Mollywood: 12 ವರ್ಷಗಳ ನಂತರ ಮತ್ತೆ ಒಂದಾಗುತ್ತಿದೆ ಶಾಜಿ ಕೈಲಾಸ್-ಮೋಹನ್‍ಲಾಲ್ ಜೋಡಿ

ಕೈಲಾಸ್ ಅವರ ಮೆಗಾ ಹಿಟ್ 'ಆರಾಮ್ ತಂಪುರನ್' (1997). ಇದು ಮೋಹನ್ ಲಾಲ್‌ಗೆ ಮಮ್ಮುಟಿ ನಂತರ ಮಲಯಾಳಂ ಚಿತ್ರಗಳಲ್ಲಿ ಎರಡನೇ ಸೂಪರ್ ಸ್ಟಾರ್ ಎಂಬ ಪಟ್ಟ  ತಂದುಕೊಟ್ಟಿತು. ಆ ಮೆಗಾ ಹಿಟ್ ನಂತರ, ಲಾಲ್ ಅಂದರೆ ಮೋಹನ್ ಲಾಲ್ ನಂತರದ ವರ್ಷಗಳಲ್ಲಿ ವೃತ್ತಿಜೀವನದಲ್ಲಿ ಉತ್ತುಂಗ ಮಟ್ಟಕ್ಕೆ ಏರತೊಡಗಿದರು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ.

ಹೊಸ ಸಿನಿಮಾ ಅನೌನ್ಸ್​ ಮಾಡಿದ ಮೋಹನ್ ಲಾಲff

ಹೊಸ ಸಿನಿಮಾ ಅನೌನ್ಸ್​ ಮಾಡಿದ ಮೋಹನ್ ಲಾಲff

  • Share this:
ಕಳೆದೆರಡು ದಿನಗಳಿಂದ ಮಲಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ತಮ್ಮ ಹುಟ್ಟುಹಬ್ಬ ನಿಮಿತ್ತ ಭಾರಿ ಸುದ್ದಿಯಲ್ಲಿದ್ದಾರೆ. ಸೆಪ್ಟೆಂಬರ್ 7ರಂದು ನಟ 70ನೇ ವಸಂತಕ್ಕೆ ಕಾಲಿರಿಸಿದರು. ಇದೀಗ ಮಾಲಿವುಡ್‍ನ ಮತ್ತೊಬ್ಬ ಸೂಪರ್‌ ಸ್ಟಾರ್‌ ಮೋಹನ್ ಲಾಲ್  (Mohanlal) ಹೊಸ ಸಿನಿಮಾದ ಘೋಷಣೆ ಮಾಡಿ ಅಭಿಮಾನಿಗಳು ಸಂತಸ ನೀಡಿದ್ದಾರೆ. ಹೌದು, ಮೋಹನ್‍ಲಾಲ್ ಮಲಯಾಳಂ ಚಿತ್ರದ ಮೊದಲ ಬ್ಲಾಕ್ ಬಸ್ಟರ್ ನಿರ್ದೇಶಕರಲ್ಲಿ ಒಬ್ಬರಾದ ಶಾಜಿ ಕೈಲಾಸ್  (Director Shaji Kailas)ಜೊತೆ ಮತ್ತೊಂದು ಸಿನಿಮಾ ಮಾಡುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮೋಹನ್ ಲಾಲ್​ ಅವರು 12 ವರ್ಷಗಳ (After 12 Years) ನಂತರ ಇವರ ನಿರ್ದೇಶನದಲ್ಲಿ ತೆರೆ ಮೇಲೆ ಕಾಣಲು ಸಿದ್ಧರಾಗುತ್ತಿದ್ದಾರೆ.

ಕೈಲಾಸ್ ಅವರ ಮೆಗಾ ಹಿಟ್ 'ಆರಾಮ್ ತಂಪುರನ್' (1997). ಇದು ಮೋಹನ್ ಲಾಲ್‌ಗೆ ಮಮ್ಮುಟಿ ನಂತರ ಮಲಯಾಳಂ ಚಿತ್ರಗಳಲ್ಲಿ ಎರಡನೇ ಸೂಪರ್ ಸ್ಟಾರ್ ಎಂಬ ಪಟ್ಟ  ತಂದುಕೊಟ್ಟಿತು. ಆ ಮೆಗಾ ಹಿಟ್ ನಂತರ, ಲಾಲ್ ಅಂದರೆ ಮೋಹನ್ ಲಾಲ್ ನಂತರದ ವರ್ಷಗಳಲ್ಲಿ ವೃತ್ತಿಜೀವನದಲ್ಲಿ ಉತ್ತುಂಗ ಮಟ್ಟಕ್ಕೆ ಏರತೊಡಗಿದರು. ಅಲ್ಲಿಂದ ಹಿಂತಿರುಗಿ ನೋಡಲೇ ಇಲ್ಲ. 'ಆರಾಮ್ ತಂಪುರನ್' ನಂತರ ಲಾಲ್ ಕೈಲಾಸ್‍ ಅವರ ಜೊತೆ ಹಲವಾರು ಚಿತ್ರಗಳನ್ನು ಮಾಡಿದರು.

ಮೋಹನ್​ ಲಾಲ್​ ಅವರು ಮಾಡಿರುವ ಲೆಟೆಸ್ಟ್ ಟ್ವೀಟ್​ ಲಿಂಕ್​...ಅದರಲ್ಲಿ ಕೊನೆಯದು - 'ರೆಡ್ ಚಿಲ್ಲೀಸ್' - 2009 ರಲ್ಲಿ ಬಿಡುಗಡೆಯಾಯಿತು. ನಂತರ ತಮಿಳು ಚಿತ್ರಗಳಲ್ಲೂ ಅಭಿನಯಿಸಲು ಪ್ರಾರಂಭಿಸಿದರು. ಇದಿಗ ಮೋಹನ್ ಲಾಲ್ ಕೈಲಾಸ್ ಜೊತೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದಾಗಿನಿಂದ ಎಲ್ಲರ ಕಣ್ಣು ಮೋಹನ್‍ಲಾಲ್ ಹಾಗೂ ಕೈಲಾಸ್ ಅವರ ಮೇಲೆ ಇದೆ.

ಇದನ್ನೂ ಓದಿ: Festival Special Photo Shoot: ದೇವಿಯ ಅವತಾರದಲ್ಲಿ ಬಿಗ್ ಬಾಸ್​ ಖ್ಯಾತಿಯ ಧನುಶ್ರೀ

"ಕಾಯುವಿಕೆ ಕೊನೆಗೊಂಡಿದೆ..! ಅಕ್ಟೋಬರ್ 2021ರಲ್ಲಿ ಶಾಜಿ ಕೈಲಾಸ್ ಅವರೊಂದಿಗೆ ಆರಂಭವಾಗಲಿರುವ ನನ್ನ ಮುಂದಿನ ಯೋಜನೆಯನ್ನು ನಾನು ಬಹಳ ಉತ್ಸಾಹ ಮತ್ತು ಸಂತೋಷದಿಂದ ಘೋಷಿಸುತ್ತಿದ್ದೇನೆ. ರಾಜೇಶ್ ಜಯರಾಮ್ ಚಿತ್ರಕಥೆ ಮತ್ತು ಆಂಟನಿ ಪೆರುಂಬವೂರ್ ನಿರ್ಮಾಣದ ಆಶೀರ್ವಾದ್ ಸಿನಿಮಾಸ್‍ನ ಬ್ಯಾನರ್‌ನಲ್ಲಿ ನಾನು ಮತ್ತು ಶಾಜಿ 12 ವರ್ಷಗಳ ನಂತರ ಮತ್ತೆ ಒಟ್ಟಿಗೆ ಸೇರುತ್ತಿದ್ದೇವೆ. 12 ವರ್ಷಗಳ ನಂತರ ಈ ಜೊತೆಗೂಡುವಿಕೆ ನಿಮಗೆ ನಿರಾಸೆ ತರುವುದಿಲ್ಲ ಎಂಬ ಬಗ್ಗೆ ನನಗೆ ಖಾತ್ರಿಯಿದೆ" ಎಂದು ಲಾಲ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. 1989ರಲ್ಲಿ ವೃತ್ತಿ ಜೀವನ ಆರಂಭಿಸಿದ 56 ವರ್ಷದ ಕೈಲಾಸ್ ಅವರದ್ದು ಇದು 42ನೇ ಸಿನಿಮಾವಾಗಿದೆ.

ಮೋಹನ್‍ಲಾಲ್ ಬಗ್ಗೆ:

ಮೋಹನ್ ಲಾಲ್ ವಿಶ್ವನಾಥನ್ ನಾಯರ್ ಮಲಯಾಳಂನ ಒಬ್ಬ ನಟ ಮತ್ತು ನಿರ್ಮಾಪಕ ಕೂಡ ಹೌದು. ಅವರು ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು, ಎರಡು ಅತ್ಯುತ್ತಮ ನಟ ಪ್ರಶಸ್ತಿಗಳು, ಒಂದು ವಿಶೇಷ ಜ್ಯೂರಿ ಪ್ರಶಸ್ತಿ ಕೂಡ ಪಡೆದಿದ್ದಾರೆ. ಕೇರಳದ ಯಾವುದೇ ನಟರಿಗಿಂತ ಹೆಚ್ಚು ಬಾರಿ ಅಂದರೆ ಆರು ಬಾರಿ ಅತ್ಯುತ್ತಮ ನಟ ಕೇರಳ ರಾಜ್ಯ ಪ್ರಶಸ್ತಿಯನ್ನು ಮೋಹನ್‍ಲಾಲ್ ತಮ್ಮದಾಗಿಸಿಕೊಂಡಿದ್ದಾರೆ.

drishyam, grandmaster, Kanupapa, Lucifer, Malayalam superstar, mohanlal, Mohanlal Birthday Special, movies, ಲೂಸಿಫರ್​, ದೃಶ್ಯಂ 2, ಮೋಹನ್​ ಲಾಲ್​, ಹುಟ್ಟುಹಬ್ಬದ ಸಂಭ್ರಮದಲ್ಲಿ ಮೋಹನ್​ ಲಾಲ್​, Happy Birthday Mohanlal here are the must watch movies of the actor ae
ನಟ ಮೋಹನ್‍ಲಾಲ್


ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಅಮೂಲ್ಯ ಕೊಡುಗೆಗಾಗಿ 2001ರಲ್ಲಿ ಭಾರತ ಸರ್ಕಾರ ಮೋಹನ್‍ಲಾಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. 2009ರಲ್ಲಿ ಅವರು ಪ್ರಾದೇಶಿಕ ಸೈನ್ಯ (ಟೆರಿಟೋರಿಯಲ್ ಆರ್ಮಿ)ದಿಂದ ಲೆಫ್ಟಿನೆಂಟ್‌ ಕರ್ನಲ್ ಎಂಬ ಗೌರವ ಪಡೆದರು. ಇದು ಭಾರತೀಯ ಸಿನಿಮಾ ಇತಿಹಾಸದಲ್ಲಿ ಒಬ್ಬ ನಟನು ಗೌರವ ಸೈನ್ಯ ಸ್ಥಾನ ಪಡೆಯುವುದರ ಮೊದಲ ನಿದರ್ಶನವಾಗಿತ್ತು. 2010ರಲ್ಲಿ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತು.

ಮೋಹನ್ ಲಾಲ್‍ರ ಮೊದಲ ಚಲನಚಿತ್ರ ತಿರನೊಟ್ಟಮ್ (1978). ಮೋಹನ್ ಲಾಲ್ ಪ್ರಥಮ ಬಾರಿಗೆ ತಮ್ಮ ಛಾಪು ಮಾಡಿಸಿದ್ದು 1980ರಲ್ಲಿ. ಮೋಹನ್‍ಲಾಲ್ ಅವರು ಪ್ರತಿನಾಯಕನಾಗಿ ನಟಿಸಿದ ಮಳಿಯಾಂಪುರಕಲ್‍ನ ನಿರ್ಮಾಪಕ ಚಾಕೊ ಪುನ್ನೋಸ್ ನವೋದಯ ಅಪ್ಪಾಚನ್ ಅವರ ಮಂಜಿಲ್ ವಿರಿಂಜ ಪೂಕ್ಕಲ್ ಚಿತ್ರ ಬಾಕ್ಸ್‌ ಆಫೀಸ್‍ನಲ್ಲಿ ದಾಖಲೆ ನಿರ್ಮಿಸಿತು.

ಇದನ್ನೂ ಓದಿ: ಇಷ್ಟು ದಿನ ಆಯಿತು, ಯಾವುದೇ ಕಾಂಟ್ರವರ್ಸಿ ಇಲ್ಲ... ಹೇಗನಿಸುತ್ತಿದೆ: ಕಪಿಲ್ ಶರ್ಮಾ ತಮಾಷೆಗೆ ಕಂಗನಾ ಪ್ರತಿಕ್ರಿಯೆ

1983ರಲ್ಲಿ ಅವರು 25ಕ್ಕಿಂತಲೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಹೆಸರು ಗಳಿಸಿದರು. ಪ್ರಸಿದ್ಧ ಕಥಾಲೇಖಕ ಎಂ.ಟಿ. ವಾಸುದೇವನ್ ನಾಯರ್ ಬರೆದ ಮತ್ತು ಐ.ವಿ. ಶಶಿ ನಿರ್ದೇಶಿಸಿದ ಮೋಸ ಹಾಗೂ ವಂಚನೆಯ ಕಥೆಯನ್ನುಳ್ಳ ಉಯರಂಗಲೀಲ್ ಈ ಅವಧಿಯ ಪ್ರಮುಖ ಚಿತ್ರವಾಗಿತ್ತು. ಪ್ರಿಯದರ್ಶನ್‍ರ ಮೊದಲ ಚಿತ್ರ ಪೂಚಕ್ಕೊರು ಮೂಕುತಿಯಲ್ಲಿ ನಟಿಸುವ ಮೂಲಕ ತಮ್ಮ ನಟನೆಯನ್ನು ಹಾಸ್ಯ ಪಾತ್ರಗಳಲ್ಲಿಯೂ ಮುಂದುವರಿಸಿದರು.
Published by:Anitha E
First published: