ಕೆಲವೊಮ್ಮೆ ಅಭಿಮಾನಿಗಳು (Fans) ತಮ್ಮ ನೆಚ್ಚಿನ ಹೀರೋ ಅಥವಾ ಹೀರೋಯಿನ್ (Heroine) ಎದುರಿಗೆ ಬಂದಾಗ ವಿಪರೀತವಾಗಿ ಆಡುವುದನ್ನು ನೋಡಬಹುದು. ಅಭಿಮಾನಿಗಳು ಹಾಗೂ ಫಾಲೋವರ್ಸ್ ತಮ್ಮ ಸ್ಟಾರ್ ಹೀರೋ, ಹೀರೋಯಿನ್ ಎದುರು ಸಿಕ್ಕಾಗ ಎಕ್ಸೈಟ್ಮೆಂಟ್ನಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸುವುದು ಬಹಳಷ್ಟು ಸಲ ಸುದ್ದಿಯಾಗುತ್ತದೆ. ನಟಿಯರಿಗೆ ಈ ಸಮಸ್ಯೆ ಭಾರೀ ಹೆಚ್ಚು. ಆದರೆ ಈ ಸಮಸ್ಯೆ ನಟರಿಗೂ ಇದೆ ಎನ್ನುವಂತಹ ವಿಡಿಯೋ ಈಗ ವೈರಲ್ ಆಗಿದೆ.
ವೈರಲ್ ಆಗ್ತಿದೆ ವಿಡಿಯೋ
ಆಶಿಕಿ 2 ಸಿನಿಮಾ ನೆನಪಿದೆಯಾ? ಅದರಲ್ಲಿ ನಟಿಸಿರೋ ಕ್ಯೂಟ್ ಹೀರೋ ನಿಮಗೆ ನೆನಪಿದ್ದರೆ ಸದ್ಯ ವೈರಲ್ ಆಗಿರುವುದು ಅವರದ್ದೇ ವಿಡಿಯೋ. ಆದಿತ್ಯ ರಾಯ್ ಕಪೂರ್ (Aditya Roy Kapur) ಅವರು ಈಗ ಸಾರ್ವಜನಿಕ ಪ್ರದೇಶದಲ್ಲಿ ಮುಜುಗರಕ್ಕೊಳಗಾಗಿದ್ದು ಅದರ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
ಆಗಿರುವುದೇನು?
ಆಘಾತಕಾರಿ ಬೆಳವಣಿಗೆಯಲ್ಲಿ ಆದಿತ್ಯ ರಾಯ್ ಕಪೂರ್ ಅವರ ಅಭಿಮಾನಿಯೊಬ್ಬರು ನಟನೊಂದಿಗೆ ಫೋಟೋ ತೆಗೆಸಿಕೊಳ್ಳಲು ಒತ್ತಾಯಿಸಿ ನಂತರ ಬಲವಂತವಾಗಿ ನಟನನ್ನು ಚುಂಬಿಸಲು (Kissing) ಪ್ರಯತ್ನಿಸಿದ್ದಾರೆ. ವೈರಲ್ ಆಗಿರುವ ಈ ವೀಡಿಯೊದಲ್ಲಿ, ಮಹಿಳೆಯೊಬ್ಬರು ದಿ ನೈಟ್ ಮ್ಯಾನೇಜರ್ ಸಿನಿಮಾ ಸ್ಟಾರ್‌ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದನ್ನು ಕಾಣಬಹುದು.
ನಟ ದೂರ ಸರಿದರೂ ಮತ್ತೆ ಕಿಸ್ ಮಾಡೋಕೆ ಯತ್ನಿಸಿದ ಅಭಿಮಾನಿ
ಫೋಟೋ ತೆಗೆದ ನಂತರ, ಅವರು ಬಲವಂತವಾಗಿ ನಟನ ಕೆನ್ನೆಗೆ ಮುತ್ತಿಡಲು ಪ್ರಯತ್ನಿಸಿದರು. ಆದಿತ್ಯ ರಾಯ್ ಕಪೂರ್ ಇದರಿಂದ ತಪ್ಪಿಸಿಕೊಳ್ಳಲು ದೂರ ಸರಿದರೂ ಅವರು ಮತ್ತೆ ನಟನನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದಾರೆ ಲೇಡಿ ಫ್ಯಾನ್.
ಆದರೂ ಆದಿತ್ಯ ಕಪೂರ್ ತಕ್ಷಣ ಎಚ್ಚೆತ್ತುಕೊಂಡು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ನಿಧಾನವಾಗಿ ಅಭಿಮಾನಿಯಿಂದ ದೂರಸರಿದಿದ್ದಾರೆ ನಟ. ಆದರೂ ಮಹಿಳಾ ಅಭಿಮಾನಿ ನಟನನ್ನು ಬಿಡಲು ನಿರಾಕರಿಸಿದರು. ಹೀರೋ ಸ್ಥಳದಿಂದ ಹೊರಡುವ ಮೊದಲು ಕೊನೆಗೂ ನಟನ ಕೈಯನ್ನು ಚುಂಬಿಸಿದ್ದಾರೆ.
ಆದಿತ್ಯ ರಾಯ್ ಕಪೂರ್ ಮುಜುಗರಗೊಂಡರೂ ಅದನ್ನು ತೋರಿಸಿಕೊಳ್ಳದೆ ಕಿರುನಗೆ ಬೀರಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಮಹಿಳಾ ಅಭಿಮಾನಿಗೆ ಸಖತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
View this post on Instagram
ವಿಡಿಯೋಗೆ ಕಮೆಂಟ್ ಮಾಡಿದ ಜನ, ಓ ದೇವರೇ! ಈ ರೀತಿಯ ಕಿರುಕುಳ ಸರಿಯಲ್ಲ! ಈ ಜನಕ್ಕೆ ಏನಾಗಿದೆ? ನಾನು ಕೂಡಾ ನಟನನ್ನು ಇಷ್ಟಪಡುತ್ತೇನೆ . ಆದರೆ ನಾನು ಅವನನ್ನು ಬಲವಂತವಾಗಿ ಚುಂಬಿಸಲು ಪ್ರಯತ್ನಿಸುವುದಿಲ್ಲ, ಹಾಗೆ ಮಾಡುವುದು ಕಿರುಕುಳ ಎಂದಿದ್ದಾರೆ. ಇನ್ನೊಬ್ಬರು ಕಮೆಂಟ್ ಮಾಡಿ ಹಲೋ ಲೇಡಿ, ಕೊರೋನಾ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲಎಂದಿದ್ದಾರೆ. ಒಬ್ಬ ಪುರುಷ ಈ ರೀತಿ ಮಾಡಿದರೆ, ಪೋಸ್ಟ್ ವಿಭಿನ್ನವಾಗಿರುತ್ತದೆ ಎಂದಿದ್ದಾರೆ.
ದಿ ನೈಟ್ ಮ್ಯಾನೇಜರ್ನಲ್ಲಿ ಆದಿತ್ಯ ರಾಯ್ ಕಪೂರ್
ದಿ ನೈಟ್ ಮ್ಯಾನೇಜರ್ನಲ್ಲಿ ಅನಿಲ್ ಕಪೂರ್ ಮತ್ತು ಸೋಭಿತಾ ಧೂಳಿಪಾಲ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿರೀಸ್ ಶುಕ್ರವಾರ ಬಿಡುಗಡೆಯಾಗಲಿದೆ. ಸಂದೀಪ್ ಮೋದಿ ರಚಿಸಿದ ಮತ್ತು ನಿರ್ದೇಶಿಸಿದ ಸರಣಿಯನ್ನು ದಿ ಇಂಕ್ ಫ್ಯಾಕ್ಟರಿ ಮತ್ತು ಬನಿಜಯ್ ಏಷ್ಯಾ ಮೂಲಕ ಬ್ಯಾಂಕ್‌ರೋಲ್ ಮಾಡಲಾಗಿದೆ.
ಸರಣಿಯಲ್ಲಿ ಅನಿಲ್ ಕಪೂರ್ ಅವರು ವ್ಯಾಪಾರ ಉದ್ಯಮಿಯಾಗಿ ಪೋಸ್ ನೀಡುವ ಶಸ್ತ್ರಾಸ್ತ್ರಗಳ ವ್ಯಾಪಾರಿಯ ಪಾತ್ರವನ್ನು ಮಾಡಿದ್ದಾರೆ. ಆದಿತ್ಯ ಅವರು ಐಷಾರಾಮಿ ಹೋಟೆಲ್‌ನ ರಾತ್ರಿ ಪಾಳಿ ಮ್ಯಾನೇಜರ್ ಮತ್ತು ಮಾಜಿ ಸೈನಿಕನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾರ್ಯಕ್ರಮದ ಚಿತ್ರೀಕರಣ ಪೂರ್ಣಗೊಂಡಿತ್ತು. ಇತ್ತೀಚೆಗೆ ನಟ ಈ ಸಿರೀಸ್ನ ಪ್ರಮೋಷನ್ ಭಾಗವಾಗಿ ಹೋಟೆಲ್ ಒಂದರಲ್ಲಿ ನೈಟ್ ಮ್ಯಾನೇಜರ್ ಆಗಿ ಕಾಣಿಸಿಕೊಂಡರು. ನಟನನ್ನು ನೋಡಿದ ಗ್ರಾಹಕರು ಅವರನ್ನು ಗುರುತುಹಿಡಿದು ಖುಷಿಯಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಆದರೆ ಅದೇನೇ ಇದ್ದರೂ ಈಗ ನಡೆದಿರುವ ಘಟನೆ ಮಾತ್ರ ನಟನಿಗೆ ಮುಜುಗರ ತಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ