• Home
  • »
  • News
  • »
  • entertainment
  • »
  • Sathish Ninasam: ಒಂದೇ ದಿನ ಎರಡು ಸಿನಿಮಾಗಳ ಚಿತ್ರೀಕರಣ ಆರಂಭಿಸಿದ ಸತೀಶ್​ ನೀನಾಸಂ..!

Sathish Ninasam: ಒಂದೇ ದಿನ ಎರಡು ಸಿನಿಮಾಗಳ ಚಿತ್ರೀಕರಣ ಆರಂಭಿಸಿದ ಸತೀಶ್​ ನೀನಾಸಂ..!

ಸತೀಶ್​ ನೀನಾಸಂ

ಸತೀಶ್​ ನೀನಾಸಂ

ಪೆಟ್ರೋಮ್ಯಾಕ್ಸ್​ ಸಿನಿಮಾದ ಜೊತೆಗೆ ಬೆಂಗಳೂರಿನಲ್ಲಿ ಮ್ಯಾಟ್ನಿ ಎಂಬ ಶೀರ್ಷಿಕೆಯ ಚಿತ್ರ ಸಹ ಸೆಟ್ಟೇರಿದೆ. ನಿನ್ನೆಯಷ್ಟೆ ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಆರಂಭವಾಗಿದೆ.

  • Share this:

ಅಪ್ಪಟ ದೇಸಿ ಪ್ರತಿಭೆ ಸತೀಶ್​ ನೀನಾಸಂ. ಪೋಷಕ ಪಾತ್ರಗಳ ಮೂಲಕ ನಾಯಕನಾಗಿ ಬಡ್ತಿ ಪಡೆದು ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿರುವ ನಾಯಕ ನಟ. ಸದ್ಯ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್​ಡೌನ್​ನಲ್ಲಿ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿರುವ ಸತೀಶ್​ ನೀನಾಸಂ ಈಗ ಒಂದೊಂದಾಗಿ ಚಿತ್ರಗಳ ಚಿತ್ರೀಕರಣ ಆರಂಭಿಸುತ್ತಿದ್ದಾರೆ. ನಿನ್ನೆಯಷ್ಟೆ ಒಂದೇ ದಿನ ಎರಡು ಸಿನಿಮಾಗಳ ಮುಹೂರ್ತ ನೆರವೇರಿಸಿದ್ದು, ಚಿತ್ರೀಕರಣ ಸಹ ಶುರು ಮಾಡಿದ್ದಾರೆ. ಈ ವಿಷಯವನ್ನು ಸತೀಶ್​ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿರುವ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ನೀಡಿದ್ದಾರೆ. ಅಲ್ಲದೆ ಒಂದೇ ದಿನ ಎರಡು ಸಿನಿಮಾಗಳ ಚಿತ್ರೀಕರಣ ಆರಂಭಿಸಿರುವುದು ತಮ್ಮಗೆ ಖುಷಿ ನೀಡಿದೆ ಎಂದಿದ್ದಾರೆ. ಒಂದು ಸಿನಿಮಾ ಮೈಸೂರಿನಲ್ಲಿ ಸೆಟ್ಟೇರಿದರೆ, ಮತ್ತೊಂದು ಬೆಂಗಳೂರಿನಲ್ಲಿ ಆರಂಭವಾಗಿದೆ. 


ಮೈಸೂರಿನಲ್ಲಿ ನಿನ್ನೆ ಪೆಟ್ರೋಮ್ಯಾಕ್ಸ್​ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಇದು ನೀರ್​ ದೋಸೆ ಖ್ಯಾತಿಯ ನಿರ್ದೇಶಕ ವಿಜಯ್​ ಪ್ರಸಾದ್​ ಅವರು ಆ್ಯಕ್ಷನ್​ ಕಟ್​ ಹೇಳುತ್ತಿರುವ ಸಿನಿಮಾ ಇದಾಗಿದೆ. ಇದರಲ್ಲಿ ನಟಿ ಹರಿಪ್ರಿಯಾ ನಾಯಕಿಯಾಗಿದ್ದಾರೆ.
ಇನ್ನು, ಈ ಸಿನಿಮಾದ ಜೊತೆಗೆ ಬೆಂಗಳೂರಿನಲ್ಲಿ ಮ್ಯಾಟ್ನಿ ಎಂಬ ಶೀರ್ಷಿಕೆಯ ಚಿತ್ರ ಸಹ ಸೆಟ್ಟೇರಿದೆ. ನಿನ್ನೆಯಷ್ಟೆ ಈ ಸಿನಿಮಾದ ಮುಹೂರ್ತ ನೆರವೇರಿದ್ದು, ಚಿತ್ರೀಕರಣ ಆರಂಭವಾಗಿದೆ.ಮ್ಯಾಟ್ನಿ ಸಿನಿಮಾದಲ್ಲಿ ರಚಿತಾ ರಾಮ್​ ನಾಯಕಿಯಾಗಿದ್ದಾರೆ. ಇದರ ಚಿತ್ರೀಕರಣ ಯಾಗಾಗಲೇ ಆರಂಭವಾಗಿದೆ. ಇನ್ನು ರಚಿತಾ ಹಾಗೂ ಸತೀಶ್​ ಅವರು ಕೆಲವೇ ದಿನಗಳಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.
View this post on Instagram

CINEMA is the only thing which keeps running in my mind be it 'Black&White' or 'Colour'.


A post shared by Rachita Ram (@rachita_instaofficial) on

ಸತೀಶ್​ ನೀನಾಸಂ ಅಭಿನಯದ ಗೋದ್ರಾ ಸಿನಿಮಾ ಕುರಿತಾಗಿ ಇತ್ತೀಚೆಗಷ್ಟೆ ಅಪ್ಡೇಟ್​ ಸಿಕ್ಕಿದೆ. ಸಿನಿಮಾ ಚಿತ್ರೀಕರಣ ಮುಗಿದಿದ್ದು, ರಿಲೀಸ್​ಗೆ ರೆಡಿಯಾಗಿರುವ ಈ ಸಿನಿಮಾ ಟೈಟಲ್​ ಅನ್ನು ಬದಲಾಯಿಸೋಕೆ ಮುಂದಾಗಿದೆ ಚಿತ್ರತಂಡ. ಸೆನ್ಸಾರ್​ ಮಂಡಳಿ ಚಿತ್ರದ ಟೈಟಲ್​ ಬದಲಾಯಿಸುವಂತೆ ಸೂಷಿಸಿದೆಯಂತೆ. ಇದೇ ಕಾರಣದಿಂದ ಈಗ ಈ ಚಿತ್ರತಂಡ ಹೊಸ ಶೀರ್ಷಿಕೆಯ ಹುಟುಕಾಟದಲ್ಲಿದೆ.

Published by:Anitha E
First published: