Rocking Star Yash ಮುಂದಿನ ಸಿನಿಮಾ ಯಾವುದು? 'ಕೆಜಿಎಫ್‌ 2' 50ನೇ ದಿನದ ಬಳಿಕ ಸಿಗುತ್ತಾ ಉತ್ತರ?

ಏ.14 ಕ್ಕೆ ರಿಲೀಸ್ ಆದ ಕೆಜಿಎಫ್ 2 ಜೂನ್ 2 ಕ್ಕೆ ಭರ್ಜರಿಯಾಗಿ 50 ದಿನಗಳ ಕಂಪ್ಲೀಟ್ ಮಾಡಲಿದೆ. ಈ ಸಂಭ್ರಮದ ದಿನವೇ ಯಶ್ ತನ್ನ ಭಕ್ತಗಣಕ್ಕೆ ಮತ್ತೊಂದು ಸಂತಸದ ವಿಚಾರವನ್ನು ಯಶ್ ಕೊಡಲು ನಿರ್ಧಾರ ಮಾಡಿದ್ದು, ಜೂನ್ 2 ಕ್ಕೆ ಯಶ್ ತಮ್ಮ ಮುಂದಿನ ಚಿತ್ರವನ್ನು ಅನೌನ್ಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್

 • Share this:
  ಕೆಜಿಎಫ್ ಚಾಪ್ಟರ್ 2 (KGF Chapter 2) ಚಿತ್ರದ ನಂತ್ರ ರಾಕಿಂಗ್ ಸ್ಟಾರ್ ಯಶ್ (Rocking Star Yash) ನಡೆ ಏನು? ರಾಕಿಂಗ್ ಸ್ಟಾರ್ 19ನೇ ಸಿನಿಮಾ ಯಾವಾಗ ಅನೌನ್ಸ್ (Announce) ಆಗುತ್ತೆ.. ಆ ಚಿತ್ರಕ್ಕೆ ಸಾರಥಿ ಯಾರು? ಯಾವ ಅನ್ನದಾತನ ಜೊತೆ ರಾಕಿ ಸಿನಿಮಾ ಕೃಷಿ ಮಾಡ್ತಾರೆ? ಇಂತ ಹತ್ತು ಹಲವು ಪ್ರಶ್ನೆಗಳು ರಾಕಿಭಾಯ್ ಅಭಿಮಾನಿಗಳ (Fans) ಮನಸ್ಸಿನಲ್ಲಿ ಮೂಡಿದ್ದು, ಈಗ ಈ ಪ್ರಶ್ನೆಗಳಿಗೆ ಸೂಪರ್ ಡೂಪರ್ ಉತ್ತರ ಸಿಕ್ಕಿದೆ. ಕೆಜಿಎಫ್ ಚಾಪ್ಟರ್ 2 ಸಿನಿಮಾ ನಂತ್ರ ರಾಕಿಂಗ್ ಸ್ಟಾರ್ ಯಶ್ ಹವಾ ನಮ್ಮ ನುಡಿ ಮತ್ತು ಗಡಿ‌ ಎರಡನ್ನು ದಾಟಿ ನಿಂತಿದೆ.. ಅಲ್ಲದೆ ರಾಕಿ ಮುಂದಿನ ಚಿತ್ರ ಯಾವಾಗ ಅನೌನ್ಸ್ ಮಾಡ್ತಾರೆ ಅನ್ನೋ ಕುತೂಹಲ ಕರುನಾಡ ಮಂದಿಯಲ್ಲಿ ಮನೆ ಮಾಡಿದೆ. ಆದ್ರೆ ರಾಕಿ ನಡೆ ಮಾತ್ರ ಇನ್ನು ನಿಗೂಢವಾಗಿದೆ.

  ‘ಕೆಜಿಎಫ್‌ 2’ 50ನೇ ದಿನದ ಬಳಿಕ ಅನೌನ್ಸ್ ಆಗುತ್ತಾ ಹೊಸ ಫಿಲ್ಮ್?

  ಕೆಜಿಎಫ್ ರಿಲೀಸ್ ಆದಮೇಲೆ ಹೊಸ ಸಿನಿಮಾ ಅನೌನ್ಸ್ ಮಾಡ್ತಾರೆ ಅನ್ನೋ ಸುದ್ದಿ ಯಶ್ ಅಂಗಳದಿಂದಲೇ ಬಂದಿತ್ತು..ಅದ್ರೆ ಕೆಜಿಎಫ್ ರಿಲೀಸ್ ಆಗಿ 39ದಿನಗಳಾದ್ರು ಯಶ್ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿರಲಿಲ್ಲ..ಅದರೆ ಕೆಜಿಎಫ್ 2ಚಿತ್ರ 50 ದಿನಗಳ ಕಂಪ್ಲೀಟ್ ಮಾಡಿದ ದಿನ ಯಶ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಡೊದು ಪಕ್ಕಾ ಅಂತಿವೆ ಯಶ್ ಆಪ್ತ ಮೂಲಗಳು.

  ಅಳೆದು ತೂಗಿ ಚಿತ್ರ ಒಪ್ಪಿಕೊಳ್ಳುತ್ತಾರೆ ಯಶ್

  ಕಳೆದ ನಾಲ್ಕು ವರ್ಷಗಳಿಂದ ಕೆಜಿಎಫ್ ಚಿತ್ರಕ್ಕೆ ಯಶ್ ತಮ್ಮನ್ನ ಸಂಪೂರ್ಣವಾಗಿ ಅರ್ಪಿಸಿ ಕೊಂಡಿದ್ರು. ಅಲ್ಲದೆ ಯಶ್ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದ್ದು ಈಗ ಯಶ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯ ಕಿಂಗ್ ಆಗಿ ದರ್ಬಾರ್ ಮಾಡ್ತಿದ್ದಾರೆ..‌ ಜೊತೆಗೆ ತೆರೆ ಮರೆಯಲ್ಲೇರಾಕಿ ಮುಂದಿನ ಚಿತ್ರಕ್ಕೆ ಸಜ್ಜಾಗ್ತಿದ್ಧಾರೆ...ಖುಷಿಯ ವಿಚಾರ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಮುಂದಿನ ಚಿತ್ರವನ್ನು ಅನೌನ್ಸ್ ಮಾಡೊಕೆ ಮುಹೂರ್ತ ಫಿಕ್ಸ್ ಆಗಿದೆಯಂತೆ..ಕೆಜಿಎಫ್ ಚಾಪ್ಟರ್ 1 ಬಂದ ಮೇಲೆ ಮುಂದಿನ ಸಿನಿಮಾ ನಡೆ ಬಗ್ಗೆ ಪಕ್ಕಾ ಪ್ಕಾನ್ ಮಾಡಿರು ಯಶ್ ಈಗ  ಅಳೆದು ತೂಗಿ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ..

  ಇದನ್ನೂ ಓದಿ: Ravichandran: ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಅಡಿಪಾಯ ಹಾಕಿದ್ದೆ ನಾನು: ಕೆಜಿಎಫ್ ಯಶಸ್ಸಿನ ಬಗ್ಗೆ ರವಿಚಂದ್ರನ್ ಹೇಳಿಕೆ

   ಹೊಸ ಚಿತ್ರ ಘೋಷಣೆಗೆ ನಡೀತಿದ್ಯಾ ತಯಾರಿ?

  ಏ.14 ಕ್ಕೆ ರಿಲೀಸ್ ಆದ ಕೆಜಿಎಫ್ 2 ಜೂನ್ 2 ಕ್ಕೆ ಭರ್ಜರಿಯಾಗಿ 50 ದಿನಗಳ ಕಂಪ್ಲೀಟ್ ಮಾಡಲಿದೆ. ಈ ಸಂಭ್ರಮದ ದಿನವೇ ಯಶ್ ತನ್ನ ಭಕ್ತಗಣಕ್ಕೆ ಮತ್ತೊಂದು ಸಂತಸದ ವಿಚಾರವನ್ನು ಯಶ್ ಕೊಡಲು ನಿರ್ಧಾರ ಮಾಡಿದ್ದು, ಜೂನ್ 2 ಕ್ಕೆ ಯಶ್ ತಮ್ಮ ಮುಂದಿನ ಚಿತ್ರವನ್ನು ಅನೌನ್ಸ್ ಮಾಡಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಅಲ್ಲದೆ ಈಗಾಗಲೇ ಇದಕ್ಕೆ ಬೇಕಾದ ಎಲ್ಲಾ ತಯಾರಿ ತೆರೆಮರೆಯಲ್ಲೆ ನಡೆಯುತ್ತಿದೆ ಎಂಬ ವಿಚಾರ ಯಶ್ ಬಳಗದಿಂದ ಬಂದಿದೆ.

  ಜೂನ್ 2ರಂದು ಅನೌನ್ಸ್ ಮಾಡುವ ಸಾಧ್ಯತೆ

  KGF 2 ಚಿತ್ರ 50 ದಿಗಳ ಕಂಪ್ಲೀಟ್ ಮಾಡಿದ ಶುಭ ದಿನವಾದ ಜೂನ್ 2 ರಂದು ಯಶ್ 19 ನೇ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗೋದು ಪಕ್ಕಾ ಆಗಿದೆ. ಅದ್ರೆ ಈ ಚಿತ್ರಕ್ಕೆ ನಿರ್ದೇಶಕ ಯಾರು? ನಿರ್ಮಾಪಕ ಯಾರು ಅಂತ ಕೇಳಿದ್ರೆ ಅದಕ್ಕೆ ಉತ್ತರ ಕೆವಿಎನ್ ಪ್ರೊಡಕ್ಷನ್ ಹೌಸ್ ನಲ್ಲಿ ನರ್ತನ್ ನಿರ್ದೇಶನದಲ್ಲಿ ಯಶ್ ಮುಂದಿನ ಚಿತ್ರ ಮೂಡಿ ಬರಲಿದ್ಯಂತೆ.

  ಇದನ್ನೂ ಓದಿ: Prashanth Neel: ಅಭಿಮಾನಿಗಳ ತಲೆಗೆ ಹುಳ ಬಿಟ್ಟ ಪ್ರಶಾಂತ್ ನೀಲ್, 3 ಚಿತ್ರಗಳ ಫೋಟೋ ಹಂಚಿಕೊಂಡ ಸ್ಟಾರ್ ಡೈರೆಕ್ಟರ್

  ರಾಕಿಂಗ್ ಸ್ಟಾರ್ ಯಶ್ ಕನ್ನಡದ ಕೆವಿಎನ್ ಸಂಸ್ಥೆಯ ಜೊತೆ ಮುಂದಿನ‌ ಸಿನಿಮಾ ಮಾಡೊದು ಪಕ್ಕಾ ಅಗಿದೆ..ಜೊತೆಗೆ ಈ ಚಿತ್ರಕ್ಕೆ ನರ್ತನ್ ಡೈರೆಕ್ಷನ್ ಮಾಡ್ತಾರೆ..ಇನ್ನು ಯಶ್ ನರ್ತನ್ ಜೊತೆ ಸಿನಿಮಾ ಮಾಡ್ತಾರೆ ಅನ್ನೋ ವಿಚಾರವನ್ನು ಕಳೆದ ಮೇ 5 ರಂದು ನ್ಯೂಸ್ 18 ಸುದ್ದಿ ಮಾಡಿತ್ತು..ಈಗ ಈ ಸುದ್ದಿ ಪಕ್ಕಾ ಆಗಿದ್ದು..ಜೂನ್ 2 ರಂದು ನರ್ತನ್ ನಿರ್ದೇಶನದ, ಕೆವಿಎನ್ ನಿರ್ಮಾಣದ ಯಶ್ ಅಭಿನಯದ 19 ಚಿತ್ರ ಅನೌನ್ಸ್ ಆಗೋದು ಪಕ್ಕಾ ಆಗಿದೆ.

  (ವರದಿ: ಸತೀಶ್ ಬಿ.ಎಂ.)
  Published by:Annappa Achari
  First published: