ಮೊದಲ ಚಿತ್ರದ ರಿಲೀಸ್​ಗೂ ಮುನ್ನ ಟಾಲಿವುಡ್​ಗೆ ಹಾರಿದ ಯುವನಟ !

news18
Updated:July 19, 2018, 9:13 PM IST
ಮೊದಲ ಚಿತ್ರದ ರಿಲೀಸ್​ಗೂ ಮುನ್ನ ಟಾಲಿವುಡ್​ಗೆ ಹಾರಿದ ಯುವನಟ !
news18
Updated: July 19, 2018, 9:13 PM IST
-ನ್ಯೂಸ್ 18 ಕನ್ನಡ

ಕಾಲಿವುಡ್​ನ ನಟ ವಿಕ್ರಮ್​ ಯಾವುದೇ ಪಾತ್ರದಲ್ಲೂ ಲೀಲಾಜಾಲವಾಗಿ ಅಭಿನಯಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಪ್ರತಿಭಾವಂತ ನಟನ ಮಗನ ಸಿನಿರಂಗದ ಎಂಟ್ರಿ ಬಗ್ಗೆ ಕುತೂಹಲ ಇರುವುದು ಸಹಜ. ಅದರಲ್ಲೂ ವಿಕ್ರಮ್​ ಸಿನಿ ಕೆರಿಯರ್​ನ ಉತ್ತುಂಗದಲ್ಲಿರುವಾಗಲೇ ಪುತ್ರ ಧ್ರುವನನ್ನು ಬಣ್ಣದಲೋಕಕ್ಕೆ ಪರಿಚಯಿಸುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು.

ಕಳೆದ ವರ್ಷದ ಟಾಲಿವುಡ್ ಸೂಪರ್ ಡೂಪರ್ ಹಿಟ್​ ಸಿನಿಮಾ 'ಅರ್ಜುನ್ ರೆಡ್ಡಿ' ತಮಿಳು ರಿಮೇಕ್​ನಲ್ಲಿ ಧ್ರುವ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾವನ್ನು ​ಖ್ಯಾತ ನಿರ್ದೇಶಕ ಬಾಲಾ ನಿರ್ದೇಶನ ಮಾಡುತ್ತಿದ್ದಾರೆ. ಮೊದಲ ಸಿನಿಮಾ ಚಿತ್ರೀಕರಣದಲ್ಲಿ ಇರುವಾಗಲೇ ಯುವನಟ ಧ್ರುವನಿಗೆ ಭರ್ಜರಿ ಆಫರ್ ಒದಗಿ ಬಂದಿದೆ. ಅದೂ ಕಲರ್​ಫುಲ್​ ಇಂಡಸ್ಟ್ರಿ ಟಾಲಿವುಡ್​ನಿಂದ ಎಂಬುದು ವಿಶೇಷ.

ಖ್ಯಾತ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ತಮ್ಮ ಮುಂದಿನ ಚಿತ್ರಕ್ಕಾಗಿ ಯುವ ನಟ ಧ್ರುವನನ್ನು ಸೆಲೆಕ್ಟ್​ ಮಾಡಿದ್ದಾರೆ. ಈಗಾಗಲೇ ಈ ಕುರಿತು ಚಿಯಾನ್ ವಿಕ್ರಮ್ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ. ಈ ಬಗ್ಗೆ  ಅನ್ನಿಯನ್ ನಟನಿಂದ ಗ್ರೀನ್ ಸಿಗ್ನಲ್ ಸಹ ಸಿಕ್ಕಿದೆಯಂತೆ.

ಶೇಖರ್ ಆ್ಯಕ್ಷನ್ ಕಟ್​ ಹೇಳಲಿರುವ ಈ ಸಿನಿಮಾ ಯೂತ್​ಫುಲ್ ಸಬ್ಜೆಕ್ಟ್​ ಆಗಿದ್ದು, ಇಲ್ಲಿ ಧ್ರುವ ಡ್ಯಾನ್ಸರ್​ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಟಾಲಿವುಡ್​ನಿಂದ ಕೇಳಿ ಬರುತ್ತಿದೆ.

ತೆಲುಗು​ ಚಿತ್ರರಂಗದಲ್ಲಿ ನಿಖಿಲ್ ಅಕ್ಕಿನೇನಿ, ರಾಣಾ ದಗ್ಗುಬಟ್ಟಿ, ಸಾಯಿ ಪಲ್ಲವಿ ಸೇರಿದಂತೆ ಹಲವಾರು ಯುವ ನಟ-ನಟಿಯರನ್ನು ಪರಿಚಯಿಸಿದ ಖ್ಯಾತಿಯು ನಿರ್ದೇಶಕ ಶೇಖರ್ ಕಮ್ಮುಲ ಅವರಿಗೆ ಸಲ್ಲುತ್ತದೆ. ಹೀಗಾಗಿನೇ ನಟ ವಿಕ್ರಮ್, ಶೇಖರ್ ಅವರ ಕಥೆಗೆ ಮನಸೋತಿದ್ದಾರೆ ಎನ್ನಲಾಗಿದೆ.
Loading...

ವಿಕ್ರಮ್​ ಕೆರಿಯರ್​ನ ಬ್ಲಾಕ್​ಬ್ಲಸ್ಟರ್ ಸಿನಿಮಾ 'ಸೇತು' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಬಾಲಾ  'ವರ್ಮಾ' ಚಿತ್ರಕ್ಕೆ ಸಾರಥಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಹೀಗಾಗಿ 'ಅರ್ಜುನ್​ ರೆಡ್ಡಿ'ಯ ಕುಡುಕ ಡಾಕ್ಟರ್ ಪಾತ್ರವನ್ನು ಧ್ರುವ ಯಾವ ರೀತಿ ನಿಭಾಯಿಸಲಿದ್ದಾರೆ ಎಂದು ಇಡೀ ಕಾಲಿವುಡ್​ ಎದುರು ನೋಡುತ್ತಿದೆ.

ಇನ್ನೂ ಮೊದಲ ಚಿತ್ರದ ಬಿಡುಗಡೆಯಾಗಿಲ್ಲ. ಅದಕ್ಕೂ ಮುನ್ನವೇ ಟಾಲಿವುಡ್​ನಲ್ಲಿ ಅವಕಾಶ ಪಡೆಯುವಲ್ಲಿ ಜೂನಿಯರ್ ವಿಕ್ರಮ್​ ಯಶಸ್ವಿಯಾಗಿದ್ದಾರೆ. ಈ ಅದೃಷ್ಟ​ ಮುಂದಿನ ದಿನಗಳಲ್ಲಿ ಹೇಗೆ ಇರಲಿದೆ ಎಂಬುದನ್ನು ಮಾತ್ರ 'ವರ್ಮಾ' ಸಿನಿಮಾ ನಿರ್ಧರಿಸಲಿದೆ.
First published:July 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...