38 ವರ್ಷಗಳ ನಂತರ ಅಂಬಿ ಅಭಿನಯದ 'ಅಂತ' ಸಿನಿಮಾ ಮರು ಬಿಡುಗಡೆ..!

'ಅಂತ' ಸಿನಿಮಾದಲ್ಲಿ ಅಂಬರೀಷ​-ಲಕ್ಷ್ಮಿ

'ಅಂತ' ಸಿನಿಮಾದಲ್ಲಿ ಅಂಬರೀಷ​-ಲಕ್ಷ್ಮಿ

ಕುತ್ತೆ ಕನ್ವರ್​ ನಹೀ ಕನ್ವರ್​ ಲಾಲ್​ ಬೊಲೊ... ಈ ಡೈಲಾಗ್​ ಕೇಳಿದ ಕೂಡಲೆ ನೆನಪಾಗೋದು ಅಂಬಿ ಮತ್ತು ಅಂತ ಸಿನಿಮಾ... ಹೀಗಿರುವಾಗ ಈ ಸಿನಿಮಾವ್ನು ಅದೆಷ್ಟು ಜನ ಚಿತ್ರಮಂದಿರಗಳಲ್ಲಿ ನೋಡಿರುತ್ತೀರಾ ಹೇಳಿ... ಆದರೆ ಈಗ ಈ ಸಿನಿಮಾವನ್ನು ಬೆಳ್ಳಿ ಪರದೆ ಮೇಲೆ ನೋಡುವ ಅವಕಾಶ ಸಿಗಲಿದೆ... ಅಂಬಿಯನ್ನು ದೊಡ್ಡ ಪರದೆ ಮೇಲೆ ಮತ್ತೆ ಕಣ್ತುಂಬಿಕೊಳ್ಳಬಹುದಾಗಿದೆ.

ಮುಂದೆ ಓದಿ ...
  • News18
  • 5-MIN READ
  • Last Updated :
  • Share this:

-ಅನಿತಾ .ಈ, 

80ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸಿದ ಸಿನಿಮಾ 'ಅಂತ'. ಈ ಸಿನಿಮಾ ಅಂಬಿ ಸಿನಿ ಜೀವನದಲ್ಲಿ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು. ಅಂಬಿ ಬಣ್ಣದ ಲೋಕದಲ್ಲಿ ನೆಲೆಯೂರುವಂತೆ ಮಾಡಿದ ಈ ಸಿನಿಮಾ ಆ ಕಾಲಕ್ಕೆ  ದಾಖಲೆ ನಿರ್ಮಿಸಿತ್ತು.

ಇದನ್ನೂ ಓದಿ: 'ಯಜಮಾನ' ಟೈಟಲ್ ಟ್ರ್ಯಾಕ್​: ಸಾಮಾಜಿಕ ಜಾಲತಾಣದಲ್ಲಿ ದಚ್ಚು ಅಭಿಮಾನಿಗಳ ಹಬ್ಬ..!​

1981ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಆ್ಯಕ್ಷನ್ ಕಟ್ ಹೇಳಿದ್ದರು. ರೆಬೆಲ್‍ಸ್ಟಾರ್ ಅಂಬರೀಷ ಇನ್ಸ್​ಸ್ಪೆಕ್ಟರ್ ಸುಶೀಲ್‍ಕುಮಾರ್ ಪಾತ್ರದ ಮೂಲಕ ನಾಡಿನ ಜನತೆಯಲ್ಲಿ ದೇಶಾಭಿಮಾನದ ಕಿಚ್ಚು ಹಚ್ಚಿದ್ದರು. ಅಲ್ಲದೆ ಅಂಬರೀಷ ಕನ್ವರ್​ ಲಾಲ್​ ಎಂಬ ವಿಲನ್​ ಪಾತ್ರವನ್ನೂ ಕೂಡ ಅಂತ ಚಿತ್ರದಲ್ಲಿ ನಿರ್ವಹಿಸಿದ್ದರು. ಆನಂತರ ಅಂಬರೀಷ ಅಭಿನಯಿಸಿದ್ದ ಆ ಕನ್ವರ್​ಲಾಲ್​ ಪಾತ್ರ ಮತ್ತೊಂದು ಚಿತ್ರದ ನಿರ್ಮಾಣಕ್ಕೂ ಕಾರಣವಾಯಿತು.

ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟವಾದ ಹೆಚ್. ಕೆ. ಅನಂತರಾವ್ ಅವರ ಕಾದಂಬರಿ ಆಧಾರಿತ ಈ ಸಿನಿಮಾ ಈಗ ಮತ್ತೊಮ್ಮೆ ನೂತನ ತಂತ್ರಜ್ಞಾನದೊಂದಿಗೆ ಬೆಳ್ಳಿತೆರೆಯ ಮೇಲೆ ಬರುತ್ತಿದೆ.

ಪರಿಮಳ ಆರ್ಟ್ ಮೂಲಕ ಎಚ್.ಎನ್. ಮಾರುತಿ ಹಾಗೂ ವೇಣುಗೋಪಾಲ್ ಈ ಚಿತ್ರವನ್ನು ನಿರ್ಮಿಸಿದ್ದರು. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದರು. ಜಿ.ಕೆ. ವೆಂಕಟೇಶ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದ 'ಅಂತ' ಚಿತ್ರದ ಸುಮಧುರ ಗೀತೆಗಳು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ನಿಂತಿವೆ.

ಈ ಚಿತ್ರವನ್ನು ಈಗ ಡಿಜಿಟಲ್ ಫಾರ್ಮಾಟ್‍ನಲ್ಲಿ ಬಿಡುಗಡೆ ಮಾಡಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ಸದ್ಯ ಲಹರಿ ರೆಕಾರ್ಡಿಂಗ್ ಬಳಿ ಈ ಚಿತ್ರದ ಹಕ್ಕುಗಳಿದ್ದು, ಲಹರಿ ಸಂಸ್ಥೆಯ ಮುಖಾಂತರ ದೀಪಕ್ ಪಿಚ್ಚರ್ಸ್ ಹಾಗೂ ಶ್ರೀನಿವಾಸ ಪಿಕ್ಚರ್ಸ್(ಗದಗ) ಈ ಚಿತ್ರವನ್ನು ವಿತರಣೆ ಮಾಡುತ್ತಿದೆ.

ಶೀಘ್ರದಲ್ಲೇ ಹೊಸ ರೂಪದ `ಅಂತ` ಚಿತ್ರವನ್ನು ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ನಿರ್ಮಾಪಕ ವೇಣುಗೋಪಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: 'ನಟಸಾರ್ವಭೌಮ'ನಿಗೆ ಕೋಟೆ ಕಟ್ಟಿದ ಅಭಿಮಾನಿಗಳು : ರಿಲೀಸ್‍ಗೂ ಮೊದಲೇ ಅಭಿಮಾನಿಗಳ ಹಬ್ಬ ಶುರು !

ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ರೆಬೆಲ್‍ಸ್ಟಾರ್ ಅಂಬರೀಷ(ದ್ವಿಪಾತ್ರ) ಲಕ್ಷ್ಮಿ, ಜಯಮಾಲಾ, ಲತಾ, ಪಂಡರೀಬಾಯಿ, ವಜ್ರಮುನಿ, ಪ್ರಭಾಕರ್, ಸುಂದರ ಕೃಷ್ಣ ಅರಸ್, ಶಕ್ತಿ ಪ್ರಸಾದ್, ಲಕ್ಷ್ಮಣ್, ಸಿ.ಸೀತಾರಾಮ್ ನಟಿಸಿದ್ದರು.

ಅಂಬಿ ಇಂದು ನಮ್ಮ ಮಧ್ಯೆ ಇಲ್ಲದ ನೋವಿದೆ. ಆದರೂ ಅವರು ಅಭಿನಯಿಸಿರುವ ಸಿನಿಮಾಗಳು ಮಾತ್ರ ಇಂದಿಗೂ ಹಸಿರಾಗಿವೆ.

PHOTOS: ಸ್ಟಾರ್​ ನಿರ್ದೇಶಕ 'ಕೆ.ಜಿ.ಎಫ್' ಖ್ಯಾತಿಯ ಪ್ರಶಾಂತ್​ ನೀಲ್​ರ ಅಪರೂಪದ ಚಿತ್ರಗಳು..!

First published: