• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • 38 ವರ್ಷಗಳ ನಂತರ ಹವಾಯ್​ ಚಪ್ಪಲಿ-ಲುಂಗಿ ಧರಿಸಿ 'ಕೆ.ಜಿ.ಎಫ್​' ಸಿನಿಮಾ ನೋಡಿದ ಜಗ್ಗೇಶ್​ ಚಿಂದಿ ಅಂದಿದ್ದೇಕೆ..?

38 ವರ್ಷಗಳ ನಂತರ ಹವಾಯ್​ ಚಪ್ಪಲಿ-ಲುಂಗಿ ಧರಿಸಿ 'ಕೆ.ಜಿ.ಎಫ್​' ಸಿನಿಮಾ ನೋಡಿದ ಜಗ್ಗೇಶ್​ ಚಿಂದಿ ಅಂದಿದ್ದೇಕೆ..?

  • News18
  • 5-MIN READ
  • Last Updated :
  • Share this:

-ಅನಿತಾ ಈ, 

ನವರಸನಾಯಕ ಜಗ್ಗೇಶ್​ 38 ವರ್ಷಗಳ ನಂತರ ಮಾರುವೇಷದಲ್ಲಿ ಮತ್ತೆ ಸಿನಿಮಾ ನೋಡಿದ್ದಾರೆ. ಹೌದು ಹೀಗೆಂದು ಹೇಳುತ್ತಿರುವುದು ನಾವಲ್ಲ. ಖುದ್ದು ಜಗ್ಗೇಶ್​ ಸಿನಿಮಾ ನೋಡಿ ಬಂದ ನಂತರ ತಮ್ಮ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಈಗ ಎಲ್ಲಿ ನೋಡಿದರೂ ಕೇವಲ 'ಕೆ.ಜಿ.ಎಫ್​'ನದ್ದೇ ಸದ್ದು...ಸುದ್ದಿ.... ಇದಕ್ಕೆ ಕನ್ನಡ ಸಿನಿ ತಾರೆಗಳೂ ಹೊರತಾಗಿಲ್ಲ. ಸಿನಿಮಾ ಚೆನ್ನಾಗಿದ್ದರೆ ಯಾವ ತಾರಾ ವರ್ಚಸ್ಸು ಅಡ್ಡ ಬರುವುದಿಲ್ಲ. ಇದಕ್ಕೆ ಉದಾಹರಣೆ 'ಕೆಜಿ.ಎಫ್​' ಎನ್ನಬಹುದು.

ಇದನ್ನೂ ಓದಿ: ಟಾಲಿವುಡ್​ನ ಪ್ರಿನ್ಸ್​ ಮಹೇಶ್​ ಬಾಬು ಈಗ ವಿಶ್ವದ ಐದನೇ ಅತಿದೊಡ್ಡ ಶ್ರೀಮಂತ ..!

ಹೌದು ಸ್ಯಾಂಡಲ್​ವುಡ್​ನ ಕಂಪನ್ನು ರಾಷ್ಟ್ರಮಟ್ಟದಲ್ಲಿ ಪಸರಿಸುತ್ತಿರುವ ಕನ್ನಡ 'ಕೆ.ಜಿ.ಎಫ್​' ಸಿನಿಮಾವನ್ನು ನವರಸ ನಾಯಕ ಜಗ್ಗೇಶ್​ ನಿನ್ನೆ ನೋಡಿಕೊಂಡು ಬಂದಿದ್ದಾರೆ. ಅದರಲ್ಲೂ ವಿಶೇಷ ಇದೆ. ಅವರು 38 ವರ್ಷಗಳ ನಂತರ ಮಾರುವೇಷದಲ್ಲಿ ಚಿತ್ರಮಂದಿರಕ್ಕೆ ಹೋಗಿ ಪ್ರೇಕ್ಷಕರೊಂದಿಗೆ 'ಕೆ.ಜಿ.ಎಫ್​' ಸಿನಿಮಾ ನೋಡಿದ್ದು, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇನ್ನು ಜಗ್ಗೇಶ್​ ಅವರ ಮಾರುವೇಷ ಹೇಗಿತ್ತು ಗೊತ್ತಾ..? ಮಂಕಿ ಕ್ಯಾಪ್​... ಹವಾಯ್​ ಚಪ್ಪಲಿ ಹಾಗೂ ಲುಂಗಿ ತೊಟ್ಟ ಜಗ್ಗೇಶ್​ ಚಿತ್ರಮಂದಿರಕ್ಕೆ ಹೋಗಿದ್ದು, ಅಲ್ಲಿ ಮುಂದಿನ ಸಾಲಿನಲ್ಲಿ ಖಾರದಪುರಿ ಜತೆಗೆ ಟೀ ಸವಿಯುತ್ತಾ ಸಿನಿಮಾ ನೋಡಿದ್ದಾರೆ. ಅವರು 38 ವರ್ಷಗಳ ಹಿಂದೆ ಹೀಗೆ ಮಾಡುತ್ತಿದ್ದರಂತೆ.

ಲುಂಗಿ ಹವಾಯ್ ಚಪ್ಪಲಿ ಮಂಕಿಕ್ಯಾಪ್ 


ಸಿನಿಮಾ ನೋಡುವಾಗ ತಮ್ಮ ಪಕ್ಕ ಕುಳಿತ್ತಿದ್ದ ಹುಡುಗನ ಜತೆ ಧ್ವನಿ ಬದಲಾಯಿಸಿ ಮಾತನಾಡುತ್ತಿದ್ದರಂತೆ. ಅವರಿಬ್ಬರ ನಡುವೆ ನಡೆದ ಸಂಭಾಷೆಯನ್ನು ಜಗ್ಗೇಶ್​ ಅವರ ಟ್ವೀಟ್​ನಲ್ಲೇ ಓದಿ.


'ಕೆ.ಜಿ.ಎಫ್​' ಸಿನಿಮಾವನ್ನು ನಟ ಜಗ್ಗೇಶ್​ ಮಾತ್ರವಲ್ಲದೆ ಇಡೀ ಚಿತ್ರರಂಗವೇ ಕೊಂಡಾಡುತ್ತಿದೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಈ ಕನ್ನಡದ ಸಿನಿಮಾಗೆ. ತೆರೆ ಮೇಲೆ ಯಶ್​ ನಾಯಕನಾದರೆ, ತೆರೆ ಹಿಂದೆ ನಿಂತು ಈ ಮಟ್ಟಕ್ಕೆ ಸಿನಿಮಾವನ್ನು ತೆಗೆದುಕೊಂಡು ಹೋದ ನಿರ್ದೇಶಕ ಇಲ್ಲಿ ನಿಜವಾದ ನಾಯಕರಾಗಿದ್ದಾರೆ.

First published: