ಮಂಡ್ಯ ಸ್ಪರ್ಧೆಯಲ್ಲಿ ಜೋಡೆತ್ತುಗಳೇ ಮೊದಲು: ಚುನಾವಣೆ ನಂತರ ಸಿನಿ ಅಕಾಡಕ್ಕಿಳಿದ ಡಿಬಾಸ್​-ರಾಕಿಂಗ್​ ಸ್ಟಾರ್

ಈಗಷ್ಟೆ ಚುನಾವಣಾ ಕಾವಿನಿಂದ ಹೊರ ಬಂದಿರುವ ಯಶ್​ ಹಾಗೂ ದರ್ಶನ್​ ಮತ್ತೆ ಸಿನಿ ಅಖಾಡಕ್ಕಿಳಿದಿದ್ದಾರೆ. ಚಿರುಸಿನ ಪ್ರಚಾರದ ಮೂಲಕ ಸುಮಕ್ಕನನ್ನ ಸಂಸದೆಯನ್ನಾಗಿಸಿದ ಜೋಡೆತ್ತುಗಳು ಈಗ ಎಂದಿನಂತೆ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

Anitha E | news18
Updated:May 31, 2019, 6:47 PM IST
ಮಂಡ್ಯ ಸ್ಪರ್ಧೆಯಲ್ಲಿ ಜೋಡೆತ್ತುಗಳೇ ಮೊದಲು: ಚುನಾವಣೆ ನಂತರ ಸಿನಿ ಅಕಾಡಕ್ಕಿಳಿದ ಡಿಬಾಸ್​-ರಾಕಿಂಗ್​ ಸ್ಟಾರ್
ನಟ ದರ್ಶನ್​-ಯಶ್​
  • News18
  • Last Updated: May 31, 2019, 6:47 PM IST
  • Share this:
ಚುನಾವಣೆ ಮುಗೀತು. ಸುಮಲತಾ ಅಂಬರೀಷ್ ಗೆದ್ದಿದ್ದೂ ಆಯ್ತು. ಆ ಮೂಲಕ ದರ್ಶನ್ ಮತ್ತು ಯಶ್ ಕೈಗೊಂಡಿದ್ದ ಕೆಲಸವೂ ಸಕ್ಸಸ್ ಆಯ್ತು. ಆ ಯಶಸ್ಸನ್ನು ಮಂಡ್ಯದಲ್ಲಿ ಆಚರಿಸಿದ್ದೂ ಮುಗೀತು. ಹಾಗಾದ್ರೆ ಈಗ ಜೋಡೆತ್ತುಗಳು ಎಲ್ಲಿವೆ? ಏನ್ ಮಾಡ್ತಿವೆ ಎನ್ನುವುದರ ಮಾಹಿತಿ ಇಲ್ಲಿದೆ ಓದಿ.

ಇಡೀ ದೇಶದಲ್ಲೇ ಕುತೂಹಲ ಮೂಡಿಸಿದ್ದ ಲೋಕಸಭಾ ಕ್ಷೇತ್ರಗಳಲ್ಲಿ ಮಂಡ್ಯ ಪ್ರಮುಖವಾದುದು. ಒಂದೆಡೆ ಮೈತ್ರಿ ಸರ್ಕಾರದ ಘಟಾನುಘಟಿಗಳೇ ನಿಖಿಲ್ ಪರ ನಿಂತಿದ್ರೆ, ಮತ್ತೊಂದೆಡೆ ಸುಮಲತಾ ರಾಜಕೀಯವಾಗಿ ಏಕಾಂಗಿಯಾಗಿದ್ದರು. ಹೀಗಾಗಿಯೇ ಅವರ ಬೆಂಬಲಕ್ಕೆ ಬಂದಿದ್ದು ಕನ್ನಡ ಚಿತ್ರರಂಗದ ಇಬ್ಬರು ಸೂಪರ್​ ಸ್ಟಾರ್​ಗಳಾದ ದರ್ಶನ್ ಮತ್ತು ಯಶ್.

ಇದನ್ನೂ ಓದಿ: Amar Movie: ರಾಜ್ಯಾದ್ಯಂತ ಬಿಡುಗಡೆಯಾಗಿದೆ 'ಅಮರ್​': ಯಂಗ್​ ರೆಬೆಲ್​ ಸ್ಟಾರ್​ಗೆ ಶುಭಹಾರೈಕೆಯ ಸುರಿಮಳೆ

ಸಾಮಾನ್ಯವಾಗಿ ಪ್ರಚಾರದ ವೇಳೆ ತಮಗೆ ಪರಿಚಯವಿರುವ ಬೇರೆ ಬೇರೆ ಪಕ್ಷಗಳ ರಾಜಕಾರಿಣಿಗಳ ಪರವಾಗಿ ದರ್ಶನ್ ಮತ್ತು ಯಶ್ ಪ್ರಚಾರಕ್ಕೆ ಹೋಗುತ್ತಿದ್ರು. ಒಂದು ದಿನ ಹಾಗೆ ಹೋಗಿ ರೋಡ್ ಶೋ ಮಾಡಿ ಹೀಗೆ ಬಂದುಬಿಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಇಬ್ಬರೂ ತಾರೆಯರು ಒಬ್ಬ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟು ನಿಂತಿದ್ದರು. ಆ ಮೂಲಕ ಅಂಬಿ ಮನೆಯ ಋಣ ತೀರಿಸಲು ಮುಂದಾಗಿದ್ದರು.

ಇನ್ನು ಕರ್ನಾಟಕದಲ್ಲಿ ವಿಶೇಷವಾಗಿ ರಾಜಕಾರಣಕ್ಕೆ ಹೋದ ಸಿನಿಮಾರಂಗದವರಿಗೆ ಗೆಲುವು ಸಿಕ್ಕಿರೋದು ತೀರಾ ವಿರಳ. ಅಂಬಿ ಒಬ್ಬರು ಆ ಮಾತಿಗೆ ಅಪವಾದವೆಂಬಂತೆ ಮಂಡ್ಯದ ಗಲ್ಲಿಯಿಂದಿ ದಿಲ್ಲಿಯ ಸಂಸತ್‍ವರೆಗೂ ಹೋಗಿಬಂದಿದ್ದರು. ಅವರನ್ನು ಹೊರತುಪಡಿಸಿದರೆ, ಉಳಿದವರು ಅಷ್ಟಕ್ಕಷ್ಟೇ. ಹೀಗಾಗಿಯೇ ಸಿನಿಮಾ ನಟಿ ಸುಮಲತಾರಿಗೆ ಯಾರು ಓಟ್ ಹಾಕ್ತಾರೆ? ದರ್ಶನ್, ಯಶ್ ಇಬ್ಬರೂ ಪ್ರಚಾರಕ್ಕೆ ಬಂದು, ವಾಪಸ್ ಹೋಗ್ತಾರೆ, ಮಂಡ್ಯದ ಜನರ ಕಷ್ಟಸುಖಗಳಿಗೆ ಆಗ್ತಾರಾ ? ಕಲರ್ ಕಲರ್ ಮಂದೀನ ಬಿಡಿ, ಕಷ್ಟಗಳಿಗೆ ಆಗೋರ್ ನಾವು ನಮಗೆ ಓಟ್ ಕೊಡಿ ಅಂತಿದ್ರು.

ಆದ್ರೆ ಕಾಲಿಗೆ ಚಕ್ರ ಸುತ್ತಿಕೊಂಡು ಇಪ್ಪತ್ತು ದಿನಗಳ ಕಾಲ ಮಂಡ್ಯದಾದ್ಯಂತ ಮಿಂಚಿನಂತೆ ಸಂಚರಿಸಿದ ಈ ಜೋಡೆತ್ತುಗಳು, ಒಳ್ಳೆ ಫಸಲನ್ನೇ ದೊರಕಿಸಿವೆ. ಸುಮಲತಾ ಗೆದ್ದ ಬಳಿಕ ಮೊನ್ನೆ ಅಂಬಿ 67ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಮಂಡ್ಯ ಜನರಿಗೆ ಧನ್ಯವಾದ ಹೇಳಲು ಸಕ್ಕರೆ ನಾಡಿನಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಯೋಜಿಸಲಾಗಿತ್ತು. ಅಲ್ಲಿಯೂ ಸುಮಮ್ಮನ ಜತೆ ನಿಂತಿದ್ದ ಹಿರಿಮಗ ದರ್ಶನ್, ಮನೆಮಗ ಯಶ್, ಮಂಡ್ಯ ಜನತೆಗೆ ಕೈಮುಗಿದು ನಮಿಸಿದರು. ಅಲ್ಲಿಗೆ ಎರಡು ತಿಂಗಳಿಂದ ಕಾವೇರಿದ್ದ ಮಂಡ್ಯ ರಣಕಣ ತಣ್ಣಗಾಗಿದೆ. ರಾಜಕೀಯದ ಬಿಸಿಯಲ್ಲಿ ಬಳಲಿಸ್ದ ಜೋಡೆತ್ತುಗಳು, ರೆಸ್ಟ್ ಪಡೆದು ಮತ್ತೆ ಸಿನಿಮಾ ಶೂಟ್‍ಗೆ ಸಿದ್ಧವಾಗಿವೆ.

`ರಾಬರ್ಟ್' ಶೂಟಿಂಗ್‍ನಲ್ಲಿ ಬ್ಯುಸಿಯಾದ ಚಾಲೆಂಜಿಂಗ್ ಸ್ಟಾರ್ !ರಾಜಕೀಯ ತಲೆಬಿಸಿಯಿಂದ ಹೊರಬಂದು ಕೆಲ ದಿನಗಳು ವಿಶ್ರಾಂತಿ ಪಡೆದು ಚಾಲೆಂಜಿಂಗ್ ಸ್ಟಾರ್ ದರ್ಶನ್​ ಮತ್ತೆ 'ರಾಬರ್ಟ್' ಚಿತ್ರತಂಡ ಸೇರಿಕೊಂಡಿದ್ದಾರೆ. ಮೇ 23ರಂದು ಮಂಡ್ಯ ಫಲಿತಾಂಶ ಹೊರಬಂದು, ಸುಮಲತಾರ ಗೆದ್ದರು ಅಂತ ಗೊತ್ತಾಗುತ್ತಲೇ ಪಾಂಡಿಚೆರಿಯಲ್ಲಿಯೇ ದರ್ಶನ್ ಮತ್ತು 'ರಾಬರ್ಟ್' ಟೀಂ ಕೇಕ್ ಕತ್ತರಿಸಿ, ಆ ಗೆಲುವನ್ನು ಸಂಭ್ರಮಿಸಿದ್ದರು. ಈಗ ಸ್ವಾಭಿಮಾನಿ ವಿಜಯೋತ್ಸವ ಆಚರಿಸಿ ಮತ್ತೆ ಹೊಸ ಹುರುಪಿನಲ್ಲಿ ದಚ್ಚು, 'ರಾಬರ್ಟ್' ಶೂಟಿಂಗ್‍ನಲ್ಲಿ ದಚ್ಚು ಬ್ಯುಸಿಯಾಗಲಿದ್ದಾರೆ.

ಅದರ ನಡುವೆಯೇ ಎಂಡಿ ಶ್ರೀಧರ್ ನಿರ್ದೇಶನದ ಒಡೆಯ ಚಿತ್ರದ ಪ್ಯಾಚ್‍ವರ್ಕ್ ಕಂಪ್ಲೀಟ್ ಮಾಡಲೂ ದರ್ಶನ್ ಸಮಯ ನೀಡಿದ್ದಾರೆ. ಕೆಲ ದಿನಗಳ ಪ್ಯಾಚ್‍ವರ್ಕ್ ಹಾಗೂ ಒಡೆಯ ಹಾಡುಗಳ ಶೂಟಿಂಗ್ ಬಾಕಿಯಿದ್ದು, 'ರಾಬರ್ಟ್' ಬ್ರೇಕ್‍ನಲ್ಲಿ ಚಾಲೆಂಜಿಂಗ್ ಸ್ಟಾರ್ ಒಡೆಯ ಟೀಂ ಸೇರಿಕೊಳ್ಳಲಿದ್ದಾರೆ. ಹೀಗಾಗಿಯೇ 'ಕುರುಕ್ಷೇತ್ರ' ರಿಲೀಸ್‍ಗೂ ಮುನ್ನವೇ ಒಡೆಯ ತೆರೆಗೆ ಬಂದರೂ ಆಶ್ಚರ್ಯವಿಲ್ಲ ಎನ್ನಲಾಗ್ತಿದೆ.

ಜೂನ್ 6ರಿಂದ ಕೆಜಿಎಫ್ ಟೀಂ ಸೇರಿಲಿದ್ದಾರೆ ರಾಕಿಂಗ್ ಸ್ಟಾರ್ 

ಇನ್ನು ಮತ್ತೊಂದೆಡೆ 'ಕೆಜಿಎಫ್ ಚಾಪ್ಟರ್ 2' ಚಿತ್ರದ ಟೆಸ್ಟ್ ಶೂಟ್ ಈಗಾಗಲೇ ಪ್ರಾರಂಭವಾಗಿದ್ದು, ಪ್ರಶಾಂತ್ ನೀಲ್ ಸೆಟ್ ಮತ್ತು ಲೊಕೇಷನ್‍ಗಳಲ್ಲಿ ಹೊಸ ಹೊಸ ಪಾತ್ರಗಳಿಗೆ ಆಯ್ಕೆಯಾದ ಕಲಾವಿದರಿಗೆ ತರಬೇತಿ ನೀಡುತ್ತಿದ್ದಾರೆ. ಜತೆಗೆ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಖುದ್ದು ರಾಕಿಂಗ್ ಸ್ಟಾರ್ ಯಶ್ ಚಿತ್ರದ ಪ್ರತಿಯೊಂದು ಹಂತದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಈ ಸೀಕ್ವಲ್‍ನ ಹೊಸ ಹೊಸ ಕಾಟ್ಸ್ಯೂಮ್‍ಗಳನ್ನೂ ಖುದ್ದು ಯಶ್ ಅವರೇ ಆರಿಸಿಕೊಳ್ಳುತ್ತಿದ್ದು, ಇಲ್ಲಿ ಮತ್ತಷ್ಟು ಸ್ಟೈಲಿಶ್ ಆಗಿ ಮಿಂಚಲಿದ್ದಾರೆ ಗಡ್ಡಾಧಾರಿ ರಾಕಿ ಭಾಯ್.

ಜೂನ್ 6ರಿಂದ ರಾಕಿಂಗ್ ಸ್ಟಾರ್ ಯಶ್ 'ಕೆಜಿಎಫ್ ಚಾಪ್ಟರ್ 2' ಟೀಂ ಸೇರಿಕೊಳ್ಳಲಿದ್ದಾರೆ. ಮೊದಲ ಚಾಪ್ಟರ್​ಗಿಂತಲೂ ದೊಡ್ಡ ಮಟ್ಟದಲ್ಲಿ ಈ ಸೀಕ್ವಲ್ ಮಾಡುವ ಹುರುಪಿನಲ್ಲಿ ತ್ರಿಮೂರ್ತಿಗಳಾದ ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರ್ ಹಾಗೂ ಯಶ್ ಸಾಕಷ್ಟು ಸಮಯ ನೀಡುತ್ತಿದ್ದಾರೆ. ಹೀಗಾಗಿಯೇ ಪ್ರತಿ ಹಂತದಲ್ಲಿಯೂ 'ಕೆ.ಜಿ.ಎಫ್' ಸೀಕ್ವಲ್ ಕುತೂಹಲ, ನಿರೀಕ್ಷೆಗಳನ್ನು ಹೆಚ್ಚಿಸುತ್ತಲೇ ಇದೆ.

ಇದನ್ನೂ ಓದಿ: Amar Movie: ಅಮರ್​ ಸಿನಿಮಾ ಬಿಗುಡೆಗೂ ಮುನ್ನ ಲಕ್ಷ ರೂಪಾಯಿ ಕೊಟ್ಟು ಮೊದಲ ಶೋ ಟಿಕೆಟ್​ ಖರೀದಿಸಿದ ಅಭಿಮಾನಿ

ಹೀಗೆ ರಾಜಕೀಯ ಕ್ಷೇತ್ರದಲ್ಲೂ ಗೆದ್ದುಬಂದ ಈ ಜೋಡೆತ್ತುಗಳು ಈಗ ಮತ್ತೆ ತಮ್ಮ ಮೈದಾನಕ್ಕಿಳಿದಿವೆ. ಇಲ್ಲೂ ಒಳ್ಳೆ ಸಿನಿಮಾಗಳ ಮೂಲಕ ಜನರನ್ನು ರಂಜಿಸಿ, ಒಳ್ಳೆ ಫಸಲು ತೆಗೆಯುವ ಹುಮ್ಮಸ್ಸಿನಲ್ಲಿವೆ. ಅದೇನೇ ಇರಲಿ, ದಚ್ಚು ಮತ್ತು ಯಶ್ ಇಬ್ಬರೂ ಸಿನಿಮಾಗಳಲ್ಲಿ ಮಾತ್ರವಲ್ಲ ರಾಜಕೀಯಕ್ಕೆ ಬಂದ್ರೆ, ಅಲ್ಲೂ ನಮ್ಮದೇ ಹವಾ ಅಂತ ಸಾಬೀತು ಮಾಡಿದ್ದಾರೆ.

 

PHOTOS: ಗೌನ್​ನಲ್ಲಿ ಮಿಂಚುತ್ತಿರುವ ಟಾಲಿವುಡ್​ ಲಿಲ್ಲಿ ರಶ್ಮಿಕಾ ಮಂದಣ್ಣ..!

First published:May 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading