Anitha EAnitha E
|
news18-kannada Updated:February 20, 2021, 3:21 PM IST
ಕುಟುಂಬದೊಂದಿಗೆ ಬಾಲಿವುಡ್ ನಟ ವಿವೇಕ್ ಒಬೆರಾಯ್
ಪ್ರೇಮಿಗಳ ದಿನಗಳನ್ನು ಆಚರಿಸುವವರಿಗೆ ಬಹಳ ವಿಶೇಷವಾದ ದಿನ. ಅದರಲ್ಲೂ ಸೆಲೆಬ್ರಿಟಿಗಳು ಹೇಗೆ ಪ್ರೇಮಿಗಳ ದಿನವನ್ನು ಆಚರಿಸಿದ್ದಾರೆ ಎಂದು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿರುತ್ತಾರೆ. ಇನ್ನು ಸಿನಿ ಸ್ಟಾರ್ಗಳು ಸಹ ತಮ್ಮ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಸಲ ನಟ ವಿವೇಕ್ ಒಬೆರಾಯ್ ಈ ವರ್ಷದ ಪ್ರೇಮಿಗಳ ದಿನದಂದು ಏನು ಮಾಡಿದರು ಹಾಗೆಯೇ ವ್ಯಾಲೆಂಟೈನ್ಸ್ ಡೇ ಅನ್ನು ಹೇಗೆ ಆಚರಿಸಿದರು ಎಂದು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವಿವೇಕ್ ಒಬೆರಾಯ್ ಸಾಮಾಜಿಕ ಜಾಲತಾಣದಲ್ಲಿರುವ ತಮ್ಮ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಆದರೆ ಅದೇ ವಿಡಿಯೋ ಈಗ ಅವರಿಗೆ ಸಂಕಷ್ಟ ತಂದೊಡ್ಡಿದೆ.
ಮಡದಿ ಪ್ರಿಯಾಂಕಾ ಆಳ್ವ ಅವರೊಂದಿಗಿನ ವಿಡಿಯೋವವೊಂದನ್ನು ವಿವೇಕ್ ಒಬೆರಾಯ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸೆಲೆಬ್ರಿಟಿ ದಂಪತಿ ಹೊಸ ಐಷಾರಾಮಿ ಬೈಕಿನಲ್ಲಿ ಮುಂಬೈನ ರಸ್ತೆಯಲ್ಲಿ ಸವಾರಿ ಮಾಡಿದ್ದಾರೆ. ಇನ್ನು, ಈ ವಿಡಿಯೋದ ಬ್ಯಾಗ್ರೌಂಡ್ನಲ್ಲಿ 'ಸಾಥಿಯಾ' ಸಿನಿಮಾದ ಟೈಟಲ್ ಟ್ರ್ಯಾಕ್ ಪ್ಲೇ ಆಗುತ್ತಿದೆ. ದಂಪತಿ ಬೈಕ್ ಸವಾರಿಯನ್ನು ಎಂಜಾಯ್ ಮಾಡುತ್ತಿರುವುದು ವಿಡಿಯೋದಿಂದ ತಿಳಿಯುತ್ತದೆ.
ಹ್ಯಾಪಿ ವ್ಯಾಲೆಂಟೈನ್ಸ್ ಡೇ! ಸುಂದರವಾದ ಪ್ರೇಮಿಗಳ ದಿನಕ್ಕೆ ಒಳ್ಳೆಯ ಪ್ರಾರಂಭ. ನಾನು, ನನ್ನ ಪತ್ನಿ ಹಾಗೂ ಅವನು (ಬೈಕ್)! ನಿಜಕ್ಕೂ ಉಲ್ಲಾಸಕರವಾದ ಜಾಯ್ ರೈಡ್ ಮಾಡಿದ್ದೇವೆ ಎಂದು ವಿವೇಕ್ ಒಬೆರಾಯ್ ಬರೆದುಕೊಂಡಿದ್ದಾರೆ.
ಆದರೆ, ವಿವೇಕ್ ಮತ್ತು ಪ್ರಿಯಾಂಕಾ ಇಬ್ಬರೂ ಬೈಕ್ ಸವಾರಿ ಮಾಡುವಾಗ ಮಾಸ್ಕ್ ಹಾಗೂ ಹೆಲ್ಮೆಟ್ ಧರಿಸಿಲ್ಲ. ಇದನ್ನು ಕಂಡ ನೆಟ್ಟಿಗರು ಈ ಸ್ಟಾರ್ ದಂಪತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: Aadhya Anand: ಬಾಂಬೆ ಬೇಗಮ್ಸ್ ವೆಬ್ ಸರಣಿಯಲ್ಲಿ ನಟಿಸಿದ್ದಾರೆ ಕನ್ನಡತಿ ಆಧ್ಯಾ ಆನಂದ್..!
ಅಲ್ಲದೆ, ವಿವೇಕ್ ಬೈಕ್ ರೈಡ್ ಮಾಡುವ ವೇಳೆ ಸ್ಟಂಟ್ ಮಾಡಿರುವುದು ಕಾನೂನುಬಾಹಿರವಾಗಿದ್ದು, ಈ ಹಿನ್ನೆಲೆ ಟ್ರಾಫಿಕ್ ಪೊಲೀಸರು 500 ರುಪಾಯಿ ದಂಡ ವಿಧಿಸಿದ್ದಾರೆ. ಶುಕ್ರವಾರ ಈ ದಂಪತಿಗೆ ಸಂಚಾರಿ ಪೊಲೀಸರಿಂದ ಫೈನ್ ಚಲನ್ ನೀಡಲಾಗಿದೆ ಎಂದು ಇಂಗ್ಲಿಷ್ ಪತ್ರಿಕೆಯೊಂದು ವರದಿ ಮಾಡಿದೆ.
ಐಪಿಸಿ ಸೆಕ್ಷನ್ 188 ಮತ್ತು 269ರ ಅಡಿಯಲ್ಲಿ ನಟನ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಪ್ರಕರಣದಲ್ಲಿ ಕಾನೂನು ಉಲ್ಲಂಘಿಸಿದವರಿಗೆ ಆರು ತಿಂಗಳ ಜೈಲು ಶಿಕ್ಷೆ ಅಥವಾ ದಂಡ ಕೆಲವು ಪ್ರಕರಣಗಳಲ್ಲಿ ಎರಡನ್ನೂ ವಿಧಿಸಬಹುದು. ಇನ್ನು, ಮುಂಬೈ ಪೊಲೀಸರು ದಾಖಲಿಸಿರುವ ಎಫ್ಐಆರ್ ಬಗ್ಗೆ ವಿವೇಕ್ ಒಬೆರಾಯ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಮದುವೆಯಾದ ನಂತರ ಹಾಟ್ ಫೋಟೋಶೂಟ್ಗೆ ಪೋಸ್ ಕೊಟ್ಟ ಕಾಜಲ್ ಅಗರ್ವಾಲ್..!
ನಟ ವಿವೇಕ್ ಒಬೆರಾಯ್ ಅವರು ''ರೋಸಿ: ಕೇಸರಿ ಅಧ್ಯಾಯ'' ಚಿತ್ರದಲ್ಲಿ ನಟಿಸುತ್ತಿದ್ದು, ಶ್ವೇತಾ ತಿವಾರಿ ಅವರ ಮಗಳು ಪಲಕ್ ತಿವಾರಿ ಈ ಸಿನಿಮಾದ ಮೂಲಕ ಬಾಲಿವುಡ್ಗೆ ಕಾಲಿಡಲಿದ್ದಾರೆ.
Published by:
Anitha E
First published:
February 20, 2021, 3:16 PM IST