KBC: ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಹಣ ಗೆದ್ದ ಬಳಿಕ ಇವರಿಗೆ ಬ್ಯಾಡ್‌ ಟೈಮ್‌ ಸ್ಟಾರ್ಟ್ ಆಯ್ತಂತೆ! ಯಾಕೆ ನೋಡಿ

ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್ ಸಾರಥ್ಯದಲ್ಲಿ ಸೋನಿ ಟಿವಿ ನಡೆಸಿಕೊಡುವ ಈ ಕ್ವಿಜ್ ಕಾರ್ಯಕ್ರಮದಲ್ಲಿ 'ಕೌನ್ ಬನೇಗಾ ಕರೋಡ್ ಪತಿ'ಗೆ ಕಂಪ್ಯೂಟರ್ ಆಪರೇಟ್ ಆಗಿರುವ ಸುಶೀಲ್ ಕುಮಾರ್ ಜಾಕ್ ಪಾಟ್ ಉತ್ತರ ನೀಡಿ, ಸ್ಪರ್ಧೆಯಲ್ಲಿ ಗೆದ್ದಿದ್ದರು. ಎಲ್ಲರಿಗೂ ಕೆಬಿಸಿ ನಂತರ ಅದೃಷ್ಟ ಖುಲಾಯಿಸುತ್ತಾದರೂ ಸುಶೀಲ್ ಕುಮಾರ್ ದುರಾದೃಷ್ಟ ಶುರುವಾಗಿದ್ದೇ ಕೆಬಿಸಿ ಗೆದ್ದ ಮೇಲೆ. ನನ್ನ ಜೀವನದ ಅತ್ಯಂತ ಕೆಟ್ಟ ಭಾಗ ಕೆಬಿಸಿ ಗೆದ್ದ ಮೇಲೆ ಪ್ರಾರಂಭವಾಯ್ತು ಎಂದಿದ್ದಾರೆ ಸುಶೀಲ್.

ಕೆಬಿಸಿ ಅಲ್ಲಿ ರೂ.5 ಕೋಟಿ ಗೆದ್ದ ಸುಶೀಲ್‌ ಕುಮಾರ್

ಕೆಬಿಸಿ ಅಲ್ಲಿ ರೂ.5 ಕೋಟಿ ಗೆದ್ದ ಸುಶೀಲ್‌ ಕುಮಾರ್

  • Share this:
ಕೌನ್‌ ಬನೇಗಾ ಕರೋಡ್‌ಪತಿ ಸೀಸನ್ 5ರಲ್ಲಿ (Kaun Banega Crorepati season 5) ಭಾಗವಹಿಸಿ ಬರೋಬ್ಬರಿ 5 ಕೋಟಿ ರೂಪಾಯಿ ಗೆದ್ದ ಸುಶೀಲ್ ಕುಮಾರ್ (Sushil Kumar) ಭಾರೀ ಸುದ್ದಿಯಾಗಿದ್ದರು. 2011ರಲ್ಲಿ ಅಮಿತಾಭ್ ಬಚ್ಚನ್ ಬಿಹಾರದ ಸುಶೀಲ್ ಕುಮಾರ್ ಅವರಿಗೆ 5 ಕೋಟಿಯ ಚೆಕ್ ನೀಡಿದ್ದರು. ಬಾಲಿವುಡ್ ಬಾದ್ ಷಾ ಅಮಿತಾಭ್ ಬಚ್ಚನ್ ಸಾರಥ್ಯದಲ್ಲಿ ಸೋನಿ ಟಿವಿ ನಡೆಸಿಕೊಡುವ ಕ್ವಿಜ್ ಕಾರ್ಯಕ್ರಮದಲ್ಲಿ (Quiz Program) 'ಕೆಬಿಸಿ'ಗೆ ಕಂಪ್ಯೂಟರ್ ಆಪರೇಟ್ ಆಗಿರುವ ಸುಶೀಲ್ ಕುಮಾರ್ ಜಾಕ್ ಪಾಟ್ ಉತ್ತರ ನೀಡಿ, ಸ್ಪರ್ಧೆಯಲ್ಲಿ ಗೆದ್ದಿದ್ದರು. ಎಲ್ಲರಿಗೂ ಕೆಬಿಸಿ ನಂತರ ಅದೃಷ್ಟ ಖುಲಾಯಿಸುತ್ತಾದರೂ ಸುಶೀಲ್ ಕುಮಾರ್ ದುರಾದೃಷ್ಟ ಶುರುವಾಗಿದ್ದೇ ಕೆಬಿಸಿ ಗೆದ್ದ ಮೇಲೆ.

ಸುಶೀಲ್‌ ಕುಮಾರ್​ಗೆ ಜೀವನದ ಅತ್ಯಂತ ಕೆಟ್ಟ ಭಾಗ ಕೆಬಿಸಿ ಗೆದ್ದ ಬಳಿಕವಂತೆ
ನನ್ನ ಜೀವನದ ಅತ್ಯಂತ ಕೆಟ್ಟ ಭಾಗ ಕೆಬಿಸಿ ಗೆದ್ದ ಮೇಲೆ ಪ್ರಾರಂಭವಾಯ್ತು ಎಂದಿದ್ದಾರೆ ಸುಶೀಲ್. ಆದರೆ, ಇಷ್ಟು ದೊಡ್ಡ ಮೊತ್ತದ ಹಣವು ಕನಸಿನ ಜೀವನವನ್ನು ನಡೆಸಲು ಪ್ರೇರೇಪಿಸಬಹುದಾದರೂ, ಇನ್ನೊಂದು ಕಡೆ ಅದು ನಕಾರಾತ್ಮಕ ಪರಿಣಾಮವನ್ನು ಕೂಡ ಬೀರಬಹುದು. ಅದಕ್ಕೆ ಉದಾಹರಣೆ ಈ ಸುಶೀಲ್‌ ಕುಮಾರ್‌ ಆಗಿದ್ಧಾರೆ. ಅಂತಹ ದೊಡ್ಡ ಮೊತ್ತವನ್ನು ಗೆದ್ದ ನಂತರ ಸುಶೀಲ್ ಕುಮಾರ್ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಅವರು ಈ ವಿಷಯದ ಕುರಿತಾಗಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ತಮ್ಮ ಸಂಕಷ್ಟದ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಅವರು ಕೋಟಿ ಗೆದ್ದಿರುವುದು ತಮ್ಮ ಜೀವನದ "ಕೆಟ್ಟ ಹಂತ" ಎಂದು ಹೇಳಿಕೊಂಡಿದ್ಧಾರೆ.

ಸುಶೀಲ್ ಕುಮಾರ್ ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯ ಜೀವನಕ್ಕೆ ಮರಳಿದ್ದಾರೆ, ಬೋಧನೆಯನ್ನು ಪುನರಾರಂಭಿಸಿದ್ದಾರೆ, ಧೂಮಪಾನವನ್ನು ತೊರೆದು ಪರಿಸರವಾದಿಯಾಗಿದ್ದಾರೆ. ಸುಶೀಲ್ ಅವರ ಎಫ್‌ಬಿ ಪೋಸ್ಟ್‌ನಲ್ಲಿ, 'ದಿ ವರ್ಸ್ಟ್ ಪೀರಿಯಡ್ ಆಫ್ ಮೈ ಲೈಫ್' ಎಂದು ಶೀರ್ಷಿಕೆಯನ್ನು ನೀಡಲಾಗಿತ್ತು.

ಆ ದಿನಗಳು ಹೇಗಿತ್ತು?
2015-2016 ನನ್ನ ಜೀವನದ ಅತ್ಯಂತ ಸವಾಲಿನ ಸಮಯ. ನನಗೆ ಏನು ಮಾಡಬೇಕೆಂದು ಆಗ ತಿಳಿಯಲಿಲ್ಲ. ನಾನು ಲೋಕಲ್ ಸೆಲೆಬ್ರಿಟಿ ಆಗಿದ್ದೆ. ಬಿಹಾರದಲ್ಲಿ ತಿಂಗಳಲ್ಲಿ 10 ಅಥವಾ ಕೆಲವೊಮ್ಮೆ 15 ದಿನ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದೆ. ನಾನು ಅಧ್ಯಯನದಿಂದ ದೂರವಾಗುತ್ತಿದ್ದೆ. ಆ ದಿನಗಳಲ್ಲಿ ನಾನು ಮಾಧ್ಯಮವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದೆ. ಕೆಲವೊಮ್ಮೆ ಪತ್ರಕರ್ತರು ನನ್ನ ಸಂದರ್ಶನ ಬರೆಯುತ್ತಿದ್ದರು. ನಾನು ಅವರೊಂದಿಗೆ ವ್ಯವಹಾರದ ಬಗ್ಗೆ ಹೇಳುತ್ತಿದ್ದೆ. ಕೆಲವು ದಿನಗಳ ನಂತರ ಆ ವ್ಯವಹಾರಗಳು ಕುಸಿಯಿತು ಎಂದಿದ್ದಾರೆ.

ಇದನ್ನೂ ಓದಿ: Bollywood Actors: ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡಿ ಸಾವಿಗೆ ಸ್ಮೈಲ್ ಕೊಟ್ಟು ಬಂದವರಿವರು

ಅತ್ಯಂತ ಕಠಿಣ ಸಮಯ ಇದಾಗಿತ್ತು?
ಸುಶೀಲ್ ಡೊನೇಷನ್ ಕೊಡುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು, ಆದರೆ ಅದು ಎಲ್ಲಾ ಮೋಸ ಎಂದು ನಂತರ ತಿಳಿಯುತು. ಇದು ಅವರ ಪತ್ನಿಯೊಂದಿಗಿನ ಸಂಬಂಧವನ್ನು ಕೆಡಿಸಿತು. ಕೆಬಿಸಿ ನಂತರ ನಾನು ಲೋಕೋಪಕಾರಿಯಾದೆ. ರಹಸ್ಯ ದೇಣಿಗೆ ನೀಡುವ ವ್ಯಸನಿಯಾದೆ. ಒಂದು ತಿಂಗಳಲ್ಲಿ ಸುಮಾರು 50 ಸಾವಿರ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದೆ. ಬಹಳಷ್ಟು ಬಾರಿ ಜನರು ನನಗೆ ಮೋಸ ಮಾಡಿದರು. ದೇಣಿಗೆ ನೀಡಿದ ನಂತರವೇ ನನಗೆ ಇದು ತಿಳಿಯಿತು. ಈ ಕಾರಣದಿಂದಾಗಿ, ನನ್ನ ಹೆಂಡತಿಯೊಂದಿಗಿನ ನನ್ನ ಸಂಬಂಧ ಹದಗೆಟ್ಟಿತು. ಸರಿ ಮತ್ತು ತಪ್ಪು ಜನರ ನಡುವೆ ವ್ಯತ್ಯಾಸ ಮಾಡಲು ನನಗೆ ಗೊತ್ತಿಲ್ಲ. ಭವಿಷ್ಯದ ಬಗ್ಗೆ ನನಗೆ ಕಾಳಜಿ ಇಲ್ಲ ಎಂದು ಅವಳು ಆರೋಪಿಸುತ್ತಿದ್ದಳು. ಈ ಬಗ್ಗೆ ಜಗಳವಾಗುತ್ತಿತ್ತು ಸುಶೀಲ್‌ ಕುಮಾರ್‌ ಹೇಳಿದರು.

ಮದ್ಯಪಾನ ಮತ್ತು ಧೂಮಪಾನ ವ್ಯಸನಿ
ಸುಶೀಲ್ ಮದ್ಯ ವ್ಯಸನಿಯಾಗಿದ್ದರು. ನಿಧಾನವಾಗಿ ನಾನು ಇತರ ವ್ಯಸನಗಳ ಜೊತೆಗೆ ಮದ್ಯ ಮತ್ತು ಧೂಮಪಾನದ ಚಟವನ್ನು ಕಲಿತೆ. ನಾನು ಒಂದು ವಾರ ದೆಹಲಿಯಲ್ಲಿ ತಂಗಿದಾಗಲೆಲ್ಲಾ ವಿಭಿನ್ನ ಗುಂಪುಗಳೊಂದಿಗೆ ಮದ್ಯಪಾನ ಮತ್ತು ಧೂಮಪಾನ ಮಾಡುತ್ತಿದ್ದೆ. ನಾನು ಅವರ ಮಾತುಗಳನ್ನು ಆಕರ್ಷಕವಾಗಿ ಕಂಡೆ. ಅವರ ಸಹವಾಸದಲ್ಲಿ, ನಾನು ಮಾಧ್ಯಮವನ್ನು ತುಂಬಾ ಲಘುವಾಗಿ ತೆಗೆದುಕೊಳ್ಳಲು ಆರಂಭಿಸಿದೆ ಎಂದಿದ್ದಾರೆ.

ಇದನ್ನೂ ಓದಿ: Tsunami Kitty: ಪ್ರತಿಷ್ಠಿತ ಪಬ್​ನಲ್ಲಿ ನಟ ಸುನಾಮಿ ಕಿಟ್ಟಿ ಹೊಡೆದಾಟ!

ಹೊಸ ಹಂತ ಈಗ ಆರಂಭಗೊಂಡಿದೆ
ನಗರದಲ್ಲಿ ಆರು ತಿಂಗಳು ಏಕಾಂಗಿಯಾಗಿ ಕಳೆದ ನಂತರ ನಾನು ಮುಂಬೈಗೆ ಬಂದದ್ದು ಚಲನಚಿತ್ರ ನಿರ್ಮಾಪಕನಾಗಲು ಅಲ್ಲ ಎಂದು ಅರಿತುಕೊಂಡೆ. ನಾನು ನನ್ನ ಸಮಸ್ಯೆಗಳಿಂದ ದೂರ ಓಡುತ್ತಿದ್ದೆ. ನಿಮ್ಮ ಹೃದಯವನ್ನು ಫಾಲೋ ಮಾಡಿದಾಗ ಸಂತೋಷ ಸಿಗುತ್ತದೆ ಎಂದು ನಾನು ಅರಿತುಕೊಂಡೆ. ನಾನು ಮನೆಗೆ ಹಿಂದಿರುಗಿ ಟೀಚಿಂಗ್ ಕೋರ್ಸ್‌ಗಾಗಿ ತಯಾರಿ ಆರಂಭಿಸಿದೆ. ಬಹಳಷ್ಟು ಪರಿಸರ ಕೆಲಸಗಳಲ್ಲಿ ನಾನು ಭಾಗಿಯಾಗಿದ್ದೇನೆ. ನಾನು 2016 ರಲ್ಲಿ ಕೊನೆಯದಾಗಿ ಮದ್ಯಪಾನ ಮಾಡಿದ್ದೆ. ಕಳೆದ ವರ್ಷ ಧೂಮಪಾನವನ್ನು ತ್ಯಜಿಸಿದೆ. ಈಗ, ಪ್ರತಿ ದಿನವೂ ನನಗೆ ಸಂಭ್ರಮ ಎಂದಿದ್ದಾರೆ. ನಾನು ಮುಂಬೈನಿಂದ ಮನೆಗೆ ಮರಳಿದೆ. ಶಿಕ್ಷಕನಾಗಲು ತಯಾರಿ ನಡೆಸಿದೆ ಪರೀಕ್ಷೆ ಪಾಸ್ ಮಾಡಿದೆ ಎಂದಿದ್ದಾರೆ.
Published by:Ashwini Prabhu
First published: