Soorarai Pottru: ಸೂರರೈ ಪೊಟ್ರು ಸಿನಿಮಾ ನೋಡಿ ನಟ ಸೂರ್ಯ ಬಗ್ಗೆ ಟ್ವೀಟ್​ ಮಾಡಿದ ಸುದೀಪ್​..!

Kichcha Sudeep: ಸೂರ್ಯ ಅಭಿನಯದ ಈ ಸಿನಿಮಾವನ್ನು ದೀಪಾವಳಿ ಹಬ್ಬದ ಉಡುಗೊರೆಯಾಗಿ ಒಟಿಟಿ ಮೂಲಕ ರಿಲೀಸ್ ಮಾಡಲಾಯಿತು. ಈ ಸಿನಿಮಾ ನೋಡಿದ ನಂತರ ಕನ್ನಡಿಗರು ಕ್ಯಾಪ್ಟನ್​ ಗೋಪಿನಾಥ್​ ಅವರ ಜೀವನಾಧಾರಿತ ಚಿತ್ರವನ್ನು ಕನ್ನಡದಲ್ಲೇ ಮಾಡಿದ್ದರೆ ಚೆನ್ನಾಗಿತ್ತು ಎನ್ನುತ್ತಿದ್ದಾರೆ.

ನಟ ಸೂರ್ಯ ಹಾಗೂ ಕಿಚ್ಚ ಸುದೀಪ್​

ನಟ ಸೂರ್ಯ ಹಾಗೂ ಕಿಚ್ಚ ಸುದೀಪ್​

  • Share this:
ಇತ್ತೀಚೆಗಷ್ಟೆ ಒಟಿಟಿ ಮೂಲಕ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿರುವ ಸಿನಿಮಾ ಸೂರರೈ ಪೊಟ್ರು. ಕನ್ನಡಿಗ ಕ್ಯಾಪ್ಟನ್​ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾದಲ್ಲಿ ಕಾಲಿವುಡ್​ ನಟ ಸೂರ್ಯ ನಾಯಕನಾಗಿ ನಟಿಸಿದ್ದಾರೆ.  ಈ ಸಿನಿಮಾ ನೋಡಿದ ಗಣ್ಯರು, ಸೆಲೆಬ್ರಿಟಿಗಳು ಹಾಗೂ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಡಿಸುತ್ತಿದ್ದಾರೆ. ಅದರಲ್ಲೂ ಸಿನಿಮಾದಲ್ಲಿ ಸೂರ್ಯ ಹಾಗೂ ನಾಯಕಿ ಅಪರ್ಣಾ ಬಾಲಮುರಳಿ  ಅವರ ಅಭಿನಯದ ಬಗ್ಗೆ ಸಿಕ್ಕಾಪಟ್ಟೆ ಹೊಗಳುತ್ತಿದ್ದಾರೆ. ಇದು ಸಂಪೂರ್ಣವಾಗಿ ಕ್ಯಾಪ್ಟನ್​ ಗೋಪಿನಾಥ್ ಅವರ  ಬಯೋಪಿಕ್​ ಅಲ್ಲ. ಇದನ್ನು ಕಮರ್ಷಿಯಲ್ ಸಿನಿಮಾ ಮಾಡುವ ಸಲುವಾಗಿ ಕೊಂಡ ನಾಟಕೀಯ ಅಂಶಗಳನ್ನೂ ಸೇರಿಸಲಾಗಿದೆ. ಏನೇ ಆದರೂ ಸಹ ಈ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಸಿನಿಮಾ ಕನ್ನಡಕ್ಕೂ ಡಬ್​ ಆಗಿದೆ. ಸುಧಾ ಕೋನಗಾರ ಪ್ರವಾಸ್​ ನಿರ್ದೇಶನದ ಚಿತ್ರಕ್ಕೆ ನಟ ಸೂರ್ಯ ಸಹ ನಿರ್ಮಾಪಕರಾಗಿದ್ದಾರೆ. 

ಸೂರ್ಯ ಅಭಿನಯದ ಈ ಸಿನಿಮಾವನ್ನು ದೀಪಾವಳಿ ಹಬ್ಬದ ಉಡುಗೊರೆಯಾಗಿ ಒಟಿಟಿ ಮೂಲಕ ರಿಲೀಸ್ ಮಾಡಲಾಯಿತು. ಈ ಸಿನಿಮಾ ನೋಡಿದ ನಂತರ ಕನ್ನಡಿಗರು ಕ್ಯಾಪ್ಟನ್​ ಗೋಪಿನಾಥ್​ ಅವರ ಜೀವನಾಧಾರಿತ ಚಿತ್ರವನ್ನು ಕನ್ನಡದಲ್ಲೇ ಮಾಡಿದ್ದರೆ ಚೆನ್ನಾಗಿತ್ತು ಎನ್ನುತ್ತಿದ್ದಾರೆ.
ಇನ್ನು ಕಿಚಚ್ ಸುದೀಪ್​ ಲಾಕ್​ಡೌನ್​ನಲ್ಲಿ ಒಟಿಟಿ ಮೂಲಕ ರಿಲೀಸ್ ಆಗುವ ಸಿನಿಮಾಗಳನ್ನು ನೋಡುತ್ತಿದ್ದು, ಸೂರರೈ ಪೊಟ್ರು ಚಿತ್ರವನ್ನೂ ನೋಡಿದ್ದಾರೆ. ಇದರಲ್ಲಿ ಸೂರ್ಯ ಅವರ ಅಭಿನಯಕಂಡು ಖುಷಿಯಾಗಿದ್ದಾರೆ. ಅದಕ್ಕೆ ನಿಂತು ಚಪ್ಪಾಳೆ ಮೂಲಕ ಗೌರನ ನೀಡಬೇಕು ಎಂದು ಸೂರ್ಯ ಅವರಿಗೆ ಟ್ವೀಟ್​ ಮಾಡಿದ್ದಾರೆ.ಇನ್ನು ಪೊಲೀಸ್​ ಅಧಿಕಾರಿ ಭಾಸ್ಕರ್​ ರಾವ್​, ಟಾಲಿವುಡ್​ ನಟರಾದ ಮಹೇಶ್ ಬಾಬು, ಮಾಧವನ್​, ಅಲ್ಲು ಅರ್ಜುನ್​, ಖುಷ್ಬು, ವಿಜಯ್​ ದೇವರಕೊಂಡ ಸೇರಿದಂತೆ ಹಲವಾರು ಮಂದಿ ಸೂರ್ಯ ಅವರ ನಟನೆಯನ್ನು ಮೆಚ್ಚಿಕೊಂಡಿದ್ದಾರೆ.

Watched“Soorarai Potru”, in Kannada,a fictional biography of Capt Gopinath”Simply Fly”.I recommend youth should see how impossible dreams could be realized;power of an insignificant man/woman is enormous,there is power in each of us to show Leadership and Change Had Tears seeing. pic.twitter.com/cBK6Zkx9ev

ಸೂರ್ಯ ಅವರಿಗೆ ಕನ್ನಡ, ತೆಲುಗು ಹಾಗೂ ತಮಿಳಿನ ಸ್ಟಾರ್​ಗಳೊಂದಿಗೆ ಸ್ನೇಹ ಸಂಬಂಧವಿದೆ.
Published by:Anitha E
First published: