Samantha Nagachaitanya Divorce: ಹೈದರಾಬಾದಲ್ಲೇ ಬೇರೆ ಮನೆಗೆ ಶಿಫ್ಟ್ ಆಗಲಿರುವ ಸಮಂತಾ- ನಾಗಚೈತನ್ಯ ಮನೆಯಿಂದ ಎಷ್ಟು ದೂರ?

ಸಮಂತಾ ಅವರು ನಾಗ ಚೈತನ್ಯ ಜೊತೆ ಇದ್ದು, ಈಗ ಆ ಮನೆ ಖಾಲಿ ಮಾಡಿಕೊಂಡು ಬೇರೆ ಮನೆಗೆ ಶಿಫ್ಟ್​ ಆಗಲಿದ್ದಾರಂತೆ. ಹೈದರಾಬಾದಿನ ಗಚ್ಚಿಬೌಲಿಯಲ್ಲಿ ಒಂದು ಹೊಸ ಫ್ಲ್ಯಾಟ್​ ಅನ್ನು ಖರೀದಿಸಿದ್ದಾರಂತೆ ಈ ನಟಿ.

ನಟಿ ಸಮಂತಾ

ನಟಿ ಸಮಂತಾ

  • Share this:
ಟಾಲಿವುಡ್​ನ ಸೆಲೆಬ್ರಿಟಿ ಜೋಡಿ ನಾಗ ಚೈತನ್ಯ (Naga Chaithanya) ಹಾಗೂ ಸಮಂತಾ  (Samantha) ದೂರಾಗುತ್ತಿದ್ದು, ವಿಚ್ಛೇದನದ ವಿಷಯವನ್ನು ಅಧಿಕೃತವಾಗಿ ಇತ್ತೀಚೆಗಷ್ಟೆ ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಈಗ ಸಮಂತಾ ಅವರು ಬೇರೆ ಮನೆಗೆ ಶಿಫ್ಟ್ ಆಗಲಿದ್ದಾರೆ ಅನ್ನೋ ವಿಷಯ ಹರಿದಾಡುತ್ತಿದೆ. ಹೌದು, ಈ ಜೋಡಿಯ ಮದುವೆಗೆ ನಾಲ್ಕು ವರ್ಷ ತುಂಬುವ ಮೊದಲೇ ಇವರ ಸಂಬಂಧದಲ್ಲಿ ಬಿರುಕು ಮೂಡಿತ್ತು. 2017ರ ಅಕ್ಟೋಬರ್ 6ರಂದು ನಾಗ ಚೈತನ್ಯ ಹಾಗೂ ಸಮಂತಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ. ಈ ವರ್ಷ ಅಕ್ಟೋಬರ್ 2ರಂದು ಈ ಜೋಡಿ ಬೇರೆಯಾಗುತ್ತಿರುವ ನಿರ್ಧಾರ ತಿಳಿಸಿದ್ದಾರೆ. ಈ ಜೋಡಿಯ ವೈವಾಹಿಕ ಬದುಕಿನಲ್ಲಿ ಬಿರುಕುಂಟಾಗಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಗಳು ಈ ಹಿಂದೆ ಹರಿದಾಡಿದ್ದವು. 

ಸಮಂತಾ ಹಾಗೂ ನಾಗ ಚೈತನ್ಯ ತಮ್ಮ ವಿಚ್ಛೇದನದ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ, ಈ ನಟಿ ಮಾಡುತ್ತಿರುವ ಪೋಸ್ಟ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇನ್ನು ಸಮಂತಾ, ಪತಿ ನಾಗ ಚೈತನ್ಯರಿಂದ ದೂರಾದ ಮೇಲೆ ಮುಂಬೈಗೆ ಶಿಫ್ಟ್​ ಆಗಲಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೆ ನಟಿ ಸಮಂತಾ ಅವರೇ ಸ್ಪಷ್ಟನೆ ಕೊಟ್ಟಿದ್ದರು.

ಹೈದರಾಬಾದ್​ ನನ್ನ ಮನೆ. ಇಲ್ಲಿ ನಾನು ಸಂತೋಷವಾಗಿದ್ದೇನೆ. ಇಲ್ಲಿಂದ ನಾನು ಮುಂಬೈಗೆ ಹೋಗಿ ಸೆಟ್​ ಆಗುತ್ತೇನೆ ಎನ್ನುವ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ. ನಾನು ಎಲ್ಲಿಗೂ ಹೋಗುವುದಿಲ್ಲ. ಇಲ್ಲೇ ಇರುತ್ತೇನೆ ಎಂದು ಹೇಳುವ ಮೂಲಕ ಎಲ್ಲ ಸುದ್ದಿಗಳಿಗೆ ಬ್ರೇಕ್ ಹಾಕಿದ್ದರು. ಆದರೆ ಈಗ ಸಮಂತಾ ಅವರು ಬೇರೆ ಮನೆಗೆ ಹೋಗುವ ವಿಷಯ ವೈರಲ್ ಆಗಿದೆ.

ಸಮಂತಾ ಅವರು ನಾಗ ಚೈತನ್ಯ ಜೊತೆ ಇದ್ದು, ಈಗ ಆ ಮನೆ ಖಾಲಿ ಮಾಡಿಕೊಂಡು ಬೇರೆ ಮನೆಗೆ ಶಿಫ್ಟ್​ ಆಗಲಿದ್ದಾರಂತೆ. ಹೈದರಾಬಾದಿನ ಗಚಿಬೌಲಿಯಲ್ಲಿ ಒಂದು ಹೊಸ ಫ್ಲ್ಯಾಟ್​ ಅನ್ನು ಖರೀದಿಸಿದ್ದಾರಂತೆ ಈ ನಟಿ. ಇನ್ನೇನು ಆ ಮನೆಗೆ ಸಮಂತಾ ಶಿಫ್ಟ್ ಆಗಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಇದು ಸದ್ಯ ನಾಗಚೈತನ್ಯ ವಾಸ ಇರುವ ಮನೆಯಿಂದ 4.6 ಕಿ.ಮೀ ದೂರದಲ್ಲಿದ್ದು, 11 ನಿಮಿಷದಲ್ಲಿ ಸಮಂತಾ ಖರೀದಿಸಿರುವ ಹೊಸ ಮನೆ ಇದೆಯಂತೆ.

ಇದನ್ನೂ ಓದಿ: Samantha Naga Chaitanya Divorce: ನಾವು ಬೇರೆಯಾಗುತ್ತಿದ್ದೇವೆ ವಿಚ್ಛೇದನ ನಿಜ ಎಂದ ಸಮಂತಾ-ನಾಗ ಚೈತನ್ಯ

ಸಮಂತಾ ಅವರ ಸಿನಿಮಾ ವಿಷಯಕ್ಕೆ ಬಂದರೆ, 'ಏಮಾಯಾ ಚೇಶಾವೆ' ಸಿನಿಮಾದ ಮೂಲಕ ತಮಿಳು ಹುಡುಗಿ ಸಮಂತಾ ತೆಲಗು ಸಿನಿಪ್ರಿಯರ ಮನಸ್ಸಿಗೆ ಲಗ್ಗೆ ಇಟ್ಟರು. ಈ ಸಿನಿಮಾದಲ್ಲಿ ನಟಿಸುವಾಗಲೇ ನಾಗ ಚೈತನ್ಯ ಅವರ ಪರಿಚಯವಾಗಿ, ನಂತರ ಪ್ರೀತಿಸಿ ಇವರು ಮದುವೆಯಾದರು.ಈಗ ನಾಗ್​ ಚೈತನ್ಯ ಅವರಿಂದ ದೂರಾಗಿ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಸಮಂತಾ ಸದ್ಯ ತೆಲುಗಿನಲ್ಲಿ ಒಂದು ಪೌರಾಣಿಕ ಸಿನಿಮಾ ಶಾಕುಂತಲಂನಲ್ಲಿ  (Shaakuntalam) ಅಭಿನಯಿಸುತ್ತಿದ್ದಾರೆ. ಗುಣಶೇಖರ್ ನಿರ್ದೇಶನದ ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಮಗಳು ಅಲ್ಲು ಅರ್ಹಾ (Allu Arha) ರಾಜಕುಮಾರ ಭರತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರ ಪ್ಯಾನ್​ ಇಂಡಿಯಾ ಸಿನಿಮಾ ಆಗಿದೆ. ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೆ ಪೂರ್ಣಗೊಂಡಿದೆ. ಸಿನಿಮಾದ ಮೂಲಕ ಶಕುಂತಲಾ ಹಾಗೂ ದುಶ್ಯಂತನ ಪ್ರೇಮಕತೆಯನ್ನು ತೆರೆಗೆ ತರುತ್ತಿದ್ದಾರೆ ನಿರ್ದೇಶಕ ಗುಣಶೇಖರ್​. ಸಮಂತಾ ಅವರಿಗೆ ಜೊತೆಯಾಗಿ ಮಲಯಾಳಂ ನಟ ದೇವ್ ಮೋಹನ್​ ಅಭಿನಯಿಸಿದ್ದಾರೆ.

ಇದನ್ನೂ ಓದಿ:Samantha ಕುರಿತಾಗಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ Naga Chaitanya

ಈ ಸಿನಿಮಾವನ್ನು ನಿರ್ದೇಶಕ ಗುಣಶೇಖರ್ ಅವರು ತಮ್ಮ ಹೋಮ್ ಬ್ಯಾನರ್​ ಗುಣ ಟೀಮ್​ ವರ್ಕ್ಸ್​ನಲ್ಲಿ ನಿರ್ಮಿಸುತ್ತಿದ್ದು, ಮಣಿಶರ್ಮ ಸಂಗೀತ ನೀಡಿದ್ದಾರೆ. ಇನ್ನು ಸಮಂತಾ ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರeೆ. ಈ ಸಿನಿಮಾದಲ್ಲಿ ನಯನತಾರಾ ಸಹ ಅಭಿನಯಿಸುತ್ತಿದ್ದಾರೆ. ನಯನತಾರಾ ಬಾಯ್​ಫ್ರೆಂಡ್​ ವಿಘ್ನೇಶ್​ ಅವರು Kaathu Vaakula Rendu Kaadhal ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ನಾಯಕನಾಗಿದ್ದು, ಒಟಿಟಿ ಮೂಲಕ ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​ನಲ್ಲಿ ರಿಲೀಸ್ ಮಾಡಲಾಗುತ್ತಿದೆ ಎನ್ನಲಾಗಿದೆ.
Published by:Anitha E
First published: