The Kashmir Files: ಕಾಶ್ಮೀರ್​ ಆಯ್ತು ಈಗ ಇವ್ರದ್ದಂತೆ.. ಬರ್ತಿದೆ ದಿ ಕೇರಳ ಸ್ಟೋರಿ! ಕಥೆ ತಿರುಳೇನು ಗೊತ್ತಾ?

‘ದಿ ಕೇರಳ ಸ್ಟೋರಿ’ ಎಂಬ ಸಿನಿಮಾ ಇದರ ನಡುವೆಯೇ ಸೈಲೆಂಟಾಗಿ ಸೆಟ್ಟೇರಿದೆ. ಈ ಸಿನಿಮಾ ‘ದಿ ಕಾಶ್ಮೀರ್‌ ಫೈಲ್ಸ್’ ಸಿನಿಮಾದಿಂದಲೇ ಸ್ಪೂರ್ತಿ ಪಡೆದಿರುವುದು ಪಕ್ಕಾ ಎನ್ನುತ್ತಿದ್ದಾರೆ ಸಿನಿಪಂಡಿತರು.

ದಿ ಕಾಶ್ಮೀರ್​ ಫೈಲ್ಸ್​ ಪೋಸ್ಟರ್​

ದಿ ಕಾಶ್ಮೀರ್​ ಫೈಲ್ಸ್​ ಪೋಸ್ಟರ್​

  • Share this:
‘ದಿ ಕಾಶ್ಮೀರ್ ಫೈಲ್ಸ್‌’(The Kashmir Files) ಚಿತ್ರ ಇಡೀ ದೇಶದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ದೇಶದ ಮುಕುಟ ಕಾಶ್ಮೀರ(Kashmir)ದ ಪಂಡಿತರ ಕತೆಯನ್ನು ಈ ಚಿತ್ರ ಹೊಂದಿದೆ. ರಾಜ್ಯದಲ್ಲಿ ಈ ಚಿತ್ರ ವೀಕ್ಷಿಸುವವರಿಗೆ ತೆರಿಗೆ(Tax)ಯನ್ನೂ ತೆಗೆದುಹಾಕಲಾಗಿದೆ. ನಮ್ಮ ರಾಜ್ಯದ ಎಲ್ಲ ಶಾಸಕರಿಗೂ ಈ ಚಿತ್ರವನ್ನು ನೋಡುವಂತೆ ವಿಶೇಷ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ಒಟ್ಟಾರೆ, ಈ ಚಿತ್ರ ದೇಶದಲ್ಲಿ ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ. 90ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತ(Kashmiri Pundits)ರ ಸಾಮೂಹಿಕ ವಲಸೆ(Mass Migration)ಯ ದಾರುಣ ಕಥೆಗಳನ್ನು ಆಧರಿಸಿದ ಈ ಚಿತ್ರ, ಈಗಾಗಲೇ ವೀಕ್ಷಿಸಿದವರ ಹೃದಯವನ್ನು ಕರಗಿಸಿದೆ ಮತ್ತು ಇತರರಲ್ಲಿ ನೋಡುವ ಕುತೂಹಲವನ್ನು ಹುಟ್ಟು ಹಾಕಿದೆ ಎನ್ನಲಾಗುತ್ತಿದೆ. ಈ ಸಿನಿಮಾ ಸದ್ಯ ಭಾರತದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಇದರ ಮಧ್ಯೆ ‘ದಿ ದಿಲ್ಲಿ ಫೈಲ್ಸ್​​’, ಬೆಳಗಾವಿ ಫೈಲ್ಸ್​ ವಿಚಾರ ಕೂಡ ಮುನ್ನಲೇಗೆ ಬಂದಿದೆ.

ಕಾಶ್ಮೀರ್​ ಆಯ್ತು.. ಬರ್ತಿದೆ ದಿ ಕೇರಳ ಸ್ಟೋರಿ!

‘ದಿ ಕೇರಳ ಸ್ಟೋರಿ’ ಎಂಬ ಸಿನಿಮಾ ಇದರ ನಡುವೆಯೇ ಸೈಲೆಂಟಾಗಿ ಸೆಟ್ಟೇರಿದೆ. ಈ ಸಿನಿಮಾ ‘ದಿ ಕಾಶ್ಮೀರ್‌ ಫೈಲ್ಸ್’ ಸಿನಿಮಾದಿಂದಲೇ ಸ್ಪೂರ್ತಿ ಪಡೆದಿರುವುದು ಪಕ್ಕಾ ಎನ್ನುತ್ತಿದ್ದಾರೆ ಸಿನಿಪಂಡಿತರು. ಕೇರಳದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಮಾನವ ಕಳ್ಳಸಾಗಣೆ ಕುರಿತ ಕತೆಯನ್ನು ಒಳಗೊಂಡಿರಲಿದೆ ಎಂದು ನಿರ್ದೇಶಕ ಸುದಿಪ್ತೊ ಸೇನ್ ಹೇಳಿದ್ದಾರೆ. ಕಳೆದ 12 ವರ್ಷಗಳಲ್ಲಿ ಸಾವಿರಾರು ಮುಸ್ಲಿಂ ಹೆಣ್ಣು ಮಕ್ಕಳನ್ನು ಉಗ್ರ ಸಂಘಟನೆ ಐಸಿಸ್‌ಗೆ ಬಲವಂತವಾಗಿ ಕಳಿಸಲಾಗಿದೆ. ಕೇರಳದ ಈ ಭಯನಾಕ ಕತೆಯನ್ನು ಸಿನಿಮಾ ಮಾಡುತ್ತಿರುವುದಾಗಿ ‘ದಿ ಕೇರಳ ಸ್ಟೋರಿ’ ಟೀಸರ್‌ನಲ್ಲಿ ಚಿತ್ರತಂಡ ಹೇಳಿದೆ.

ಟೀಸರ್​ನಲ್ಲಿದೆ ಕೇರಳದ ಮಾಜಿ ಸಿಎಂ ಹೇಳಿಕೆಯ ವಿಡಿಯೋ!

''ದಿ ಪಾಪುಲರ್ ಫ್ರಂಟ್ ಸಂಘಟನೆಯು ಕೇರಳವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಲು ಸಂಚು ರೂಪಿಸಿದೆ. ನಿಷೇಧಿತ ಸಂಘಟನೆ ಎನ್‌ಡಿಎಫ್ ಸಹ ಇದೇ ಮಾದರಿಯ ಆಲೋಚನೆಯನ್ನು ಹೊಂದಿತ್ತು. ಮುಂದಿನ 20 ವರ್ಷಗಳಲ್ಲಿ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿ ಮಾಡುವುದು ಪಾಪ್ಯುಲರ್ ಫ್ರಂಟ್‌ನ ಗುರಿ'' ಎಂದು ಕೇರಳದ ಮಾಜಿ ಸಿಎಂ ಅಚ್ಯುತಾನಂದ್ ಹೇಳಿರುವ ವಿಡಿಯೋವನ್ನು ಟೀಸರ್‌ನಲ್ಲಿ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ: The Kashmir Files ನಿರ್ದೇಶಕ ಈಗ 'ದೆಹಲಿ'ಯ ಕರಾಳ ಕಥೆ ಹೇಳ್ತಾರಾ? ವಿವೇಕ್‌ ಅಗ್ನಿಹೋತ್ರಿ next ಸಿನಿಮಾ ಯಾವುದು?

ಮತ್ತೆ ಫೈಲ್‌ ಹಿಂದೆ ಬಿದ್ದ ಅಗ್ನಿಹೋತ್ರಿ

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೆ ಫೈಲ್‌ಗಳ ಹಿಂದೆ ಬಿದ್ದಿದ್ದಾರೆ. ಈ ಹಿಂದೆ ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ಕುರಿತಾದ ಕಥೆಯನ್ನೊಳಗೊಂಡ ದಿ ತಾಷ್ಕೆಂಟ್ ಫೈಲ್ ಎಂಬ ಸಿನಿಮಾ ಮಾಡಿದ್ದರು. 2019ರಲ್ಲಿ ರಿಲೀಸ್ ಆದ ಈ ಸಿನಿಮಾ ಸುದ್ದಿ ಮಾಡಿದ್ರೂ, ಅಷ್ಟೊಂದು ಯಶಸ್ಸು ಗಳಿಸಲಿಲ್ಲ. ಅದಾದ ಬಳಿಕ ಬಂದಿದ್ದೇ ದಿ ಕಾಶ್ಮೀರ್ ಫೈಲ್ಸ್.

ಇದನ್ನೂ ಓದಿ: Puneeth Rajkumarರವರ 'ಜೇಮ್ಸ್'ಗೆ ಅಡ್ಡಿಯಾಗುತ್ತಾ 'The Kashmir files'? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

ದೆಹಲಿಯ ಕರಾಳ ಕಥೆ ತೋರಿಸಲು ಸಜ್ಜಾದ ಅಗ್ನಿಹೋತ್ರಿ

ವಿವೇಕ್​ ಅಗ್ನಿಹೋತ್ರಿ ಮುಂದಿನ ಸಿನಿಮಾ ‘ದಿ ದಿಲ್ಲಿ ಫೈಲ್ಸ್​’ ಅಂತ ಘೋಷಣೆಯಾಗಿದೆ. 2021ರ ಸೆ.13ರಂದು ಅವರು ಈ ಸಿನಿಮಾ ಅನೌನ್ಸ್​ ಮಾಡಿದ್ದರು. ‘ದಿ ತಾಷ್ಕೆಂಟ್​ ಫೈಲ್ಸ್​’ ಹಾಗೂ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಗಳಿಗಿಂತಲೂ ‘ದಿ ದಿಲ್ಲಿ ಫೈಲ್ಸ್​’ ಹೆಚ್ಚು ಭಯಾನಕ ಆಗಿರಲಿದೆ ಎನ್ನಲಾಗಿದೆ.
Published by:Vasudeva M
First published: