HOME » NEWS » Entertainment » AFTER WATCHING PAILWAAN ACTOR KICHCHA SUDEEP TWEETED ABOUT THE MOVIE AE

Pailwaan: ಪೈಲ್ವಾನ್​ ನೋಡಿ ಟ್ವೀಟ್​ ಮಾಡಿದ ಕಿಚ್ಚ ಸುದೀಪ್: ಕಣ್ಣೀರಿಟ್ಟ ಪ್ರಿಯಾ-ಸಾನ್ವಿ..!

Kichcha Sudeep: ಸಾಮಾನ್ಯವಾಗಿ ಸ್ಯಾಂಡಲ್​ವುಡ್​ನಲ್ಲಿ ಸಿನಿ ತಾರೆಯರು ತಮ್ಮ ಸಿನಿಮಾ ಬಿಡುಗಡೆಯಾಗುತ್ತಿದ್ಧಂತೆಯೇ ಮೆಜೆಸ್ಟಿಕ್​ನಲ್ಲಿರುವ ಮುಖ್ಯ ಚಿತ್ರಮಂದಿರದಲ್ಲಿ ಮೊದಲ ದಿನವೇ ಬಂದು ಸಿನಿಮಾ ವೀಕ್ಷಿಸುತ್ತಾರೆ. ಇಲ್ಲವಾದರೂ ಮುಖ್ಯ ಚಿತ್ರಮಂದಿರಕ್ಕೆ ಭೇಟಿಯಾದರೂ ಕೊಡುತ್ತಾರೆ. ಆದರೆ ಸುದೀಪ್​ ಇಂದು ಅಭಿಮಾನಿಗಳೊಂದಿಗೆ ಕುಳಿತು ಪೂರ್ತಿಯಾಗಿ ಸಿನಿಮಾ ನೋಡಿದ್ದಾರೆ.

Anitha E | news18-kannada
Updated:September 12, 2019, 2:25 PM IST
Pailwaan: ಪೈಲ್ವಾನ್​ ನೋಡಿ ಟ್ವೀಟ್​ ಮಾಡಿದ ಕಿಚ್ಚ ಸುದೀಪ್: ಕಣ್ಣೀರಿಟ್ಟ ಪ್ರಿಯಾ-ಸಾನ್ವಿ..!
ಪೈಲ್ವಾನ್​ ಸಿನಿಮಾದಲ್ಲಿ ಸುದೀಪ್​
  • Share this:
- ಅನಿತಾ ಈ, ಹರ್ಷವರ್ಧನ್​

ಕಿಚ್ಚ ಸುದೀಪ್​ ಅವರ ಕನಸಿನ ಕೂಸಾಗಿದ್ದ 'ಪೈಲ್ವಾನ್​' ಇಂದು ವಿಶ್ವದಾದ್ಯಂತ ತೆರೆ ಕಂಡಿದೆ. 'ಪೈಲ್ವಾನ್​' ತನ್ನ ಪಟ್ಟು ಹಾಕುತ್ತಾ ಎಲ್ಲೆಡೆ ಅಬ್ಬರಿಸುತ್ತಿದ್ದಾನೆ. ಅಂದಾಜು ಮೂರು ಸಾವಿರ ಸ್ಕ್ರೀನ್​ಗಳಲ್ಲಿ ಈ ಸಿನಿಮಾ ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಸಾಮಾನ್ಯವಾಗಿ ಸ್ಯಾಂಡಲ್​ವುಡ್​ನಲ್ಲಿ ಸಿನಿ ತಾರೆಯರು ತಮ್ಮ ಸಿನಿಮಾ ಬಿಡುಗಡೆಯಾಗುತ್ತಿದ್ಧಂತೆಯೇ ಮೆಜೆಸ್ಟಿಕ್​ನಲ್ಲಿರುವ ಮುಖ್ಯ ಚಿತ್ರಮಂದಿರದಲ್ಲಿ ಮೊದಲ ದಿನವೇ ಬಂದು ಸಿನಿಮಾ ವೀಕ್ಷಿಸುತ್ತಾರೆ. ಇಲ್ಲವಾದರೆ ಮುಖ್ಯ ಚಿತ್ರಮಂದಿರಕ್ಕೆ ಭೇಟಿಯಾದರೂ ಕೊಡುತ್ತಾರೆ. ಸುದೀಪ್ ಅವರು ಸಹ ಚಿತ್ರಮಂದಿರಕ್ಕೆ ಬಂದು ಅಭಿಮಾನಿಗಳೊಂದಿಗೆ ಕುಳಿತು ಪೂರ್ತಿಯಾಗಿ ಸಿನಿಮಾ ನೋಡಿ ಎಂಜಾಯ್​ ಮಾಡಿದ್ದಾರೆ.

Still from Kichcha Sudeeps new movie Pailwaan 
ಕನ್ನಡದ ಬಹುನಿರೀಕ್ಷಿತ ಸಿನಿಮಾ 'ಪೈಲ್ವಾನ್​' ಬಿಡುಗಡೆಗೆ ಕ್ಷಣ ಗಣನೆ ಆರಂಭವಾಗಿದೆ


ಬೆಳಿಗ್ಗೆ 10ಕ್ಕೆ ಮೆಜೆಸ್ಟಿಕ್​ನಲ್ಲಿರುವ ಸಂತೋಷ್​ ಚಿತ್ರಮಂದಿರಕ್ಕೆ ಹೆಂಡತಿ ಹಾಗೂ ಮಗಳೊಂದಿಗೆ ಬಂದ ಕಿಚ್ಚ ಸುದೀಪ್​, ಅಭಿಮಾನಿಗಳೊಂದಿಗೆ ಸಿನಿಮಾ ನೋಡಿದ್ದಾರೆ.

ಇದನ್ನೂ ಓದಿ: 'ಪೈಲ್ವಾನ್'​ಗೆ ಸಿಗುತ್ತಿದೆ ಮಿಶ್ರ ಪ್ರತಿಕ್ರಿಯೆ: ಸುದೀಪ್​ ಎಂಟ್ರಿಗೆ ಪ್ರೇಕ್ಷಕರು ಫಿದಾ..!

ನಂತರ ಅವರು ತಮ್ಮ ಟ್ವಿಟರ್​ನಲ್ಲಿ ಸಿನಿಮಾ ಕುರಿತು ಟ್ವೀಟ್​ ಮಾಡಿದ್ದಾರೆ. ನಟ ಕಬೀರ್​ ಸಿಂಗ್​ ದುಹಾನ್​, ಹಾಗೂ ನಾಯಕಿ ಆಕಾಂಕ್ಷಾ ಕುರಿತು ಬರೆದುಕೊಂಡಿದ್ದಾರೆ. ನೀವಿಬ್ಬರು ತೆರೆ ಮೇಲೆ ತುಂಬಾ ಚೆನ್ನಾಗಿ ಮೂಡಿಬಂದಿದ್ದೀರಿ. ನನಗೆ ತುಂಬಾ ಖುಷಿಯಾಗಿದೆ ಎಂದು ಕಿಚ್ಚ ಟ್ವೀಟ್​ ಮಾಡಿದ್ದಾರೆ.


ಕಣ್ಣೀರಿಟ್ಟ ಪ್ರಿಯಾ ಸುದೀಪ್​ ಹಾಗೂ ಮಗಳು ಸಾನ್ವಿ

ಚಿತ್ರ ವೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸುದೀಪ್​, 'ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಖುಷಿಯಾಗಿದೆ. ಎರಡು ವರ್ಷಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಮೊದಲ ಶೋ ನೋಡಿದ ಬಳಿಕ ಕೃಷ್ಣ ಮತ್ತು ಸ್ವಪ್ನಾ ಕೃಷ್ಣ ಕಣ್ಣೀರು ಹಾಕಿದರು. ಸಿನಿಮಾಗೆ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಸಂತಸಗೊಂಡಿದ್ದಾರೆ. ಪ್ರಿಯಾ ಮತ್ತು ಮಗಳು ಸಾನ್ವಿ ಸಹ ಸಿನಿಮಾ ನೋಡಿ ಕಣ್ಣೀರು ಹಾಕಿದ್ದಾರೆ. ಯಾವ ಮಕ್ಕಳು ತಮ್ಮ ಅಪ್ಪ ಬೇರೆಯವರ ಕೈಯಿಂದ ಹೊಡೆಸಿಕೊಂಡು ರಕ್ತ ಸುರಿಯುತ್ತಿರುವುದನ್ನು ನೋಡೋದಕ್ಕೆ ಇಷ್ಟ ಪಡುವುದಿಲ್ಲ' ಎಂದಿದ್ದಾರೆ.

ಅಭಿಮಾನಿಗಳು ಪ್ರೀತಿಯಿಂದ ಹುಚ್ಚ ಎಂದರೂ ಓಕೆ ಎಂದ 'ಪೈಲ್ವಾನ್​'

ಸಾಕಷ್ಟು ಮಂದಿ ಸಿಕ್ಸ್ ಪ್ಯಾಕ್ ನೋಡಿ ಸಿ.ಜಿ ಅಂತ ವ್ಯಂಗ್ಯ ಮಾಡಿದ್ದರು. ಅಂದು ವ್ಯಂಗ್ಯವಾಡಿದ್ದವರಿಗೆ ಸಿನಿಮಾನೇ ಉತ್ತರ ಕೊಡುತ್ತೆ ಎಂದ ಕಿಚ್ಚ ಇನ್ಮುಂದೆ ಅಭಿಮಾನಿಗಳು ಹುಚ್ಚ ಎಂದು ಕರೆದರೂ ಓಕೆ ಅಂತ ಕಿಚ್ಚ ಅಂತ ಕರೆಯೋದಾ ಅಥವಾ ಬಾದ್ ಶಾ ಅಂತ ಕರೆಯಬೇಕಾ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ ಸುದೀಪ್​.

 

Radhika Apte: ರಾಧಿಕಾ ಬೋಲ್ಡ್ ಪಾತ್ರಗಳಲ್ಲಿ ಅಭಿನಯಿಸಲು ಇದೇ ಕಾರಣವಂತೆ..!


 
First published: September 12, 2019, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories