ಸ್ಯಾಂಡಲ್ವುಡ್ ಮಾದಕ ವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿದ್ದ ನಟಿ ರಾಗಿಣಿ ದ್ವಿವೇದಿಗೆ ಇತ್ತೀಚೆಗಷ್ಟೆ ಸುಪ್ರೀಂಕೋರ್ಟ್ನಿಂದ ಜಾಮೀನು ಪಡೆದು ಮನೆಗೆ ಮರಳಿದ್ದಾರೆ. ಕಾಟನ್ ಪೇಟೆ ಡ್ರಗ್ಸ್ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದ ರಾಗಿಣಿ 140ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿದ್ದರು.ಕಳೆದ ಸೆ.4 ರಂದು ನಟಿ ರಾಗಿಣಿ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಅಂದೇ ನಟಿಯನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಸೆ. 14ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದರು. ನಂತರ ಸೆ. 15ರಂದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿತ್ತು. ಸೆ. 29 ರಂದು ನಟಿ ರಾಗಿಣಿ ಜಾಮೀನು ಕೋರಿ ಅರ್ಜಿ ಸಲ್ಲಿದ್ದರು. ಆದರೆ ಜಾಮೀನು ಮಂಜೂರು ಆಗಲಿಲ್ಲ. ಅಲ್ಲಿಂದ ಜಾಮೀನಿಗಾಗಿ ರಾಗಿಣಿ ಪ್ರತ್ನಿಸಿದರೂ ಯಾವ ಪ್ರಯೋಜನ ಆಗಿರಲಿಲ್ಲ. ಹೈಕೋರ್ಟ್ನಿಂದ ಜಾಮೀನು ಅರ್ಜಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂಕೋರ್ಟಿನಲ್ಲಿ ಜಾಮೀನು ಸಿಕ್ಕ ನಂತರ ಜೈಲಿನಿಂದ ಹೊರ ಬಂದ ನಟಿ ಸಾಮಾಜಿಕ ಜಾಲತಾಣದಿಂದ ಕೆಲ ಸಮಯ ದೂರ ಇದ್ದರು. ಈಗ ನಟಿ ರಾಗಿಣಿ ಸಹಜ ಜೀವನದತ್ತ ಮರಳುತ್ತಿದ್ದಾರೆ.
ಹೌದು, ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಪೋಸ್ಟ್ ಮಾಡಿದ್ದ ರಾಗಿಣಿ ನಿನ್ನೆಯಿಂದ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ತಮ್ಮ ಲೆಟೆಸ್ಟ್ ಫೋಟೋಗಳ ಜೊತೆಗೆ ಅಪ್ಪನಿಗೆ ಅಡುಗೆ ಮಾಡಿಕೊಟ್ಟ ವಿಡಿಯೋಗಳನ್ನೂ ಹಂಚಿಕೊಂಡಿದ್ದಾರೆ. ಮಗಳು ಮಾಡಿದ ರುಚಿಯಾದ ಅಡುಗೆಯನ್ನು ರಾಗಿಣಿ ಅವರ ತಂದೆ ಖುಷಿಯಿಂದ ಸವಿಯುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಹೊಸ ವರ್ಷ ಅಂದರೆ 2021ರಲ್ಲಿ ಈಗಾಗಲೇ 35 ದಿನಗಳು ಕಳೆದಿವೆ. ನನಗೆ ಪ್ರೀತಿ ಸಿಗುತ್ತಿದೆ. ನಾನು ಇಲ್ಲಿರಲು ಒಂದು ಕಾರಣ ಇದೆ. ನನ್ನ ಸುತ್ತಲೂ ಇರುವವರಿಗೆ ಒಳ್ಳೆಯದನ್ನು ಮಾಡಲು ನಾನು ಇಲ್ಲಿದ್ದೇನೆ. ದೇವರು ನನಗಾಗಿ ತುಂಬಾ ಒಳ್ಳೆಯದನ್ನೇ ಪ್ಲಾನ್ ಮಾಡಿದ್ದಾನೆ ಎಂದು ಪಾಸಿಟೀವ್ ಆಗಿ ಇನ್ಸ್ಟಾಗ್ರಾಂನ ಸ್ಟೋರೀಸ್ನಲ್ಲಿ ಬರೆದುಕೊಂಡಿದ್ದಾರೆ ರಾಗಿಣಿ.
ರಾಗಿಣಿ ಮನೆಗೆ ಮರಳಿದ ನಂತರ ಅವರ ಬಗ್ಗೆ ಯಾವುದೇ ಅಪ್ಡೇಟ್ ಇರಲಿಲ್ಲ. ಆದರೆ ಈಗ ಖುದ್ದು ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಕುಟುಂಬದೊಂದಿಗೆ ಹೇಗೆ ಕಾಲ ಕಳೆಯುತ್ತಿದ್ದೇವೆ ಎಂದು ಪೋಸ್ಟ್ ಮಾಡುತ್ತಿದ್ದಾರೆ. ರಾಗಿಣಿ ಮಾಡಿರುವ ಪೋಸ್ಟ್ಗಳಿಗೆ ನೆಟ್ಟಿಗರಲ್ಲಿ ಕೆಲವರು ಟೀಕಿಸಿದರೆ, ಮತ್ತೆ ಕೆಲವು ಇನ್ನು ಮುಂದೆ ಎಲ್ಲವೂ ಒಳ್ಳೆಯದಾಗಲಿ ಎಂದು ಹಾರೈಸುತ್ತಿದ್ದಾರೆ.
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ