Deepika Padukone: ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಅಪ್ಪ-ಅಮ್ಮನ ಬಳಿ ಬಂದ ದೀಪಿಕಾ ಪಡುಕೋಣೆ

Deepika-Ranveer Singh: ಬೆಂಗಳೂರಿನಲ್ಲಿರುವ ತಮ್ಮ ತಂದೆ-ತಾಯಿಯನ್ನು ಭೇಟಿ ಮಾಡುವುದು ತನ್ನ ಮೊದಲ ಕೆಲಸ ಎಂದು ಈ ಹಿಂದೆ ದೀಪಿಕಾ ಹೇಳಿಕೊಂಡಿದ್ದರು. ಅಂತೆಯೇ ದೀಪಿಕಾ ಹಾಗೂ ಪತಿ ರಣವೀರ್ ಸಿಂಗ್​ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು.

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್​

ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್​

  • Share this:
ಕೊರೋನಾ ಲಾಕ್​ಡೌನ್​ನಿಂದಾಗಿ ದೀಪಿಕಾ ಹಾಗೂ ರಣವೀರ್ ಸಿಂಗ್​ 4 ತಿಂಗಳಿಗೂ ಹೆಚ್ಚು ಸಮಯ ಮನೆಯಲ್ಲೇ ಲಾಕ್​ ಆಗಿದ್ದರು. ಇದರಿಂದಾಗಿಯೇ ದೀಪಿಕಾ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಮೊದಲು ತಾನು ಮಾಡಲಿರುವ ಕೆಲಸದ ಕುರಿತು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. 

ಬೆಂಗಳೂರಿನಲ್ಲಿರುವ ತಮ್ಮ ತಂದೆ-ತಾಯಿಯನ್ನು ಭೇಟಿ ಮಾಡುವುದು ತನ್ನ ಮೊದಲ ಕೆಲಸ ಎಂದು ಈ ಹಿಂದೆ ದೀಪಿಕಾ ಹೇಳಿಕೊಂಡಿದ್ದರು. ಅಂತೆಯೇ ದೀಪಿಕಾ ಹಾಗೂ ಪತಿ ರಣವೀರ್ ಸಿಂಗ್​ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು.

deepika padukone shared an emotional post about her father with adorable photo
ಅಪ್ಪ ಪ್ರಕಾಶ್​ ಪಡುಕೋಣೆ ಜೊತೆ ದೀಪಿಕಾರ ಬಾಲ್ಯದ ಚಿತ್ರ


ದೀಪಿಕಾ ತಮ್ಮ ತವರು ಮನೆಗೆ ಗಂಡನ ಜೊತೆ ಬಂದಿದ್ದು, ಕೆಲ ದಿನಗಳು ಇಲ್ಲೇ ಅಪ್ಪ, ಅಮ್ಮ ಹಾಗೂ ತಂಗಿಯೊಂದಿಗೆ ಕಾಲ ಕಳೆದಿದ್ದಾರೆ. ನಂತರ ಈ ಜೋಡಿ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.
View this post on Instagram

#ranveersingh and #deepikapadukone arrive back from Bangalore #airportdiaries #viralbhayani @viralbhayani


A post shared by Viral Bhayani (@viralbhayani) on


ಬೆಂಗಳೂರಿನಿಂದ ಮುಂಬೈಗೆ ಹಿಂತಿರುಗಿದ ದೀಪಿಕಾ ಹಾಗೂ ರಣವೀರ್​ ಸಿಂಗ್​ ಒಂದೇ ರೀತಿಯ ಬಟ್ಟೆ ತೊಟ್ಟಿದ್ದರು. ಇಬ್ಬರೂ ಕಪ್ಪು ಬಣ್ಣದ ಟಿ-ಶರ್ಟ್​, ನೀಲಿ ಬಣ್ಣದ ಜೀನ್ಸ್​ ಹಾಗೂ ಬಿಳಿ ಬಣ್ಣದ ಶೂ ತೊಟ್ಟಿದ್ದರು.ಇನ್ನು ದೀಪಿಕಾ ಅವರ ಸಿನಿಮಾ ವಿಷಯಕ್ಕೆ ಬಂದರೆ, ಪ್ರಭಾಸ್​ ಜೊತೆ ದೀಪಿಕಾ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ.

Rishi Kapoors last rites will be conducted at Chandanwadi Mumbai,
ರಿಷಿ ಕಪೂರ್


ರಣವೀರ್​ ಸಿಂಗ್​ ಹಾಗೂ ದೀಪಿಕಾ ಅಭಿನಯದ 83 ಚಿತ್ರ ರಿಲೀಸ್​ಗೆ ರೆಡಿಯಾಗಿದ್ದು, ಚಿತ್ರಮಂದಿರಗಳು ಚಾಗಿಲು ತೆರೆದ ಕೂಡಲೇ ತೆರೆ ಕಾಣಲಿದೆ. ಇನ್ನು ದೀಪಿಕಾ ನಿರ್ಮಾಪಕಿಯಾಗಿ ನಿರ್ಮಿಸುತ್ತಿರುವ ಸಿನಿಮಾ ಸಹ ಸೆಟ್ಟೇರಬೇಕಿದೆ.

ಇದನ್ನೂ ಓದಿ: ಗಣೇಶ ವಿಸರ್ಜನೆಯಲ್ಲಿ ಸಖತ್ ಸ್ಟೆಪ್​ ಹಾಕಿದ ಶಿಲ್ಪಾ ಶೆಟ್ಟಿ..!

ದೀಪಿಕಾ ನಿರ್ಮಾಣದ ಹಾಲಿವುಡ್​ ದ ಇಂಟರ್ನ್​ ಸಿನಿಮಾದ ಹಿಂದಿ ರಿಮೇಕ್​ನಲ್ಲಿ ರಿಷಿ ಕಪೂರ್​ ಪ್ರಮುಖ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಅವರ ಅಗಲಿಕೆಯಿಂದಾಗಿ ಈಗ ಆ ಜಾಗಕ್ಕೆ ಬೇರೆ ಕಲಾವಿದರ ಹುಡುಕಾಟ ನಡೆದಿದೆ.
Published by:Anitha E
First published: