‘ಈಗ’(Eega) ಸಿನಿಮಾ ಭಾರತೀಯ ಸಿನಿಮಾದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಅದಕ್ಕೆ ಎರಡು ಪ್ರಮುಖ ಕಾರಣಗಳಿತ್ತು. ಒಂದು ಕನ್ನಡದ ಕಿಚ್ಚ ಸುದೀಪ್(Kiccha Sudeepa) ಅವರ ಅದ್ಭುತ ನಟನೆ. ಮತ್ತೊಂದು ನಿರ್ದೇಶಕ ರಾಜಮೌಳಿ(Rajamouli). ಹೌದು ರಾಯಚೂರು ಮೂಲದ ರಾಜಮೌಳಿ ಭಾರತೀಯ ಚಿತ್ರರಂಗದಲ್ಲಿ ಟಾಪ್ ನಿರ್ದೇಶಕ(Top Director) ಎನಿಸಿಕೊಂಡವರು. ಕಿಚ್ಚ ಸುದೀಪ್ ಅವರನ್ನು ಈಗ ಸಿನಿಮಾದಲ್ಲಿ ಅವರು ತೋರಿಸಿರುವ ರೀತಿ ಯಾವ ನಿರ್ದೇಶಕರಿಗೂ ಬರುವುದಿಲ್ಲ. ಇದಾದ ಬಳಿಕ ಮತ್ತೆ ಸುದೀಪ್ ಅವರು ಬಾಹುಬಲಿ(Bahubhali) ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಕಿಚ್ಚ ಸುದೀಪ್ ಬಳಿಕ ಮತ್ತೊಬ್ಬ ಕನ್ನಡ ನಟ ರಾಜಮೌಳಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದು ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಆರ್ಆರ್ಆರ್(RRR) ಚಿತ್ರದಲ್ಲಿ. ಹೌದು, ಕನ್ನಡ ಚಿತ್ರರಂಗದಲ್ಲಿ ತಮ್ಮ ಕಲೆ ಮೂಲಕವೇ ಹೆಸರುಗಳಿಸಿರುವ ಅರುಣ್ ಸಾಗರ್(Arun Sagar), ರಾಜಮೌಳಿ ಸಿನಿಮಾದಲ್ಲಿಅಭಿನಯಿಸಿದ್ದಾರೆ. ಅರುಣ್ ಸಾಗರ್ ಅವರು ರಂಗಭೂಮಿ ಪ್ರತಿಭೆ. ಕನ್ನಡ ಚಿತ್ರರಂಗದಲ್ಲಿ ನಟರಾಗಿ ಮತ್ತು ಕಲಾ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. ಅವರ ನಟನೆಯನ್ನು ಸಾಕಷ್ಟು ಮಂದಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ, ರಾಜಮೌಳಿ ಅವರು ಅವಕಾಶ ನೀಡಿದ್ದಾರೆ. ಈ ಸಿನಿಮಾದಲ್ಲಿ ಬರುವ ಇಬ್ಬರು ಹೀರೋಗಳಲ್ಲಿ ಒಬ್ಬರಿಗೆ ಹೆಸರಿಡುವ ಪಾತ್ರದಲ್ಲಿ ಅರುಣ್ ಸಾಗರ್ ಕಾಣಿಸಿಕೊಳ್ಳುತ್ತಿದ್ದಾರೆ.
RRR ಸಿನಿಮಾ ಆರಂಭದಲ್ಲೇ ಅರುಣ್ ಸಾಗರ್ ಎಂಟ್ರಿ!
ರಾಜಮೌಳಿ ಸಿನಿಮಾ ಬಜೆಟ್ಗೆ ತಕ್ಕಂತೆ ಅದ್ದೂರಿಯಾಗಿ ಮೂಡಿ ಬರುತ್ತದೆ. ‘ಆರ್ಆರ್ಆರ್’ ಸಿನಿಮಾ ಮೇಕಿಂಗ್ ಕೂಡ ಉತ್ಕೃಷ್ಟ ಮಟ್ಟದಿಂದ ಕೂಡಿರಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಂದು ಈ ಆರ್ಆರ್ಆರ್ ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಅರುಣ್ ಸಾಗರ್ ಸಿನಿಮಾ ಆರಂಭದಲ್ಲೇ ನೋಡಬಹುದು. ಅರುಣ್ ಸಾಗರ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಾಮ್ಚರಣ್ ಹಾಗೂ ಜೂ. ಎನ್ಟಿಆರ್ ನಟಿಸಿದ್ದಾರೆ. ಇವರ ಪಾತ್ರದಕ್ಕೆ ಒಬ್ಬರಿಗೆ ಅರುಣ್ ಸಾಗರ್ ಹೆಸರು ಇಡುವ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಇದನ್ನು ಓದಿ : 15 ನಿಮಿಷದ ಪಾತ್ರಕ್ಕೆ ಆಲಿಯಾ ಭಟ್ ಪಡೆದ ಸಂಭಾವನೆ ಎಷ್ಟು ಗೊತ್ತಾ? ತಲೆ ತಿರುಗೋದು ಗ್ಯಾರಂಟಿ!
ಕರ್ನಾಟಕದಲ್ಲೂ ನಡೆಯಲಿದೆ RRR ಪ್ರಿ ಇವೆಂಟ್!
ಕರ್ನಾಟಕದಲ್ಲಿ ಗ್ರ್ಯಾಂಡ್ ಆಗಿ ಪ್ರೀ-ರಿಲೀಸ್ ಇವೆಂಟ್ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಈ ಬಗ್ಗೆ ರಾಜಮೌಳಿ ಇತ್ತೀಚೆಗೆ ಮಾಹಿತಿ ನೀಡಿದ್ದರು. ಈ ಕಾರ್ಯ ಯಾವಾಗ ನಡೆಯಲಿದೆ ಎನ್ನುವ ಕುತೂಹಲ ಕನ್ನಡಿಗರಲ್ಲಿ ಮೂಡಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಹಾಗೂ ಮಲಯಾಳಂನಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಆರ್ಆರ್ಆರ್’ ಚಿತ್ರದಲ್ಲಿ ಜ್ಯೂ.ಎನ್ಟಿಆರ್ ಹಾಗೂ ರಾಮ್ ಚರಣ್ ಮುಖ್ಯ ಭೂಮಿಕೆಯಲ್ಲಿ ಇದ್ದಾರೆ. ‘ಆರ್ಆರ್ಆರ್’ ಚಿತ್ರದಲ್ಲಿ ನಾಯಕಿಯಾಗಿ ಆಲಿಯಾ ಭಟ್ ಅಭಿನಯಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರದಲ್ಲಿ ಬಾಲಿವುಡ್ ನಟ ಅಜಯ್ ದೇವಗನ್ ಅವರು ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಟೀಸರ್, ಪೋಸ್ಟರ್ ಮತ್ತು ಹಾಡುಗಳು ಧೂಳೆಬ್ಬಿಸಿವೆ.
ಇದನ್ನು ಓದಿ : ತ್ರಿಬಲ್ ಆರ್ `ಹಳ್ಳಿ ನಾಟು’ ಸಾಂಗ್ ಕನ್ನಡದಲ್ಲೂ ವಕೌರ್ಟ್, ಫ್ಯಾನ್ಸ್ ದಿಲ್ಖುಷ್!
15 ನಿಮಿಷದ ಪಾತ್ರಕ್ಕೆ 10 ಕೋಟಿ ಪಡೆದ ಆಲಿಯಾ ಭಟ್
ಆರ್ಆರ್ಆರ್ ಸಿನಿಮಾಗೆ ಆಲಿಯಾ ಭಟ್ 10 ದಿನಗಳ ಕಾಲ ಡೇಟ್ಸ್ ನೀಡಿದ್ದರು. ಒಂದು ದಿನಕ್ಕೆ 50 ಲಕ್ಷದಂತೆ ಸಂಭಾವನೆ ಪಡೀತಾರೆ ಈ ನಟಿ ಆದರೆ, 10 ದಿನಕ್ಕೆ 10 ಕೋಟಿಗೂ ಅಧಿಕ ಸಂಭಾವಣೆ ಪಡೆದಿದ್ದಾರೆ ಎಂಬ ಸುದ್ಧಿ ಚರ್ಚೆಯಾಗುತ್ತಿದೆ.
ಆರ್ಆರ್ಆರ್ ಸಿನಿಮಾದಲ್ಲಿ ಬಾಲಿವುಡ್ನಿಂದ ಆಲಿಯಾ ಭಟ್, ಅಜಯ್ ದೇವಗನ್ ನಟಿಸಿದ್ದಾರೆ. ಹೀಗಾಗಿ ಆರ್ಆರ್ಆರ್ ಸಿನಿಮಾಗೆ ಹಿಂದಿ ಚಿತ್ರರಂಗದಲ್ಲಿ ಒಳ್ಳೆ ಬೇಡಿಕೆ ಕೂಡ ಸಿಕ್ಕಿದೆ. ಒಟ್ನಲ್ಲಿ ಆರ್ಆರ್ಆರ್ ಸಿನಿಮಾ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ಲೂಟಿ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ