news18-kannada Updated:September 29, 2020, 8:44 PM IST
ಸುಶಾಂತ್ ಸಿಂಗ್
ನವದೆಹಲಿ (ಸೆ.29): ನಟ ಸುಶಾಂತ್ ಸಿಂಗ್ ಅವರ ಸಾವಿಗೆ ಯಾವುದೇ ವಿಷ ಕಾರಣವಲ್ಲ ಎಂದು ದೆಹಲಿಯ ಏಮ್ಸ್ ವೈದ್ಯರು ಸಿಬಿಐಗೆ ವರದಿ ನೀಡಿದ್ದಾರೆ. ಅಲ್ಲದೇ ಅವರ ಸಾವು ಆತ್ಮಹತ್ಯೆ ಎಂಬ ಕುರಿತು ಕೂಡ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಕೂಡ ತಿಳಿಸಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿಯಲ್ಲ. ಆತನ ಸಾವಿಗೆ ವಿಷ ಪ್ರಾಸನ ಕಾರಣವಾಗಿರಬಹುದು ಎಂದು ನಟನ ಕುಟುಂಬ ಆರೋಪಿಸಿತು. ಈ ಸಂಬಂಧ ಮುಂಬೈ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈ ಕುರಿತು ವರದಿ ನೀಡಿರುವ ಏಮ್ಸ್ ವೈದ್ಯರು ಇದು ಕೊಲೆ ಅಥವಾ ಆತ್ಮಹತ್ಯೆ ಎಂಬ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲು ಅಸಾಧ್ಯ. ಈ ಕುರಿತು ಮತ್ತೊಂದು ಸಭೆ ಸೇರಲಿದೆ ಎಂದು ತಿಳಿಸಿದೆ ಎನ್ನಲಾಗಿದೆ.
ಜೂನ್ 14ರಂದು 34 ವರ್ಷದ ನಟ ಸುಶಾಂತ್ ಸಿಂಗ್ ಮುಂಬೈ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಈ ವೇಳೆ ಮುಂಬೈ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಇದು ಆತ್ಮಹತ್ಯೆ ಎಂದು ವರದಿ ಬಂದಿತ್ತು. ಇದಾದ ಬಳಿಕ ಇದು ಕೊಲೆ. ಈ ಕುರಿತು ತನಿಖೆ ನಡೆಯಬೇಕು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದಿತ್ತು. ಇದಾದ ಬಳಿಕ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.
ಇದನ್ನು ಓದಿ: ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿ ಸಸಿ ನೆಟ್ಟ ರಿಯಲ್ ಹೀರೋ ಸೋನು ಸೂದ್..!
ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆಯನ್ನು ಸಿಬಿಐ ತನಿಖೆಯೊಂದಿಗೆ ದೃಢೀಕರಿಸಲಾಗಿದೆ. ಈ ಪ್ರಕರಣವನ್ನು ಆತ್ಮಹತ್ಯೆ ಪ್ರಚೋದನೆ ನೀಡಿದ ಆಯಾಮದ ಮೇಲೆ ಸಿಬಿಐ ತನಿಖೆ ಮುಂದುವರೆಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಮುಂಬೈನಲ್ಲಿ ನಡೆದ ಶವಪರೀಕ್ಷೆ ವೇಳೆ ಏಮ್ಸ್ ತಂಡ ಕೂಡ ಭಾಗಿಯಾಗಿತ್ತು ಎನ್ನಲಾಗಿದೆ.
ಗೆಳತಿ ರಿಯಾ ಚಕ್ರವರ್ತಿ ಸುಶಾಂತ್ಗೆ ಮಾನಸಿಕವಾಗಿ ಹಿಂಸೆ, ಶೋಷಣೆ ಮಾಡಿದ್ದಳು. ಆತನ ಸಾವಿಗೆ ಆಕೆಯೇ ಕಾರಣ ಎಂದು ನಟನ ಕುಟುಂಬ ಆರೋಪಿಸಿದ ಬಳಿಕ ಸಿಬಿಐ ಈ ಪ್ರಕರಣವನ್ನು ಕೈಗೆತ್ತಿಕೊಂಡಿತು.
Published by:
Seema R
First published:
September 29, 2020, 8:41 PM IST