ಸಿನಿ ಅಡ್ಡದಲ್ಲಿ ಸಂಕ್ರಾಂತಿ: ರಾಮ್​ ಚರಣ್​, ಬಾಲಯ್ಯ, ಅಜಿತ್ ಮುಂದೆ 300 ಕೋಟಿ ಗಳಿಸುತ್ತಾ 'ಕೆ.ಜಿ.ಎಫ್'..?​

ದೇಶದೆಲ್ಲೆಡೆ ಅಬ್ಬರಿಸಿ ಕನ್ನಡದ 'ಕೆ.ಜಿ.ಎಫ್​' ಸಿನಿಮಾ 200 ಕೋಟಿಯಿಂದ 300 ಕೋಟಿಯತ್ತ ಸಾಗುತ್ತಿರುವಾಗಲೇ ಬಾಕ್ಸಾಫಿಸ್​ನಲ್ಲಿ ಕಠಿಣ ಸ್ಪರ್ಧೆ ಎದುರಾಗಿದೆ. ತೆಲುಗು-ತಮಿಳಿನ ದಿಗ್ಗಜ ನಟರ ನಾಲ್ಕೈದು ಸಿನಿಮಾಗಳು ಹಬ್ಬಕ್ಕೆ ತೆರೆ ಕಂಡಿದ್ದು, ಸದ್ದು ಮಾಡುತ್ತಿವೆ.

Anitha E | news18
Updated:January 11, 2019, 2:03 PM IST
ಸಿನಿ ಅಡ್ಡದಲ್ಲಿ ಸಂಕ್ರಾಂತಿ: ರಾಮ್​ ಚರಣ್​, ಬಾಲಯ್ಯ, ಅಜಿತ್ ಮುಂದೆ 300 ಕೋಟಿ ಗಳಿಸುತ್ತಾ 'ಕೆ.ಜಿ.ಎಫ್'..?​
ಸಿನಿ ಅಡ್ಡದಲ್ಲಿ ಸಂಕ್ರಾಂತಿ
Anitha E | news18
Updated: January 11, 2019, 2:03 PM IST
ಕಳೆದ ಡಿಸೆಂಬರ್ 21ಕ್ಕೆ ಬಿಡುಗಡೆಯಾದ `ಕೆ.ಜಿ.ಎಫ್' ಮೊನ್ನೆವರೆಗೆ ಭರ್ಜರಿಯಾಗಿಯೇ ಮುನ್ನುಗ್ಗುತ್ತಿತ್ತು. ಆದರೆ ಈಗ `ಕೆಜಿಎಫ್' ಅಬ್ಬರಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಅದೇಕೆ ಅಂತೀರಾ? `ಕೆಜಿಎಫ್' ಸಿನಿಮಾ ಕನ್ನಡ ಚಿತ್ರರಂಗದ ಹೆಮ್ಮೆ ಎಂದೇ ಬಿಂಬಿತವಾಗಿರೋ ಸಿನಿಮಾ. ಅದರ ಮೇಕಿಂಗ್, ಬಾಕ್ಸಾಫಿಸ್ ಅಬ್ಬರ ಎಲ್ಲ ವಿಚಾರದಲ್ಲಿಯೂ 'ಕೆ.ಜಿ.ಎಫ್' ಕನ್ನಡ ಚಿತ್ರರಂಗವನ್ನ ಒಂದು ಮಟ್ಟಕ್ಕೆ ತೆಗೆದುಕೊಂಡು ಹೋದ ಸಿನಿಮಾ. ಇಂತಹ ಸಿನಿಮಾ ಈಗ 200 ಕೋಟಿ ಕ್ಲಬ್ ಸೇರಿದ್ದು, 300 ಕೋಟಿಯತ್ತ ದಾಪುಗಾಲಿಟ್ಟಿದೆ. ಆದರೆ 'ಕೆ.ಜಿ.ಎಫ್‍'ನ ಅಬ್ಬರಕ್ಕೆ ಸಂಕ್ರಾಂತಿಗೆ ಬಿಡುಗಡೆ ಆಗಿರುವ ಸಿನಿಮಾಗಳು ಬ್ರೇಕ್ ಹಾಕೋ ಸೂಚನೆ ನೀಡುತ್ತಿವೆ.

ಇದನ್ನೂ ಓದಿ: ತೆಲುಗು-ತಮಿಳಿನಲ್ಲೂ ಕನ್ನಡದ `ಯಜಮಾನ'ನ ಗುಣಗಾನ: ಪರಭಾಷೆಯಲ್ಲೂ ಶುರುವಾಯಿತು ಡಿ-ಬಾಸ್ ಹವಾ..!

ಹೌದು, ಸಂಕ್ರಾಂತಿ ಸಂಭ್ರಮಕ್ಕೆ ಮೆರುಗು ನೀಡಲು ತಮಿಳು-ತೆಲುಗಿನ 5 ಸಿನಿಮಾಗಳು ಬಾಕ್ಸಾಫಿಸ್ ಅಖಾಡಕ್ಕೆ ಲಗ್ಗೆ ಇಟ್ಟಿವೆ. ಅದರಲ್ಲಿ ಈಗಾಗಲೇ ಬಾಲಕೃಷ್ಣ ನಟನೆಯ 'ಕಥಾನಾಯಕುಡು' ಸಿನಿಮಾ ಅಬ್ಬರಿಸಲು ಶುರು ಮಾಡಿದೆ. ತೆಲುಗರ ಸ್ವಾಭಿಮಾನದ ಸಂಕೇತವಾದ ಎನ್‍ಟಿಆರ್ ಅವರ ಜೀವನಾಧಾರಿತ ಈ ಸಿನಿಮಾವನ್ನ ತೆಲುಗರು ಅಷ್ಟೇ ಅಲ್ಲ, ಕನ್ನಡಿಗರೂ ಸಹ ದೊಡ್ಡ ಮಟ್ಟದಲ್ಲಿಯೇ ಬರಮಾಡಿಕೊಂಡಿದ್ದಾರೆ. ಇನ್ನು ಜನವರಿ 10ರ ಮುಂಜಾನೆಯೇ ಸೂಪರ್​ಸ್ಟಾರ್​ ರಜಿನಿಕಾಂತ್ ನಟನೆಯ 'ಪೇಟಾ' ಬಾಕ್ಸಾಫಿಸ್‍ಗೆ ದಾಳಿ ಇಟ್ಟಿದೆ.

ಕೇವಲ ತಮಿಳುನಾಡು ಅಷ್ಟೇ ಅಲ್ಲದೆ, ತೆಲುಗು ರಾಜ್ಯಗಳು ಹಾಗೂ ಕರ್ನಾಟಕದಲ್ಲಿಯೂ ಈ ಸಿನಿಮಾ ಬಿಡುಗಡೆಯಾಗಿದೆ. 90ರ ದಶಕದ ರಜಿನಿಕಾಂತ್‍ರನ್ನ ಈ ಸಿನಿಮಾ ಮೂಲಕ ನೋಡುವ ಅವಕಾಶ ಪ್ರೇಕ್ಷಕರಿಗೆ ಸಿಕ್ಕಿದ್ದು, ಬಾಕ್ಸಾಫಿಸ್ ಚಿಂದಿ ಉಡಾಯಿಸೋ ಸೂಚನೆಯನ್ನ ಮೊದಲ ದಿನವೇ ನೀಡಿದೆ 'ಪೇಟ್ಟಾ'. ಈ ಎರಡೂ ಬಿಗ್ ಸಿನಿಮಾಗಳ ನಡುವೆ ಮೆಗಾಸ್ಟಾರ್ ಚಿರು ಮಗ ರಾಮ್‍ಚರಣ್ 'ವಿನಯ ವಿಧೇಯ ರಾಮ'ನಾಗಿ ಇಂದು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದಾನೆ.

ಇದನ್ನೂ ಓದಿ: ಬಾಲಯ್ಯನನ್ನು ಕೊಂಡಾಡಿದ ಪ್ರಿನ್ಸ್​ ಮಹೇಶ್​ ಬಾಬು: 'ಕಥಾನಾಯಕುಡು' ಸಿನಿಮಾಗೆ ಹೊಗಳಿಕೆಯ ಸುರಿ ಮಳೆ

ಮಾಸ್ ಚಿತ್ರಗಳಿಗೆ ಹೆಸರಾದ ಬೋಯಪಾಟಿ ಸೀನು ಈ ಚಿತ್ರಕ್ಕೆ ಆ್ಯಕ್ಷನ್​ಕಟ್ ಹೇಳಿದ್ದಾರೆ. ರಾಮ್‍ಚರಣ್ ಈ ಚಿತ್ರಕ್ಕಾಗಿ ಸಖತ್ ಶ್ರಮಪಟ್ಟಿದ್ದಾರೆ. ಟ್ರೈಲರ್​ನಿಂದಲೇ 'ವಿನಯ ವಿಧೇಯ ರಾಮ' ಸಖತ್ ಸದ್ದು ಮಾಡುತ್ತಿದೆ. ರಾಮ್ ಚರಣ್ ಸಿನಿಮಾ ಸಹ 'ಪೇಟ್ಟಾ', 'ಕಥಾನಾಯಕುಡು' ಚಿತ್ರಗಳಷ್ಟೇ ದೊಡ್ಡಮಟ್ಟದಲ್ಲಿ ಚಿತ್ರಮಂದಿರಗಳಿಗೆ ಅಪ್ಪಳಿಸಿದೆ. ಹಾಗೆ ತಲ ಅಜಿತ್ ನಟನೆಯ 'ವಿಶ್ವಾಸಂ' ಸಹ ಬಾಕ್ಸಾಫಿಸ್‍ನಲ್ಲಿ ಸದ್ದು ಮಾಡುತ್ತಿದೆ.

ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಅಜಿತ್‍ಗೆ ಸಾಕಷ್ಟು ಅಭಿಮಾನಿಗಳಿದ್ದು, ಬೆಂಗಳೂರಿನ ಹಲವೆಡೆ ಜನವರಿ 10ರಂದು ಮುಂಜಾನೆ ನಾಲ್ಕಕ್ಕೆ 'ವಿಶ್ವಾಸಂ' ಚಿತ್ರದ ಪ್ರದರ್ಶನ ಆರಂಭಗೊಂಡಿರೋದು, ಅದರ ಅಬ್ಬರ ಹೇಗಿದೆ ಅನ್ನೋದಕ್ಕೆ ಸಾಕ್ಷಿ. ಇದನ್ನೆಲ್ಲ ಗಣನೆಗೆ ತೆಗೆದುಕೊಂಡು ಹೇಳುವುದಾದರೆ, ಇಷ್ಟು ದಿನ ಒಂಟಿ ಸಲಗನಂತೆ ಅಬ್ಬರಿಸಿ ಬೊಬ್ಬಿರಿಯತ್ತಿದ್ದ ರಾಕಿಭಾಯ್‍ಗೆ ಈಗ ಕಠಿಣ ಸ್ಪರ್ಧೆ ಎದುರಾಗಿದೆ.
Loading...

ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ 'ಶಿವನಂದಿ'ಯನ್ನು ಉಡುಗೊರೆಯಾಗಿ ಕೊಡುತ್ತಿರುವ ಡಿ-ಬಾಸ್​ 'ಯಜಮಾನ'

ಆದರೆ 'ಕೆ.ಜಿ.ಎಫ್' ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ಗ್ಯಾಂಗ್ ಕಟ್ಕೊಂಡು ಬರೋನು ಗ್ಯಾಂಗ್‍ಸ್ಟಾರ್, ಒಬ್ಬನೇ ಬರೋನು ಮಾನ್‍ಸ್ಟರ್ ಅಂತ. ಈ ಡೈಲಾಗ್ ಬಾಕ್ಸಾಫಿಸ್ ಫೈಟ್‍ನಲ್ಲೂ ಅಪ್ಲೈ ಆಗಲಿದ್ಯಾ? 'ಕೆ.ಜಿ.ಎಫ್' ಸಿನಿಮಾ ಇದೇ ವೇಗದಲ್ಲಿ ಮುನ್ನುಗ್ತುತ್ತಾ? ಬಾಕ್ಸಾಫಿಸ್‍ನಲ್ಲಿ 300 ಕೋಟಿ ಗಳಿಸುತ್ತಾ? ಎಂದು ಕಾದು ನೋಡಬೇಕು ಅಷ್ಟೆ.

 

First published:January 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ