• Home
  • »
  • News
  • »
  • entertainment
  • »
  • Adnan Sami: ಸಿಂಗರ್ ಅದ್ನಾನ್ ಸಮಿಗೆ ಅಮೆರಿಕಾ ಪ್ರವೇಶ ತಡೆದ ತಪಾಸಣಾಧಿಕಾರಿ! ಕಾರಣ ಗೊತ್ತೇ?

Adnan Sami: ಸಿಂಗರ್ ಅದ್ನಾನ್ ಸಮಿಗೆ ಅಮೆರಿಕಾ ಪ್ರವೇಶ ತಡೆದ ತಪಾಸಣಾಧಿಕಾರಿ! ಕಾರಣ ಗೊತ್ತೇ?

ಅದ್ನಾನ್ ಸಮಿ

ಅದ್ನಾನ್ ಸಮಿ

ತಾವು ಅದ್ನಾನ್ ಸಮಿ ಎಂದು ಎಷ್ಟು ಹೇಳಿದರೂ ಯಾರೂ ನಂಬುತ್ತಿರಲಿಲ್ಲ ಎಂದು ತಿಳಿಸಿರುವ ಸಮಿ, ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ.

  • Share this:

ಗಾಯಕ (Singer) ಹಾಗೂ ಹಾಡು ಸಂಯೋಜಕ ಅದ್ನಾನ್ ಸಮಿ (Adnan Sami) ತಮ್ಮ ಬರೋಬ್ಬರಿ 130 ಕೆಜಿ ತೂಕ ಇಳಿಕೆಯ ಮಾಹಿತಿಯನ್ನು ಹಂಚಿಕೊಂಡಿದ್ದು ನಿರಂತರ ಪ್ರಯತ್ನದಿಂದಲೇ ಭರ್ಜರಿ 130 ಕೆಜಿ ತೂಕ ಇಳಿಸಲು ಕಾರಣವಾಯಿತು ಎಂದು ತಿಳಿಸಿದ್ದಾರೆ. ದಢೂತಿ ದೇಹದಿಂದ ಸಣ್ಣಗಾಗಲು ಸಮಿ ಪಟ್ಟಿರುವ ಪರಿಶ್ರಮ ಅಷ್ಟಿಷ್ಟಲ್ಲ ಎಂದು ತಿಳಿಸಿರುವ ಗಾಯಕ, ತಾನು ಮಾಡಿರುವುದು ಜೀವಮಾನದ ಒಂದು ಉತ್ತಮ ಸಾಧನೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.


ತಪಾಸಣಾಧಿಕಾರಿ ಸಮಿಯನ್ನು ನಂಬಿರಲಿಲ್ಲ


ತೂಕ ಇಳಿಕೆಯ ನಂತರ ತಾವು ಅದ್ನಾನ್ ಸಮಿ ಎಂದು ಎಷ್ಟು ಹೇಳಿದರೂ ಯಾರೂ ನಂಬುತ್ತಿರಲಿಲ್ಲ ಎಂದು ತಿಳಿಸಿರುವ ಸಮಿ, ಅಮೆರಿಕಾದ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಅವರ ಪಾಸ್‌ಪೋರ್ಟ್‌ನಲ್ಲಿದ್ದ ದಢೂತಿ ದೇಹದ ಸಮಿಯ ಫೋಟೋ ನೋಡಿ ಈಗಿರುವ ಸಮಿ ಅವರೇ ಎಂದು ತಪಾಸಣಾಧಿಕಾರಿ ಮೊದಲಿಗೆ ನಂಬಿರಲಿಲ್ಲ ಎಂದು ತಿಳಿಸಿದ್ದಾರೆ.
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಸಮಿ ಆ ದಿನದ ಘಟನೆಯನ್ನು ಮೆಲುಕು ಹಾಕಿದ್ದು ಅಧಿಕಾರಿಗಳಿಗೆ ನಾನೇ ಅದ್ನಾನ್ ಸಮಿ ಎಂದು ಗೂಗಲ್ ಮೂಲಕ ತೋರಿಸಿದೆ. ನನ್ನ ತೂಕ ಇಳಿಕೆಯ ಲೇಖನಗಳನ್ನು ಅವರ ಮುಂದೆ ಪ್ರಸ್ತುತಪಡಿಸಿದೆ. ತದನಂತರ ಅಧಿಕಾರಿಗಳು ಪಾಸ್‌ಪೋರ್ಟ್‌ನಲ್ಲಿರುವ ವ್ಯಕ್ತಿ ನಾನೇ ಎಂದು ನಂಬಿದರು ಎಂದು ತಿಳಿಸಿದ್ದಾರೆ.


ಹಿಂದಿನ ತೂಕ ಇಳಿಕೆಯ ಪ್ರಯತ್ನಗಳು ವಿಫಲಗೊಂಡಿದ್ದವು


130 ಕೆಜಿ ತೂಕನಷ್ಟದ ಕುರಿತು ಸಮಿ ಮಾಹಿತಿ ಹಂಚಿಕೊಂಡಿದ್ದು ತೂಕ ಇಳಿಕೆಯು ನನ್ನ ಪ್ರಜ್ಞಾಪೂರ್ವಕ ತೀರ್ಮಾನವಾಗಿದೆ ಎಂದು ತಿಳಿಸಿದ್ದಾರೆ. ದೇಹದ ತೂಕ ಇಳಿಸಲು ತಾವು ಹಲವಾರು ಪ್ರಯತ್ನಗಳನ್ನು ಪಟ್ಟಿರುವುದಾಗಿ ತಿಳಿಸಿರುವ ಸಮಿ ಅನೇಕ ಬಾರಿ ವಿಫಲರಾಗಿದ್ದರು ಎಂದು ತಿಳಿಸಿದ್ದಾರೆ.


ತೂಕ ಇಳಿಸಬೇಕೆಂಬ ನನ್ನ ನಿರ್ಣಯ ಅಷ್ಟೊಂದು ದೃಢವಾಗಿರಲಿಲ್ಲ . ಹಾಗಾಗಿ ನಾನು ತೂಕ ಇಳಿಸುವ ಪ್ರಯತ್ನದಲ್ಲಿ ವಿಫಲನಾದೆ ಎಂದು ಸಮಿ ಹೇಳಿಕೊಂಡಿದ್ದು, ತೂಕ ಇಳಿಸುವುದು ಎಂದರೆ ಅದೊಂದು ಹೊಸ ಜೀವನಶೈಲಿಗೆ ನಾವು ಮಾರ್ಪಾಡು ಹೊಂದುವುದಾಗಿದೆ. ಇಲ್ಲಿ ನಿರಂತರವಾಗಿ ಆ ಜೀವನಶೈಲಿಗೆ ನಾನು ಹೊಂದುವುದು ಮುಖ್ಯವಾಗಿದೆ. ಅದೃಷ್ಟವಶಾತ್ ನನಗೆ ಅದನ್ನು ಮುಂದುವರಿಸಲು ಸಾಧ್ಯವಾಗಿದೆ ಎಂದು ಸಮಿ ತಿಳಿಸಿದ್ದಾರೆ.


ವಾರ್ಡ್‌ರೋಬ್ ಬದಲಾಯಿಸಿಕೊಂಡ ಗಾಯಕ


ತೂಕ ಇಳಿಕೆಯ ನಂತರ ತಮ್ಮ ವಾರ್ಡ್‌ರೋಬ್‌ ಅನ್ನು ಸಂಪೂರ್ಣವಾಗಿ ಬದಲಾಯಿಸಬೇಕಾಯಿತು ಎಂದು ತಿಳಿಸಿರುವ ಹಾಡುಗಾರ ಅವರ ಸೊಂಟದ ಸುತ್ತಳತೆ ಆಗ 81 ಸೆಂ.ಮೀ ಆಗಿತ್ತು ಎಂಬುದನ್ನು ನೆನಪಿಸಿಕೊಂಡಿದ್ದಾರೆ. ನೆನಪಿಗಾಗಿ ತಮ್ಮ ಕೆಲವೊಂದು ದಢೂತಿ ದೇಹದ ಉಡುಪುಗಳನ್ನು ಹಾಗೆಯೇ ಇರಿಸಿಕೊಂಡಿರುವುದಾಗಿ ತಿಳಿಸಿರುವ ಸಮಿ ನನ್ನ ಗುರಿಯನ್ನು ತಲುಪಲು ಇದು ಸಹಕಾರಿಯಾಗಿದೆ ಹಾಗೂ ನನ್ನ ತೂಕ ಇಳಿಕೆಯಲ್ಲಿ ಹೇಗೆ ನಾನು ಗೆಲುವನ್ನು ಸಾಧಿಸಿದೆ ಎಂಬುದಕ್ಕೆ ಈ ಉಡುಪುಗಳು ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.


ನೈಸರ್ಗಿಕವಾಗಿ ತೂಕ ಇಳಿಸಿಕೊಂಡಿರುವ ಅದ್ನನ್ ಸಮಿ


ಜುಲೈ 2022 ರಲ್ಲಿ ಸಮಿ ಅಲ್ವಿದಾ ಹಾಡಿನ ಬಿಡುಗಡೆಯನ್ನು ಮಾಡಿದ್ದರು. ಸಮಿ ತೂಕನಷ್ಟದ ಕುರಿತು ಹಲವಾರು ಸುದ್ದಿಗಳು ಹರಿದಾಡಿತ್ತು. ಹಾಡುಗಾರ ಶಸ್ತ್ರಚಿಕಿತ್ಸೆಗೆ ಒಳಗಾಗಿ ತೂಕವನ್ನು ಕಳೆದುಕೊಂಡರು ಎಂಬ ಸುದ್ದಿ ಕೂಡ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅದ್ನನ್ ಸಮಿ ತಾನು ಯಾವುದೇ ಲಿಪೊಸೆಕ್ಷನ್‌ನಂತಹ ಚಿಕಿತ್ಸೆಗೆ ಒಳಗಾಗಿಲ್ಲ ನೈಸರ್ಗಿಕವಾಗಿಯೇ ತೂಕವನ್ನು ಕಳೆದುಕೊಂಡಿರುವೆ ಎಂದು ತಿಳಿಸಿದ್ದಾರೆ.


ಲಿಪೊಸೆಕ್ಷನ್ ಕೊಂಚ ದುಂಡು ಮುಖ ಹಾಗೂ ಕೊಂಚ ಕೊಬ್ಬಿರುವವರಿಗೆ ಮಾತ್ರ ಸೂಕ್ತ 230 ಕೆಜಿಯವರಿಗಲ್ಲ ಎಂದು ತಿಳಿಸಿದ್ದ ಸಮಿ, ನನ್ನ ದೇಹದ ಕೊಬ್ಬನ್ನು ಹಿಂಡಿ ತೆಗೆಯಲು ವಾಕ್ಯೂಮ್ ಕ್ಲೀನರ್ ಅನ್ನೇ ಬಳಸಬೇಕಿತ್ತು ಎಂದು ಹಾಸ್ಯಸ್ಪದವಾಗಿ ತಿಳಿಸಿದ್ದಾರೆ. ತೂಕ ಇಳಿಸಬೇಕೆಂಬ ಸಂಕಲ್ಪ ಹಾಗೂ ಇಚ್ಛಾಶಕ್ತಿಯೊಂದಿಗೆ ಸಮಿ ತಮ್ಮ ಆಹಾರದಲ್ಲಿ ಎಣ್ಣೆ ಹಾಗೀ ಕೊಬ್ಬನಂಶಗಳನ್ನು ತ್ಯಜಿಸಿದರು ಹಾಗೂ ಪ್ರೋಟೀನ್‌ನ ಬಳಕೆಯನ್ನು ಹೆಚ್ಚಿಸಿಕೊಂಡರು ಎಂದು ತಿಳಿಸಿದ್ದಾರೆ.

Published by:Divya D
First published: