HOME » NEWS » Entertainment » AFTER RAHUL BOSES BANANA BILL TWITTER HAILS TAJ HOTELS FOR OFFERING FREE FRUITS TO ITS CUSTOMERS AE

Rahul Bose: ಬಾಳೆಹಣ್ಣಿನ ಎಫೆಕ್ಟ್​: ಉಚಿತವಾಗಿ ಹಣ್ಣುಗಳನ್ನು ಕೊಡುತ್ತಿದೆ ಈ ಪಂಚತಾರಾ​ ಹೋಟೆಲ್..!​

Rahul Bose: ಸಾಮಾಜಿಕ ಜಾಲತಾಣದಲ್ಲಿ ರಾಹುಲ್​ ವಿಡಿಯೋಗೆ ಇನ್ನೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗ ಈ ಸಂಬಂಧ ಮತ್ತೊಂದು ಬೆಳವಣಿಗೆಯಾಗಿದೆ. 

Anitha E | news18
Updated:July 27, 2019, 4:34 PM IST
Rahul Bose: ಬಾಳೆಹಣ್ಣಿನ ಎಫೆಕ್ಟ್​: ಉಚಿತವಾಗಿ ಹಣ್ಣುಗಳನ್ನು ಕೊಡುತ್ತಿದೆ ಈ ಪಂಚತಾರಾ​ ಹೋಟೆಲ್..!​
ಸ್ಟಾರ್ ಹೋಟೆಲ್​ನಲ್ಲಿ ಈಗ ಹಣ್ಣು ಉಚಿತ
  • News18
  • Last Updated: July 27, 2019, 4:34 PM IST
  • Share this:
ಬಾಲಿವುಡ್​ ನಟ ರಾಹುಲ್​ ಬೋಸ್​ ಇತ್ತೀಚೆಗೆ ಸಖತ್​ ಸುದ್ದಿ ಮಾಡುತ್ತಿದ್ದಾರೆ. ಸದಾ ಪ್ರಯೋಗಾತ್ಮಕ ಪಾತ್ರಗಳಿಂದಲೇ ಸುದ್ದಿ ಮಾಡುವ ಈ ನಟ ಈಗ ಎರಡು ಬಾಳೆಹಣ್ಣಿನಿಂದಾಗಿ ಸದ್ದು ಮಾಡುತ್ತಿದ್ದಾರೆ.

ಇತ್ತೀಚೆಗಷ್ಟೆ ಚಂಡಿಗಢದ ಪಂಚತಾರಾ ಹೋಟೆಲ್​ನಲ್ಲಿ ರಾಹುಲ್​ ಉಳಿದುಕೊಂಡಿದ್ದಾಗ ಅವರಿಗೆ ಎರಡು ಬಾಳೆಹಣ್ಣಿಗೆ 442 ರೂಪಾಯಿ ಬಿಲ್​ ಮಾಡಲಾಗಿತ್ತು. ಇದನ್ನು ಅವರು ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ನಿನ್ನೆಯಷ್ಟೆ ಚಂಡಿಗಢದ ಪೊಲೀಸರು ಈ ಸಂಬಂಧ ತನಿಖೆಗೆ ಆದೇಶಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಹುಲ್​ ವಿಡಿಯೋಗೆ ಇನ್ನೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗ ಈ ಸಂಬಂಧ ಮತ್ತೊಂದು ಬೆಳವಣಿಗೆಯಾಗಿದೆ.ಪಂಚತಾರಾ ಹೋಟೆಲ್​ ತಾಜ್​ ಈಗ ತಮ್ಮ ಗ್ರಾಹಕರಿಗೆ ಆಯಾ ಸಮಯಕ್ಕೆ ಸಿಗುವ ತಾಜಾ ಹಣ್ಣುಗಳನ್ನು ಉಚಿತವಾಗಿ ನೀಡುತ್ತಿದೆ. ಹೌದು, ಇದು ಯಾರೋ ಟ್ರಾಲ್​ ಮಾಡಿರುವ ಸುದ್ದಿಯಲ್ಲ. ನಿಜಕ್ಕೂ ತಾಜ್​ ಋತುಮಾನದ ಹಣ್ಣುಗಳನ್ನು ಹೋಟೆಲ್​ನ ಗ್ರಾಹಕರಿಗೆ ಉಚಿತವಾಗಿ ಕೊಡಲು ನಿರ್ಧರಿಸಿದೆ.You have to see this to believe it. Who said fruit wasn’t harmful to your existence? Ask the wonderful folks at @JWMarriottChd #goingbananas #howtogetfitandgobroke #potassiumforkings pic.twitter.com/SNJvecHvZBಹಣ್ಣುಗಳನ್ನು ಉಚಿತವಾಗಿ ಕೊಡುವುದಾಗಿ ತಾಜ್​ ಬೋರ್ಡ್​ ಹಾಕಿದ್ದು, ಇದನ್ನು ಸಾಕಷ್ಟು ಮಂದಿ ಟ್ವಿಟರ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್​ಗೆ ಟ್ವೀಟಿಗರು ಪ್ರತಿಕ್ರಿಯಿಸುತ್ತಿದ್ದು, ವಾಹ್​ ತಾಜ್​ ಎಂದೆಲ್ಲ ಬರೆಯುತ್ತಿದ್ದಾರೆ.

ಇದನ್ನೂ ಓದಿ: Rahul Bose: ಪಂಚತಾರಾ ಹೋಟೆಲ್​ಗೆ ಮುಳುವಾಗಲಿದೆ ಸ್ಟಾರ್​ ನಟ​ ಮಾಡಿದ ಎರಡು ಬಾಳೆಹಣ್ಣಿನ ವಿಡಿಯೋ..!

India Couture Week 2019: ವಿನ್ಯಾಸಿತ ವಸ್ತ್ರಗಳಲ್ಲಿ ರ‍್ಯಾಂಪ್​ ಮೇಲೆ ಮಾರ್ಜಾಲ ನಡಿಗೆ ಮಾಡಿದ ಬಿ-ಟೌನ್​ ನಟಿಮಣಿಯರು


First published: July 27, 2019, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories