ಸ್ಯಾಂಡಲ್ವುಡ್ನ ರಾಕಿಂಗ್ ಜೋಡಿ ಯಶ್-ರಾಧಿಕಾ ಮತ್ತೆ ಕಿರುತೆರೆಯಲ್ಲಿ ಮೋಡಿ ಮಾಡಲು ಸಜ್ಜಾಗಿದ್ದಾರೆ. ಈ ಹಿಂದೆ 'ನಂದಗೋಕುಲ' ಎಂಬ ಧಾರಾವಾಹಿಯಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿದ್ದರು ಈ ಜೋಡಿ. ಈಗ ಹಲವು ವರ್ಷಗಳ ಬಳಿಕ ಮತ್ತೆ ಕಿರುತೆರೆಯಲ್ಲಿ ಒಂದಾಗಿದ್ದಾರೆ. ಅದು ಜಾಹೀರಾತು ಒಂದಕ್ಕೆ. ಇದೇ ಮೊದಲ ಬಾರಿ ಇಬ್ಬರು ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು, ಇವರ ಜೋಡಿ ಮತ್ತೊಮ್ಮೆ ಕಿರುತೆರೆ ಪ್ರೇಕ್ಷಕರ ಮನಗೆಲ್ಲುವುದು ಸುಳ್ಳಲ್ಲ. ಈ ಮೂಲಕ ಮತ್ತೊಮ್ಮೆ ಕನ್ನಡಿಗರ ಮನಗೆಲ್ಲಲು ಈ ಜೋಡಿ ಸಿದ್ದವಾಗಿದ್ದಾರೆ. ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲಿ ಕೆಲಕಾಲ ಅಂತರ ಕಾಯ್ದುಕೊಂಡಿರುವ ನಟಿ ರಾಧಿಕಾ ಪಂಡಿತ್, ಯಶ್ ಜೊತೆ ಮತ್ತೆ ತೆರೆ ಮೇಲೆ ಕಾಣಿಸುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
View this post on Instagram
ಇನ್ನು ಈ ಕುರಿತು ಸಂತಸ ಹಂಚಿಕೊಂಡಿರುವ ನಟಿ ರಾಧಿಕಾ, ನಾಲ್ಕು ವರ್ಷದ ಬಳಿಕ ತನ್ನ ಸಹ ನಟನೊಂದಿಗೆ ಕಾರ್ಯ ಆರಂಭಿಸಿರುವುದು ಖುಷಿ ಮೂಡಿಸಿದೆ ಎಂದು ತಿಳಿಸಿದ್ದಾರೆ. ಮದುವೆಗೂ ಮೊದಲು ಇವರಿಬ್ಬರು 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಚಾರಿ', 'ಸಂಜು ಸ್ಟ್ರೈಟ್ ಫಾರ್ವಡ್' ನಲ್ಲಿ ನಟಿಸಿದ್ದರು.
ಈಗಾಗಲೇ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮ ಛಾಪು ಮೂಡಿಸುತ್ತಿರುವ ಈ ಜೋಡಿ ಈಗ ಜಾಹೀರಾತಿನ ಮೂಲಕ ಇನ್ನಷ್ಟು ಅಭಿಮಾನಿಗಳಿಗೆ ಆತ್ಮೀಯವಾಗುವ ಪ್ರಯತ್ನ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ