• Home
 • »
 • News
 • »
 • entertainment
 • »
 • Tamannaah: ಶಿಲ್ಪಾ ಶೆಟ್ಟಿ ಬಳಿಕ ಡಬಲ್‌ ಟೋನ್‌ ಜೀನ್ಸ್‌ ಧರಿಸಿದ ತಮನ್ನಾ! ಟೈಲರ್‌ ಒಬ್ಬರೇನಾ? ಎಂದು ಕಾಲೆಳೆದ ನೆಟ್ಟಿಗರು

Tamannaah: ಶಿಲ್ಪಾ ಶೆಟ್ಟಿ ಬಳಿಕ ಡಬಲ್‌ ಟೋನ್‌ ಜೀನ್ಸ್‌ ಧರಿಸಿದ ತಮನ್ನಾ! ಟೈಲರ್‌ ಒಬ್ಬರೇನಾ? ಎಂದು ಕಾಲೆಳೆದ ನೆಟ್ಟಿಗರು

ತಮನ್ನಾ, ಶಿಲ್ಪಾ ಶೆಟ್ಟಿ

ತಮನ್ನಾ, ಶಿಲ್ಪಾ ಶೆಟ್ಟಿ

ಡಬಲ್‌ ಟೋನ್‌ ಜೀನ್ಸ್‌ ಧರಿಸಿದ್ದ ನಟಿ ತಮನ್ನಾ ಫುಲ್​ ಟ್ರೋಲ್​ ಆಗಿದ್ದಾರೆ. ಡಬಲ್ ಟೋನ್ ಜೀನ್ಸ್‌ನಲ್ಲಿ ಹೆಜ್ಜೆ ಹಾಕಿದ ನಟಿಯನ್ನು ಟ್ರೋಲ್‌ ಮಾಡಿರುವ ನೆಟ್ಟಿಗರು, ಶಿಲ್ಪಾ ಶೆಟ್ಟಿಯನ್ನು ಕಾಪಿ ಮಾಡಿದ್ದೀರಿ ಎಂದು ಟೀಕಿಸಿದ್ದಾರೆ.

 • Trending Desk
 • 4-MIN READ
 • Last Updated :
 • Karnataka, India
 • Share this:

ಸೆಲೆಬ್ರಿಟಿಗಳು ಎಂದ ಮೇಲೆ ಬಗೆ ಬಗೆಯ, ಚಿತ್ರ ವಿಚಿತ್ರ ಕಾಸ್ಟ್ಯೂಮ್‌ ಧರಿಸೋದು ಕಾಮನ್.‌ ಸೆಲೆಬ್ರಿಟಿ ಡಿಸೈನರ್‌ ಗಳು (Celebrity Designer) ಎಲ್ಲರಿಗಿಂತ ಡಿಫರೆಂಟ್‌ ಆಗಿ ಕಾಣಿಸಬೇಕೆಂಬ ಕಾರಣಕ್ಕೆ ವಿಭಿನ್ನವಾಗಿ ಡಿಸೈನ್‌ ಮಾಡಿರ್ತಾರೆ. ನಟ-ನಟಿಯರು (Actors and Actresses) ಅಂದ ಮೇಲೆ ಕೇಳ್ಬೇಕಾ.. ಅವರು ಹೋದಲ್ಲಿ ಬಂದಲ್ಲಿ ಕ್ಯಾಮರಾ ಕಣ್ಣು ಅವರ ಮೇಲೇ ಇರುತ್ತೆ. ಅದಕ್ಕೂ ಮೊದಲು ಅವರ ಲಕ್ಷಾಂತರ ಜನ ಫ್ಯಾನ್‌ ಫಾಲೋವರ್ಸ್‌ (Fan Followers) ಅವರ ಬಗ್ಗೆ ಹೆಚ್ಚು ಕುತೂಹಲ ತೋರಿಸ್ತಾರೆ.


ಇನ್ನು ಈ ಸೋಷಿಯಲ್‌ ಮೀಡಿಯಾ ಹೆಚ್ಚಾದಂತೆ ಸೆಲೆಬ್ರಿಟಿಗಳನ್ನು ಟ್ರೋಲ್‌ ಮಾಡುವವರೂ ಹೆಚ್ಚಾಗಿದ್ದಾರೆ. ಅವರ ಹಾವ ಭಾವ, ಹೇಳಿಕೆ, ಡ್ರೆಸ್‌, ಹೇರ್‌ ಸ್ಟೈಲ್‌ ಹೀಗೆ ಸಾಕಷ್ಟು ವಿಷಯಗಳಿಗೆ ಟ್ರೋಲ್‌ ಆಗುತ್ತಲೇ ಇರ್ತಾರೆ. ಇತ್ತೀಚಿಗಷ್ಟೇ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಔಟ್‌ ಫಿಟ್‌ ಗೆ ಟ್ರೋಲ್‌ ಆಗಿದ್ದಾರೆ.After Shilpa Shetty Tamannaah Bhatia trolled for wearing double toned jeans
ತಮನ್ನಾ, ಶಿಲ್ಪಾ ಶೆಟ್ಟಿ

ಬಹುಭಾಷಾ ನಟಿ, ತಮನ್ನಾ ಭಾಟಿಯಾ ಅನೇಕರಿಗೆ ಫ್ಯಾಷನ್‌ ಐಕಾನ್.‌ ಅವರ ಕಲರ್‌ ನಿಂದ ಹಿಡಿದು, ನಗು, ನೋಟ, ಡ್ರೆಸ್‌ ಸೆನ್ಸ್‌ ವರೆಗೂ ಜನರು ಆಕೆಯನ್ನು ಆರಾಧಿಸ್ತಾರೆ. ಆದ್ರೆ ಇತ್ತೀಚಿಗೆ ಆಕೆ ತೊಟ್ಟ ಡಬಲ್‌ ಟೋನ್‌ ಜೀನ್ಸ್‌ ನಿಂದಾಗಿ ನೆಟಿಜೆನ್ಸ್‌ ಆಕೆಯನ್ನು ಹಿಗ್ಗಾಮುಗ್ಗಾ ಟ್ರೋಲ್‌ ಮಾಡಿದ್ದಾರೆ. ಡಬಲ್ ಟೋನ್ ಜೀನ್ಸ್‌ನಲ್ಲಿ ಹೆಜ್ಜೆ ಹಾಕಿದ ನಟಿಯನ್ನು ಟ್ರೋಲ್‌ ಮಾಡಿರುವ ನೆಟ್ಟಿಗರು, ಶಿಲ್ಪಾ ಶೆಟ್ಟಿಯನ್ನು ಕಾಪಿ ಮಾಡಿದ್ದೀರಿ ಎಂದು ಟೀಕಿಸಿದ್ದಾರೆ.


ಅಂದಹಾಗೆ ಇತ್ತೀಚೆಗೆ ಶಿಲ್ಪಾ ಶೆಟ್ಟಿ ಡಬಲ್ ಟೋನ್ ಜೀನ್ಸ್‌ನಲ್ಲಿ ಕಾಣಿಸಿಕೊಂಡ ನಂತರ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಟ್ರೋಲ್ ಆಗಿದ್ದರು. ಇದೀಗ ಬಾಹುಬಲಿ ನಟಿ ತಮನ್ನಾ ಭಾಟಿಯಾ ಕೂಡ ಡಬಲ್ ಟೋನ್ ಜೀನ್ಸ್ ಧರಿಸಿ ಬರುತ್ತಿರುವ ವಿಡಿಯೋಕ್ಕೆ ಸಾಕಷ್ಟು ಜನರು ಕಾಮೆಂಟ್‌ ಮಾಡಿ ಟೀಕೆ ಮಾಡಿದ್ದಾರೆ. ವೀಡಿಯೋದಲ್ಲಿ ತಮನ್ನಾ ಕಪ್ಪು ಬಟನ್ ಶರ್ಟ್ ಧರಿಸಿ ಉದ್ದನೆಯ ತೋಳುಗಳನ್ನು ಹೊಂದಿರುವ ಡೆನಿಮ್ ಶಾರ್ಟ್ ಜಾಕೆಟ್ ಧರಿಸಿ ಡಬಲ್ ಟೋನ್ ಜೀನ್ಸ್‌ ಧರಿಸಿದ್ದರು.


“ಇಬ್ಬರಿಗೂ ಒಬ್ಬರೇ ಟೈಲರ್?”


ಈ ವಿಡಿಯೋ ಇಂಟರ್‌ನೆಟ್‌ ನಲ್ಲಿ ಅಪ್‌ ಲೋಡ್‌ ಆದ ತಕ್ಷಣದಿಂದಲೇ ನೆಟ್ಟಿಗರು ಕಾಮೆಂಟ್‌ ಗಳ ಮಹಾಪೂರವನ್ನೇ ಹರಿಸಿದ್ದಾರೆ. ಕೆಲವರು ಶಿಲ್ಪಾ ಶೆಟ್ಟಿಯನ್ನು ನಕಲು ಮಾಡಿದ್ದಾರೆ ಎಂದು ಆರೋಪಿಸಿದರೆ, ಇನ್ನು ಕೆಲವರು ಶಿಲ್ಪಾಗಿಂತ ಚೆನ್ನಾಗಿ ಸ್ಟೈಲ್ ಮಾಡಿದ್ದಾರೆ ಎಂದಿದ್ದಾರೆ. ಇಬ್ಬರು ನಟಿಯರಿಗೂ ಒಬ್ಬರೇ ಟೈಲರ್‌ ಇದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.


ಒಬ್ಬ ಬಳಕೆದಾರರು "ಶಿಲ್ಪಾ ಶೆಟ್ಟಿ ಅವರ ಲುಕ್‌ ಅನ್ನು ಕಾಪಿ ಮಾಡುತ್ತಿದ್ದಾರೆ " ಎಂದು ಬರೆದಿದ್ದಾರೆ."ಆದರೆ ಆಕೆ ಅದನ್ನು ಉತ್ತಮವಾಗಿ ವಿನ್ಯಾಸಗೊಳಿಸಿದ್ದಾರೆ” ಎಂಬುದಾಗಿ ಇನ್ನೊಬ್ಬರು ಬರೆದಿದ್ದಾರೆ.ಮತ್ತೊಬ್ಬ ಬಳಕೆದಾರರು, "ಆದರೆ ಅವರು ಶಿಲ್ಪಾ ಅವರಿಗಿಂತ ಹೆಚ್ಚು ಹಾಟ್ ಆಗಿ ಕಾಣುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.


ಟ್ರೋಲ್‌ ಆಗಿದ್ದ ಶಿಲ್ಪಾ ಶೆಟ್ಟಿ ಲುಕ್!


ಇತ್ತೀಚೆಗೆ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಹುಟ್ಟುಹಬ್ಬದ ಸಮಾರಂಭದಲ್ಲಿ ಶಿಲ್ಪಾ ಶೆಟ್ಟಿ ಭಾಗವಹಿಸಿದ್ದರು. ಹಂಗಾಮಾ 2 ನಟಿ ಡಬಲ್ ಟೋನ್ ಜೀನ್ಸ್ ಧರಿಸಿದ್ದಕ್ಕಾಗಿ ಹೆಚ್ಚಿನ ಜನರ ಗಮನ ಸೆಳೆದರು. ಈ ವೇಳೆ ಟ್ರೋಲ್‌ ಆಗಿರುವ ಶಿಲ್ಪಾ ಶೆಟ್ಟಿಯನ್ನು ಅನೇಕರು ಬಿಗ್ ಬಾಸ್ OTT ಖ್ಯಾತಿಯ ಉರ್ಫಿ ಜಾವೇದ್‌ಗೂ ಹೋಲಿಸಿದ್ದರು.


ಇದನ್ನೂ ಓದಿ: Rakshith Shetty-Rishab Shetty: ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾದಿಂದ ರಿಷಬ್​ ಔಟ್! ಈ ನಟ ಕೊಟ್ರು ಶಾಕಿಂಗ್ ನ್ಯೂಸ್​

ಈ ಮಧ್ಯೆ ನಟಿ ತಮನ್ನಾ ಭಾಟಿಯಾ ಅವರು ನಟ ರಿತೇಶ್ ದೇಶ್‌ಮುಖ್ ಅವರೊಂದಿಗೆ ಪ್ಲಾನ್ ಎ ಪ್ಲಾನ್ ಬಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ದೇ ಅವರು ತಮಿಳಿನ ವೇದಲಂನ ಅಧಿಕೃತ ರಿಮೇಕ್ ಆಗಿರುವ ಭೋಲಾ ಶಂಕರ್‌ನಲ್ಲಿಯೂ ನಟಿಸುತ್ತಿದ್ದಾರೆ.


Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು