ಇಂದಿನಿಂದ ಬಾಗಿಲು ತೆರೆದ ಚಿತ್ರಮಂದಿರಗಳು: ಊಹಿಸಿದಷ್ಟು ಸಂಖ್ಯೆಯಲ್ಲಿ ಬಾರದ ಪ್ರೇಕ್ಷಕರು..!

ಕೆಲ ಚಿತ್ರಮಂದಿರಗಳಲ್ಲಿ ಇಂದೇ ಸಿನಿಮಾ ರಿಲೀಸ್ ಆದರೆ, ಮತ್ತೆ ಕೆಲವು ನಾಳೆಯಿಂದ ಆರಂಭವಾಗುತ್ತಿವೆ. ಎಸ್ ಪಿ ರಸ್ತೆಯಲ್ಲಿರುವ ಶಾರದ ಥಿಯೇಟರ್​ನಲ್ಲಿ ಕಾಣದಂತೆ ಮಾಯವಾದನು ಸಿನಿಮಾ ತೆರೆಗೆ ಬಂದಿದೆ. ಬೆಳಗ್ಗೆ 10.15ಕ್ಕೆ ಹಾಗೂ ಮಧ್ಯಾಹ್ನ 1.15ಕ್ಕೆ ಇವತ್ತು ಎರಡು ಶೋಗಳಿವೆ. ಇಲ್ಲಿ ಆನ್​ಲೈನ್​ನಲ್ಲಿ ಕೇವಲ 9 ಟಿಕೆಟ್​ಗಳು ಮಾತ್ರ ಮಾರಾಟವಾಗಿವೆಯಂತೆ. ಇವತ್ತು ಪ್ರೇಕ್ಷಕರು ಎಷ್ಟು ಮಂದಿ ಬರುತ್ತಾರೆ ಎನ್ನುವುದನ್ನು ನೋಡಿಕೊಂಡು, ಮುಂದಿನ ದಿನಗಳಲ್ಲಿ ಶೋಗಳನ್ನು ಹೆಚ್ಚಿಸುವ ನಿರೀಕ್ಷೆ ಇದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ ಭೀತಿಯಿಂದಾಗಿ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್​ಗಳು ಬಾಗಿಲು ತೆರೆದಿವೆ. ಏಳು ತಿಂಗಳ ನಂತರ ಅಂದರೆ, ಇಂದಿನಿಂದ ಸಿನಿಮಾ ಪ್ರದರ್ಶನ ಆರಂಭವಾಗಿದೆ. ಮಾರ್ಚ್ 14ರಿಂದ ಮುಚ್ಚಿದ್ದ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್ ಅಕ್ಟೋಬರ್-15ರಿಂದ ಮತ್ತೆ ಆರಂಭವಾಗಿವೆ. ಕಳೆದ ಕೆಲವು ದಿನಗಳಿಂದ ಚಿತ್ರಮಂದಿರಗಳನ್ನು ಸಿನಿಮಾ ಪ್ರದರ್ಶನಕ್ಕಾಗಿ ಸಜ್ಜುಗೊಳಿಸಲಾಗುತ್ತಿತ್ತು. ಚಿತ್ರಮಂದಿರಗಳು ತೆರೆಯುತ್ತಿದ್ದಂತೆಯೇ ಈ ಹಿಂದೆ ಕೊರೋನಾ ಲಾಕ್​ಡೌನ್​ ವೇಳೆ ರಿಲೀಸ್​ ಆಗಿದ್ದ ಸಿನಿಮಾಗಳನ್ನೇ ಮತ್ತೆ ರಿರಿಲೀಸ್ ಮಾಡಲಾಗುತ್ತಿದೆ. ಹಳೇ ಕಟೌಟ್​ಗಳನ್ನು ತೆಗೆದು ಹೊಸ ಕಟೌಟ್​ಗಳನ್ನು ನಿಲ್ಲಿಸಲಾಗುತ್ತಿದೆ. ಇನ್ನು ಸಿನಿಮಾ ಪ್ರದರ್ಶನದ ವೇಳೆ ಪಾಲಿಸಬೇಕಾದ ನಿಯಮಗಳ ಬಗ್ಗೆಯೂ ರಾಜ್ಯ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿದೆ. ಈ ಎಲ್ಲ ನಿಯಮ ಹಾಗೂ ನಿರ್ಭಂದಗಳ ನಡುವೆ ಚಿತ್ರ ಪ್ರದರ್ಶನ ಆರಂಭವಾಗಿದೆ. ಆದರೆ ಊಹಿಸಿದಷ್ಟು ಪ್ರೇಕ್ಷಕರು ಸಿನಿಮಾ ಮಂದಿರಗಳತ್ತ ಬರುತ್ತಿಲ್ಲ. 

ಏಳು ತಿಂಗಳಿನಿಂದ ಬೆಳ್ಳಿತೆರೆ ಮೇಲೆ ಸಿನಿಮಾ ನೋಡಲು ಕಾತರರಾಗಿದ್ದ ಪ್ರೇಕ್ಷಕರು ಇಂದು ಧಿಯೇಟರ್​ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂದು ಊಹಿಸಿಲಾಗಿತ್ತು. ಆದರೆ ಅಂದುಕೊಂಡಂತೆ ಆಗುತ್ತಿಲ್ಲ. ಹೊಸ ಸಿನಿಮಾ ರಿಲೀಸ್​ ಆದಾಗ ಎಷ್ಟು ಜನ ಇರುತ್ತಿದ್ದರೋ, ಅದರಲ್ಲಿ ಕಾಲುಭಾಗ ಸಹ ಪ್ರೇಕ್ಷಕರು ಬರುತ್ತಿಲ್ಲ.

After 7 months theaters reopened and not getting good response from movie lovers
ಶಾರದಾ ಚಿತ್ರಮಂದಿರ


ಕೆಲ ಚಿತ್ರಮಂದಿರಗಳಲ್ಲಿ ಇಂದೇ ಸಿನಿಮಾ ರಿಲೀಸ್ ಆದರೆ, ಮತ್ತೆ ಕೆಲವು ನಾಳೆಯಿಂದ ಆರಂಭವಾಗುತ್ತಿವೆ. ಎಸ್ ಪಿ ರಸ್ತೆಯಲ್ಲಿರುವ ಶಾರದ ಥಿಯೇಟರ್​ನಲ್ಲಿ ಕಾಣದಂತೆ ಮಾಯವಾದನು ಸಿನಿಮಾ ತೆರೆಗೆ ಬಂದಿದೆ. ಬೆಳಗ್ಗೆ 10.15ಕ್ಕೆ ಹಾಗೂ ಮಧ್ಯಾಹ್ನ 1.15ಕ್ಕೆ ಇವತ್ತು ಎರಡು ಶೋಗಳಿವೆ. ಇಲ್ಲಿ ಆನ್​ಲೈನ್​ನಲ್ಲಿ ಕೇವಲ 9 ಟಿಕೆಟ್​ಗಳು ಮಾತ್ರ ಮಾರಾಟವಾಗಿವೆಯಂತೆ. ಇವತ್ತು ಪ್ರೇಕ್ಷಕರು ಎಷ್ಟು ಮಂದಿ ಬರುತ್ತಾರೆ ಎನ್ನುವುದನ್ನು ನೋಡಿಕೊಂಡು, ಮುಂದಿನ ದಿನಗಳಲ್ಲಿ ಶೋಗಳನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ನಾಳೆ ಶಿವಾರ್ಜುನ ಸಿನಿಮಾ ಮತ್ತೆ ರಿಲೀಸ್​

ಚಿತ್ರಮಂದಿರಗಳನ್ನು ತೆರೆದ ನಂತರ ಸಿನಿಮೋದ್ಯಮಕ್ಕೆ ಈಗ ಮರುಜೀವ ಬಂದಂತಾಗಿದೆ. ಗಾಂಧಿನಗರದ ಸಂತೋಷ್ ಚಿತ್ರಮಂದಿರದಲ್ಲಿ ಶಿವಾರ್ಜುನ ಸಿನಿಮಾ ರೀ-ರಿಲೀಸ್​ಗೆ ಸಿದ್ಧತೆ ಜೋರಾಗಿದೆ. ಹಳೇ ಕಟೌಟ್ ತೆಗೆದು. ಹೊಸ ಕಟೌಟ್ ಹಾಕಲು ತಯಾರಿ ನಡೆಸಲಾಗುತ್ತಿದೆ.  ಈ ಹಿಂದೆ ಸಂತೋಷ್ ಥಿಯೇಟರ್​ನಲ್ಲಿ ಎರಡು ದಿನ ಪ್ರದರ್ಶನ ಕಂಡಿತ್ತು ಚಿರು ಸರ್ಜಾ ಅವರ ಶಿವಾರ್ಜುನ ಸಿನಿಮಾ. ಶನಿವಾರ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಹುಟ್ಟುಹಬ್ಬವಿದ್ದು, ಅದೇ ಕಾರಣಕ್ಕೆ ಮತ್ತೆ ನಾಳೆ ಶಿವಾರ್ಜುನ ಸಿನಿಮಾವನ್ನು ಗ್ರ್ಯಾಂಡ್ ಆಗಿ ಮತ್ತೆ ರಿಲೀಸ್ ಮಾಡಲು ಪ್ಲಾನ್​ ಮಾಡಲಾಗಿದೆ.ರಾಜ್ಯಾದ್ಯಂತ 50ರಷ್ಟು ಚಿತ್ರಮಂದಿರಗಳು ಮಾತ್ರ ಓಪನ್

ರಾಜ್ಯಾದ್ಯಂತ 50ರಷ್ಟು ಚಿತ್ರಮಂದಿರಗಳು ಮಾತ್ರ ಸಿನಿಮಾ ಪ್ರದರ್ಶನ ಮಾಡುತ್ತಿವೆ. ಕನ್ನಡದಲ್ಲಿ ಚಿರು ಸರ್ಜಾ‌ ನಟನೆಯ ಶಿವಾರ್ಜುನ ಸಿನಿಮಾದ ಜೊತೆಗೆ ಲವ್ ಮಾಕ್ಟೇಲ್, ಶಿವಾಜಿ ಸೂರತ್ಕಲ್​,  5 ಅಡಿ 7 ಅಂಗುಲ, ಕಾಣದಂತೆ ಮಾಯವಾದನು, ದಿಯಾ ಮರು ಬಿಡುಗಡೆಯಾಗುತ್ತಿದೆ. ಇಂದಿನಿಂದ ಆಯ್ದ ಮಲ್ಟಿಪ್ಲೆಕ್ಸ್​ಗಳಲ್ಲಿ ಮಾತ್ರ ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ನಾಳೆಯಿಂದ ಮತ್ತೆ ಕೆಲವು ಮಲ್ಟಿಪ್ಲೆಕ್ಸ್​ಗಳು ಆರಂಭವಾಗಲಿವೆ.

Shivarjuna Kannada Movie Re releasing on October 16 in 100 theaters,
ಶಿವಾರ್ಜುನ ಪೋಸ್ಟರ್​


ಮಾಗಡಿ ರಸ್ತೆಯ ಜಿಟಿ ಮಾಲ್ ಪಿವಿಆರ್​ನಲ್ಲಿ ನಾಳೆ 8 ಶೋ ನಡೆಯಲಿದೆ. ಕನ್ನಡದ ಜೊತೆ ಭೀಷ್ಮ(ತೆಲುಗು), ತಪಡ್(ಹಿಂದಿ), ದಾರಾಳಪ್ರಭು(ತಮಿಳು), ಮೈ ಸ್ಪೈ(ಇಂಗ್ಲಿಷ್) ಮೂರು ಸ್ಕ್ರೀನ್​ಗಳಲ್ಲಿ ಪಂಚಭಾಷಾ ಚಿತ್ರಗಳು ಮತ್ತೆ ರಿಲೀಸ್ ಆಗಲಿವೆ.

ಕೊರೋನಾ ಎಫೆಕ್ಟ್: ಸ್ಯಾಂಡಲ್​ವುಡ್ ನಲ್ಲಿ ಸ್ಟಾರ್ ವಾರ್​ಗೆ ಬ್ರೇಕ್

ದೊಡ್ಡ ಬಜೆಟ್ ಸಿನಿಮಾಗಳ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಒಟ್ಟಿಗೆ ರಿಲೀಸ್​ ಮಾಡದಂತೆ ಒಳ ಒಪ್ಪಂದ ಮಾಡಿಕೊಂಡಿದ್ದಾರಂತೆ. ಯಾರಿಗೆ ಯಾರೂ ಪೈಪೋಟಿ ನೀಡೋದು ಬೇಡ. ಹೊಂದಾಣಿಕೆಯಿಂದ ಸಿನಿಮಾ ರಿಲೀಸ್ ಮಾಡೋಣ. ಮೊದಲಿನಂತೆ ಜಿದ್ದಿಗೆ ಬೀಳೋದು ಬೇಡ ಅಂತ ಸಿನಿಮಾ ನಿರ್ಮಾಪಕರು ಕುಳಿತು ಪ್ಲಾನ್ ಮಾಡಿದ್ದಾರಂತೆ. ಅದಕ್ಕಾಗಿಯೇ ಇನ್ನು ಮುಂದೆ ಸಭೆ ನಡೆಸಿ, ಪ್ಲಾನ್​ ಮಾಡಿ ಸಿನಿಮಾಗಳನ್ನು ರಿಲೀಸ್ ಮಾಡ್ತಾರಂತೆ. ಸದ್ಯ ದರ್ಶನ್, ಸುದೀಪ್, ಪುನೀತ್, ಶಿವಣ್ಣ, ಯಶ್​,ಧ್ರುವ ಸರ್ಜಾ, ರಿಷಭ್ ಶೆಟ್ಟಿ ಹಾಗೂ ದುನಿಯಾ ವಿಜಿ ಅವರ ಸಿನಿಮಾಗಳು ರಿಲೀಸ್​ಗೆ ರೆಡಿಯಾಗಿವೆ. ಡಿಸೆಂಬರ್ ಕೊನೆಯ ವಾರ ರಾಬರ್ಟ್ ರಿಲೀಸ್ ಆಗುವ ಸಾಧ್ಯತೆ ಇದೆ. ಇದಾದ ಮೂರು ವಾರದ ಗ್ಯಾಪ್​ ನಂತರ ಕೆಜಿಎಫ್ -೨ ಚಿತ್ರ ರಿಲೀಸ್​ಗೆ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ.
Published by:Anitha E
First published: