ವಿಚ್ಛೇದನ ಪಡೆದ ಮರುದಿನವೇ ಲಿಪ್ ಕಿಸ್ ಮಾಡಿ ಸಿಕ್ಕಿ ಬಿದ್ದ ಖ್ಯಾತ ನಟಿ

ಇಬ್ಬರೂ ಇನ್ನುಮುಂದೆ ಗೆಳೆಯರಾಗಿ ತಮ್ಮ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದ್ದಾರಂತೆ. ಹೀಗಿದ್ದರೂ, ಅವರು ಈ ರೀತಿ ಸಾರ್ವಜನಿಕವಾಗಿ ಕಿಸ್​ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆ ಮೂಡಿದೆ.

ಕಾರ್ಡಿ ಬಿ-ಆಫ್​ಸೆಟ್​

ಕಾರ್ಡಿ ಬಿ-ಆಫ್​ಸೆಟ್​

 • Share this:
  ಅಮೆರಿಕದ ರ್ಯಾಪರ್ ಹಾಗೂ ನಟಿ ಕಾರ್ಡಿ ಬಿ ಮತ್ತು ಅವರ ಗಂಡ ಆಫ್​ಸೆಟ್​ ವಿಚ್ಛೇದನ ಪಡೆಯಲು ಮುಗಿದಿದ್ದಾರೆ. ಸಂಬಂಧ ಸರಿಯಾಗಿ ಹೊಂದಾಣಿಕೆ ಆಗದ ಕಾರಣ ಡೈವರ್ಸ್​ ಪಡೆಯುವುದಾಗಿ ಹೇಳಿಕೊಂಡಿದ್ದಾರೆ. ಅಚ್ಚರಿ ಎಂದರೆ, ವಿಚ್ಛೇದನಕ್ಕೆ ಅರ್ಜಿ ಹಾಕಿದ ಮರುದಿನವೇ ಕಾರ್ಡಿ ಬಿ ಕಿಸ್​ ಮಾಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದಿದ್ದಾರೆ. ಅದೂ ಆಫ್​ಸೆಟ್​ ಜೊತೆಗೆ ಅನ್ನೋದು ವಿಚಿತ್ರ.

  ಹೌದು, ಕಾರ್ಡಿ ಬಿ ಮತ್ತು ಅವರ ಗಂಡ ಆಫ್​ಸೆಟ್ ಅಕ್ಟೋಬರ್ 10ರಂದು ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದರು. ಇದಾದ ಮರುದಿನ ಅಂದರೆ ಅಕ್ಟೋಬರ್​ 11 ಕಾರ್ಡಿ ಬಿ ಜನ್ಮದಿನ. ಈ ವೇಳೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಸಾರ್ವಜನಿಕವಾಗಿಯೇ ಲಿಪ್​ ಕಿಸ್​ ಮಾಡಿದ್ದಾರೆ.  ಇಬ್ಬರೂ ಇನ್ನುಮುಂದೆ ಗೆಳೆಯರಾಗಿ ತಮ್ಮ ಸಂಬಂಧವನ್ನು ಮುಂದುವರಿಸಲು ನಿರ್ಧರಿಸಿದ್ದಾರಂತೆ. ಹೀಗಿದ್ದರೂ, ಅವರು ಈ ರೀತಿ ಸಾರ್ವಜನಿಕವಾಗಿ ಕಿಸ್​ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲದೆ, ಕೆಲವರು ಸಂಬಂಧವನ್ನು ಮತ್ತೆ ಸರಿ ಮಾಡಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.
  Published by:Rajesh Duggumane
  First published: