ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ (Vijay Deverakonda) ಟಾಲಿವುಡ್ನ ಹಿಟ್ ಪೇರ್ (Hit Pair).. ಈ ಸೂಪರ್ ಹಿಟ್ ಪೇರ್ ಕೇವಲ ಸಿನಿಮಾಗೆ ಮಾತ್ರ ಸೀಮತವಾಗಿಲ್ಲ. ವೈಯಕ್ತಿಕವಾಗಿಯೂ ಈ ಜೋಡಿ ಸಖತ್ ಸುದ್ದಿ ಮಾಡುತ್ತಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಡೇಟಿಂಗ್ (Dating) ಮಾಡುತ್ತಿದ್ದಾರೆ. ಇಬ್ಬರೂ ಮದುವೆಯಾಗುತ್ತಾರೆ ಎಂದ ಸುದ್ದಿ ಕೂಡ ಇದೀಗ ಚಿತ್ರರಂಗದಲ್ಲಿ ಜೋರಾಗಿದೆ. ವಿಜಯ್ ದೇವರಕೊಂಡ ಕುಟುಂಬಸ್ಥರ (Vijay Deverakonda Family) ಜೊತೆ ರಶ್ಮಿಕಾ ಮಂದಣ್ಣ ಒಳ್ಳೆಯ ಭಾಂದವ್ಯ ಇಟ್ಟುಕೊಂಡಿದ್ದಾರೆ. ಎಲ್ಲೆ ಹೋದರು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟೊಟ್ಟಿಗೆ ತೆರಳುತ್ತಿದ್ದಾರೆ. ಆದರೂ ಈ ಜೋಡಿ ನಮ್ಮಿಬ್ಬರ ನಡುವೆ ಏನೂ ಇಲ್ಲ ಅಂತ ಹೇಳಿಕೊಂಡೇ ಬಂದಿದೆ. ಆದರೆ, ಇವರಿಬ್ಬರ ವರ್ತನೆ ನೋಡಿದರೆ ಪಕ್ಕಾ ಮದುವೆ (Marriage)ಯಾಗುತ್ತಾರೆ ಅಂತ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದಿಗ ಹೊಸ ವಿಚಾರ ಅಂದ್ರೆ, ವಿಜಯ್ ದೇವರಕೊಂಡ ಜೊತೆ ಸಮಂತಾ (Samantha) ರೊಮ್ಯಾನ್ಸ್ (Romance) ಮಾಡಲಿದ್ದಾರೆ.
ವಿಜಯ್ ದೇವರಕೊಂಡ ಜೊತೆ ಸಮಂತಾ ರೊಮ್ಯಾನ್ಸ್!
ಡಿವೋರ್ಸ್ ಬಳಿಕ ಸಮಂತಾ ಮತ್ತಷ್ಟು ಬ್ಯುಸಿಯಾಗಿದ್ದಾರೆ. ಹಲವಾರು ಸಿನಿಮಾಗಳು ಸಮಂತಾ ಕೈಯಲ್ಲಿವೆ. ಸಮಂತಾ ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸಮಂತಾಗೆ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದೆ. ಸೂಪರ್ಸ್ಟಾರ್ಗಳಿಂದ ಹಿಡಿದು ಇತ್ತೀಚೆಗೆ ಬಂದ ಹೀರೊಗಳವರೆಗೂ ಸಮಂತಾ ಬೇಡಿಕೆ ನಟಿಯಾಗಿದ್ದಾರೆ. ಈಗ ಟಾಲಿವುಡ್ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಸಮಂತಾ ಹಾಗೂ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಅಂತಿದೆ. ಇಂಥದ್ದೊಂದು ಗಾಸಿಪ್ ಟಾಲಿವುಡ್ನಲ್ಲಿ ಹರಿದಾಡುತ್ತಿದೆ. ಅಸಲಿಗೆ ಏನಿದು ಕಥೆ ಅಂತೀರಾ? ಮುಂದೆ ನೋಡಿ.
ವಿಜಯ್-ಸಮಂತಾ ಕಾಂಬೋದಲ್ಲಿ ಬರ್ತಿದೆ ಸಿನಿಮಾ!
ಮೊದಲ ಬಾರಿಗೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ.. ಈ ಸಿನಿಮಾವನ್ನು ಶಿವ ನಿರ್ಮಾಣ ನಿರ್ದೇಶನ ಮಾಡುತ್ತಿದ್ದಾರೆ. ರೊಮ್ಯಾಂಟಿಕ್ ಬ್ಯಾಕ್ಗ್ರೌಂಡ್ನಲ್ಲಿ ವಿಭಿನ್ನ ಕಥೆಯನ್ನು ಹೇಳಲು ಹೊರಟಿದ್ದಾರೆ. ಈ ಕಥೆ ಕೇಳಿದ ಕೂಡಲೇ ಸಮಂತಾ ಹಾಗೂ ವಿಜಯ್ ದೇವರಕೊಂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇಷ್ಟು ದಿನ ರಶ್ಮಿಕಾ ಮಂದಣ್ಣ ಜೊತೆ ಸಿನಿಮಾ ಮಾಡುತ್ತಿದ್ದ ವಿಜಯ್ ದೇವರಕೊಂಡ ಸಮಂತಾ ಜೊತೆ ಮೊಟ್ಟ ಮೊದಲ ಬಾರಿಗೆ ರೊಮ್ಯಾನ್ಸ್ ಮಾಡಲಿದ್ದಾರೆ.
ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಗತಿ, ರಿಷಬ್ ಶೆಟ್ಟಿ ಮನೆಯಲ್ಲಿ ಸಂಭ್ರಮವೋ ಸಂಭ್ರಮ!
ಸೇನೆ ಬಗ್ಗೆ ಕಥೆಯ ಸಿನಿಮಾದಲ್ಲಿ ವಿಜಯ್-ಸಮಂತಾ!
ಈ ಬಾರಿ ಮಿಲಿಟರಿಯನ್ನು ಬ್ಯಾಕ್ ಡ್ರಾಪ್ ಇಟ್ಟುಕೊಂಡು ರೊಮ್ಯಾಂಟಿಕ್ ಸ್ಟೋರಿ ಹೇಳಲು ಹೊರಟಿದ್ದಾರಾಂತೆ ಶಿವ. ಇದರೊಂದಿಗೆ ಸೆಂಟಿಮೆಂಟ್ ದೃಶ್ಯಗಳು ಕೂಡ ಭರಪೂರ ಇರುತ್ತೆ ಎನ್ನಲಾಗಿದೆ. ಈ ಕಥೆ ವಿಜಯ್ ದೇವರಕೊಂಡ ಹಾಗೂ ಸಮಂತಾ ಇಬ್ಬರಿಗೂ ಇಷ್ಟ ಆಗಿದೆ. ಈ ಕಾರಣಕ್ಕೆ ಶಿವ ನಿರ್ವಾಣ ಸಿನಿಮಾಗೆ ಇಬ್ಬರೂ ಸಮ್ಮತಿಸಿದ್ದಾರಂತೆ. ಇನ್ನೂ ಈ ಸಿನಿಮಾಗೆ ಸಮಂತಾ ದುಬಾರಿ ಸಂಭಾವನೆ ಬೇಡಕೆ ಇಟ್ಟಿದ್ದಾರಂತೆ. ಇದರ ಬಗ್ಗೆ ಚರ್ಚೆಯಾಗುತ್ತಿದ್ದು, ಸದ್ಯದಲ್ಲೇ ಎಲ್ಲವೂ ಫೈನಲ್ ಆಗಲಿದೆಯಂತೆ.
ಇದನ್ನೂ ಓದಿ: ನಾನು ಗಂಡಾಗಿ ಹುಟ್ಟಬೇಕಿತ್ತು, ರಶ್ಮಿಕಾ ಹೀಗಂದಿದ್ದು ಕೇಳಿ ಫ್ಯಾನ್ಸ್ ಶಾಕ್! ಏನಾಯ್ತಂತೆ ಶ್ರೀವಲ್ಲಿಗೆ?
ಪುಷ್ಪ ಸಿನಿಮಾ ನಿಮಾರ್ಪಕರಿಂದ ಬಂಡವಾಳ!
‘ಪುಷ್ಪ’ ಸಿನಿಮಾ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ‘ಡಿಯರ್ ಕಾಮ್ರೇಡ್’ ಬಳಿಕ ಇದೇ ಸಂಸ್ಥೆಗೆ ವಿಜಯ್ ದೇವರಕೊಂಡ ಮತ್ತೊಂದು ಸಿನಿಮಾ ಮಾಡಬೇಕಿತ್ತು. ಆ ಚಿತ್ರಕ್ಕೆ ‘ಹೀರೋ’ ಅಂತ ಟೈಟಲ್ ಕೂಡ ಫಿಕ್ಸ್ ಆಗಿತ್ತು. ಆದರೆ ಈ ಸಿನಿಮಾವನ್ನು ಕೈಬಿಡಲಾಗಿತ್ತು. ಈ ಹಿಂದೆ ಮಹಾನಟಿಯಲ್ಲಿ ವಿಜಯ್ ಹಾಗೂ ಸಮಂತಾ ಒಟ್ಟಿಗೆ ನಟಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ