ನೆಟ್​ಫ್ಲಿಕ್ಸ್​ನಲ್ಲಿ Crime Stories: India Detectives ಸರಣಿ ಮೂಲಕ ರೋಚಕ ಕಥೆ ಹೇಳುತ್ತಿರುವ ಬೆಂಗಳೂರು ಪೊಲೀಸರು

ಕ್ರೈಂ ಸ್ಟೋರೀಸ್​: ಇಂಡಿಯಾ ಡಿಟೆಕ್ಟೀವ್ಸ್​  ಕ್ರೈಂ ಸರಣಿಯ ಕುರಿತಾಗಿ ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವೀಣ್​ ಸೂದ್​ ಅವರು ಮಾಧ್ಯಮ ಒಂದರ ಜೊತೆ ಮಾತನಾಡಿದ್ದಾರೆ. ಈ ಸರಣಿ ಮಾಡಿದರ ಹಿಂದಿನ ಉದ್ದೇಶದ ಬಗ್ಗೆ ವಿವರವಾಗಿ ಹೇಳಿದ್ದಾರೆ.

ಕ್ರೈಂ ಸರಣಿಯ ಪೋಸ್ಟರ್​

ಕ್ರೈಂ ಸರಣಿಯ ಪೋಸ್ಟರ್​

  • Share this:
ಲಾಕ್​ಡೌನ್​ನಲ್ಲಿ ಸಿನಿಮಾ ಮಂದಿರಗಳು ಬಾಗಿಲು ಮುಚ್ಚಿದಾಗರಂಜಿಸಿದ್ದು ಇದೇ ಒಟಿಟಿ ವೇದಿಕೆಗಳು. ಹೌದು, ಲಾಕ್​ಡೌನ್​ನಲ್ಲಿ ವೆಬ್​ ಸರಣಿಗಳಿಗೆ ಬೇಡಿಕೆ ಹಾಗೂ ವೀಕ್ಷಕರ ಸಂಖ್ಯೆಯಲ್ಲೂ ಏರಿಕೆ ಕಂಡಿದೆ. ಬೇಡಿಕೆ ಹೆಚ್ಚಿದಂತೆಯೇ ಒಟಿಟಿ ಕ್ಷೇತ್ರದಲ್ಲಿ ಸಾಕಷ್ಟು ವಿಭಿನ್ನ ಹಾಗೂ ವಿಶೇಷ ಪ್ರಯತ್ನಗಳನ್ನಯ ಮಾಡುತ್ತಿರುವ ನೆಟ್​ಫ್ಲಿಕ್ಸ್​ (Netflix) ನಿನ್ನೆಯಷ್ಟೆ ಹೊಸ ಸರಣಿಯೊಂದನ್ನು ರಿಲೀಸ್​ ಮಾಡಿದೆ. ಬೆಂಗಳೂರಿನ ಅಪರಾಧ ಜಗತ್ತಿನ ನಾಲ್ಕು ವಿಶೇಷ ಪ್ರಕರಣಗಳನ್ನು ತೆರೆ ಮೇಲೆ ತಂದಿದೆ. ಈ ಸರಣಿ ಸಾಕ್ಷ್ಯಚಿತ್ರ ಮಾದರಿಯಲ್ಲಿದ್ದು, ನೈಜ ಘಟನೆಗಳನ್ನು ಆಧರಿಸಿ ಸಿದ್ಧಪಡಿಸಿರುವ ಕ್ರೈಂ ಸರಣಿಯಾಗಿದೆ. ಇದಕ್ಕೆ ಕ್ರೈಂ ಸ್ಟೋರೀಸ್​: ಇಂಡಿಯಾ ಡಿಟೆಕ್ಟೀವ್ಸ್​ (Crime Stories: India Detectives) ಎಂದು ಟೈಟಲ್​ ಇಡಲಾಗಿದೆ. ಇದು ನಿನ್ನೆ ಅಂದರೆ ಸೆ. 22ರಿಂದ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುತ್ತಿದೆ. ಇದೇ ತಿಂಗಳು 14ರಂದು ಈ ಕ್ರೈಂ ಸರಣಿಯ ಟ್ರೇಲರ್​ ರಿಲೀಸ್ ಆಗಿತ್ತು. ಅದಕ್ಕೆ ಆಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಕ್ರೈಂ ಸ್ಟೋರೀಸ್​: ಇಂಡಿಯಾ ಡಿಟೆಕ್ಟೀವ್ಸ್​  ಕ್ರೈಂ ಸರಣಿಯ ಕುರಿತಾಗಿ ರಾಜ್ಯ ಪೊಲೀಸ್​ ಮಹಾನಿರ್ದೇಶಕ ಪ್ರವೀಣ್​ ಸೂದ್​ ಅವರು ಮಾಧ್ಯಮ ಒಂದರ ಜೊತೆ ಮಾತನಾಡಿದ್ದಾರೆ. ಈ ಸರಣಿ ಮಾಡಿದರ ಹಿಂದಿನ ಉದ್ದೇಶದ ಬಗ್ಗೆ ವಿವರವಾಗಿ ಹೇಳಿದ್ದಾರೆ. ಮಿನ್ನೋ ಫಿಲ್ಮ್ಸ್ ನಿರ್ಮಿಸಿದ ಈ ಸರಣಿಯನ್ನು ಎನ್. ಅಮಿತ್ ಮತ್ತು ಜ್ಯಾಕ್ ರಾಂಪ್ಲಿಂಗ್ ಜಂಟಿಯಾಗಿ
ನಿರ್ದೇಶಿಸಿದ್ದು, ಕನ್ನಡದಲ್ಲೇ ನಿರ್ಮಿಸಲಾಗಿರುವುದು ವಿಶೇಷ.”ಕ್ರೈಂ ಸ್ಟೋರೀಸ್​: ಇಂಡಿಯಾ ಡಿಟೆಕ್ಟೀವ್ಸ್ ಎನ್ನುವುದು ನೈಜ ಕಥೆಗಳ ಸಂಕಲನವಾಗಿದೆ. ಕಂಟ್ರೋಲ್ ರೂಂನಲ್ಲಿ ಅಪರಾಧದ ಮೊದಲ ಮಾಹಿತಿಯ ಕ್ಷಣದಿಂದ ಪೊಲೀಸರು ತೆಗೆದುಕೊಳ್ಳುವ ನಿರ್ಧಾರಗಳು ಹಾಗೂ ಕ್ರಮಗಳವರೆಗೆ ತೋರಿಸಲಾಗಿದೆ. ಇದರಲ್ಲಿ ಪೊಲೀಸರ ಮತ್ತೊಂದು ಮುಖವನ್ನೂ ತೋರಿಸಲಾಗಿದೆ. ಎಲ್ಲರ ಎದುರು ಖಡಕ್​ ಆಗಿ ಕಾಣಿಸಿಕೊಳ್ಳುವ ಪೋಲಿಸಿನ ಮಾನವೀಯ ಮುಖದ ಪರಿಚಯ ಮಾಡಿಕೊಡಲಾಗಿದೆ.  ನಮ್ಮನ್ನ ನಾವು ಹೊಗಳಿಕೊಂಡು ಎಂತಹ ಪ್ರಕರಣಗಳನ್ನು ಪತ್ತೆ ಮಾಡಿದ್ದೇವೆ ಎಂದು ತೋರಿಸಿಕೊಳ್ಳುವುದು ಇದರ ಉದ್ದೇಶವಲ್ಲ” ಎಂದಿದ್ದಾರೆ ಪ್ರವೀಣ್ ಸೂದ್​.

ಇದನ್ನೂ ಓದಿ: Jayalalithaa ಸಿಎಂ ಆದ ನಂತರದ ಜರ್ನಿ ತೋರಿಸಲಿದೆಯೇ Thalaivii 2 ಚಿತ್ರ..?

”ಮನ ಮುಟ್ಟುವ ಕಥೆಗಳು ಹಾಗೂ ಜಟಿಲವಾದ ಮಾನವನ ಸಂಬಂಧಗಳ ಬಗ್ಗೆಯೂ ಹೇಳಲಾಗಿದೆ.  ಅವು ತುಂಬಾ ಸ್ಪರ್ಶದ ಕಥೆಗಳು ಮತ್ತು ಮಾನವ ಸಂಬಂಧಗಳು ಎಷ್ಟು ಜಟಿಲವಾಗಿವೆ ಎಂಬ ಸತ್ಯವನ್ನು ಬಿಚ್ಚಿಡುವ ಪಯತ್ನ ಮಾಡಲಾಗಿದೆ. ಅಪರಾಧದ ತನಿಖೆ ಹಾಗೂ ಅಪರಾಧಿಯನ್ನು ಕಂಡುಹಿಡಿಯುವುದು ಎಷ್ಟು ಕಷ್ಟ ಎಂಬುದರ ಬಗ್ಗೆ ನಿಮಗೆ ಅರ್ಥವಾಗಲಿದೆ. ಈ ನಾಲ್ಕು ಕಥೆಗಳು ತುಂಬಾ ತೀವ್ರವಾಗಿದ್ದು, 2019 ರಲ್ಲಿ ಮತ್ತು 2020 ರ ಆರಂಭದಲ್ಲಿ ಬೆಂಗಳೂರು ನಗರದಲ್ಲಿ ಚಿತ್ರೀಕರಿಸಲಾಗಿದೆ ”ಎಂದು ವಿವರಿಸುತ್ತಾರೆ ಅವರು.

ಇದನ್ನೂ ಓದಿ: ಗರ್ಭಿಣಿ ಅನ್ನೋ ಸುದ್ದಿ ಹರಿದಾಡುತ್ತಿರುವಾಗಲೇ ಹಾಟ್​ ಫೋಟೋಶೂಟ್​ಗೆ ಪೋಸ್​ ಕೊಟ್ಟ ನಟಿ Kajal Aggarwal

ಈ ಸರಣಿಯನ್ನು ಮಾಡಲು ನಿರ್ಧರಿಸಿ, ಚಿತ್ರೀಕರಣದ ತಂಡವನ್ನು ನಮ್ಮೊಂದಿಗೆ ಘಟನೆ ನಡೆದ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದೆವು. ಸಾಕಷ್ಟು ಪ್ರಕರಣಗಳಲ್ಲಿ ಈ ತಂಡ ಜೊತೆಗಿತ್ತು. ಅವುಗಳಲ್ಲಿ ಈ ನಾಲ್ಕನ್ನು ಮಾತ್ರ ಸರಣಿಗಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಇನ್ನು ಈ ಪ್ರಕರಣಗಳಿಗೆ ಸಂಬಂಧಿಸಿದ ವಿಡಿಯೋ ಹಾಗೂ ಸಾಕ್ಷ್ಯಗಳನ್ನು ಕೋರ್ಟ್​ ವಶಕ್ಕೆ ನೀಡಿದ ನಂತರವೇ ವಿಡಿಯೋವನ್ನು ಅವರಿಗೆ ನೀಡಲಾಯಿತು. ಈ ಎಲ್ಲ ಪ್ರಕರಣಗಳು ಸದ್ಯ ನ್ಯಾಯಾಲಯದಲ್ಲಿವೆ.  ಈ ಸರಣಿಯನ್ನು ನೋಡಿದ ಮೇಲೆ ಕೆಲವೊಂದು ಕಡೆ ಕೆಲವೊಂದು ಕ್ಷಣಗಳನ್ನು ಕೊಂಚ ನಿರ್ಲಕ್ಷ್ಯ ಮಾಡಿದ್ದರೆ ಪೊಲೀಸರನ್ನು ನಕಾರಾತ್ಮಕವಾಗಿ ತೋರಿಸುವುದರಿಂದ ತಪ್ಪಿಸಬಹುದಿತ್ತು ಎಂದೆನಿದಿತು ಅಂತ ಅನುಭವ ಹಂಚಿಕೊಂಡಿದ್ದಾರೆ.
Published by:Anitha E
First published: