಲ್ಲಿ ಟೆನ್ಷನ್ ಆಗಿದ್ದೆ:

ಇನ್ನು, ನಾನು ಮೊದಲಿಗೆ ಗೋವಾದಲ್ಲಿ ಇದ್ದಾಗ ತುಂಬಾ ಟೆನ್ಷನ್ ಆಗಿದ್ದೆ. ಟೈಮ್ ಜಾಸ್ತಿ ಇರಲಿಲ್ಲ ಅದಕ್ಕೆ ಏರ್ ಲೀಫ್ಟ್ ಮಾಡಿದ್ವಿ. ಆದರೆ ಇದೀಗ ಆಪರೇಷನ್ ನಂತರ ದಿಗಂತ್ ನಗುತ್ತಿದ್ದಾನೆ. ನಾನು ಇನ್ಮೇಲೆ ದಿಗಂತ್ ನ ಟೇಕ್ ಕೇರ್ ಮಾಡ್ತೀನಿ. ಡಿಸ್ಚಾರ್ಜ್ ಇವತ್ತು ಅಥವಾ ನಾಳೆ ಮಾಡ್ತೀವಿ ಎಂದು ಡಾಕ್ಟರ್ಸ್​ ಹೇಳಿದ್ದಾರೆ ಎನ್ನುತ್ತಾ ಐಂದ್ರಿತಾ ಭಾವುಕರಾದರು. ಸದ್ಯ ದಿಗಂತ್ ಮಾತಾನಡುತ್ತಿದ್ದು, ಸರಿಯಾಗಿ ಊಟ ಸಹ ಮಾಡುತ್ತಿದ್ದಾರೆ ಎಂದು ಐಂದ್ರಿತಾ ಮಾಧ್ಯಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Diganth Health Report: ಆಸ್ಪತ್ರೆಯಲ್ಲಿ ದಿಗಂತ್​ ಹೇಗಿದ್ದಾರೆ? ಹೆಲ್ತ್​ ರಿಪೋರ್ಟ್​ ರಿಲೀಸ್​

ನನ್ನ ಮಗನಿಗೆ ಏನು ಆಗಿಲ್ಲ ಎಂದು ದಿಗಂತ್ ತಾಯಿ:

ದಿಗಂತ್​ ಗೆ ಏನೂ ಆಗಲ್ಲ ಎಂದು ಡಾಕ್ಟರ್ ಹೇಳಿದ್ದಾರೆ. ನನ್ನ ಮಗ ಒಂದೆರಡು ದಿನಗಳಲ್ಲಿ ಎದ್ದು ಓಡಾಡ್ತಾನೆ ಅಂತ   ಎಂದು ದಿಗಂತ್​ ತಂದೆ ಹೇಳಿದ್ದಾರೆ. ಘಟನೆ‌ ಹೇಗೆ ಆಯ್ತು ಎಂದು ನಾನು ನೋಡಿಲ್ಲ. ಓಡಾಡುವಾಗ ಬೀಳೋದು ಸಹಜ, ಚೆನ್ನಾಗಿ ಮಾತನಾಡ್ತಿದ್ದಾನೆ. ಆಪರೇಷನ್​ಗೆ ಕರೆದುಕೊಂಡು ಹೋಗಿದ್ದಾರೆ. ಮೈನರ್ ಇರೋದ್ರಿಂದ ಈಗಲೇ ಆಪರೇಷನ್ ಮಾಡ್ತೀವಿ ಅಂತ ಕರೆದುಕೊಂಡು ಹೋಗಿದ್ದಾರೆ. ಮುಂದೆ ಸಮಸ್ಯೆ ಆಗಬಾರದು ಅಂತ ಈಗಲೇ ಆಪರೇಷನ್ ಮಾಡ್ತಿದ್ದಾರೆ ಎಂದು ದಿಗಂತ್​ ತಂದೆ ಹೇಳಿದ್ದಾರೆ.
Published by:shrikrishna bhat
First published: