ಸಾಮಾನ್ಯವಾಗಿ ಈ ಕ್ರೀಡಾಪಟು(Athlete)ಗಳು ತಮ್ಮ ಕ್ರೀಡೆಯ ಸಮಯದಲ್ಲಿ ತುಂಬಾನೇ ಗಂಭೀರವಾಗಿ ತಮ್ಮ ಕ್ರೀಡೆಯಲ್ಲಿ ತೊಡಗಿಸಿಕೊಂಡು, ನಂತರ ಬಿಡುವಿನ ಸಮಯದಲ್ಲಿ ಚಲನಚಿತ್ರಗಳ ಹಾಡು(Film Songs)ಗಳನ್ನು ಕೇಳುತ್ತಾ, ಬೇರೆ ಬೇರೆ ದೇಶಗಳನ್ನು ಸುತ್ತುತ್ತಾ, ಡ್ಯಾನ್ಸ್(Dance) ಮಾಡುತ್ತಾ ಹೀಗೆ ಮೋಜಿನಲ್ಲಿ ದಿನಗಳನ್ನು ಕಳೆಯುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರಲ್ಲೂ ತಮ್ಮ ನೆಚ್ಚಿನ ಆಟಗಾರರು ಅವರ ಬಿಡುವಿನ ಸಮಯದಲ್ಲಿ ಮಾಡಿದ ಕೆಲಸಗಳ ಮತ್ತು ತೆಗೆಸಿಕೊಂಡ ಫೋಟೋಗಳನ್ನು ಸಾಮಾಜಿಕ ಮಾಧ್ಯಮ(Social Media)ಗಳಲ್ಲಿ ನೋಡುವುದೇ ಒಂದು ರೀತಿಯಲ್ಲಿ ಅಭಿಮಾನಿಗಳ ಕಣ್ಣಿಗೆ ಹಬ್ಬ ಎಂದು ಹೇಳಿದರೆ ಸುಳ್ಳಲ್ಲ. ಇದನ್ನೇಕೆ ಈಗ ಹೇಳುತ್ತಿದ್ದೇವೆ ಎಂದು ನೀವು ಅಂದುಕೊಳ್ಳಬಹುದು. ಮುಂದೆ ನೋಡಿ
ತಮಿಳು ಹಾಡಿಗೆ ಸೂಪರ್ ಡ್ಯಾನ್ಸ್ ಮಾಡಿದ ಪಿ.ವಿ.ಸಿಂಧು!
ಭಾರತೀಯ ಬ್ಯಾಡ್ಮಿಂಟನ್ ತಾರೆಯಾದ ಪಿ.ವಿ. ಸಿಂಧು ಅವರು ತಮ್ಮ ಬ್ಯಾಡ್ಮಿಂಟನ್ ಆಟದಿಂದ ಮತ್ತು ಆಟದ ಕೋರ್ಟ್ನಿಂದ ಸ್ವಲ್ಪ ವಿರಾಮದ ಸಮಯವನ್ನು ಕಳೆಯುತ್ತಿದ್ದು, ಒಂದು ತಮಿಳು ಹಾಡಿಗೆ ಹಾಗೆಯೇ ಒಂದೆರಡು ಹೆಜ್ಜೆ ಹಾಕಿದ್ದಾರೆ ನೋಡಿ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆಯಾದ ಸಿಂಧು ಅವರು ತಮಿಳು ಹಾಡು ‘ಮಾಯಾಕಿರ್ರಿಯೆ’ ಗೆ ತುಂಬಾನೇ ಚೆನ್ನಾಗಿ ಡ್ಯಾನ್ಸ್ ಮಾಡಿದ್ದಾರೆ ನೋಡಿ. ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮೊನ್ನೆ ಕಚ್ಚಾ ಬಾದಾಮ್ ಸ್ಟೆಪ್ಸ್ ಹಾಕಿದ್ದ ಪಿ.ವಿ. ಸಿಂಧು!
ಇದರೊಂದಿಗೆ, ಪಿ ವಿ ಸಿಂಧು ಈ ಹಿಟ್ ತಮಿಳು ಹಾಡಿಗೆ ಡ್ಯಾನ್ಸ್ ಮಾಡಿ ತಮ್ಮ ವಿಡಿಯೋವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರ ಉದ್ದನೆಯ ಸಾಲಿನಲ್ಲಿ ಇವರು ಇತ್ತೀಚಿನವರು ಎಂದು ಹೇಳಿದರೆ ತಪ್ಪಾಗುವುದಿಲ್ಲ.ಈ 26 ವರ್ಷದ ಬ್ಯಾಡ್ಮಿಂಟನ್ ತಾರೆ ಇದೇ ಮೊದಲ ಬಾರಿಗೆ ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತಿರುವುದು ಅಂತ ನೀವು ತಿಳಿದುಕೊಳ್ಳಬೇಡಿ. ಏಕೆಂದರೆ ಅವರು ಕಳೆದ ವಾರವಷ್ಟೇ ‘ಕಚ್ಛಾ ಬಾದಮ್’ ಮತ್ತು ಅದಕ್ಕೂ ಮೊದಲು ‘ಲವ್ ನ್ವಂತಿಂತಿ’ ಹಾಡಿಗೆ ಡ್ಯಾನ್ಸ್ ಮಾಡಿದ್ದು ಮತ್ತು ಅದನ್ನು ಚಿತ್ರೀಕರಿಸಲಾಗಿತ್ತು ಎಂದು ಹೇಳಲಾಗುತ್ತಿದೆ.
ಸಿಕ್ಕಾಪಟ್ಟೆ ವೈರಲ್ ಆಯ್ತು ಪಿವಿ ಸಿಂಧು ಡ್ಯಾನ್ಸ್ ವಿಡಿಯೋ!
ನಿನ್ನೆ ಮಧ್ಯಾಹ್ನ, ಪಿ.ವಿ ಸಿಂಧು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕ್ಲಿಪ್ ಅನ್ನು ಹಂಚಿಕೊಂಡಿದ್ದು, ಅದು ‘ಮಾಯಾಕಿರ್ರಿಯೆ’ ಹಾಡಿಗೆ ಅವರು ಹೇಗೆ ಚಿಕ್ಕ ಚಿಕ್ಕ ಹೆಜ್ಜೆಯನ್ನು ಹಾಕುತ್ತಾ ತಮ್ಮ ಮೈಯನ್ನು ಬಳುಕಿಸಿದ್ದಾರೆ ಎಂಬುದನ್ನು ತೋರಿಸುತ್ತದೆ. ಅನಿರುದ್ಧ್ ರವಿಚಂದರ್ ಹಾಡಿರುವ ಮತ್ತು ಅನಿವೀ ಸಂಯೋಜಿಸಿರುವ ‘ಮಾಯಾಕಿರ್ರಿಯೇ’ ತಮಿಳು ಹಾಡು ಆಗಿದ್ದು, ಇದು ಇನ್ಸ್ಟಾಗ್ರಾಮ್ನಲ್ಲಿ ತುಂಬಾನೇ ಜನಪ್ರಿಯತೆಯನ್ನು ಪಡೆದಿದೆ. ಇದು ಸುಮಾರು 45,000 ಡ್ಯಾನ್ಸ್ ರೀಲ್ಸ್ಗೆ ಸ್ಫೂರ್ತಿ ನೀಡಿದೆ ಎಂದು ಹೇಳಬಹುದು.
ಇದನ್ನೂ ಓದಿ: ನನ್ನ ಗಂಡನೂ ಕಾಶ್ಮೀರಿ ಪಂಡಿತ್.. ನನಗೆ ಅವರೆಲ್ಲರ ಕಷ್ಟ ಗೊತ್ತಿದೆ ಎಂದ ಬಾಲಿವುಡ್ನ ಟಾಪ್ ನಟಿ!
"ಡ್ಯಾನ್ಸ್ ಮಾಡುವುದು ಒಂದು ಸಮಯದಲ್ಲಿ ನಾವು ಅನುಭವಿಸುವ ಸಂತೋಷದ ಕ್ಷಣವಾಗಿದೆ” ಎಂದು ಅವರು ತಮ್ಮ ವಿಡಿಯೋಗೆ ಚಿಕ್ಕದಾಗಿ ಮತ್ತು ಚೊಕ್ಕದಾಗಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಈ ವಿಡಿಯೋ ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ಒಂದು ಗಂಟೆಯಲ್ಲಿಯೇ 3.7 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 87,000 ಕ್ಕೂ ಹೆಚ್ಚು 'ಲೈಕ್'ಗಳನ್ನು ಪಡೆದಿದೆ.
ಕಚ್ಚಾ ಬಾದಾಮ್ ಹಾಡಿಗೆ 12.5 ಮಿಲಿಯನ್ ವ್ಯೂವ್ಸ್!
ಇದಕ್ಕಿಂತ ಮೊದಲು, ವೈರಲ್ ಹಿಟ್ ಹಾಡು ‘ಕಚ್ಚಾ ಬಾದಮ್’ ಹಾಡಿಗೆ ಡ್ಯಾನ್ಸ್ ಮಾಡಿದ ಪಿ.ವಿ.ಸಿಂಧು ಅವರ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ 12.5 ಮಿಲಿಯನ್ ಜನರು ನೋಡಿದ್ದರು. ಒಟ್ಟಿನಲ್ಲಿ ಈ ಬ್ಯಾಡ್ಮಿಂಟನ್ ತಾರೆ ಆಟದಲ್ಲೂ ಸೈ ಮತ್ತು ಡ್ಯಾನ್ಸ್ನಲ್ಲೂ ಸೈ ಎಂದು ಹೇಳಬಹುದು.
ಇದನ್ನೂ ಓದಿ: ಕಚ್ಚಾ ಬಾದಾಮ್ ಹಾಡಿಗೆ ಪಿ.ವಿ.ಸಿಂಧು ಡ್ಯಾನ್ಸ್: ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು ?
ಇನ್ನೂ ಬ್ಯಾಡ್ಮಿಂಟನ್ ಆಟದ ಮತ್ತು ಅವರಿಗೆ ಸಂದ ಪುರಸ್ಕಾರಗಳ ಬಗ್ಗೆ ಮಾತಾಡುವುದಾದರೆ, ಪಿ.ವಿ.ಸಿಂಧು ಅವರಿಗೆ ಕಳೆದ ವರ್ಷ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು. ಅವರು ಈಗಾಗಲೇ 2015 ರಲ್ಲಿ ಪದ್ಮಶ್ರೀ ಪ್ರಶಸ್ತಿ ಮತ್ತು ಭಾರತದ ಅತ್ಯುನ್ನತ ಕ್ರೀಡಾ ಗೌರವ ಪ್ರಶಸ್ತಿಯಾದ ಖೇಲ್ ರತ್ನ ಪ್ರಶಸ್ತಿಯನ್ನು 2016 ರಲ್ಲಿ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ