ವಿವಾಹದ ನಂತರ ಚಂದನವನದಲ್ಲಿ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ ನಿಧಿ ಸುಬ್ಬಯ್ಯ..!

news18
Updated:August 31, 2018, 1:01 PM IST
ವಿವಾಹದ ನಂತರ ಚಂದನವನದಲ್ಲಿ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ ನಿಧಿ ಸುಬ್ಬಯ್ಯ..!
news18
Updated: August 31, 2018, 1:01 PM IST
ಪಂಚರಂಗಿಯ ಸುಂದರಿ ನಿಧಿ ಸುಬ್ಬಯ್ಯ ಕನ್ನಡ ಚಿತ್ರರಂಗದಿಂದ ದೂರವಾಗಿ ಬಾಲಿವುಡ್‍ನಲ್ಲೇ ಉಳಿದುಕೊಂಡರು ಎಂದು ಯೋಚಿಸುತ್ತಿರುವಾಗಲೇ ಅವರ ಬಗ್ಗೆ ಒಂದು ಹೊಸ ಸುದ್ದಿ ಹೊರ ಬಿದ್ದಿದೆ. ಅದೇನಪ್ಪ ಅಂದರೆ ನಿಧಿ ಮತ್ತೆ ಚಂನವನಕ್ಕೆ ವಾಪಾಸಾಗಿದ್ದಾರೆ. ಕನ್ನಡದ ನಿಧಿ ಬಾಲಿವುಡ್ ಪಾಲಾಗಿಬಿಡುತ್ತೇನೋ ಅಂತಿದ್ದವರಿಗೆ ನಿಧಿ ಮತ್ತೆ ಕನ್ನಡಕ್ಕೆ ಸಿಕ್ಕ ಖುಷಿ.

ಇವರನ್ನ ನೋಡಿ ಬಹಳ ದಿನಗಳೇ ಆಗಿದೆ. ಹೌದು ಈ ಗಿಳಿ ಮೂಗಿನ ಚೆಲುವೆ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ಮತ್ತೆ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ. 'ಮೈಲಾಪುರ' ಅನ್ನೋ ಚಿತ್ರದಲ್ಲಿ ವಿಶೇಷ ಹಾಡೊಂದಕ್ಕೆ ನಿಧಿ ಹೆಜ್ಜೆ ಹಾಕುತ್ತಿದ್ದಾರೆ.ಬಾಲಿವುಡ್‍ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಪಡೆದುಕೊಂಡ ನಿಧಿ ಇನ್ನೇನು ಬಿಟೌನ್‍ನಲ್ಲೇ ಸೆಟಲ್​ ಆಗುತ್ತಾರೆ ಅಂತ ಅಂದುಕೊಳ್ಳುವ ಹೊತ್ತಿಗೆ ನಿಧಿ ಮದುವೆ ಕೂಡ ಆಯಿತು. ಇನ್ನು ನಿಧಿ ಸುಬ್ಬಯ್ಯ ಸೆಟಲ್​ ಆದರು. ಮದುವೆ ಆದ ನಂತರ ಎಲ್ಲಿ ಸಿನಿಮಾಗೆ ಬರುತ್ತಾರೆ ಅಂದುಕೊಳ್ಳುತ್ತಿದ್ದವರಿಗೆ ನಿಧಿ ಉಲ್ಟಾ ಹೊಡೆದಿದ್ದಾರೆ.

ಎರಡು ವರ್ಷದ ಹಿಂದೆ 'ನನ್ನ ನಿನ್ನ ಪ್ರೇಮಕಥೆ' ಚಿತ್ರ ತೆರೆಗೆ ಬಂದಿತ್ತು. ವಿಜಯ ರಾಘವೇಂದ್ರಗೆ ಜೋಡಿಯಾಗಿದ್ದ ಈ ಸುಂದರಿ ಹಳ್ಳಿಯ ಹಿನ್ನೆಲೆಯ ಪ್ರೇಮ ಕಥೆಗೆ ಬಣ್ಣ ಹಚ್ಚಿದ್ದರು. ಆದರೆ ಪ್ರೇಮಕಥೆ ಅಂದುಕೊಂಡ ಮಟ್ಟಕ್ಕೆ ಯಶಸ್ವಿಯಾಗಲಿಲ್ಲ.

ಚಿತ್ರರಂಗದಲ್ಲಿ ಸಂಪೂರ್ಣ ಸಕ್ರಿಯರಾಗಿದ್ದ ನಿಧಿ ಆರಂಭದ ದಿನಗಳಲ್ಲಿ ಸಿಸಿಎಲ್ ಕ್ರಿಕೆಟ್ ಪೋಟೋಶೂಟ್ ಮೂಲಕ ಪಡ್ಡೆಗಳ ಎದೆಗೆ ಲಗ್ಗೆ ಇಟ್ಟಿದ್ದರು. ಅದಾದ ನಂತರ ಬಾಲಿವುಡ್ ಪ್ರವೇಶವೂ ಸಲೀಸಾಗಿತ್ತು. ಆದರೆ ಈಗ ನಿಧಿ ಮತ್ತೆ ಕನ್ನಡದಲ್ಲಿ ನಿಧಾನವಾಗಿ ಅವಕಾಶಗಳನ್ನು ಸ್ವೀಕರಿಸುತ್ತಿದ್ದು, ಹೊಸ ಸಿನಿಮಾಗಳ ಮೂಲಕ ಬರುವ ದಿನಗಳಲ್ಲಿ ಮಿಂಚಿದರೂ ಅಚ್ಛರಿಯಿಲ್ಲ.

 
Loading...

 
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ