ಬಾಹುಬಲಿಯ ಶಿವಗಾಮಿ ರಮ್ಯಾಕೃಷ್ಣ ಈಗ ಹೊಸ ಅವತಾರದಲ್ಲಿ..!

news18
Updated:September 1, 2018, 5:49 PM IST
ಬಾಹುಬಲಿಯ ಶಿವಗಾಮಿ ರಮ್ಯಾಕೃಷ್ಣ ಈಗ ಹೊಸ ಅವತಾರದಲ್ಲಿ..!
news18
Updated: September 1, 2018, 5:49 PM IST
ನ್ಯೂಸ್​ 18 ಕನ್ನಡ

'ಬಾಹುಬಲಿ' ಸಿನಿಮಾದಲ್ಲಿ ಶಿವಗಾಮಿಯಾಗಿ ಮಿಂಚಿದ್ದ ರಮ್ಯಾಕೃಷ್ಣ ಈಗ ಏನು ಮಾಡುತ್ತಿದ್ದಾರೆ ಅನ್ನೊ ಕುತೂಹಲ ಸಾಕಷ್ಟು ಜನರಿಗಿದೆ. ಅಭಿನಯದಲ್ಲಿ ಯಾವ ನಟರಿಗೂ ಹೋಲಿಸದಷ್ಟು ಚೆನ್ನಾಗಿ ನಟನೆ ಮಾಡುವ ರಮ್ಯಾ ಅವರಿಗೆ ಅವರೇ ಸಾಟಿ.

ಇಂತಹ ನಟಿ ಶಿವಗಾಮಿಯಾಗಿ ತೆರೆ ಮೇಲೆ ಬೆಂಕಿ ಹಚ್ಚಿದ ನಂತರ ಈಗ ಮತ್ತೊಂದು ಹೊಸ ಅವತಾರದಲ್ಲಿ ನಿಮ್ಮ ಮುಂದೆ ಬರಲಿದ್ದಾರೆ. ಟಾಲಿವುಡ್ ನಟ ನಾಗಚೈತನ್ಯ ಅಭಿನಯದ ಈಗ 'ಶೈಲಜಾ ರೆಡ್ಡಿ ಅಲ್ಲುಡು' ಸಿನಿಮಾದಲ್ಲಿ ಮಾಡರ್ನ್​ ಅತ್ತೆಯ ಅವತಾರದಲ್ಲಿ ಚಿತ್ರರಸಿಕರ ಮುಂದೆ ಬರೋಕೆ ಸಜ್ಜಾಗಿದ್ದಾರೆ.

ನಾಗಚೈತನ್ಯಗೆ ಅತ್ತೆಯಾಗಿ ರಮ್ಯಾ ಅಭಿನಯಿಸುತ್ತಿರುವ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.


ಅಲ್ಲದೆ ಯೂಟ್ಯೂಬ್‍ನಲ್ಲಿ ಟ್ರೆಂಡಿಂಗ್‍ನಲ್ಲಿರೋ ಈ ಟ್ರೇಲರ್​ನಲ್ಲಿ ರಮ್ಯಾಕೃಷ್ಣ, ನಾಯಕಿಗೆ ಸ್ಪರ್ಧೆ ನೀಡುವಷ್ಟು ಯಂಗ್​ ಆಗಿ ಕಾಣಿಸಿಕೊಂಡಿದ್ದಾರೆ.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ