ಒಂದೇ ಚಿತ್ರದಲ್ಲಿ ಯಶ್-ಪ್ರಭಾಸ್; ಖ್ಯಾತ ಬಾಲಿವುಡ್​ ನಿರ್ದೇಶಕನ ಸಿನಿಮಾದಲ್ಲಿ ದಕ್ಷಿಣ ಭಾರತದ ನಟರು?

ಈ ಮೊದಲು ಪ್ರಭಾಸ್​ ಬಾಲಿವುಡ್​ಗೆ ಕಾಲಿಡಲಿದ್ದಾರೆ ಎನ್ನುವ ವಿಚಾರ ಹರಿದಾಡಿತ್ತು. ಆದರೆ, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಈಗ ಪ್ರಭಾಸ್​ ಅಭಿಮಾನಿಗಳಿಗೆ ಆ ಬಗ್ಗೆ ಚಿಕ್ಕ ಸುಳಿವೊಂದು ಸಿಕ್ಕಂತಾಗಿದೆ.

Rajesh Duggumane | news18
Updated:December 25, 2018, 10:51 AM IST
ಒಂದೇ ಚಿತ್ರದಲ್ಲಿ ಯಶ್-ಪ್ರಭಾಸ್; ಖ್ಯಾತ ಬಾಲಿವುಡ್​ ನಿರ್ದೇಶಕನ ಸಿನಿಮಾದಲ್ಲಿ ದಕ್ಷಿಣ ಭಾರತದ ನಟರು?
ಪ್ರಭಾಸ್​-ಯಶ್​
  • News18
  • Last Updated: December 25, 2018, 10:51 AM IST
  • Share this:
‘ಕೆಜಿಎಫ್​’ ಚಿತ್ರ ರಿಲೀಸ್​ಗೂ ಮೊದಲು ‘ರಾಕಿಂಗ್​ ಸ್ಟಾರ್’​ ಯಶ್​ ಹಾಗೂ ಟಾಲಿವುಡ್​ ನಟ ಪ್ರಭಾಸ್​ ಭೇಟಿ ಆಗಿದ್ದರು. ಇದೊಂದು ಸೌಹಾರ್ದಯುತ ಭೇಟಿ ಎನ್ನಲಾಗಿತ್ತು. ಆದರೆ ಈಗ ಕೇಳಿ ಬರುತ್ತಿರುವ ಮಾತೇನೆಂದರೆ, ಯಶ್​ ಹಾಗೂ ಪ್ರಭಾಸ್ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರಂತೆ! ಸದ್ಯ ಹೀಗೊಂದು ವದಂತಿ ಎಲ್ಲ ಕಡೆಗಳಲ್ಲಿ ಹರಿದಾಡುತ್ತಿದೆ. ಹಾಗಾಗಿ ಮುಂಬೈ ಭೇಟಿ ವೇಳೆ ಇಬ್ಬರೂ ಸಿನಿಮಾ ವಿಚಾರವಾಗಿ ಚರ್ಚಿಸಿದ್ದರಾ ಎನ್ನುವ ಪ್ರಶ್ನೆಗಳೂ ಹರಿದಾಡುತ್ತಿವೆ.

‘ಕೆಜಿಎಫ್​’ ಮೂಲಕ ಯಶ್​ ತಮ್ಮ ತಾಕತ್ತು ಏನು ಎಂಬುದನ್ನು ಕೇವಲ ದಕ್ಷಿಣ ಭಾರತ ಮಾತ್ರವಲ್ಲ ಬಾಲಿವುಡ್​ಗೂ ತೋರಿಸಿಕೊಟ್ಟಿದ್ದಾರೆ. ಚಿತ್ರದ ಕಲೆಕ್ಷನ್​ ದಿನೇ ದಿನೇ ಏರುತ್ತಿದೆ. ಚಿತ್ರಕ್ಕೆ ಇಷ್ಟು ದೊಡ್ಡ ಮೈಲೇಜ್​ ಸಿಕ್ಕಿರುವುದರಿಂದ ಸಹಜವಾಗಿಯೇ ಯಶ್​ ಖ್ಯಾತಿ ಹೆಚ್ಚುತ್ತಿದೆ. ಹಾಗಾಗಿ ಖ್ಯಾತ ನಿರ್ದೇಶಕರು ಯಶ್​ ಕಾಲ್​ಶೀಟ್​ ಪಡೆಯಲು ಮುಂದೆ ಬಂದಿದ್ದಾರಂತೆ.

ಅಷ್ಟಕ್ಕೂ ಯಶ್​-ಪ್ರಭಾಸ್​ ಸಿನಿಮಾಕ್ಕೆ ನಿರ್ದೇಶನ ಹೇಳುತ್ತಿರುವವರು ಯಾರು ಗೊತ್ತಾ? ಖ್ಯಾತ ಬಾಲಿವುಡ್​ ನಿರ್ದೇಶಕ ರಾಜ್​ಕುಮಾರ್​ ಹಿರಾನಿ! ಹೌದು, ಬಾಲಿವುಡ್​ನಲ್ಲಿ ​ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದ ಹಿರಾನಿ ಅವರು ಯಶ್​-ಪ್ರಭಾಸ್​​ ಅವರನ್ನು ಒಟ್ಟಿಗೆ ತೆರೆಮೇಲೆ ತರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ.

ಇದನ್ನೂ ಓದಿ: ‘ಕೆಜಿಎಫ್​’ ನೋಡಿ ಮನಸೋತ ಬಾಲಿವುಡ್​ ಮಂದಿ; ಏರುತ್ತಲೇ ಇದೆ ಚಿತ್ರದ ಕಲೆಕ್ಷನ್​

ಈ ಮೊದಲು ಪ್ರಭಾಸ್​ ಬಾಲಿವುಡ್​ಗೆ ಕಾಲಿಡಲಿದ್ದಾರೆ ಎನ್ನುವ ವಿಚಾರ ಹರಿದಾಡಿತ್ತು. ಆದರೆ, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿರಲಿಲ್ಲ. ಈಗ ಪ್ರಭಾಸ್​ ಅಭಿಮಾನಿಗಳಿಗೆ ಆ ಬಗ್ಗೆ ಚಿಕ್ಕ ಸುಳಿವೊಂದು ಸಿಕ್ಕಂತಾಗಿದೆ. ಈ ವಿಚಾರ ಕೇಳಿ ಟಾಲಿವುಡ್​ ಹಾಗು ಸ್ಯಾಂಡಲ್​ವುಡ್​ ಮಂದಿ ಫುಲ್​ ಖುಷ್​ ಆಗಿದ್ದಾರೆ.

‘ಸಂಜು’ ಚಿತ್ರದ ನಂತರ ಹಿರಾನಿ ಮುಂದಿನ ಚಿತ್ರ ಘೋಷಣೆ ಮಾಡಿಲ್ಲ. ಸದ್ಯ ಅವರು ಹೊಸ ಸಿನಿಮಾಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರ ಮುಂದಿನ ಚಿತ್ರದಲ್ಲೇ ಇಬ್ಬರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಯಶ್​ ಸಿನಿಮಾ ಒಪ್ಪಿಕೊಂಡಿರುವುದು ಹೌದೇ? ಹೌದು ಎಂದಾದರೆ ಆ ಚಿತ್ರ ಯಾವ ಯಾವ ಭಾಷೆಗಳಲ್ಲಿ ತೆರೆಕಾಣಲಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಯಶ್​ ಅವರಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಸದ್ಯ 'ಕೆಜಿಎಫ್​' ಚಿತ್ರ ಬಾಕ್ಸ್​ ಆಫೀಸ್​ನಲ್ಲಿ 75 ಕೋಟಿ ರೂ. ಗಳಿಕೆ ಮಾಡಿ ಮುನ್ನುಗ್ಗುತ್ತಿದೆ. ಐದೂ ಭಾಷೆಗಳಲ್ಲಿ ಚಿತ್ರಕ್ಕೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ.ಇದನ್ನೂ ಓದಿ: ತಮಿಳುನಾಡಿನಲ್ಲಿ ಅಣ್ತಮ್ಮಂದೇ ಹವಾ; ಏರಿಕೆ ಆಯ್ತು ಚಿತ್ರಮಂದಿರಗಳ ಸಂಖ್ಯೆ

First published:December 25, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ