HOME » NEWS » Entertainment » AGNISAKSHI CHANDRIKA BIGG BOSS PRIYANKA ALL SET TO PLAY THE NEGATIVE ROLE IN FANTASY ASTV ZP

ಬಿಗ್ ಬಾಸ್ ಪ್ರಿಯಾಂಕಾ ಬೆಳ್ಳಿತೆರೆಯಲ್ಲೂ ವಿಲನ್..?

Agnisakshi Chandrika: ಇದೊಂದು ಥ್ರಿಲ್ಲರ್ ಶೈಲಿಯ ಸಿನಿಮಾ. ಚಿತ್ರದ ಶೇ. 90 ಭಾಗ ಒಳಾಂಗಣದಲ್ಲಿ ನಡೆದರೆ, ಇನ್ನು ಶೇ. 10 ಹೊರಾಂಗಣದಲ್ಲಿ ಶೂಟ್ ಮಾಡಲಾಗಿದೆಯಂತೆ.

news18-kannada
Updated:November 9, 2020, 8:56 PM IST
ಬಿಗ್ ಬಾಸ್ ಪ್ರಿಯಾಂಕಾ ಬೆಳ್ಳಿತೆರೆಯಲ್ಲೂ ವಿಲನ್..?
Bigg boss Priyanka
  • Share this:
ಇತ್ತೀಚೆಗಷ್ಟೇ ಚಿತ್ರೀಕರಣ ಶುರುಮಾಡಿದ್ದ ಫ್ಯಾಂಟಸಿ ಚಿತ್ರತಂಡ ಇದೀಗ ಕುಂಬಳಕಾಯಿ ಒಡೆದು, ಶೂಟಿಂಗ್ ಮುಗಿಸಿಕೊಂಡ ಸಂಭ್ರಮದಲ್ಲಿದೆ. ಕೇವಲ 24 ದಿನದಲ್ಲಿ ಚಿತ್ರೀಕರಣ​ ಕಂಪ್ಲೀಟ್​ ಮಾಡಿಕೊಂಡಿದೆ. ಪವನ್​ ಡ್ರೀಮ್​ ಫಿಲಂಸ್​ ಲಾಂಛನದಲ್ಲಿ ಸಿದ್ಧವಾಗಿರುವ ‘ಫ್ಯಾಂಟಸಿ’ ಚಿತ್ರಕ್ಕೆ ಸ್ವತಃ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ ಪವನ್ ಕುಮಾರ್ ಆರ್​.

ನಿರ್ದೇಶಕ ಗುರು ದೇಶಪಾಂಡೆ ‘ಸಂಹಾರ’ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಚಂದನವನಕ್ಕೆ ಬಂದು, ಬಳಿಕ ‘ಅಮ್ಮ ಐ ಲವ್​ ಯೂ’, ‘ಆದ್ಯಾ’ ಸಿನಿಮಾಗಳಲ್ಲಿ ನಿರ್ದೇಶಕ ಕೆ.ಎಂ. ಚೈತನ್ಯ ಅವರೊಂದಿಗೆ ಕೆಲಸ ಮಾಡಿರೋ ಅನುಭವ ಪವನ್ ಗಿದೆ. ಫ್ಯಾಂಟಸಿ‌ ಚಿತ್ರಕ್ಕೆ ಪಿ.ಕೆ. ಎಚ್​ ದಾಸ್​ ಛಾಯಾಗ್ರಹಣ, ಗಣೇಶ್​ ನಾರಾಯಣ್​ ಸಂಗೀತ,  ಶಶಿರಾಮ್​ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ಬಾಲರಾಜ್ವಾಡಿ ಈ ಚಿತ್ರದ ನಾಯಕ. ಭಾಸ್ಕರ್ ಪೊನ್ನಪ್ಪ ಎಂಬ ಪಾತ್ರದಲ್ಲಿ ಅವರು ಅಭಿನಯಿಸಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಿ ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ನಟಿಸಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಮಿಂಚಿದ್ದ ಪ್ರಿಯಾಂಕಾ ಸಿಲ್ವರ್ ಸ್ಕ್ರೀನ್ ನಲ್ಲೂ ಸಹ ನೆಗೆಟಿವ್ ಶೇಡ್ ಇರೋ ಪಾತ್ರದಲ್ಲಿಯೇ ಮಿಂಚೋಕೆ ಸಜ್ಜಾಗಿರೋದು ವಿಶೇಷ.

ಇದೊಂದು ಥ್ರಿಲ್ಲರ್ ಶೈಲಿಯ ಸಿನಿಮಾ. ಚಿತ್ರದ ಶೇ. 90 ಭಾಗ ಒಳಾಂಗಣದಲ್ಲಿ ನಡೆದರೆ, ಇನ್ನು ಶೇ. 10 ಹೊರಾಂಗಣದಲ್ಲಿ ಶೂಟ್ ಮಾಡಲಾಗಿದೆಯಂತೆ. ಸದ್ಯ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್​ ಕೆಲಸದಲ್ಲಿ ಫ್ಯಾಂಟಸಿ ಚಿತ್ರತಂಡ ಬ್ಯುಸಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿ ವೇಳೆಗೆ ಚಿತ್ರಮಂದಿರದಲ್ಲಿ ಫ್ಯಾಂಟಸಿ ನೋಡೋ ಅವಕಾಶ ಪ್ರೇಕ್ಷಕರಿಗೆ ಸಿಗಬಹುದು‌‌.

ಇದನ್ನೂ ಓದಿ: IPL 2020: ಆತನ ಭವಿಷ್ಯವಾಣಿ ಸುಳ್ಳಾಗಿರಬಹುದು, ಆದರೆ ಡೆಲ್ಲಿ ಬಗ್ಗೆ ಆತ ಹೇಳಿದ ಭವಿಷ್ಯ ನಿಜವಾಗಿದೆ..!
Published by: zahir
First published: November 9, 2020, 7:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading