ಕೊನೆಗೂ 10ನೇ ತರಗತಿ ಪಾಸ್ ಆದ ಮಾಜಿ ಸಿಎಂ, Dasvi ಸಿನಿಮಾ ಇವ್ರದ್ದೇ ಕತೆ!

ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರನ್ನೆ ಸ್ಫೂರ್ತಿಯಾಗಿರಿಸಿಕೊಂಡು ದಸ್ವಿ ಸಿನಿಮಾ ಮಾಡಲಾಗಿತ್ತು. ಅಭಿಷೇಕ್ ಬಚ್ಚನ್​ ಭ್ರಷ್ಟ ಸಿಎಂ ಆಗಿ ಒಂದು ಕಾರಣಕ್ಕೆ ಜೈಲು ಸೇರುತ್ತಾರೆ. ಜೈಲಿನಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಅಭಿಷೇಕ್ ಬಚ್ಚನ್​ ಉಪಾಯವೊಂದನ್ನು ಮಾಡುತ್ತಾರೆ.

ಓಂ ಪ್ರಕಾಶ್ ಚೌಟಾಲಾ

ಓಂ ಪ್ರಕಾಶ್ ಚೌಟಾಲಾ

  • Share this:
ಅಭಿಷೇಕ್ ಬಚ್ಚನ್ ಅಭಿನಯದ ಹೊಸ ಸಿನಿಮಾ ದಸ್ವಿ  (Dasvi ) ಏಪ್ರಿಲ್ 7 ರಂದು ನೆಟ್‍ಫ್ಲಿಕ್ಸ್ (Netflix) ಮತ್ತು ಜಿಯೋ ಸಿನಿಮಾದಲ್ಲಿ (Jio Films) ಬಿಡುಗಡೆಯಾಗಿತ್ತು ವೀಕ್ಷಕರಿಂದ ಅತ್ಯುತ್ತಮ ವಿಮರ್ಶೆ ಮತ್ತು ಮೆಚ್ಚುಗೆಗಳನ್ನು ಬಾಚಿಕೊಂಡಿತ್ತು. ಸಿನಿಮಾ ಕಥೆ ವಿಭಿನ್ನವಾಗಿತ್ತು. ಅನಕ್ಷರಸ್ಥ, ಭ್ರಷ್ಟಾಚಾರಿ ರಾಜಕಾರಣಿಯೊಬ್ಬ ಜೈಲು ಸೇರುವುದು ಮತ್ತು ತನ್ನ 10 ನೇ ತರಗತಿಯನ್ನು ಮುಗಿಸಲು ನಿರ್ಧರಿಸುವ ಕಥಾ ವಸ್ತುವುಳ್ಳ ಸಿನಿಮಾವಿದು. ಅಭಿಷೇಕ್ ಬಚ್ಚನ್ (Abhishek Bachchan)  ಈ ಸಿನಿಮಾದಲ್ಲಿ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೆಚ್ಚಿನ ಸಿನಿಮಾಗಳು ಜನರ ಮೇಲೆ, ಅದರಲ್ಲೂ ಯುವ ಜನರ ಮೇಲೆ ಸಣ್ಣ ಮಟ್ಟದಲ್ಲಾದರೂ, ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತವೆ. ಈ ಸಿನಿಮಾಗೆ ಸ್ಫೂರ್ತಿಯಾದವರು ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ (Ex-Haryana CM Om Prakash Chautala). ಅವರು ಕೂಡ ನಿಜ ಜೀವನದಲ್ಲಿ 10ನೇ ತರಗತಿ ಪರೀಕ್ಷೆ ಪಾಸಾಗಲು ಹರಸಾಹಸ ಪಟ್ಟಿದ್ದರು.

ಕೊನೆಗೂ 10ನೇ ತರಗತಿ ಪಾಸ್ ಆದ ಮಾಜಿ ಸಿಎಂ!

ಹೌದು, ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಅವರನ್ನೆ ಸ್ಫೂರ್ತಿಯಾಗಿರಿಸಿಕೊಂಡು ದಸ್ವಿ ಸಿನಿಮಾ ಮಾಡಲಾಗಿತ್ತು. ಅಭಿಷೇಕ್ ಬಚ್ಚನ್​ ಭ್ರಷ್ಟ ಸಿಎಂ ಆಗಿ ಒಂದು ಕಾರಣಕ್ಕೆ ಜೈಲು ಸೇರುತ್ತಾರೆ. ಜೈಲಿನಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಅಭಿಷೇಕ್ ಬಚ್ಚನ್​ ಉಪಾಯವೊಂದನ್ನು ಮಾಡುತ್ತಾರೆ. ಎಲ್ಲಾ ಜೈಲಿನಲ್ಲೂ ಓದುವವರಿಗೆ ಕೆಲಸ ನೀಡುವುದಿಲ್ಲ. ಹೀಗಾಗಿ ಅಭಿಷೇಕ್​ ಬಚ್ಚನ್ ಕೂಡ ಓದಿನ ಕಡೆ ಆಸಕ್ತಿ ಇಲ್ಲದಿದ್ದರೂ ಕೆಲಸ ಮಾಡುವುದರಿಂದ ತಪ್ಪಿಸಿಕೊಳ್ಳಲು ಕೈಯಲ್ಲಿ ಬುಕ್​ ಹಿಡಿಯುತ್ತಾರೆ. ಕೊನೆಗೂ ಹರಸಾಹಸ ಪಟ್ಟು 10ನೇ ತರಗತಿಯನ್ನು ಪಾಸ್​ ಮಾಡುತ್ತಾರೆ. ನಿಜ ಜೀವನದಲ್ಲೂ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ಈಗ 10ನೇ ತರಗತಿ ಪಾಸ್ ಮಾಡಿದ್ದಾರೆ.

 10ನೇ ತರಗತಿ ಮಾಸ್ಕ್ ಕಾರ್ಡ್ ನೀಡಿದ ಅಧಿಕಾರಿಗಳು!

ಹೌದು,  ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ 87ನೇ ವಯಸ್ಸಿಲ್ಲೇ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಪಾಸ್​ ಮಾಡಿದ್ದಾರೆ. ದಸ್ವಿ ಚಿತ್ರಕ್ಕೆ ಇವರು ಸ್ಫೂರ್ತಿಯಾಗಿದ್ದಾರೆ. ಆದರೆ, ಈ ಸಿನಿಮಾ ಬಿಡುಗಡೆಯಾದ ಬಳಿಕ ಓಂ ಪ್ರಕಾಶ್ ಚೌಟಾಲಾ  ಅಧಿಕೃತವಾಗಿ 10ನೇ ತರಗತಿ ಪಾಸ್​ ಆಗಿದ್ದಾರೆ. ಹರಿಯಾಣ ಎಜುಕೇಷನ್​ ಬೋರ್ಡ್​ ಅಧಿಕಾರಿಗಳು ಓಂ ಪ್ರಕಾಶ್ ಚೌಟಾಲಾ ಅವರಿಗೆ 10ನೇ ತರಗತಿಯ ಮಾಸ್ಕ್​ ಕಾರ್ಡ್​ ಕೊಟ್ಟಿದ್ದಾರೆ.

87ನೇ ವಯಸ್ಸಿನಲ್ಲಿ 10ನೇ ತರಗತಿ ಪಾಸಾದ ಮಾಜಿ ಸಿಎಂ


ಇದನ್ನೂ ಓದಿ: 15 ತಿಂಗಳ ಹಾರ್ಡ್​ವರ್ಕ್​- ಸಿಕ್ಸ್​ ಪ್ಯಾಕ್​ನಲ್ಲಿ ಮಿಂಚಿದ ಅರ್ಜುನ್​! ಮಲೈಕಾ ಮಹಿಮೆ ಎಂದ ನೆಟ್ಟಿಗರು

ಪರೀಕ್ಷೆ ಬರೆದು ಪಾಸ್​ ಆದ 20 ಕೈದಿಗಳು!

ಕೆಲವೊಂದು ಸಿನಿಮಾಗಳನ್ನು ಸ್ಫೂರ್ತಿ ನೀಡುತ್ತವೆ. ದಸ್ವಿ ಸಿನಿಮಾವನ್ನು ಅಂತಹ ಸಿನಿಮಾಗಳ ಸಾಲಿಗೆ ಸೇರಿಸಲು ಅಡ್ಡಿಯಿಲ್ಲ. ಕಾರಣ, ಈ ಸಿನಿಮಾ ಆಗ್ರಾ ಜೈಲಿನ 20 ಕೈದಿಗಳಿಗೆ 10 ನೇ ತರಗತಿಯ ಪರೀಕ್ಷೆ ಬರೆಯಲು ಪ್ರೇರಣೆ ನೀಡಿದೆಯಂತೆ. ಇತ್ತೀಚೆಗೆ ನಡೆದ ಮಾತುಕತೆ ಒಂದರಲ್ಲಿ ಸ್ವತಃ ಅಭಿಷೇಕ್ ಬಚ್ಚನ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಇತರ ನಟ ನಟಿಯರು, ಆ ಜೈಲಿನಲ್ಲಿ ನಡೆದ ಕೆಲವು ಭಾಗಗಳ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Bollywood ಗೆ ನನ್ನ ಮೆಂಟೈನ್ ಮಾಡೋ ಅಷ್ಟು ಕೆಪಾಸಿಟಿ ಇಲ್ಲ! ಟೈಮ್​ ವೇಸ್ಟ್​ ಮಾಡಲ್ಲ ಎಂದ ತೆಲುಗು ಸೂಪರ್ ಸ್ಟಾರ್​
 20 ಕೈದಿಗಳಲ್ಲಿ 12 ಕೈದಿಗಳು ಪಾಸ್​


ಪರೀಕ್ಷೆಗೆ ಕುಳಿತ ಆ 20 ಮಂದಿಯಲ್ಲಿ, 12 ಕೈದಿಗಳು ಪರೀಕ್ಷೆಯನ್ನು ಪಾಸು ಮಾಡುವಲ್ಲಿ ಸಫಲರಾಗಿದ್ದಾರೆ ಎಂದು ಈ ಹಿಂದೆ ಅಬಿಷೇಕ್​ ಬಚ್ಚನ್ ಮಾಹಿತಿ ನೀಡಿದ್ದರು. ತಮ್ಮ ಸಿನಿಮಾದ ಒಬ್ಬರ ಬದುಕಿನ ಇಂತಹ ಸಕಾರಾತ್ಮಕ ಬದಲಾವಣೆಯನ್ನು ತಂದಿರುವುದರಿಂದ ಅಭಿಷೇಕ್‍ಗೆ ತುಂಬಾ ಸಂತೋಷವಾಗಿದೆಯಂತೆ
Published by:Vasudeva M
First published: