Dr. K.Sudhakar: ಬಿಎಸ್‌ವೈ ಆಯ್ತು, ಈಗ ಡಾ. ಕೆ.ಸುಧಾಕರ್ ಸರದಿ; ಸಿನಿಮಾದಲ್ಲಿ ಬಣ್ಣ ಹಚ್ಚಿದ ಆರೋಗ್ಯ ಸಚಿವ!

ರಾಜ್ಯ ಸಚಿವ ಸಂಪುಟದ ಕೆಲ ಸಚಿವರು, ಹಲವು ಬಿಜೆಪಿ ನಾಯಕರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B.S. Yediyurappa) ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Health Minister Dr. K.Sudhakar) ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಚಿವ ಸುಧಾಕರ್

ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಚಿವ ಸುಧಾಕರ್

  • Share this:
ಬೆಂಗಳೂರು: ರಾಜಕಾರಣಕ್ಕೂ (Politics), ಸಿನಿಮಾಗಳಿಗೂ (Cinema) ಇರುವ ನಂಟು ಹೊಸದೇನಲ್ಲ. ಈ ಹಿಂದೆ ಅನೇಕ ರಾಜಕಾರಣಿಗಳು (Politicians) ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕೆಲವು ಸಿನಿಮಾ ನಟ (Hero), ನಟಿಯರು (Heroine), ಪೋಷಕ ನಟರು, ನಿರ್ಮಾಪಕ, ನಿರ್ದೇಶಕರು ರಾಜಕೀಯಕ್ಕೂ ಎಂಟ್ರಿ ಕೊಟ್ಟು, ಸೈ ಎನಿಸಿಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ (Ramakrishna Hegade) ಹಿಂದೆ ‘ಮರಣ ಮೃದಂಗ ‘ಎಂಬ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ (Guest Role) ಬಣ್ಣ ಹಚ್ಚಿದ್ದರು. ಅನಂತ್‌ನಾಗ್, ಮುಖ್ಯಮಂತ್ರಿ ಚಂದ್ರು, ಸಂದೇಶ್ ನಾಗರಾಜ್, ಉಮಾಶ್ರೀ, ಬಿ.ಸಿ. ಪಾಟೀಲ್, ಯೋಗೇಶ್ವರ್, ತಾರಾ, ಶ್ರುತಿ, ಮಾಳವಿಕಾ, ಜಗ್ಗೇಶ್, ಶಶಿಕುಮಾರ್, ಕುಮಾರ್ ಬಂಗಾರಪ್ಪ, ಜಯಮಾಲಾ.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದೀಗ ರಾಜ್ಯ ಸಚಿವ ಸಂಪುಟದ ಕೆಲ ಸಚಿವರು, ಹಲವು ಬಿಜೆಪಿ ನಾಯಕರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (B.S. Yediyurappa) ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಇದೀಗ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Health Minister Dr. K.Sudhakar) ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಸಿನಿಮಾದಲ್ಲಿ ಬಣ್ಣ ಹಚ್ಚಿದ ಡಾ. ಕೆ. ಸುಧಾಕರ್

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನೈಜ ಘಟನೆ ಆಧಾರಿತ ತನುಜಾ ಎಂಬ ಸಿನಿಮಾದಲ್ಲಿ ಸುಧಾಕರ್ ಬಣ್ಣ ಹಚ್ಚಿದ್ದಾರೆ. ನ್ನು ಈ ಚಿತ್ರಕ್ಕೆ ರಾಜ್ಯಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿಯವರ ನಿರ್ದೇಶನವಿದ್ದು, Beyond Visions Cinemas ಬಂಡವಾಳ ಹೂಡಿದೆ. ಈ ಚಿತ್ರವು ಶಿವಮೊಗ್ಗ ಸುತ್ತ ಮತ್ತ ಹಾಗೂ ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ. ಇದರಲ್ಲಿ ಸುಧಾಕರ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ತಮ್ಮ ಪಾತ್ರಕ್ಕೆ ತಾವೇ ಡಬ್ಬಿಂಗ್ ಮಾಡಿದ ಸುಧಾಕರ್

ಡಾ. ಕೆ. ಸುಧಾಕರ್ ಇದರಲ್ಲೂ ಸಚಿವರಾಗಿಯೇ ಅಭಿನಯಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದು ವಿಶೇಷವಾಗಿದ್ದು ಒಂದೇ ಟೇಕಿಗೆ ತಮ್ಮ ಭಾಗದ ಚಿತ್ರೀಕರಣ ಮುಗಿಸಿದ್ದು ಚಿತ್ರತಂಡದವರಿಗೆ ಖುಷಿ ಕೊಟ್ಟಿದೆಯಂತೆ.

ಇದನ್ನೂ ಓದಿ: Anubhava Mantapa: ಮೂರು ವರ್ಷದೊಳಗೆ ಅನುಭವ ಮಂಟಪ ಕಾಮಗಾರಿ ಪೂರ್ಣಕ್ಕೆ ಸಿಎಂ ಸೂಚನೆ

ಈ ಹಿಂದೆ ಸಿಎಂ ಪಾತ್ರದಲ್ಲಿ ನಟಿಸಿದ್ದ ಬಿಎಸ್‌ವೈ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಇದೇ ಸಿನಿಮಾದಲ್ಲಿ ನಟಿಸಿದ್ದರು. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಮತ್ತಿತರ ಪ್ರಮುಖರು ಕೂಡ ಇದೇ ಸಿನಿಮಾದಲ್ಲಿ ನಟಿಸಿದ್ದಾರೆ.

ಏನಿದು ‘ತನುಜಾ’ ಸಿನಿಮಾದ ಕಥೆ?

ಈ ಹಿಂದೆ ತನುಜಾ ಎನ್ನುವ ಹೆಣ್ಣುಮಗಳು ಕೋವಿಡ್ ಸಂದರ್ಭದಲ್ಲಿ ಪರೀಕ್ಷೆ ಬರೆಯಲಾಗದೇ ಸಹಾಯ ಕೋರಿದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಸಚಿವ ಡಾ.ಕೆ ಸುಧಾಕರ್, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಪ್ರದೀಪ್ ಈಶ್ವರ್ ಇನ್ನಿತರ ಸಹಾಯದಿಂದ ಪರೀಕ್ಷೆ ಬರೆದು ವೈದ್ಯಕೀಯ ಸೀಟು ಪಡೆದಿದ್ದು, ಎಲ್ಲರ ಹುಬ್ಬೇರಿಸಿತ್ತು. ಇದೇ ಕಥೆಯನ್ನು ಇಟ್ಟುಕೊಂಡು ತನುಜಾ ಎಂಬ ಹೆಸರಿನ ಸಿನಿಮಾ ಮಾಡಲಾಗುತ್ತಿದೆ.

ಇದನ್ನೂ ಓದಿ: Education Department: ಇನ್ಮುಂದೆ ಶಿಕ್ಷಕರು ಮಕ್ಕಳಿಗೆ Home Work ಕೊಡುವಂತಿಲ್ಲ! ಹೋಮ್ ವರ್ಕ್​ಗೆ ಬೀಳಲಿದೆ ಬ್ರೇಕ್?

ಮತ್ತೊಂದೆಡೆ ಗರಡಿಯಲ್ಲಿ ಬ್ಯುಸಿಯಾದ ಬಿ.ಸಿ. ಪಾಟೀಲ್

ಬಸವರಾಜ ಬೊಮ್ಮಾಯಿ ಸಂಪುಟದ ಇನ್ನೊಬ್ಬ ಸಚಿವರಾದ ಬಿ.ಸಿ. ಪಾಟೀಲ್ ಕೂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್‌ ಭಟ್ ನಿರ್ದೇಶನದ ಗರಡಿ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್ ನಟಿಸುತ್ತಿದ್ದಾರೆ. ಸಿನಿಮಾ ರಂಗದಿಂದಲೇ ಬಂದಿದ್ದ ಬಿ.ಸಿ. ಪಾಟೀಲ್‌ಗೆ ನಟನೆ ಹೊಸದೇನೂ ಅಲ್ಲ, ಆದರೆ ಸಚಿವರಾದ ಬಳಿಕ  ಇದೇ ಮೊದಲ ಬಾರಿಗೆ ಕೌರವ ಮತ್ತೆ ಬಣ್ಣ ಹಚ್ಚಿದ್ದಾರೆ.
Published by:Annappa Achari
First published: