Malang Box office Collection: ಆದಿತ್ಯ ರಾಯ್ ಕಪೂರ್​ ಅಭಿನಯದ ಮಲಂಗ್​ ಚಿತ್ರ ಮೊದಲ ದಿನ ಗಳಿಸಿದೆಷ್ಟು ಗೊತ್ತಾ..!

Malang Box office Collection: ಶುಕ್ರವಾರ ಅಂದರೆ ನಿನ್ನೆಯಷ್ಟೆ ಮಲಂಗ್​ ಬಿಡುಗಡೆಯಾಗಿದ್ದು, ಮಿಶ್ರಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾದಲ್ಲಿ ಆದಿತ್ಯ ಹಾಗೂ ದಿಶಾರ ಸ್ಟೈಲ್​ಗೆ ಕೊಟ್ಟಿರುವ ಮಹತ್ವ ಕತೆ ಹಾಗೂ ಸ್ಕ್ರೀನ್​ಪ್ಲೇಗೆ ಕೊಟ್ಟಿದ್ದರೆ ಚೆನ್ನಾಗಿತ್ತು ಅಂತ ಕೆಲವರು ಹೇಳುತ್ತಿದ್ದಾರೆ.

Anitha E | news18-kannada
Updated:February 8, 2020, 3:32 PM IST
Malang Box office Collection: ಆದಿತ್ಯ ರಾಯ್ ಕಪೂರ್​ ಅಭಿನಯದ ಮಲಂಗ್​ ಚಿತ್ರ ಮೊದಲ ದಿನ ಗಳಿಸಿದೆಷ್ಟು ಗೊತ್ತಾ..!
ಮಲಂಗ್​ ಸಿನಿಮಾದ ಪೋಸ್ಟರ್​
  • Share this:
ಮೋಹಿತ್ ಸೂರಿ ನಿರ್ದೇಶನದ ಆದಿತ್ಯ ರಾಯ್​ ಕಪೂರ್ ಹಾಗೂ ದಿಶಾ ಪಟಾನಿ ನಟನೆಯ 'ಮಲಂಗ್​' ಸಿನಿಮಾ ನಿನ್ನೆಯಷ್ಟೆ ತೆರೆಕಂಡಿದೆ. ಮೋಹಿತ್ ಸೂರಿ ಆ್ಯಕ್ಷನ್ ಕಟ್ ಹೇಳಿರುವ ಕಾರಣಕ್ಕೆ ಈ ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇತ್ತು.

ಶುಕ್ರವಾರ ಅಂದರೆ ನಿನ್ನೆಯಷ್ಟೆ 'ಮಲಂಗ್​' ಬಿಡುಗಡೆಯಾಗಿದ್ದು, ಮಿಶ್ರಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಸಿನಿಮಾದಲ್ಲಿ ಆದಿತ್ಯ ಹಾಗೂ ದಿಶಾರ ಸ್ಟೈಲ್​ಗೆ ಕೊಟ್ಟಿರುವ ಮಹತ್ವ ಕತೆ ಹಾಗೂ ಸ್ಕ್ರೀನ್​ಪ್ಲೇಗೆ ಕೊಟ್ಟಿದ್ದರೆ ಚೆನ್ನಾಗಿತ್ತು ಅಂತ ಕೆಲವರು ಹೇಳುತ್ತಿದ್ದಾರೆ.

Aditya Roy Kapur starrer Malang movie first day box office collection
'ಮಲಂಗ್​' ಸಿನಿಮಾದ ಪೋಸ್ಟರ್​


ಬಿಡುಗಡೆಗೆ ಮುನ್ನವೇ 'ಮಲಂಗ್​'ನ ಸಂಗೀತ ಪ್ರೇಕ್ಷಕರ ಮನ ಗೆದ್ದಿತ್ತು. 'ಆಶಿಕಿ 2' ಸಿನಿಮಾದಂತೆಯೇ ಇದೂ ಸಹ ಒಂದು ಮ್ಯೂಸಿಕಲ್​ ಹಿಟ್ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಲಾಗುತ್ತಿತ್ತು. ಇಂತಹ ನಿರೀಕ್ಷಿತ ಸಿನಿಮಾದ ಮೊದಲ ದಿನದ ಗಳಿಕೆ ಕೇವಲ 6.71 ಕೋಟಿಯಾಗಿದೆ.

#Malang is decent on Day 1... Should’ve grossed higher given its genre... National multiplexes contribute 50%+ of Day 1 biz... Mass circuits low... Needs to show more than normal jump on Day 2, though biz in #Delhi will be limited... Fri ₹ 6.71 cr. #India biz.

ಬಾಕ್ಸಾಫಿಸ್​ ಇಂಡಿಯಾ ವೆಬ್​ಸೈಟ್ ವರದಿ ಮಾಡಿರುವ ಪ್ರಕಾರ ಈ ಚಿತ್ರ ಮೊದಲ ದಿನ 6 ಕೋಟಿ ಗಳಿಕೆ ಮಾಡಿದೆಯಂತೆ. ದೆಹಲಿಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಇಂದು ಚಿತ್ರಮಂದಿರಗಳು ಸಂಜೆವರೆಗೆ ಮುಚ್ಚಿರುತ್ತವೆ. ಇದು ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

Aditya Roy Kapur starrer Malang movie first day box office collection
'ಮಲಂಗ್​' ಸಿನಿಮಾದಲ್ಲಿ ದಿಶಾ ಹಾಗೂ ಆದಿತ್ಯ ರಾಯ್ ಕಪೂರ್​


ಇದನ್ನೂ ಓದಿ: Anupama Parameshwaran: ಅವಕಾಶಗಳಿಗಾಗಿ ಹೀಗೆಲ್ಲ ಮಾಡುತ್ತಿದ್ದಾರಾ ಪವರ್​ ಸ್ಟಾರ್​ ನಾಯಕಿ ಅನುಪಮಾ..!

'ಮಲಂಗ್'​ ಚಿತ್ರದ ಜೊತೆಗೆ ಈ ವಾರ 6 ಚಿತ್ರಗಳು ತೆರೆ ಕಂಡಿವೆ. ಅದರಲ್ಲೂ 'ಶಿಕಾರಾ' ಹಾಗೂ 'ಹ್ಯಾಕ್ಡ್'​ ಸಹ ಇದರಲ್ಲಿವೆ. ಮಲಂಗ್ ಗಳಿಕೆ ವಿಷಯದಲ್ಲಿ​ ಬೇರೆ ಸಿನಿಮಾಗಳಿಗಿಂತ ಮುಂದಿದೆ. ಸಿನಿಮಾ ವಿಶ್ಲೇಷಕ ತರನ್​ ಆದರ್ಶ್​ ಅವರು ಟ್ವೀಟ್​ ಮಾಡಿದ್ದು, 'ಮಲಂಗ್'​ ಗಳಿಎಕ 6.71 ಕೋಟಿ ಎಂದು ಟ್ವೀಟ್​ ಮಾಡಿದ್ದಾರೆ.

Saina Nehwal: ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರಾ ಸೈನಾ ನೆಹ್ವಾಲ್: ವೈರಲ್​ ಆಗುತ್ತಿವೆ ಚಿತ್ರಗಳು​..!

First published: February 8, 2020, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading