Rocking Star Yash: ರಾಕಿ ಭಾಯ್ ಅಬ್ಬರಕ್ಕೆ ಬಾಲಿವುಡ್ ಶೇಕ್, ಧಾಕಡ್ ನಂತರ ಮತ್ತೊಂದು ಸಿನೆಮಾ ಫ್ಲಾಪ್

ಭಾರಿ ಸೋಲು ಕಂಡ ಧಾಕಡ್ ನಂತೆಯೇ ಮತ್ತೊಂದು ಬಾಲಿವುಡ್ ನ ಸಿನಿಮಾ ಚಿತ್ರಮಂದಿರದಲ್ಲಿ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೌದು ಬಾಲಿವುಡ್ ನ ಇನ್ನೊಬ್ಬ ನಟ ಆಯುಷ್ಮಾನ್ ಖುರಾನಾ ಅವರ ಅಭಿನಯದ 'ಅನೇಕ್' ಚಿತ್ರವು ನಿನ್ನೆ ಎಂದರೆ ಶುಕ್ರವಾರ ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್

  • Share this:
ಕಳೆದ ವಾರವಷ್ಟೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ (Movie theater) ಬಾಲಿವುಡ್ ನಟಿ ಕಂಗನಾ ರಣಾವತ್ ಅಭಿನಯದ 'ಧಾಕಡ್' (Dhakad) ಮತ್ತು ನಟ ಕಾರ್ತಿಕ್ ಆರ್ಯನ್ ಮತ್ತು ನಟಿ ಕಿಯಾರಾ ಅಡ್ವಾಣಿ ಅವರ 'ಭೂಲ್ ಭುಲೈಯಾ 2' (BHUL BHULAYA 2) ಚಿತ್ರಗಳು ತೆರೆಕಂಡಿವೆ. ಭೂಲ್ ಭುಲೈಯಾ 2 ಬಾಕ್ಸ್ ಆಫೀಸ್‌ನಲ್ಲಿ (Box Office) ಸದ್ದು ಮಾಡುತ್ತಿದ್ದರೆ, ಕಂಗನಾ ರಣಾವತ್ ಅವರ ಚಿತ್ರ ಧಾಕಡ್ ನೆಲ ಕಚ್ಚಿದೆ. ಗಲ್ಲಾಪೆಟ್ಟಿಗೆಯಲ್ಲಿ ಮ್ಯಾಜಿಕ್ ಮಾಡದ ಧಾಕಡ್ ಹೇಳ ಹೆಸರಿಲ್ಲದಂತಾಗಿದೆ. ಈ ಸಿನಿಮಾಗಳು ಮಕಾಡೆ ಮಲಗಿರಲು ಕಾರಣ ‘ರಾಕಿ ಬಾಯ್’ ಎನ್ನಲಾಗಿದೆ. ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ 2 (Pan India Cinema KGF 2) ಚಿತ್ರಮಂದಿರಗಳಲ್ಲಿ ಬೇರೆಲ್ಲಾ ಸಿನಿಮಾಗಳನ್ನು ತೆಗೆದುಹಾಕಿದೆ ಎಂದು ಸುದ್ದಿಯಾಗಿದೆ .

'ಅನೇಕ್' ಸಿನೆಮಾಕ್ಕೆ ನೀರಸ ಪ್ರತಿಕ್ರಿಯೆ
ಭಾರಿ ಸೋಲು ಕಂಡ ಧಾಕಡ್ ನಂತೆಯೇ ಮತ್ತೊಂದು ಬಾಲಿವುಡ್ ನ ಸಿನಿಮಾ ಚಿತ್ರಮಂದಿರದಲ್ಲಿ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ. ಹೌದು ಬಾಲಿವುಡ್ ನ ಇನ್ನೊಬ್ಬ ನಟ ಆಯುಷ್ಮಾನ್ ಖುರಾನಾ ಅವರ ಅಭಿನಯದ 'ಅನೇಕ್' ಚಿತ್ರವು ನಿನ್ನೆ ಎಂದರೆ ಶುಕ್ರವಾರ ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಈ ಚಿತ್ರವು ಬಿಡುಗಡೆ ಆದಾಗಿನಿಂದಲೂ ನೀರಸ ಪ್ರತಿಕ್ರಿಯೆ ಪಡೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ಆ್ಯಕ್ಷನ್ ಥ್ರಿಲ್ಲರ್ ಈಶಾನ್ಯ ಭಾರತದ ಕಥೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದ್ದು, ಅನುಭವ್ ಸಿನ್ಹಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಮೊದಲ ದಿನವೇ ಸಿನೆಮಾ ಮಂದಿರಗಳಲ್ಲಿ ಭರ್ತಿಯಾದ ಆಸನಗಳು ಶೇ.5 ರಿಂದ 7.5ಕ್ಕಿಂತಲೂ ಕಡಿಮೆಯಾಗಿತ್ತು ಎಂದು ಬಾಕ್ಸ್ ಆಫೀಸ್ ಇಂಡಿಯಾ ವರದಿ ಮಾಡಿದೆ. ಸಂಜೆ ವೇಳೆಗೆ ಚಲನಚಿತ್ರವು ಹೆಚ್ಚಿನ ಪ್ರೇಕ್ಷಕರನ್ನು ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.

ಚಿತ್ರಮಂದಿರಗಳಿಂದ ತೆಗೆದು ಹಾಕಿದ 'ಅನೇಕ್'
ಆದಾಗ್ಯೂ, ಕಡಿಮೆ ಪ್ರತಿಕ್ರಿಯೆಯ ನಂತರ, 'ಅನೇಕ್' ಚಿತ್ರವನ್ನು ಅನೇಕ ಚಿತ್ರಮಂದಿರಗಳಿಂದ ತೆಗೆದು ಹಾಕಲಾಯಿತು. 'ಅನೇಕ್' ಚಿತ್ರದ ಆರಂಭಿಕ ಪ್ರದರ್ಶನಗಳಲ್ಲಿ ಯಾವುದೇ ಪ್ರೇಕ್ಷಕರಿಲ್ಲದ ಕಾರಣ, ಹಲವಾರು ಚಿತ್ರಮಂದಿರಗಳು ಕೆಲವು ಪ್ರದರ್ಶನಗಳನ್ನು ರದ್ದುಗೊಳಿಸಬೇಕಾಯಿತು ಎಂದು ಫಿಲ್ಮ್ ಇನ್ಫಾರ್ಮೇಶನ್ ವರದಿ ಮಾಡಿದೆ. ಹಾಲಿವುಡ್ ಚಿತ್ರ 'ಟಾಪ್ ಗನ್: ಮೇವರಿಕ್' ಗುರುವಾರ ತೆರೆಗೆ ಬಂದಿದ್ದು, ಇದರ ಕಥೆಯು ಇದೇ ರೀತಿಯಾಗಿ ಆಗಿದೆ ಎಂದು ಹೇಳಲಾಗುತ್ತಿದೆ.

ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿರುವ ಭೂಲ್ ಭುಲೈಯಾ 2
ಈ ಪ್ರವೃತ್ತಿಯನ್ನು ಗಮನಿಸಿದರೆ, ಮಲ್ಟಿಪ್ಲೆಕ್ಸ್ ಗಳು ಮತ್ತು ಸಿಂಗಲ್ ಸ್ಕ್ರೀನ್ ಸಿನೆಮಾ ಮಂದಿರಗಳು ಮುಂದಿನ ದಿನಗಳಲ್ಲಿ ಇಂತಹ ಚಿತ್ರಗಳ ಪ್ರದರ್ಶನಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು ಎಂದು ತೋರುತ್ತದೆ. ಈ ಕ್ರಮವು ಪರೋಕ್ಷವಾಗಿ 'ಭೂಲ್ ಭುಲೈಯಾ 2' ಗೆ ಅನುಕೂಲಕರವೆಂದು ಸಾಬೀತು ಪಡಿಸಬಹುದು.

ಇದನ್ನೂ ಓದಿ:  Golden Star Ganesh: ಬಾನದಾರಿಯಲ್ಲಿ ಸಾಗುತ್ತಾರೆ ಗೋಲ್ಡನ್ ಸ್ಟಾರ್! ಈ ಬಾರಿ ಕ್ಲಿಕ್ ಆಗುತ್ತಾ ಗಣೇಶ್-ಪ್ರೀತಂ ಗುಬ್ಬಿ ಜೋಡಿ?

ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಹಾರರ್ ಹಾಸ್ಯವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ಈ ಚಿತ್ರವು ಪ್ರಸ್ತುತ ಒಟ್ಟು 90 ಕೋಟಿ ರೂಪಾಯಿಗಳನ್ನು ಸಂಪಾದಿಸಿದೆ ಮತ್ತು ಶೀಘ್ರದಲ್ಲಿಯೇ 100 ಕೋಟಿ ರೂಪಾಯಿ ಗಳಿಕೆಯ ಕ್ಲಬ್ ಗೆ ಪ್ರವೇಶಿಸುವ ನಿರೀಕ್ಷೆಯಿದೆ.

ಈಶಾನ್ಯ ಭಾರತದಲ್ಲಿನ ಸಾಮಾಜಿಕ-ರಾಜಕೀಯ ಸಂಘರ್ಷಗಳ ಮೇಲೆ ಬೆಳಕು ಚೆಲ್ಲಿದ ಸಿನೆಮಾ
ಚಲನಚಿತ್ರ ನಿರ್ಮಾಪಕ ಅನುಭವ್ ಸಿನ್ಹಾ ಅವರು ‘ಅನೇಕ್’ ಚಿತ್ರದ ಮೂಲಕ ಈಶಾನ್ಯ ಭಾರತದಲ್ಲಿನ ಸಾಮಾಜಿಕ-ರಾಜಕೀಯ ಸಂಘರ್ಷಗಳ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸಿದ್ದಾರೆ. ಮುಖ್ಯವಾಗಿ ಅಸ್ಸಾಂ ಮತ್ತು ಮೇಘಾಲಯದಲ್ಲಿ ಚಿತ್ರೀಕರಿಸಲಾದ ಈ ಚಿತ್ರದಲ್ಲಿ ನಟ ಆಯುಷ್ಮಾನ್ ಖುರಾನಾ ಅವರು ಈಶಾನ್ಯ ಪ್ರದೇಶದಲ್ಲಿ ಶಾಂತಿಯನ್ನು ಪುನಃಸ್ಥಾಪಿಸುವ ಕಾರ್ಯಾಚರಣೆಯಲ್ಲಿರುವ ರಹಸ್ಯ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಾಗಾಲ್ಯಾಂಡ್ ನ ರೂಪದರ್ಶಿಯಾದ ಆಂಡ್ರಿಯಾ ಕೆವಿಚುಸಾ ಸಹ ನಟಿಸಿದ್ದಾರೆ.

ಇದನ್ನೂ ಓದಿ: KGF Chapter 2: ರಾಕಿ ಭಾಯ್ ಪಾತ್ರದಿಂದ ಫುಲ್ ಫಿದಾ! ಫುಲ್ ಪ್ಯಾಕ್ ಸಿಗರೇಟ್ ಸೇದಿದ 15ರ ಹುಡುಗ ತೀವ್ರ ಅಸ್ವಸ್ಥ!

ಈ ಚಿತ್ರದಲ್ಲಿ ಆಂಡ್ರಿಯಾ ಈಶಾನ್ಯ ಭಾರತದ ಮಹತ್ವಾಕಾಂಕ್ಷೆಯ ಬಾಕ್ಸರ್ ಪಾತ್ರವನ್ನು ನಿರ್ವಹಿಸಿದ್ದಾರೆ. 'ಥಪ್ಪಡ್' ಮತ್ತು 'ಮುಲ್ಕ್' ನಂತಹ ಚಲನಚಿತ್ರಗಳನ್ನು ನಿರ್ಮಿಸಿರುವ ಅನುಭವ್ ಸಿನ್ಹಾ ಅವರು ದ್ವೇಷದ ಅಪರಾಧಗಳು, ತಾರತಮ್ಯ ಮತ್ತು ಜನಾಂಗೀಯ ನಿಂದನೆಗಳನ್ನು ಎದುರಿಸುತ್ತಿರುವ ಪ್ರದೇಶದ ಬಗ್ಗೆ ಹೇಳಬೇಕಾದ ಕಥೆಯನ್ನು ಹೇಳಲು ಇಲ್ಲಿಯೂ ಸಹ ಹಿಂಜರಿದಿಲ್ಲ ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: