• Home
  • »
  • News
  • »
  • entertainment
  • »
  • Tenet: ಬಾಗಿಲು ತೆರೆಯಿತು ಚಿತ್ರಮಂದಿರ: ಅಭಿಮಾನಿಗಳೊಂದಿಗೆ ಬೆಳ್ಳಿತೆರೆ ಮೇಲೆ ಸಿನಿಮಾ ನೋಡಿದ ಸ್ಟಾರ್​ ನಟ..!

Tenet: ಬಾಗಿಲು ತೆರೆಯಿತು ಚಿತ್ರಮಂದಿರ: ಅಭಿಮಾನಿಗಳೊಂದಿಗೆ ಬೆಳ್ಳಿತೆರೆ ಮೇಲೆ ಸಿನಿಮಾ ನೋಡಿದ ಸ್ಟಾರ್​ ನಟ..!

ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಹಾಲಿವುಡ್​ ನಟ ಟಾಮ್​ ಕ್ರೂಸ್​

ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಹಾಲಿವುಡ್​ ನಟ ಟಾಮ್​ ಕ್ರೂಸ್​

Tom Cruise: ಹಾಲಿವುಡ್​ ನಟ ಟಾಮ್​ ಕ್ರೂಸ್​ ಚಿತ್ರಮಂದಿರಕ್ಕೆ ತೆರಳಿ, ಪ್ರೇಕ್ಷಕರಿಗೆ ಸರ್ಪ್ರೈಸ್​ ಕೊಟ್ಟಿದ್ದಾರೆ. ಹೌದು, ಲಂಡನ್​ನ ಚಿತ್ರಮಂದಿರದಲ್ಲಿ ತೆರೆ ಕಂಡಿರುವ ಹಾಲಿವುಡ್​ನ ಟೆನೆಟ್​ ಸಿನಿಮಾ ವೀಕ್ಷಿಸಿದ್ದಾರೆ ಟಾಮ್​ ಕ್ರೂಸ್​. ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದ ವಿಡಿಯೋವನ್ನೂ ತಮ್ಮ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲೂ ಹಂಚಿಕೊಂಡಿದ್ದಾರೆ.

ಮುಂದೆ ಓದಿ ...
  • Share this:

ಕೊರೋನಾ ವೈರಸ್​ ಭೀತಿಯಿಂದಾಗಿ ಕಳೆದ ಮಾರ್ಚ್​ನಿಂದ ಎಲ್ಲೆಡೆ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳ ಬಾಗಿಲು ಮುಚ್ಚಲಾಗಿದೆ. ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಒಂದೊಂದು ಕಡೆ ಮೆಲ್ಲನೆ ಚಿತ್ರಮಂದಿರಗಳು ಬಾಗಿಲು ತೆರೆಯುತ್ತಿವೆ. ಈಗಾಗಲೇ ಹಲವಾರು ದೇಶಗಳಲ್ಲಿ ಮಲ್ಪಿಪ್ಲೆಕ್ಸ್​ಗಳು ಬಾಗಿಲು ತೆರೆದಿವೆ. 


ಹಾಲಿವುಡ್​ ನಟ ಟಾಮ್​ ಕ್ರೂಸ್​ ಚಿತ್ರಮಂದಿರಕ್ಕೆ ತೆರಳಿ, ಪ್ರೇಕ್ಷಕರಿಗೆ ಸರ್ಪ್ರೈಸ್​ ಕೊಟ್ಟಿದ್ದಾರೆ. ಹೌದು, ಲಂಡನ್​ನ ಚಿತ್ರಮಂದಿರದಲ್ಲಿ ತೆರೆ ಕಂಡಿರುವ ಹಾಲಿವುಡ್​ನ ಟೆನೆಟ್​ ಸಿನಿಮಾ ವೀಕ್ಷಿಸಿದ್ದಾರೆ ಟಾಮ್​ ಕ್ರೂಸ್​. ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗಿದ್ದ ವಿಡಿಯೋವನ್ನೂ ತಮ್ಮ ಟ್ವಿಟರ್ ಹಾಗೂ ಇನ್​ಸ್ಟಾಗ್ರಾಂನಲ್ಲೂ ಹಂಚಿಕೊಂಡಿದ್ದಾರೆ.ಟಾಮ್​ ಕ್ರೂಸ್​ ಸಹ ಮಾಸ್ಕ್​ ತೊಟ್ಟು ಲಂಡನ್​ನ ಒಂದು ಚಿತ್ರಮಂದಿರಕ್ಕೆ ಹೋಗುತ್ತಾರೆ. ಅಲ್ಲಿ ಪ್ರೇಕ್ಷಕರ ಮಧ್ಯೆ ಕುಳಿತು ಸಿನಿಮಾ ನೋಡುತ್ತಾರೆ. ಕೊರೋನಾ ಲಾಕ್​ಡೌನ್​ನಿಂದಾಗಿ ಮುಚ್ಚಿದ್ದ ಚಿತ್ರಮಂದಿರ ತೆರೆದಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ ಹಾಲಿವುಡ್​ನಟ. ಇನ್ನು ಟಾಮ್​ ಕ್ರೂಸ್​ ಅವರನ್ನು ನೋಡಿದ ಪ್ರೇಕ್ಷಕರು ಥ್ರಿಲ್ಲಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ.

ನಟ ಟಾಮ್​ ಕ್ರೂಸ್​ ಮಾಡಿರುವ ಟ್ವೀಟ್​ ಅನ್ನು ಬಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳೂ ರೀಟ್ವೀಟ್​ ಮಾಡಿದ್ದಾರೆ. ದಿಯಾ ಮಿರ್ಜಾ ಹಾಗೂ ನಿರ್ದೇಶಕ ಪವನ್​ ಒಡೆಯರ್​ ಆದಷ್ಟು ಬೇಗ ನಮ್ಮಲ್ಲೂ ಚಿತ್ರಮಂದಿರಗಳು ತೆರೆಯಲಿ ಎಂದು ಆಶಿಸಿದ್ದಾರೆ.


Hope ❤️ https://t.co/CxCRH1PUjC

ಕ್ಲಿಸ್ಟೋಫರ್ ನೋಲನ್​ ಅವರ ಬಹುನಿರೀಕ್ಷಿತ ಸಿನಿಮಾ ಟೆನೆಟ್​ ಅಂತರಾಷ್ಟ್ರೀಯ ಮಟ್ಟದಲ್ಲಿ ಆ.26ರಂದು ತೆರೆಕಂಡಿದೆ. ಈ ಸಿನಿಮಾಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪ್ರೇಕ್ಷಕರು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಮೂಲಕ ಎಂಜಾಯ್​ ಮಾಡುತ್ತಿದ್ದಾರೆ. ಜಾನ್​ ಡೇವಿಡ್​ ವಾಷಿಂಗ್​ಟನ್​, ರಾಬರ್ಟ್​ ಪ್ಯಾಟಿನ್​ಸನ್ ಅವರೊಂದಿಗೆ​ ಈ ಚಿತ್ರದಲ್ಲಿ ಬಾಲಿವುಡ್​ ನಟಿ ಡಿಂಪಲ್​ ಕಪಾಡಿಯಾ ಸಹ ನಟಿಸಿದ್ದಾರೆ. ಇನ್ನು ಟೆನೆಟ್​ ಚಿತ್ರ ಅಮೆರಿಕದಲ್ಲಿ ಸೆ.3ಕ್ಕೆ ತೆರೆ ಕಾಣಲಿದೆ.

Published by:Anitha E
First published: