Kabir Singh: ತೆಲುಗಿನ ಮತ್ತೊಂದು ಹಿಟ್​ ಸಿನಿಮಾದ ಮೇಲೆ ಕಣ್ಣಿಟ್ಟ ಶಾಹಿದ್​ ಕಪೂರ್​

Kabir Singh: ತೆಲುಗು ಸಿನಿಮಾಗಳನ್ನು ಬಾಲಿವುಡ್​ನಲ್ಲಿ ರಿಮೇಕ್​ ಮಾಡುವುದು ಇದೇ ಹೊಸತೇನಲ್ಲ. ಈ ಹಿಂದೆ ಅಕ್ಷಯ್​ ಕುಮಾರ್, ಸಲ್ಮಾನ್​ ಖಾನ್​ ಸೇರಿದಂತೆ ಹಲವರು ತೆಲುಗಿನ ಸಿನಿಮಾಗಳನ್ನು ಹಿಂದಿಯಲ್ಲಿ ರಿಮೇಕ್​ ಮಾಡಿದ್ದಾರೆ. ಈಗ ಇದೇ ಪಟ್ಟಿಗೆ ನಟ ಶಾಹಿದ್​ ಸಹ ಸೇರಿಕೊಂಡಿದ್ದಾರೆ.

Anitha E | news18
Updated:June 29, 2019, 12:52 PM IST
Kabir Singh: ತೆಲುಗಿನ ಮತ್ತೊಂದು ಹಿಟ್​ ಸಿನಿಮಾದ ಮೇಲೆ ಕಣ್ಣಿಟ್ಟ ಶಾಹಿದ್​ ಕಪೂರ್​
ಕಬೀರ್​ ಸಿಂಗ್​ ಸಿನಿಮಾದಲ್ಲಿ ನಟ ಶಾಹಿದ್​
  • News18
  • Last Updated: June 29, 2019, 12:52 PM IST
  • Share this:
ಶಾಹಿದ್​ ಕಪೂರ್​ ಸದ್ಯ ಟಾಲಿವುಡ್​ನ ಹಿಟ್​ ಸಿನಿಮಾ 'ಅರ್ಜುನ್​ ರೆಡ್ಡಿ' ಯ ಹಿಂದಿ ರಿಮೇಕ್​ 'ಕಬೀರ್​ ಸಿಂಗ್​' ನಲ್ಲಿ ಅಭಿನಯಿಸಿದ್ದು ಬಾಕ್ಸಾಫಿಸ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇನ್ನೂ ಈ ಸಿನಿಮ ತೆರೆಕಂಡು ತಿಂಗಳು ಕಳೆಯುವ ಮುನ್ನವೇ ಶಾಹಿದ್​ ತೆಲುಗಿನ ಮತ್ತೊಂದು ಸೂಪರ್​ ಹಿಟ್​ ಚಿತ್ರದ ಮೇಲೆ ಕಣ್ಣು ಹಾಕಿದ್ದಾರೆ.

ಹೌದು, ತೆಲುಗು ಸಿನಿಮಾಗಳನ್ನು ಬಾಲಿವುಡ್​ನಲ್ಲಿ ರಿಮೇಕ್​ ಮಾಡುವುದು ಇದೇ ಹೊಸತೇನಲ್ಲ. ಈ ಹಿಂದೆ ಅಕ್ಷಯ್​ ಕುಮಾರ್, ಸಲ್ಮಾನ್​ ಖಾನ್​ ಸೇರಿದಂತೆ ಹಲವರು ತೆಲುಗಿನ ಸಿನಿಮಾಗಳನ್ನು ಹಿಂದಿಯಲ್ಲಿ ರಿಮೇಕ್​ ಮಾಡಿದ್ದಾರೆ.

Shahid-Kapoor Nani-Jersey-
'ಜೆರ್ಸಿ' ಸಿನಿಮಾದ ಹಿಂದಿ ರಿಮೇಕ್​ನಲ್ಲಿ ಶಾಹಿದ್​ ಕಪೂರ್​


ಈಗ ಶಾಹಿದ್​ ಸಹ ಆ ಸಾಲಿಗೆ ಸೇರಿಕೊಂಡಿದ್ದಾರೆ. 'ಕಬೀರ್ ಸಿಂಗ್'​ ನಂತರ ಈಗ ನಾನಿ ಅಭಿನಯದ ಈ ವರ್ಷದ ಹಿಟ್​ ಸಿನಿಮಾದಲ್ಲಿ ಅಭಿನಯಿಸೋಕೆ ಸಜ್ಜಾಗುತ್ತಿದ್ದಾರೆ ಶಾಹಿದ್​. ಈ ವರ್ಷದ​ ಹಿಟ್​ ಸಿನಿಮಾಗಳಲ್ಲಿ 'ಜೆರ್ಸಿ' ಸಹ ಒಂದು.  'ಜೆರ್ಸಿ' ಸಿನಿಮಾದಲ್ಲಿ ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ನಾಯಕ ನಾನಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸಾಫಿಸ್​ನಲ್ಲಿ ಸಾಕಷ್ಟು ಸದ್ದು ಮಾಡಿತ್ತು.

ಇದನ್ನೂ ಓದಿ: Rashmika Mandanna: ಸಿನಿಮಾ ಆರಂಭಕ್ಕೂ ಮೊದಲೇ ಕೋಟಿಗೆ ಮಾರಾಟವಾಯ್ತು ರಶ್ಮಿಕಾರ ಚಿತ್ರದ ಪ್ರಸಾರ ಹಕ್ಕು​

ಇನ್ನು ಶಾಹಿದ್​ ಕಪೂರ್​ ಈ ಹಿಂದೆ ರಾಣಿಮುಖರ್ಜಿ ಜತೆ ಅಭಿನಯಿಸಿದ್ದ 'ದಿಲ್​ ಬೋಲೆ ಹಡಿಪ್ಪಾ' ಸಿನಿಮಾದಲ್ಲಿ ಕ್ರಿಕೆಟರ್​ ಆಗಿ ಅಭಿನಯಿಸಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲೂ ಅವರು ನಾನಿ ಅಭಿನಯಿಸಿರುವ ಪಾತ್ರಕ್ಕೆ ನ್ಯಾಯ ಮಾಡುತ್ತಾರೆ ಅನ್ನೋ ನಂಬಿಕೆ ಅಭಿಮಾನಿಗಳದ್ದು.

DBoss Darshan: ರಾಬರ್ಟ್​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​

First published:June 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ