'ರೋಕಾ' ನಡೆದ ತಕ್ಷಣ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಫೋಟೋ..!

news18
Updated:August 18, 2018, 6:12 PM IST
'ರೋಕಾ' ನಡೆದ ತಕ್ಷಣ ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ ಫೋಟೋ..!
news18
Updated: August 18, 2018, 6:12 PM IST
ನ್ಯೂಸ್​ 18 ಕನ್ನಡ 

ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಹಾಗೂ ನಿಕ್​ ಅವರ ನಿಶ್ಚಿತಾರ್ಥದ್ದೇ ಸದ್ದು. ಹೌದು ಪ್ರಿಯಾಂಕಾ ಅವರ ಹುಟ್ಟುಹಬ್ಬದಂದೇ ನಿಕ್​ ಜತೆಗೆ ಅವರ ನಿಶ್ಚಿತಾರ್ಥವಾಗಿದೆ ಎಂದು ಗಾಳಿ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು.

ಆದರೆ ಇಂದು (ಆ.18) ಪ್ರಿಯಾಂಕಾ ತಮ್ಮ ಹಾಗೂ ನಿಕ್​ ಅವರ ನಿಶ್ಚಿತಾರ್ಥದ ಸುದ್ದಿಯನ್ನು ರೋಕಾ ಮಾಡಿಕೊಳ್ಳುವ ಮೂಲಕ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಜೊತೆಗೆ ಸಮಾರಂಭದ ನಂತರ ನಿಕ್​ ಹಾಗೂ ಪ್ರಿಯಾಂಕಾ ಇಬ್ಬರೂ ರೊಮ್ಯಾಂಟಿಕ್​  ಆಗಿರುವ ಒಂದು ಚಿತ್ರವನ್ನು ಇನ್​ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಪ್ರಿಯಾಂಕಾ ಈ ಚಿತ್ರದೊಂದಿಗೆ ಶೀರ್ಷಿಕೆಯನ್ನೂ ನೀಡಿದ್ದು, ಅದು ಹೀಗಿದೆ. ನಾನು ಆತ್ಮ ಹಾಗೂ ಹೃದಯದಿಂದ ಸಂಪೂರ್ಣವಾಗಿ ನಿನ್ನವಳಾಗಿದ್ದೇನೆ.
Loading...

Taken.. With all my heart and soul..


A post shared by Priyanka Chopra (@priyankachopra) on


ಇನ್ನೂ ಅದೇ ಚಿತ್ರವನ್ನು ಶೇರ್​ ಮಾಡಿರುವ ನಿಕ್​ ಸಹ ಭವಿಷ್ಯದ ಮಿಸೆಸ್ ಜೋನಸ್​... ಮೈ ಹಾರ್ಟ್​, ಮೈ ಲವ್​... ಎಂದು ಬರೆದುಕೊಂಡಿದ್ದಾರೆ.Future Mrs. Jonas. My heart. My love.


A post shared by Nick Jonas (@nickjonas) on


ನಿಶ್ಚಿತಾರ್ಥದ ನಂತರ ಸಂಜೆ ತನ್ನ ಸಂಬಂಧಿಕರು ಹಾಗೂ ಬಾಲಿವುಡ್​ ಮಂದಿಗಾಗಿ ಒಂದು ಅದ್ದೂರಿ ಪಾರ್ಟಿ ಆಯೋಜಿಸಿದ್ದು, ಇದರಲ್ಲಿ ಬಿ-ಟೌನ್​ನ ದಿಗ್ಗಜರು ಭಾಗವಹಿಸಲಿದ್ದಾರಂತೆ.

ಆದರೆ ಶಾರುಖ್​ 'ಝೀರೊ' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರೆ, ಸಲ್ಮಾನ್​ ಖಾನ್​  'ಭಾರತ್​' ಸಿನಿಮಾದಲ್ಲಿ ವ್ಯಸ್ತವಾಗಿದ್ದಾರೆ. ಈ ಕಾರಣದಿಂದಾಗಿ ಈ ಇಬ್ಬರು ಖಾನ್​ಗಳು ಈ ಪಾರ್ಟಿಗೆ ಗೈರಾಗಲಿದ್ದು, ಉಳಿದಂತೆ ತಂಗಿ ಪರಿಣಿತಿ ಚೋಪ್ರಾ ಈಗಾಗಲೇ ಪಿಗ್ಗಿ ಮನೆಗೆ ತಲುಪಿದ್ದು, ಪಾರ್ಟಿಯಲ್ಲಿ ಸಾಂಪ್ರದಾಯಿಕ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
First published:August 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ