Roberrt: ಜೂಜಾಟದಿಂದ ಹಣ-ಆಸ್ತಿ ಕಳೆದುಕೊಂಡ್ರಾ ರಾಬರ್ಟ್ ಚಿತ್ರದ ಈ ಸ್ಟಾರ್ ನಟ..!

Roberrt: ಟಾಲಿವುಡ್​ ನಟ ಜಗಪತಿ ಬಾಬು ರಾಬರ್ಟ್​ ಚಿತ್ರದ ಚಿತ್ರೀಕರಣಕ್ಕೆಂದು ಬೆಂಗಳೂರಿಗೂ ಭೇಟಿ ಕೊಟ್ಟಿದ್ದರು. ಕಳೆದ ವಾರಷ್ಟೆ ಅವರು ಸಿನಿಮಾ ಚಿತ್ರೀಕರಣಕ್ಕಾಗಿ ಕಂಠೀರವ ಸ್ಟುಡಿಯೋಗೆ ಬಂದಿದ್ದು, ಶೂಟಿಂಗ್​ ಮುಗಿದ ನಂತರ ವಾರಾಂತ್ಯವನ್ನು ಕಳೆಯೋಕೆ ಗೋವಾದ ಕಸಿನೊಗೆ ಹೋಗಿದ್ದಾರೆ. ಮುಂದೆ ಏನಾಯ್ತು ಗೊತ್ತಾ?

Anitha E | news18
Updated:August 5, 2019, 4:18 PM IST
Roberrt: ಜೂಜಾಟದಿಂದ ಹಣ-ಆಸ್ತಿ ಕಳೆದುಕೊಂಡ್ರಾ ರಾಬರ್ಟ್ ಚಿತ್ರದ ಈ ಸ್ಟಾರ್ ನಟ..!
ಗೋವಾದ ಕಸಿನೊದಲ್ಲಿ ನಟ ಜಗಪತಿ ಬಾಬು
  • News18
  • Last Updated: August 5, 2019, 4:18 PM IST
  • Share this:
ದರ್ಶನ್​ ಅವರ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್' ಟೈಟಲ್​ನಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾ. ಇನ್ನೂ ಇದರಲ್ಲಿರುವ ತಾರಾ ಬಳಗ ಹಾಗೂ ದರ್ಶನ್​ ಅವರ ವಿಭಿನ್ನ ಲುಕ್​ ಪ್ರೇಕ್ಷಕರನ್ನು ಮತ್ತಷ್ಟು ಹುಚ್ಚೆಬ್ಬಿಸುತ್ತಿದೆ. ಈ ಸಿನಿಮಾದ ಅಡ್ಡಾದಿಂದ ಇತ್ತೀಚಗಷ್ಟೆ ಒಂದು ಸುದ್ದಿ ಹೊರ ಬಿದಿತ್ತು.

ಅದು ಈ ಸಿನಿಮಾದಲ್ಲಿ ಟಾಲಿವುಡ್​ ನಟ ಜಗಪತಿ ಬಾಬು ವಿಲನ್​ ಪಾತ್ರಕ್ಕೆ ಜೀವತುಂಬಲಿದ್ದಾರೆ ಅನ್ನೋದು. ಈ ಸುದ್ದಿ ನಿಜ. ಚಿತ್ರದ ಚಿತ್ರೀಕರಣಕ್ಕೆಂದು ನಟ ಜಗಪತಿ ಬಾಬು ಬೆಂಗಳೂರಿಗೂ ಭೇಟಿ ಕೊಟ್ಟಿದ್ದರು. ಕಳೆದ ವಾರಷ್ಟೆ ಅವರು ಸಿನಿಮಾ ಚಿತ್ರೀಕರಣಕ್ಕಾಗಿ ಕಂಠೀರವ ಸ್ಟುಡಿಯೋಗೆ ಭೇಟಿ ನೀಡಿದ್ದರು.

Telugu actor Jagapati Babu visited Kanteerava studio in Bangalore
ಬೆಂಗಳೂರಿಗೆ ಬಂದು ನಟ ಜಗಪತಿ ಬಾಬು ರಾಜ್​, ಪಾರ್ವತಮ್ಮ ಹಾಗೂ ಅಂಬಿ ಸಮಾಧಿಗೆ ಭೇಟಿ ಕೊಟ್ಟ ಚಿತ್ರ


ಅಲ್ಲಿ  ತಮ್ಮ ನೆಚ್ಚಿನ ನಟ ಡಾ.ರಾಜ್‍ಕುಮಾರ್ ಸಮಾಧಿಗೆ ನಮಿಸಿದ್ದರು. ಆ ನಂತರ ಪಾರ್ವತಮ್ಮ ಹಾಗೂ ಅಂಬಿ ಸಮಾಧಿಗೂ ಪುಷ್ಪ ನಮನ ಸಲ್ಲುಸಿದ್ದರು.  ನಂತರ 'ರಾಬರ್ಟ್' ಶೂಟಿಂಗ್‍ನಲ್ಲಿ ಭಾಗವಹಿಸಿದ್ದರು. 'ರಾಬರ್ಟ್' ಅಡ್ಡಾದಿಂದ ಜಗಪತಿ ಬಾಬು ವೀಕೆಂಡ್ ಖುಷಿಗಾಗಿ ನೇರ ಗೋವಾಗೆ ತೆರಳಿದ್ದಾರೆ. ಅಲ್ಲಿ ಕಸಿನೊ ಅಡ್ಡಾದಲ್ಲಿ ನಿಂತು ಪೋಸ್ ಕೊಟ್ಟು, ಆ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು.

Enjoying myself in big daddy casino Goa ..... Pls wish me luck.... pic.twitter.com/dDovDKqHKs

ಜಗಪತಿ ಬಾಬು ಅವರ ಟ್ವೀಟ್​ಗೆ  ಸಾಕಷ್ಟು ಜನ ರಿ-ಟ್ವೀಟ್ ಮಾಡಿದ್ದು, ಆಲ್ ದಿ ಬೆಸ್ಟ್ ಮಿಲಿಯನ್‍ಗಟ್ಟಲೆ ಹಣವನ್ನ ಗೆದ್ದುಬನ್ನಿ ಅಂತ ಹಾರೈಸಿದ್ದಾರೆ. ಕೆಲವೇ ಗಂಟೆಗಳಿಗಾಗಿ 'ಬಿಗ್​ ಡ್ಯಾಡಿ' ಕಸಿನೊಗೆ ಭೇಟಿ ನೀಡಿದ್ದು, ಜನರು ಮಾಡಿದ ಶುಭ  ಹಾರೈಕೆ ಫಲಿಸಿದೆ ಎಂದು ಗಜಪತಿ ಮತ್ತೆ ಟ್ವೀಟ್​ ಮಾಡಿದ್ದಾರೆ.

Your wishes worked .....ಅಂದಹಾಗೆ ಜಗಪತಿಬಾಬು ಅವರಿಗೆ ಕಸಿನೊದಲ್ಲಿ ಜೂಜಾಡುವ ಹುಚ್ಚು ವಿಪರೀತವಿದ್ದು, ಇದರ ಮೋಹದಿಂದಲೇ ಸಾಕಷ್ಟು ಹಣ ಆಸ್ತಿ ಕಳೆದುಕೊಂಡಿದ್ದಾರೆ ಎಂಬ ಮಾತು ಸಹ ಟಾಲಿವುಡ್‍ನ ಗಲ್ಲಿಗಳಲ್ಲಿ ತುಂಬಾ ಸಮಯದಿಂದ ಓಡಾಡುತ್ತಿದೆ.

ಇದನ್ನೂ ಓದಿ: 'ಕುರುಕ್ಷೇತ್ರ'ದ ಟಿಕೆಟ್ ​ಸೋಲ್ಡ್​​ ಔಟ್​ : ಬುಕಿಂಗ್​ ಮಾಡಲು ಮುಗಿಬಿದ್ದ ದರ್ಶನ್​ ಅಭಿಮಾನಿಗಳು..!

ಅಲ್ಲದೆ ಸಾಕಷ್ಟು ಮಂದಿ ಸೆಲೆಬ್ರಿಟಿಗಳಿಗೂ ಕಸಿನೊ ಅವಿನಾಭಾವ ಸಂಬಂಧ. ಅದಕ್ಕೆ ಸಾಕಷ್ಟು ಮಂದಿ ವಾರಾಂತ್ಯದಲ್ಲಿ ಗೋವಾದ ಕಸಿನೊದಲ್ಲೇ ಕಾಣ ಸಿಗುತ್ತಾರೆ ಎಂಬ ಸುದ್ದಿಯೂ ಇದೆ.

 

Deepika Padukone: ಮೇಕಪ್​ ಇಲ್ಲದೆ ವೋಗ್​ ನಿಯತಕಾಲಿಕೆಗೆ ಪೋಸ್​ ಕೊಟ್ಟ ಗುಳಿಕೆನ್ನೆ ಸುಂದರಿ ದೀಪಿಕಾ ಪಡುಕೋಣೆ..!

First published:August 5, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading