ಬಾಲಯ್ಯನನ್ನು ಕೊಂಡಾಡಿದ ಪ್ರಿನ್ಸ್​ ಮಹೇಶ್​ ಬಾಬು: 'ಕಥಾನಾಯಕುಡು' ಸಿನಿಮಾಗೆ ಹೊಗಳಿಕೆಯ ಸುರಿ ಮಳೆ

ಸಾಮಾನ್ಯವಾಗಿ ಸ್ಟಾರ್​ ನಟರು ಮತ್ತೊಬ್ಬ ಸ್ಟಾರ್​ ನಟರ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹೊಗಳಿ ಬರೆದುಕೊಳ್ಳುವುದು ತೀರಾ ಕಡಿಮೆ. ಆದರೆ ಪ್ರಿನ್ಸ್​ ಮಹೇಶ್​ ಈ ಪಟ್ಟಿಗೆ ಸೇರುವುದಿಲ್ಲ. ಬದಲಾಗಿ ಯಾರೇ ಏನೇ ಒಳ್ಳೆಯ ಕೆಲಸ ಅಥವಾ ಒಳ್ಳೆಯ ಸಿನಿಮಾ ಮಾಡಿದರೆ ಸಾಕು ಅವರಿಗೆ ಶುಭ ಹಾರೈಕೆ ಜತೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಾರೆ.

Anitha E | news18
Updated:January 10, 2019, 4:53 PM IST
ಬಾಲಯ್ಯನನ್ನು ಕೊಂಡಾಡಿದ ಪ್ರಿನ್ಸ್​ ಮಹೇಶ್​ ಬಾಬು: 'ಕಥಾನಾಯಕುಡು' ಸಿನಿಮಾಗೆ ಹೊಗಳಿಕೆಯ ಸುರಿ ಮಳೆ
ಎನ್​ಟಿಆರ್​ ಕಥಾನಾಯಕುಡು ಸಿನಿಮಾ ಬಗ್ಗೆ ಟ್ವೀಟ್​ ಮಾಡಿದ ಪ್ರಿನ್ಸ್​ ಮಹೇಶ್​ ಬಾಬು
Anitha E | news18
Updated: January 10, 2019, 4:53 PM IST
ಆಗಿನ ಕಾಲಕ್ಕೆ ಟಾಲಿವುಡ್​ನಲ್ಲಿ ಒಂದು ರೀತಿಯ ಟ್ರೆಂಡ್ ಸೆಟರ್​ ಹಾಗೂ ಇತಿಹಾಸ ಸೃಷ್ಟಿಸಿದ ನಾಯಕ ನಟ ಎಂದರೆ ಅದು ಕೇವಲ ನಂದಮೂರಿ ತಾರಕ ರಾಮಾರಾವ್​. ಹೌದು ಇಂತಹ ಲೆಜೆಂಡ್​ ಜೀವನಾಧಾರಿತ ಸಿನಿಮಾ ಬರುತ್ತೆ ಎಂದರೆ ಸಿನಿ ಪ್ರೇಮಿಗಳೊಂದಿಗೆ ಇಡೀ ಟಾಲಿವುಡ್ಡೇ ಎದುರು ನೋಡುತ್ತಿತ್ತು.

ಇದನ್ನೂ ಓದಿ: ಪ್ರಿನ್ಸ್​ ಮಹೇಶ್​ಬಾಬುಗೆ ಜತೆಯಾಗಲಿರುವ 'ಮಲ್ಲೀಶ್ವರಿ': 13 ವರ್ಷಗಳ ನಂತರ ಟಾಲಿವುಡ್​ಗೆ ಕತ್ರಿನಾ ಕೈಫ್​ ಮರು ಪ್ರವೇಶ ..!

​ನಿನ್ನೆಯಷ್ಟೆ ಸಿನಿಮಾ ತೆರೆಗಪ್ಪಳಿಸಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಅದರಲ್ಲೂ ನಿರ್ದೇಶಕ ಕ್ರಿಷ್​ ಹಾಗೂ ಎನ್​ಟಿಆರ್​ ಪಾತ್ರದಲ್ಲಿ ನಟಿಸಿರುವ ಬಾಲಯ್ಯ ಅವರ ಅಭಿನಯದ ಬಗ್ಗೆ ಮೆಚ್ಚುಗೆಯ ಸುರಿ ಮಳೆಯಾಗುತ್ತಿದೆ.

ಹೀಗಿರುವಾಗಲೇ ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಸಹ ಮೊದಲ ದಿನವೇ ಎನ್​​ಟಿಆರ್ ' ಕಥಾನಾಯಕುಡು' ಸಿನಿಮಾವನ್ನು ನೋಡಿ ಬಂದಿದ್ದಾರೆ. ಬಂದ ಕೂಡಲೇ ಸಿನಿಮಾ, ನಿರ್ದೇಶಕ ಹಾಗೂ ಬಾಲಯ್ಯ ಅವರ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಅವರು ಮಾಡಿರುವ ಟ್ವೀಟ್​ ಇಲ್ಲಿದೆ ಓದಿ...


Loading...ಅಷ್ಟೇ ಅಲ್ಲ ಈ ಸಿನಿಮಾದ ಮೂಲಕ ನಿಜಕ್ಕೂ ಟಾಲಿವುಡ್​ನ ಲೆಂಜೆಂಡ್​ ಎನ್​ಟಿಆರ್​ ಅವರಿಗೆ ಗೌರವ ಸಲ್ಲಿಸಲಾಗಿದೆ ಎಂದೂ ಬರೆದುಕೊಂಡಿದ್ದಾರೆ ಮಹೇಶ್​.

 

ನಟ ಮಹೇಶ್ ಬಾಬು ಮಾತ್ರ ಟಾಲಿವುಡ್​ನಲ್ಲಿ ಯಾರೇ ಒಳ್ಳೆಯ ಸಿನಿಮಾ ಮಾಡಲಿ, ಏನೇ ಒಳ್ಳೆ ಕೆಲಸ ಮಾಡಲಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

 

'ಅಮರ್​' ಸೆಟ್​ನಲ್ಲಿ ಜೂನಿಯರ್​ ರೆಬೆಲ್ ಜತೆ ಡಿ-ಬಾಸ್​ರ ಕೆಲ ಅಪರೂಪದ ಚಿತ್ರಗಳು..!

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ