ಚಿತ್ರ ನಿರ್ದೇಶಕಿ (Film Director ), ನಟಿ (Actress) ಲೀನಾ ಮಣಿಮೇಕಲೈ (Leena Manimekalai) ಕಾಳಿ ದೇವಿಯ (Goddess Kaali) ಅವತಾರದಲ್ಲಿ ಸಿಗರೇಟ್ (cigarette) ಹಿಡಿದು ಕಾಣಿಸಿಕೊಂಡಿರುವ ವಿವಾದಿತ ಫೋಟೋ (Controversial Photo) ಸಾಕಷ್ಟು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ಲೀನಾ ಮಣಿಮೇಕಲೈ ತಮ್ಮ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹೊಸ ಫೋಟೋವನ್ನು ಹಂಚಿಕೊಳ್ಳುವ ಮೂಲಕ ವಿವಾದವನ್ನು ಮತ್ತಷ್ಟು ದೊಡ್ಡದಾಗಿ ಮಾಡುವ ಹಾಗೇ ಕಾಣುತ್ತಿದೆ. ಹೌದು, ಲೀನಾ ಇದೀಗ ಶಿವ-ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಚಿತ್ರವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋಗೆ ನೆಟ್ಟಿಗರು ಲೀನಾ ವಿರುದ್ಧವೇ ಕಾಮೆಂಟ್ ಮಾಡುತ್ತಿದ್ದಾರೆ.
ಶಿವ-ಪಾರ್ವತಿ ಫೋಟೋ ಹಂಚಿಕೊಂಡ ಲೀನಾ:
ಇನ್ನು, ಕಾಳಿ ಫೋಸ್ಟರ್ ಹಂಚಿಕೊಂಡು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಲೀನಾ ಅವರು ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಲೀನಾ ಅವರು ಶಿವ ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಕೆಲ ವಿಷಯಗಳನ್ನು ಬರೆದುಕೊಂಡಿರುವ ಅವರು, ‘ಬಿಜೆಪಿಯ ಟ್ರೋಲ್ ಸಿಬ್ಬಂದಿಗೆ ಗ್ರಾಮೀಣ ಭಾರತದ ಕಲಾವಿದರು ತಮ್ಮ ಪ್ರದರ್ಶನದ ವೇಳೆ ಹೇಗೆ ಒತ್ತಡ ಕಡಿಮೆ ಮಾಡಿಕೊಳ್ಳುತ್ತಾರೆ ಎನ್ನುವುದು ತಿಳಿದಿಲ್ಲ. ಈ ಫೋಟೋ ನನ್ನ ಸಿನಿಮಾದ್ದಲ್ಲ. ಭಾರತದ ಯಾವುದೋ ಹಳ್ಳಿಯಲ್ಲಿ ತೆಗೆದ ಚಿತ್ರವಾಗಿದೆ. ಇಂತಹ ದೃಶ್ಯಗಳು ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿರುತ್ತವೆ. ಆದರೆ ಈ ಸಂಘ ಪರಿವಾರಗಳು ತಮ್ಮ ನಿರಂತರ ದ್ವೇಷ ಮತ್ತು ಧಾರ್ಮಿಕ ಅಂಧತ್ವದ ಕಾರಣ ಗ್ರಾಮೀಣ ಭಾರತದ ಸೌಂದರ್ಯವನ್ನು ಹಾಳು ಮಾಡಲು ನೋಡುತ್ತಿದ್ದಾರೆ‘ ಎಂದು ಬರೆದುಕೊಂಡಿದ್ದಾರೆ.
BJP payrolled troll army have no idea about how folk theatre artists chill post their performances.This is not from my film.This is from everyday rural India that these sangh parivars want to destroy with their relentless hate & religious bigotry. Hindutva can never become India. https://t.co/ZsYkDbfJhK
— Leena Manimekalai (@LeenaManimekali) July 7, 2022
ಲೀನಾ ಮಣಿಮೇಕಲೈ ಅವರು ಕಾಳಿ ಎಂಬ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದು, ಸಿಗರೇಟ್ ಸೇದುತ್ತಿರುವ ಕಾಳಿ ಮಾತೆಯ ಪೋಸ್ಟರ್ ಅನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಒಂದೆಡೆ ಕಾಳಿ ಮಾತೆ ಸಿಗರೇಟ್ ಸೇದುತ್ತಿದ್ದರೆ, ಇನ್ನೊಂದು ಕೈಯಲ್ಲಿ ಎಲ್ ಜಿಬಿಟಿಕ್ಯೂ ಸಮುದಾಯದ ಧ್ವಜ ಹಿಡಿದಿರುವ ರೀತಿಯಲ್ಲಿ ಕಾಳಿ ಮಾತೆಯ ಅವತಾರವನ್ನು ಪೋಸ್ಟರ್ ನಲ್ಲಿ ಚಿತ್ರಿಸಿದ್ದರು. ಈ ಪೋಸ್ಟರ್ ವೈರಲ್ ಆಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅವರನ್ನು ಈ ಕೂಡಲೇ ಬಂಧಿಸಬೇಕೆಂದು ನೆಟ್ಟಿಗರು ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿಸಿದ್ದವು.
ಇದನ್ನೂ ಓದಿ: Film Poster: ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಸಿನಿಮಾ ಪೋಸ್ಟರ್, ಸ್ಪಷ್ಟನೆ ಕೊಟ್ಟ ನಿರ್ದೇಶಕಿ
ಹಿಂದೂ ಜನರಿಂದ ತೀವ್ರ ವಿರೋಧ:
ಸಿನಿಮಾದ ಪೋಸ್ಟರ್ ಒಂದಷ್ಟು ಜನರನ್ನು ತೀವ್ರವಾಗಿ ಕೆರಳಿಸಿದೆ. ಹಲವಾರು ಹಿಂದೂ ಗುಂಪುಗಳು ಕ್ರಮ ಕೈಗೊಳ್ಳಲು ಕೆನಡಾದ ಅಧಿಕಾರಿಗಳನ್ನು ಸಂಪರ್ಕಿಸಿವೆ ಎಂದು ನಮಗೆ ತಿಳಿಸಲಾಗಿದೆ ಎಂದು ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಹೇಳಿದೆ. ಕೆನಡಾದ ಅಧಿಕಾರಿಗಳು ಮತ್ತು ಈವೆಂಟ್ ಆಯೋಜಕರು ಇಂತಹ ಎಲ್ಲಾ ಪ್ರಚೋದನಕಾರಿ ವಸ್ತುಗಳನ್ನು ಹಿಂತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ ಎಂದು ಟ್ವೀಟ್ನಲ್ಲಿ ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ