• Home
  • »
  • News
  • »
  • entertainment
  • »
  • Rajeev Sen-Charu Asopa: ಮನೆಯಲ್ಲಿ ಸಿಸಿಟಿವಿ! ಹೆಂಡ್ತಿ ಮೇಲೆ ವಿಪರೀತ ಸಂಶಯ, ಸುಶ್ಮಿತಾ ಸಹೋದರನ ವಿರುದ್ಧ ಆರೋಪ

Rajeev Sen-Charu Asopa: ಮನೆಯಲ್ಲಿ ಸಿಸಿಟಿವಿ! ಹೆಂಡ್ತಿ ಮೇಲೆ ವಿಪರೀತ ಸಂಶಯ, ಸುಶ್ಮಿತಾ ಸಹೋದರನ ವಿರುದ್ಧ ಆರೋಪ

ರಾಜೀವ್ ಸೇನ್-ಚಾರು ಅಸೋಪ

ರಾಜೀವ್ ಸೇನ್-ಚಾರು ಅಸೋಪ

ನಟಿ ಸುಶ್ಮಿತಾ ಸೇನ್ ಅವರ ಸಹೋದರ ಪತ್ನಿ ಮೇಲೆ ಸಂಶಯ ಪಡುತ್ತಿದ್ದರಾ? ಮನೆಯಲ್ಲಿತ್ತು ಸಿಸಿಟಿವಿ, ಪತ್ನಿ ಒಬ್ಬಳೇ ಇದ್ದಾಗ ಕಣ್ಗಾವಲು!

  • Trending Desk
  • Last Updated :
  • Bangalore, India
  • Share this:

ಕೆಲವು ತಿಂಗಳುಗಳಿಂದ ಬಾಲಿವುಡ್ ನಟಿ (Bollywood actress) ಸುಶ್ಮಿತಾ ಸೇನ್  (Sushmita Sen) ಅವರ ಸಹೋದರ ರಾಜೀವ್ ಸೇನ್ (Rajeev Sen) ಮತ್ತು ಕಿರುತೆರೆ ನಟಿ ಚಾರು ಅಸೋಪಾ (Charu Asopa) ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇವರ ಮೂರು ವರ್ಷದ ಮದುವೆ (Marriage) ಮುರಿದು ಬೀಳುವ ಹಂತದಲ್ಲಿದೆ. ಈಗಾಗಲೇ ನಟಿ ಚಾರು ಅವರು ಅನೇಕ ಬಾರಿ ತಮ್ಮ ದಾಂಪತ್ಯ ಟ್ರಸ್ಟ್ ಇಶ್ಯೂಗಳನ್ನು ಎದುರಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ. ನಟಿ ಚಾರು ಈಗ ಅಂತಿಮವಾಗಿ ರಾಜೀವ್ ಅವರಿಂದ ಬೇರ್ಪಡಲು ನಿರ್ಧರಿಸಿದ್ದಾರೆ. ಅವರು ತನಗೆ ಮೋಸ ಮಾಡಿದ್ದಾರೆ ಎಂದು ಸಹ ಆರೋಪಿಸಿದ್ದಾರೆ.


ಇತ್ತೀಚಿನ ಸಂದರ್ಶನದಲ್ಲಿ ಚಾರು ಏನ್ ಹೇಳಿದ್ರು ?


ಹೊಸ ಸಂದರ್ಶನವೊಂದರಲ್ಲಿ, ಚಾರು ಅವರು ಗರ್ಭಿಣಿಯಾಗಿದ್ದಾಗ ರಾಜೀವ್ ಅವರು ಸರಿಯಾಗಿ ಮನೆಗೆ ಬರುತ್ತಿರಲಿಲ್ಲ ಎಂದು ಹೇಳಿದರು. ನವೆಂಬರ್ 1 ರಂದು ತನ್ನ ಮೊದಲ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಜಿಯಾನಾಗೆ ತಾನು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ನಿನ್ನ ಜೊತೆ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Sushmita Sen-Charu Asopa: ದಾಂಪತ್ಯ ಕಲಹ! ತಮ್ಮನ ಹೆಂಡ್ತಿಗೆ ನಟಿ ಸುಶ್ಮಿತಾ ಸೇನ್ ಕೊಟ್ಟ ಸಲಹೆ ಇದು


ಇತ್ತೀಚೆಗೆ, ಜಿಯಾನಾಗೆ ಡೆಂಗ್ಯೂ ಬಂದಾಗ ಆಕೆಯನ್ನು ರಾಜಸ್ಥಾನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜೀವ್ ಅಲ್ಲಿಗೂ ಸಹ ಎರಡು ದಿನ ತಡವಾಗಿ ಬಂದರು. ನಂತರ ತಮ್ಮ ಹೆಚ್ಚಿನ ಸಮಯವನ್ನು ಹೋಟೆಲ್ ನಲ್ಲಿಯೇ ಕಳೆದರು ಎಂದು ಚಾರು ಹೇಳಿದರು.


ತನ್ನ ಗರ್ಭಾವಸ್ಥೆಯಲ್ಲಿ ಸಹ ರಾಜೀವ್ ಬಂದಿರಲಿಲ್ಲ. ಅವಳ ಬಗ್ಗೆ ಯಾವುದೇ ಲಕ್ಷ್ಯ ವಹಿಸಲಿಲ್ಲ ಎಂದು ಚಾರು ಪಿಂಕ್ ವಿಲ್ಲಾಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.


ಗರ್ಭಿಣಿಯಾಗಿದ್ದಾಗಲೂ ಕಾಳಜಿ ವಹಿಸಿರಲಿಲ್ಲ ರಾಜೀವ್


ನಾನು ಎಂಟು ತಿಂಗಳ ಗರ್ಭಿಣಿಯಾಗಿದ್ದಾಗ, ನನಗೆ ಹೇಗನಿಸುತ್ತಿದೆ ಎಂದು ಅವರು ಒಮ್ಮೆಯೂ ನನ್ನನ್ನು ಕೇಳಲಿಲ್ಲ. ಬದಲಾಗಿ, ಟೈಗರ್ ಶ್ರಾಫ್ ಮತ್ತು ರಣವೀರ್ ಸಿಂಗ್ ಅವರನ್ನು ಜಿಮ್ ನಲ್ಲಿ ಭೇಟಿಯಾದ ಬಗ್ಗೆ ಅವರು ಕೊಚ್ಚಿಕೊಳ್ಳುತ್ತಿದ್ದರು. ನನ್ನ ದಿನ ಹೇಗಿತ್ತು ಎಂದು ಅವರು ಎಂದಿಗೂ ಕೇಳಲಿಲ್ಲ. ಒಬ್ಬ ಮಹಿಳೆ ಗರ್ಭಿಣಿಯಾಗಿದ್ದಾಗ ಅವಳು ಅನೇಕ ರೀತಿಯ ಭಾವನೆಗಳನ್ನು ಅನುಭವಿಸುತ್ತಾಳೆ. ಅವನ ಮನಸ್ಥಿತಿ ಬೇರೆಯೇ ಆಗಿದೆ. ಅವನು ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯುತ್ತಾನೆ ಎಂದು ಭಾವಿಸಿ ನಾನು ಏನನ್ನೂ ಹೇಳುತ್ತಿರಲಿಲ್ಲ ಎಂದು ಹೇಳಿದರು.


ಸಿಸಿಟಿವಿ ಕ್ಯಾಮೆರಾಗಳನ್ನು ಸ್ವಿಚ್ ಆಫ್ ಮಾಡುತ್ತಿದ್ದರಂತೆ ರಾಜೀವ್


ಈ ಹಿಂದೆ ರಾಜೀವ್ ಮೇಲೆ ದಾಂಪತ್ಯ ದ್ರೋಹದ ಆರೋಪ ಹೊರಿಸಿದ ನಂತರ, ರಾಜೀವ್ ಅವರು ಮನೆಯಲ್ಲಿದ್ದಾಗ ಸಿಸಿಟಿವಿ ಕ್ಯಾಮೆರಾಗಳನ್ನು ಸ್ವಿಚ್ ಆಫ್ ಮಾಡುತ್ತಿದ್ದರು ಎಂದು ಚಾರು ಹೇಳಿದರು. ನನ್ನ ಗರ್ಭಾವಸ್ಥೆಯ ಮೊದಲ ಕೆಲವು ತಿಂಗಳುಗಳಲ್ಲಿ, ನಾನು ಬಿಕಾನೇರ್ ನಲ್ಲಿದ್ದೆ, ಇಲ್ಲದಿದ್ದರೆ ನಾನು ಎಲ್ಲಿಗಾದರೂ ಹೋದರೆ, ಅವರು ಯಾವಾಗಲೂ ಮನೆಯ ಕ್ಯಾಮೆರಾಗಳನ್ನು ಆಫ್ ಮಾಡುತ್ತಿದ್ದರು. ಈ ರೀತಿ ಮಾಡಲು ಕಾರಣವೇನು ಎಂದು ನಾನು ಅವರನ್ನು ಕೇಳಿದಾಗ 'ನೀವು ಬಿಗ್‌ಬಾಸ್ ನಂತೆ ಮನೆಯಲ್ಲಿ ಗೂಢಚರ್ಯೆ ಮಾಡಲು ಬಯಸುತ್ತೀರಿ' ಎಂದು ಅವರು ಹಾರಿಕೆ ಉತ್ತರ ಕೊಟ್ಟರು. ಇದು ನಾನು ಹೆಚ್ಚು ಗಮನ ಹರಿಸದ ಸಣ್ಣ ವಿಷಯಗಳಲ್ಲಿ ಒಂದಾಗಿದೆ. ಜಿಮ್ ಅಂತ ಹೇಳಿ ಅನೇಕ ಬಾರಿ ಅವರು ತಮ್ಮ ಇಡೀ ದಿನವನ್ನು ಹೊರಗೆ ಕಳೆಯುತ್ತಿದ್ದರು" ಎಂದು ಚಾರು ಅದೇ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Varun Dhawan-Vestibular Hypofunction: ದೇಹದ ಬ್ಯಾಲೆನ್ಸ್ ತಪ್ಪಿಸೋ ರೋಗ! ವರುಣ್ ಧವನ್ ಆರೋಗ್ಯ ಸಮಸ್ಯೆ ಏನು?


2019 ರಲ್ಲಿ ಮದುವೆಯಾದ ನಂತರ, ರಾಜೀವ್ ಮತ್ತು ಚಾರು ತಮ್ಮ ಮದುವೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದರು. ಪ್ರತ್ಯೇಕತೆಯ ಮಾತುಕತೆಯ ನಡುವೆ. ದಂಪತಿ 2021 ರಲ್ಲಿ ಜಿಯಾನಾ ಅವರನ್ನು ಸ್ವಾಗತಿಸಿದರು. ಇದು ಚಾರುವಿನ ಎರಡನೇ ಮದುವೆಯಾಗಿದೆ. ರಾಜೀವ್ ಚಾರು ಅವರು ತಮ್ಮಮೊದಲ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಅವಳನ್ನು ದೂಷಿಸಿದ್ದರೆ, ಚಾರು, ರಾಜೀವ್ ತನಗೆ ಮೋಸ ಮಾಡುತ್ತಿದ್ದಾನೆ ಎಂದು ಹೇಳಿದ್ದಾರೆ.

Published by:Divya D
First published: