ಡಾಲಿಯ ಬೆನ್ನು ತಟ್ಟಿದ ದಚ್ಚು: ಟ್ವಿಟ್ಟರ್​ನಲ್ಲಿ ಸಂಭ್ರಮ ಹಂಚಿಕೊಂಡ ಧನಂಜಯ್

news18
Updated:September 3, 2018, 6:50 PM IST
ಡಾಲಿಯ ಬೆನ್ನು ತಟ್ಟಿದ ದಚ್ಚು: ಟ್ವಿಟ್ಟರ್​ನಲ್ಲಿ ಸಂಭ್ರಮ ಹಂಚಿಕೊಂಡ ಧನಂಜಯ್
news18
Updated: September 3, 2018, 6:50 PM IST
ನ್ಯೂಸ್​ 18 ಕನ್ನಡ 

ಕಷ್ಟ ಅಂತ ಬಂದವರಿಗೆ, ಸಹಾಯ ಬೇಡಿ ಬರೋ ಜನರಿಗೆ ಸಹಾಯ ಮಾಡೋದಕ್ಕೆ ದರ್ಶನ್ ಯಾವತ್ತೂ ಹಿಂದೂ ಮುಂದು ನೋಡೊದಿಲ್ಲ. ತಾನೋಬ್ಬ ಸ್ಟಾರ್ ನಟ ಆದರೂ ಕೂಡ ಪ್ರತಿಭೆಗಳ ಕೆಲಸಕ್ಕೆ ಬೆನ್ನು ತಟ್ಟಿ ಭೇಷ್ ಎನ್ನುತ್ತಾರೆ. ಇನ್ನು ತಮ್ಮ ಜೊತೆ ನಟಿಸೋ ಸಹ ಕಲಾವಿದರು ಬೇರೆ ಸಿನಿಮಾಗಳಲ್ಲಿ ಶೈನ್ ಆಗಿಬಿಟ್ಟರೆ, ಅವರಷ್ಟೆ ಖುಷಿಯನ್ನ ದರ್ಶನ್ ಕೂಡ ವ್ಯಕ್ತಪಡಿಸುತ್ತಾರೆ. ಅಂತೇಯೇ ಇತ್ತೀಚೆಗೆ ಡಾಲಿ ಧನಂಜಯ್‍ರ 'ಭೈರವ ಗೀತ' ಸಿನಿಮಾದ ಟ್ರೇಲರ್ ನೋಡಿದ್ದ ದರ್ಶನ್, ಧನಂಜಯ್ ಅಭಿನಯದ ಬಗ್ಗೆ ಹಾಡಿ ಹೊಗಳಿದ್ದಾರೆ.

ಕಳೆದ ವಾರವಷ್ಟೆ ರಿಲೀಸ್ ಆಗಿರೊ 'ಭೈರವ ಗೀತ' ಸಿನಿಮಾದ ಟ್ರೇಲರ್​ಗೆ​​ ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಕೇಳಿ ಬರುತ್ತಿದೆ. ತೆಲುಗು ಮತ್ತು ಕನ್ನಡ ಎರೆಡೂ ಭಾಷೆಯಲ್ಲೂ ಭೈರವಗೀತ ಚಿತ್ರ ಮೂಡಿಬರುತ್ತಿರುವುದರಿಂದ, ಚಿತ್ರದ ಟ್ರೈಲರ್​ಗೆ ಕನ್ನಡದ ಗಡಿ ಮೀರಿ ಪ್ರತಿಕ್ರಿಯೆ ಸಿಗುತ್ತಿದೆ. ಅಂತೆಯೇ ನಟ ದರ್ಶನ್ ಕೂಡ ಧನಂಜಯ್ ನಟನೆಯ 'ಭೈರವ ಗೀತ' ಟ್ರೇಲರ್ ನೋಡಿ ಸಂತಸ ಪಟ್ಟಿದ್ದು, ಸ್ವತಃ ಧನಂಜಯ್ ಬಳಿ ತನ್ನ ಖುಷಿಯನ್ನ ವ್ಯಕ್ತಪಡಿಸಿದ್ದಾರೆ.
Thanks @dasadarshan Anna for calling and extending your valuable support for #BhairavaGeetha , as always, love u for what u are❤️ pic.twitter.com/fNz5I6BoCY
ಯಜಮಾನ ಸಿನಿಮಾದ ಅಂತಿಮ ಭಾಗದ ಚಿತ್ರೀಕರಣ ನಡೆಯುತ್ತಿದ್ದರು, ಇದರಲ್ಲಿ ದರ್ಶನ್ ಮತ್ತು ಧನಂಜಯ್ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ದರ್ಶನ್ 'ಭೈರವ ಗೀತ' ಟ್ರೇಲರ್ ವೀಕ್ಷಿಸಿದ್ದು, ಶಹಬಾಷ್ ಧನಂಜಯ್, ಯು ಡಿಡ್ ಆ ಗ್ರೇಟ್ ಜಾಬ್ ಎಂದು ಮನಪೂರ್ವಕವಾಗಿ ಹಾಡಿ ಹೋಗಳಿದ್ದಾರಂತೆ ! ಅಷ್ಟೆ ಅಲ್ಲದೇ ನಿನ್ನಗೆ ಉತ್ತಮ ಭವಿಷ್ಯ ಇದೆ ಅಂತಲೂ ಡಾಲಿಯನ್ನ ಹುರಿದುಂಬಿಸಿದ್ದಾರಂತೆ.
Loading...

ದಾಸನ ಈ ಒಂದು ಮಾತಿಗೆ ಫುಲ್ ಖುಷ್ ಆಗಿರೋ ಧನಂಜಯ್ ತಮ್ಮ ಟ್ವಿಟ್ಟರ್‍ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದು, ದರ್ಶನ್‍ಗೆ ಧನ್ಯವಾದ ತಿಳಿಸಿದ್ದಾರೆ.

 
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ