11 ವರ್ಷಗಳ ನಂತರ ಮತ್ತೆ ಒಂದಾಗಲಿದೆ ಸಲ್ಲು-ಬನ್ಸಾಲಿ ಜೋಡಿ!

news18
Updated:July 2, 2018, 12:54 PM IST
11 ವರ್ಷಗಳ ನಂತರ ಮತ್ತೆ ಒಂದಾಗಲಿದೆ ಸಲ್ಲು-ಬನ್ಸಾಲಿ ಜೋಡಿ!
news18
Updated: July 2, 2018, 12:54 PM IST
ನ್ಯೂಸ್ 18 ಕನ್ನಡ 

ಸದ್ಯ 'ರೇಸ್​-3' ಸಿನಿಮಾದ ಯಶಸ್ಸಿನ ಖುಷಿಯಲ್ಲಿರುವ ನಟ ಸಲ್ಮಾನ್​ ಖಾನ್​ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್​ ಲೀಲಾ ಬನ್ಸಾಲಿ ಅವರೊಂದಿಗೆ ಸಿನಿಮಾವೊಂದರಲ್ಲಿ ಕೆಲಸ ಮಾಡಲಿದ್ದಾರಂತೆ. ಹೌದು ಆದಷ್ಟು ಬೇಗ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂಬ ಸುದ್ದಿ ಬಿ-ಟೌನ್​ ಅಂಗಳದಲ್ಲಿ ಹರಿದಾಡುತ್ತಿದೆ.

2007ರಲ್ಲಿ ತೆರೆಕಂಡ ಸಂಜಯ್​ ಲೀಲಾ ಬನ್ಸಾಲಿ ಅವರ 'ಸಾವರಿಯ' ಸಿನಿಮಾದಲ್ಲಿ ಸಲ್ಮಾನ್​ ಅಭಿನಯಿಸಿದ್ದರು. ಇದಾದ ನಂತರ ಇವರಿಬ್ಬರೂ ಮತ್ತೆ ಯಾವ ಸಿನಿಮಾದಲ್ಲೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈಗ 11 ವರ್ಷಗಳ ಅಂತರದ ನಂತರ ಮತ್ತೆ 'ಇನ್​ಶಾಅಲ್ಹ್​' ಸಿನಿಮಾದಲ್ಲಿ ಒಂದಾಗಲಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.

'ವಾಂಟೆಡ್-2' ಸಿನಿಮಾದಿಂದ ಸಲ್ಲು ಔಟ್​-ಟೈಗರ್​ ಇನ್​... ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ....

'ರೇಸ್​-3' ನಂತರ ಸಲ್ಮಾನ್​ ಭಾರತ್​ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೂ ಈ ಹೊಸ ಸಿನಿಮಾದ ಚಿತ್ರೀಕರಣ ಇದೇ ವರ್ಷದಲ್ಲಿ ಆರಂಭವಾದರೆ, ಮುಂದಿನ ವರ್ಷಾಂತ್ಯಕ್ಕೆ ವೀಕ್ಷಣೆಗೆ ಸಿಗಲಿದೆ.
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ