Arjun Janya Is Back: ಮ್ಯೂಸಿಕ್ ಬೀಟ್ಸ್ ಇರೋವರೆಗೂ ಹಾರ್ಟ್ ಬೀಟ್ ನಿಲ್ಲಲ್ಲ ಅಂತ ವಾಪಸ್ ಬಂದ ಅರ್ಜುನ್​ ಜನ್ಯ..!

Arjun Janya Is Back To Work: ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಸ್ಟಾರ್​ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಮತ್ತೆ ಅದೇ ಎನರ್ಜಿ ಜೊತೆ ಮರಳಿದ್ದಾರೆ. ಅರ್ಜುನ್​ ಜನ್ಯ ಎಂದಿನಂತೆ ಕೆಲಸಕ್ಕೆ ಮರಳಿರುವ ವಿಷಯವನ್ನು ನಿರ್ದೇಶಕ ಪ್ರೇಮ್​ ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.  

ಅರ್ಜುನ್​ ಜನ್ಯ ಹಾಗೂ ನಿರ್ದೇಶಕ ಪ್ರೇಮ್​

ಅರ್ಜುನ್​ ಜನ್ಯ ಹಾಗೂ ನಿರ್ದೇಶಕ ಪ್ರೇಮ್​

  • Share this:
ಅರ್ಜುನ್​ ಜನ್ಯ ಇತ್ತೀಚೆಗಷ್ಟೆ ಲಘು ಹೃದಾಯಾಘಾತದಿಂದಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಗೊತ್ತೇ ಇದೆ. ಶಸ್ತ್ರ ಚಿಕಿತ್ಸೆ ನಂತರ ಅರ್ಜುನ್​ ಜನ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈಗ ಚೇತರಿಸಿಕೊಂಡ ನಂತರ ಮ್ಯಾಜಿಕಲ್​ ಕಂಪೋಸರ್​ ಮತ್ತೆ ಕೆಲಸಕ್ಕೆ ಮರಳಿದ್ದಾರೆ.

ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಇಟ್ಟುಕೊಂಡಿರುವ ಸ್ಟಾರ್​ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಮತ್ತೆ ಅದೇ ಎನರ್ಜಿ ಜೊತೆ ಮರಳಿದ್ದಾರೆ. ಅರ್ಜುನ್​ ಜನ್ಯ ಎಂದಿನಂತೆ ಕೆಲಸಕ್ಕೆ ಮರಳಿರುವ ವಿಷಯವನ್ನು ನಿರ್ದೇಶಕ ಪ್ರೇಮ್​ ತಮ್ಮ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾರೆ.

After mild heart attack Music director Arjun Janya is back to Work
ಮತ್ತೆ ಕೆಲಸಕ್ಕೆ ಮರಳಿದ ಅರ್ಜುನ್​ ಜನ್ಯ


ನಿರ್ದೇಶಕ ಪ್ರೇಮ್​ ಅವರ 'ಏಕ್​ ಲವ್​ ಯಾ' ಸಿನಿಮಾದ ಕೆಲಸಕ್ಕೆ ಮತ್ತೆ ಮರಳಿದ್ದಾರೆ. ಅರ್ಜುನ್​ ಮತ್ತೆ ಕೆಲಸಕ್ಕೆ ಬಂದಿರುವ ಖುಷಿಯನ್ನು ಪ್ರೇಮ್​ ಪ್ರೀತಿ ತುಂಬಿದ ಸಾಲುಗಳ ಮೂಲಕ ಹಂಚಿಕೊಂಡಿದ್ದಾರೆ. 'ಮ್ಯೂಸಿಕ್​ ಬೀಟ್​ ಇರೋವರೆಗೂ ನಮ್ಮ ಹಾರ್ಟ್​ ಬೀಟ್​ ಯಾವತ್ತೂ ನಿಲ್ಲಲ್ಲ....  ಅಂತ ವಾಪಸ್​ ಬಂದಿದ್ದಾರೆ ನಮ್​ ಅರ್ಜುನ್​ ಜನ್ಯ' ಅಂತ ಪ್ರೇಮ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕೊರೋನಾ ಎಫೆಕ್ಟ್​ ವರ್ಕ್ ​ಫ್ರಂ ಹೋಂ ಮಾಡುತ್ತಿರುವ ರಿಷಭ್​ ಶೆಟ್ಟಿ: ಫೋಟೋ ವೈರಲ್​..!

ಅಷ್ಟೇ ಅಲ್ಲದೆ 'ಕೊರೋನಾ ವೈರಸ್​ ಕುರಿತಾಗಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ. ವದಂತಿಗಳಿಗೆ ಹೆದರಿ ಕೂತರೆ ಯಾವತ್ತೋ ಸಾಯುವ ನಾವುಗಳು ಇವತ್ತೇ ಸಾಯೋದ್ರಲ್ಲಿ ಸಂಶಯವೇ ಇಲ್ಲ. ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ಸುರಕ್ಷಿತವಾಗಿರಿ' ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ ಜೋಗಿ ಪ್ರೇಮ್​.

ಇದನ್ನೂ ಓದಿ: Roberrt: ಸ್ನೇಹಕ್ಕೆ ಜೀವ ಕೊಡುವ ದೋಸ್ತ ಈ ದಾಸ​: ನಾಳೆ 'ರಾಬರ್ಟ್'​ ಚಿತ್ರ ದೋಸ್ತಾ ಹಾಡು ರಿಲೀಸ್​..!

ಅರ್ಜುನ್​ ಜನ್ಯ ಅವರ ಕೈಯಲ್ಲಿ ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳೇ ಇವೆ. 'ರಾಬರ್ಟ್​', 'ಕೋಟಿಗೊಬ್ಬ 3', 'ಗಾಳಿಪಟ' ಹಾಗೂ 'ಮದಗಜ' ಸಿನಿಮಾಗಳಿಗೆ ಜನ್ಯ ಕೆಲಸ ಮಾಡುತ್ತಿದ್ದಾರೆ.

Corona Kiss: ಬಾಯ್​ಫ್ರೆಂಡ್​ ಜೊತೆ ಕೊರೋನಾ ಕಿಸ್​ ಮಾಡಿದ ಬಿ-ಟೌನ್​ ನಟಿ: ಚಿತ್ರಕ್ಕೆ ಶೀರ್ಷಿಕೆ ಕೊಡಿ ಎಂದ ಬಿಕಿನಿ ಸುಂದರಿ..!

First published: