Diganth Health: ಆರಾಮಾಗಿದ್ದಾರಂತೆ ದಿಗಂತ್, ಲೇಟೆಸ್ಟ್ ಫೊಟೊ ಹಂಚಿಕೊಂಡ ಐಂದ್ರಿತಾ - ದೂದ್ ಪೇಡಾ ಸ್ಮೈಲಿಂಗ್!

ಐಂದ್ರಿತಾ ಟ್ವೀಟ್ ಮಾಡುವ ಮೂಲಕ ಪತಿಯ ಆರೋಗ್ಯದ ಬಗ್ಗೆ ಅಪ್​ಡೇಟ್ ನೀಡಿದ್ದಾರೆ. ಅಲ್ಲದೇ ಮಾಧ್ಯಮದವರಿಗೆ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. 

ದಿಗಂತ್

ದಿಗಂತ್

  • Share this:
ನಟ ದಿಗಂತ್ (Actor Diganth) ಆಸ್ಪತ್ರೆಯಿಂದ (Hospital) ಡಿಸ್ಚಾರ್ಜ್ (Discharge) ಆಗಿದ್ದಾರೆ. ಗೋವಾದಲ್ಲಿ (Goa) ಕುತ್ತಿಗೆಗೆ ಗಂಭೀರ ಗಾಯ ಮಾಡಿಕೊಂಡಿದ್ದ ಸ್ಯಾಂಡಲ್​ವುಡ್​ ನಟ ದಿಗಂತ್​​ (Diganth) ಆರೋಗ್ಯದ ಕುರಿತು ನಟ ದಿಗಂತ್ ಪತ್ನಿ ಐಂದ್ರಿತಾ ರೈ ನಿನ್ನೆ ಮಾಧ್ಯಮಗಳೆದುರು ಮಾತನಾಡಿ, ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಐಂದ್ರಿತಾ (Aindrita Ray) ಟ್ವೀಟ್ ಮಾಡುವ ಮೂಲಕ ಪತಿಯ ಆರೋಗ್ಯದ ಬಗ್ಗೆ ಅಪ್​ಡೇಟ್ ನೀಡಿದ್ದಾರೆ. ಅಲ್ಲದೇ ಮಾಧ್ಯಮದವರಿಗೆ ಸೇರಿದಂತೆ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಗೋವಾದಲ್ಲಿ (Goa) ಫ್ಯಾಮಿಲಿ (Family) ಜೊತೆ ಟ್ರಿಪ್‌ಗೆ (Trip) ಹೋಗಿದ್ದ ವೇಳೆ  ನಟ ದಿಗಂತ್ ಕುತ್ತಿಗೆಗೆ (Neck) ಗಂಭೀರ ಗಾಯ (Injury) ಮಾಡಿಕೊಂಡಿದ್ದರು. ಬಳಿಕ ಅವರನ್ನು ಏರ್‌ ಲಿಫ್ಟ್ (Airlift) ಮೂಲಕ ಗೋವಾದಿಂದ ಬೆಂಗಳೂರಿಗೆ (Bengaluru) ಕರೆತರಲಾಗಿತ್ತು.

ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದ ಐಂದ್ರಿತಾ:

ದಿಗಂತ್ ಅವರು ಕುತ್ತಿಗೆಗೆ ಪೆಟ್ಟು ಮಾಡಿಕೊಂಡು ಹಿನ್ನಲೆ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಈ ಕುರಿತು ಐಂದ್ರಿತಾ ಟ್ವೀಟ್ ಮಾಡಿದ್ದು, ‘ನಿನ್ನೆ ದಿಗಂತ್ ಅವರ ಶಸ್ತ್ರಚಿಕಿತ್ಸೆ ಚೆನ್ನಾಗಿ ನಡೆದಿದೆ ಮತ್ತು ಅವರು ಶೀಘ್ರವಾಗಿ ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ ಎಂದು ನಿಮಗೆ ತಿಳಿಸಲು ಸಂತೋಷವಾಗಿದೆ!
ಎಲ್ಲಾ ಅಭಿಮಾನಿಗಳು, ಹಿತೈಷಿಗಳು, ಮಾಧ್ಯಮದ ಸ್ನೇಹಿತರು ಮತ್ತು KFI ಅವರ ಪ್ರಾರ್ಥನೆ ಮತ್ತು ಶುಭಾಶಯಗಳಿಗಾಗಿ ಹೃತ್ಪೂರ್ವಕ ಧನ್ಯವಾದಗಳು‘ ಎಂದು ಹೇಳಿದ್ದಾರೆ.

ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಐಂದ್ರಿತಾ:

ಕುತ್ತಿಗೆಗೆ ಪೆಟ್ಟು ಮಾಡಿಕೊಂಡಿದ್ದ ನಟ ದಿಂಗತ್ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರಂತೆ ಅವರಿಗೆ ಸತತ 3 ಗಂಟೆಗಳ ಕಾಲ ಅಪರೇಷನ್ ಮಾಡಲಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ ಎಂದು ದಿಗಂತ್ ಪತ್ನಿ ಐಂದ್ರಿತಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Diganth Health Update: ಆಪರೇಷನ್ ಬಳಿಕ ದಿಗಂತ್ ಹೇಗಿದ್ದಾರೆ? ಗಂಡನ ಆರೋಗ್ಯದ ಕುರಿತು ಮಾಹಿತಿ ನೀಡಿದ ಐಂದ್ರಿತಾ

ಅಲ್ಲದೇ ಮುಂದುವರೆದು ಮಾತನಾಡಿದ ಅವರು, ‘ದಿಗಂತ್ ನಾವು ವೆಕೆಷನ್ ಗೆ ಅಂತಾ ಗೋವಾಗೆ ಹೋಗಿದ್ದೇವು. ಆ ವೇಳೆ ದಿಗಂತ್ ಸಮ್ಮರ್ ಶಾಟ್ ಮಾಡುವಾಗ ಈ ಅಚಾತುರ್ಯ ನಡೆದಿದೆ. ತಕ್ಷಣ ನಾವು ಗೋವಾದ ಮಣಿಪಾಲ್ ಆಸ್ಪತ್ರೆ ಗೆ ಹೋಗಿದ್ವಿ . ಆದರೆ ಪೆಟ್ಟು ಹೆಚ್ಚಾಗಿದ್ದರಿಂದ ಅವರನ್ನು ಗೋವಾದಿಂದ ಬೆಂಗಳೂರಿಗೆ ಏರ್ ಲೀಪ್ಟ್ ಮಾಡಬೇಕಾಯಿತು. ಈ ವೇಳೆ ಸಹಕರಿಸಿದ ಗೋವಾ ಸರ್ಕಾರಕ್ಕೆ ಧನ್ಯವಾದಗಳು‘ ಎಂದು ಹೇಳಿದ್ದಾರೆ.

ಸ್ಪೈನಲ್​ ಕಾರ್ಡ್ ಇಂಜುರಿ ಅಂದ್ರೆ ಏನು?:

ಬೆನ್ನುಹುರಿ ದೇಹದ ಪ್ರಮುಖ ಅಂಗಗಳಲ್ಲಿ ಒಂದು, ನಮ್ಮ ಇಡೀ ಶರೀರ ನೇರವಾಗಿ ನಿಲ್ಲಲು, ಚಲಿಸಲು ಹಾಗೂ ಚಟುವಟಿಕೆಯಿಂದ ಇರಲು ಬೆನ್ನುಹರಿಯೇ ಪ್ರಮುಖ ಸಾಧನ. ಇದಕ್ಕೆ ಯಾವುದೇ ಹಾನಿಯಾದರೂ ಇಡೀ ದೇಹ ಹಾಸಿಗೆ ಹಿಡಿಯಬೇಕಾಗುತ್ತದೆ. ಪ್ರತಿ ವರ್ಷ ಸುಮಾರು 5 ಲಕ್ಷ ವಯಸ್ಕರು ವಿವಿಧ ರೀತಿಯ ಬೆನ್ನುಹುರಿ ಗಾಯಕ್ಕೆ ಒಳಗಾಗುತ್ತಿದ್ದಾರೆ. ಈ ರೀತಿ ಗಾಯಗೊಂಡ 5 ಜನರಲ್ಲಿ ಇಬ್ಬರು ಮರಣ ಹೊಂದುತ್ತಿರುವುದು ಆತಂಕಕಾರಿ ವಿಷಯ. ಹೀಗಾಗಿ ಸ್ಪೈನಲ್ ಕಾರ್ಡ್ ಇಂಜುರಿ ಅಂದರೆ ವೈದ್ಯರು ಕೂಡ ಒಂದು  ಕ್ಷಣ ಗಾಬರಿಯಾಗುತ್ತಾರೆ.
Published by:shrikrishna bhat
First published: