Suresh Kumar: ಸಿನಿಮಾವೊಂದರ ಟ್ರೇಲರ್​ ನೋಡಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಬೇಸರ ವ್ಯಕ್ತಪಡಿಸಿದ ಸಚಿವ ಸುರೇಶ್ ಕುಮಾರ್​..!

Kannada Movie: ಸಚಿವ ಸುರೇಶ್​ ಕುಮಾರ್​ ಅವರು ಗಡ್ಡ ಮತ್ತು ತಲೆಗೂದಲನ್ನು ಟ್ರಿಮ್​ ಮಾಡಿಸಿಕೊಳ್ಳು ಸಲೂನ್​ಗೆ ಹೋಗಿದ್ದರಂತೆ. ಅಲ್ಲಿ ಅವರು ಕನ್ನಡ ಸಿನಿಮಾವೊಂದರ ಟೀಸರ್​ ನೋಡಿದ್ದಾರೆ. ಅದನ್ನು ನೋಡುತ್ತಿದ್ದಂತೆಯೇ ಅವರ ನೆಮ್ಮದಿ ಹಾರಿ ಹೋಗಿತ್ತಂತೆ.

ಸಚಿವ ಸುರೇಶ್​ ಕುಮಾರ್.

ಸಚಿವ ಸುರೇಶ್​ ಕುಮಾರ್.

  • Share this:
ರಾಜಕೀಯ ನಾಯಕರು ರಾಜಕಾರಣದಲ್ಲಿ ಎಷ್ಟೇ ವ್ಯಸ್ತವಾಗಿದ್ದರೂ ಕೆಲವೊಮ್ಮೆ ಅವರೂ ಸಹ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಾರೆ. ಮನರಂಜನೆಗೆಂದು ಸಿನಿಮಾ ನೋಡಲು ಹೋಗುವ ರಾಜಕೀಯ ನಾಯಕರು ಆ ಸಿನಿಮಾ ಬಗೆಗಿನ ತಮ್ಮ ಅಭಿಪ್ರಾಯವನ್ನೂ ಹಂಚಿಕೊಳ್ಳುತ್ತಾರೆ. ಆದರೆ ಹೀಗೆ ಅವರ ವಿಮರ್ಶೆ ಹಾಗೂ ಅಭಿಪ್ರಾಯ ಸಿಗುವುದು ಮಾತ್ರ ಅಪರೂಪ. ಕೆಲ ರಾಜಕೀಯ ನಾಯಕರು ತಾವು ನೋಡಿದ ಸಿನಿಮಾ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಶೇರ್​ ಮಾಡಿದರೆ, ಮತ್ತೆ ಕೆಲವರು ಮಾಧ್ಯಮಗಳ ಮೂಲಕ ಹೇಳಿಕೊಳ್ಳುತ್ತಾರೆ. ಇಲ್ಲೂ ಸಹ ಶಿಕ್ಷಣ ಸಚಿವ ಸುರೇಶ್​ ಕುಮಾರ್ ಅವರು ಕನ್ನಡ ಸಿನಿಮಾವೊಂದರ ಟೀಸರ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.  ತಾವು ನೋಡಿದ ಕನ್ನಡ ಸಿನಿಮಾದ ಟೀಸರ್​ ಅನ್ನು ಎಲ್ಲಿ ಹಾಗೂ ಯಾವಾಗ ನೋಡಿದ್ದು ಎಂದೆಲ್ಲ ವಿವರವಾಗಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಸಚಿವ ಸುರೇಶ್​ ಕುಮಾರ್​ ಅವರು ಗಡ್ಡ ಮತ್ತು ತಲೆಗೂದಲನ್ನು ಟ್ರಿಮ್​ ಮಾಡಿಸಿಕೊಳ್ಳು ಸಲೂನ್​ಗೆ ಹೋಗಿದ್ದರಂತೆ. ಅಲ್ಲಿ ಅವರು ಕನ್ನಡ ಸಿನಿಮಾವೊಂದರ ಟೀಸರ್​ ನೋಡಿದ್ದಾರೆ. ಅದನ್ನು ನೋಡುತ್ತಿದ್ದಂತೆಯೇ ಅವರ ನೆಮ್ಮದಿ ಹಾರಿ ಹೋಗಿತ್ತಂತೆ. ಟೀಸರ್​ ನೋಡಿದ ಅನುಭವದ ಬಗ್ಗೆ ಫೇಸ್​ಬುಕ್​ನಲ್ಲಿ ಸುರೇಶ್​ ಕುಮಾರ್ ಅವರು ಬರೆದುಕೊಂಡಿರುವುದು ಹೀಗೆ.

Sandalwood Cinema, Sandalwood, Trailer, Suresh Kumar, Suresh Kumar, Movie Trailer, Kannada Movie, Minister Suresh kumar about kannada film industry, Primary and Secondary Education Minister Suresh kumar, Suresh kumar about sandalwood, ಸುರೇಶ್ ಕುಮಾರ್, ಕನ್ನಡ ಚಿತ್ರರಂಗದ ಬಗ್ಗೆ ಸುರೇಶ್ ಕುಮಾರ್ ಬೇಸರ, After watching a trailer of an Kannada movie minister Suresh Kumar is displeasure ae
ಸುರೇಶ್​ ಕುಮಾರ್ ಅವರ ಫೇಸ್​ಬುಕ್​ ಪೋಸ್ಟ್​


ತಮ್ಮ ಅನುಭವ ಹಂಚಿಕೊಂಡ ಸುರೇಶ್​ ಕುಮಾರ್​

ಹೀಗೂ ಆಗುತ್ತೆ... ನಿನ್ನೆ ಸಂಜೆ ನನ್ನ ಗಡ್ಡ ಮತ್ತು ತಲೆಗೂದಲು ಟ್ರಿಮ್ ಮಾಡಿಸಲು ಮಾಮೂಲಿನಂತೆ ಹೇರ್ ಡ್ರೆಸ್ಸಿಂಗ್ ಸೆಲೂನ್ ಗೆ ಹೋಗಿದ್ದೆ. ಸಲೂನ್​ಗಳಲ್ಲಿ ಟ್ರಿಮ್ ಮಾಡಿಸಿಕೊಳ್ಳುವ ಆ ಸಮಯ ಬಹಳ ಆರಾಮಾಗಿ ಇರುವಂತಹ ವೇಳೆ. ಇದನ್ನು ಬಹಳಷ್ಟು ಜನ "ಪಟ್ಟಾಭಿಷೇಕ" ಎಂದೂ ಹೇಳುವುದುಂಟು. ನಾನು ನಿನ್ನೆ ಟ್ರಿಮ್ ಮಾಡಿಸಿಕೊಳ್ಳುತ್ತಿದ್ದಾಗ ಓರ್ವ ಯುವಕ ನನ್ನನ್ನು ಮಾತನಾಡಿಸಲು ಬಹಳಷ್ಟು ಪ್ರಯತ್ನಿಸುತ್ತಿದ್ದದ್ದನ್ನು ಗಮನಿಸಿದೆ. ಕೊನೆಗೂ ಆ ವ್ಯಕ್ತಿ ನನ್ನನ್ನು ಮಾತನಾಡಿಸಿ ಆ ನನ್ನ ನೆಮ್ಮದಿಗೆ ಕಲ್ಲೆಸೆದುಬಿಟ್ಟರು.

ಆ ಯುವಕನ ಬೇಡಿಕೆಯೆಂದರೆ ತಾನು ನಟಿಸಿರುವ ಚಲನಚಿತ್ರವನ್ನು ನಾನು ನೋಡಬೇಕೆಂದು. ಅವರು ಹೇಳಿದ ದಿನಾಂಕದಂದು ನನಗೆ ಪುರುಸೋತ್ತು ಇಲ್ಲದ್ದರಿಂದ ಕೊನೆಯ ಪಕ್ಷ ತಾನು ನಟಿಸಿರುವ ಚಿತ್ರದ ಟೀಸರ್ ಆದರೂ ವೀಕ್ಷಿಸಿ ಎಂದು ದುಂಬಾಲು ಬಿದ್ದರು. ಇನ್ನೇನು ಮಾಡುವುದು. ಒಪ್ಪಿ ನೋಡಿದೆ.

ಆ ಚಿತ್ರದ ಟೀಸರ್ ನೋಡಿ ಸಲೂನಿನಲ್ಲಿ ನಾನು ಅನುಭವಿಸಲು ಹೋಗಿದ್ದ ನನ್ನ ನೆಮ್ಮದಿ ಎಲ್ಲ ಹಾರಿಹೋಯಿತು. ಬರೀ ಹೊಡೆದಾಟ, ಲಾಂಗುಗಳ ಪ್ರದರ್ಶನ, ಯುವಕರನ್ನು ಹಿಂಸೆಗೆ ಪ್ರಚೋದಿಸುವ ಸಂಭಾಷಣೆ ಇತ್ಯಾದಿಗಳಿಂದ ಆ ಟೀಸರ್ ತುಂಬಿತ್ತು.
ಆ ಟೀಸರ್ ನೋಡಿದ್ದು ಮುಕ್ತಾಯವಾದ ಮೇಲೆ ಆ ವ್ಯಕ್ತಿಗೆ ಬೇಸರ ಆಗಬಾರದೆಂದು ನಾನೇನೂ ಮಾತನಾಡದೆ ಅವನ ಭುಜ ತಟ್ಟಿ ಹೊರ ನಡೆದೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ ಸುರೇಶ್​ ಕುಮಾರ್​

ಇದನ್ನೂ ಓದಿ: ಅಮ್ಮನ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ ನಟ ಚಂದನ್​ ಕುಮಾರ್​

ಇನ್ನು, ಸುರೇಶ್​ ಕುಮಾರ್​ ಅವರು ಯಾವ ಸಿನಿಮಾ ಎಂದು ಹೇಳದೆ ಮಾಡಿರುವ ಈ ಪೋಸ್ಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೇಲರ್​ ನೋಡಿದಾಗಲೇ ಆ ಯುವಕನಿಗೆ ಬೆನ್ನು ತಟ್ಟುವ ಬದಲು, ನಿಜವಾದ ಅಭಿಪ್ರಾಯ ತಿಳಿಸುವುದನ್ನು ಬಿಟ್ಟು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎನ್ನುತ್ತಿದ್ದಾರೆ. ಮತ್ತೆ ಕೆಲವರು ಈಗ ಕನ್ನಡ ಚಿತ್ರರಂಗದಲ್ಲಿ ಬರುತ್ತಿರುವ ಬಹುತೇಕ ಸಿನಿಮಾಗಳೂ ಹೀಗೆ ಇರುತ್ತವೆ ಎಂದು ಬೇಸರ ವ್ಯಕ್ತಪಡಿಸುತ್ತಾ ಕನ್ನಡ ಸಿನಿರಂಗ ಇಷ್ಟೆ ಎನ್ನುತ್ತಿದ್ದಾರೆ.
Published by:Anitha E
First published: