ರಣವೀರ್​ ಸಿಂಗ್​ ಪ್ರೀತಿಸಿದ ಹುಡುಗಿ ಕೈಕೊಡೋಕೆ ಆದಿತ್ಯ ರಾಯ್​ ಕಪೂರ್​ ಕಾರಣವಂತೆ!

ನೇಹಾ ಧೂಪಿಯಾ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಣವೀರ್​ ಸಿಂಗ್​, ಕಾಲೇಜು ದಿನಗಳಲ್ಲಿ ರಿಲೇಶನ್​ಶಿಪ್​ನಲ್ಲಿದ್ದೆ. ಆದಿತ್ಯ ರಾಯ್​ ಕಪೂರ್​ ಆ ಹುಡುಗಿಯನ್ನು ಪ್ರೀತಿಸಲು ಆರಂಭಿಸಿದ್ದರು ಎಂದಿದ್ದರು.

Ranveer Singh- Aditya Roy

Ranveer Singh- Aditya Roy

 • Share this:
  ಅದು 2017ರ ಸಮಯ. ಆದಿತ್ಯ ರಾವ್​ ಕಪೂರ್​ ವಿರುದ್ಧ ರಣವೀರ್​ ಸಿಂಗ್​ ಆರೋಪ ಒಂದನ್ನು ಮಾಡಿದ್ದರು. ಕಾಲೇಜು ದಿನಗಳಲ್ಲಿರುವ ಗರ್ಲ್​ಫ್ರೆಂಡ್​ ಜೊತೆ ಬ್ರೇಕಪ್​ ಆಗೋಕೆ ಆದಿತ್ಯ ರಾಯ್​ ಕಪೂರ್​ ಕಾರಣ ಎಂದು ದೂರಿದ್ದರು ರಣವೀರ್​ ಸಿಂಗ್​. ಇದಾದ ಮೂರು ವರ್ಷಗಳ ನಂತರದಲ್ಲಿ ಈ ಬಗ್ಗೆ ಆದಿತ್ಯ ರಾಯ್​ ಕಪೂರ್​ ಪ್ರತಿಕ್ರಿಯೆ ನೀಡಿದ್ದಾರೆ.

  ನೇಹಾ ಧೂಪಿಯಾ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಣವೀರ್​ ಸಿಂಗ್​, ಕಾಲೇಜು ದಿನಗಳಲ್ಲಿ ರಿಲೇಶನ್​ಶಿಪ್​ನಲ್ಲಿದ್ದೆ. ಆದಿತ್ಯ ರಾಯ್​ ಕಪೂರ್​ ಆ ಹುಡುಗಿಯನ್ನು ಪ್ರೀತಿಸಲು ಆರಂಭಿಸಿದ್ದರು. ಅದಕ್ಕಾಗಿ ಆಕೆ ನನ್ನನ್ನು ಬಿಟ್ಟು ಹೋಗಿದ್ದಳು. ಆದಿತ್ಯಾ ಹುಡುಗಿಯರ ಬಗ್ಗೆ ತುಂಬಾನೇ ಕ್ರೇಜ್​ ಹೊಂದಿದ್ದರು ಎಂದಿದ್ದರು. ಆದರೆ ಈ ಬಗ್ಗ ಆದಿತ್ಯ ರಾಯ್​ ಕಪೂರ್​ ಏನನ್ನೂ ಮಾತನಾಡಿರಲ್ಲಿ. ಮೂರು ವರ್ಷಗಳ ನಂತರದಲ್ಲಿ ಆದಿತ್ಯ ಈ ಬಗ್ಗೆ ಮಾತನಾಡಿದ್ದಾರೆ.

  ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಆದಿತ್ಯ ರಾವ್​ ಸ್ಪಷ್ಟನೆ ನೀಡಿದ್ದಾರೆ. "ನಾನು ರಣವೀರ್​ ಸಿಂಗ್​ ಮಾಜಿ ಗರ್ಲ್​ಫ್ರೆಂಡ್ ಜೊತೆ ಪ್ರೀತಿಯಲ್ಲಿದ್ದಿದ್ದು ಹೌದು. ಆದರೆ, ರಣವೀರ್​ ಹಾಗೂ ಆಕೆಯ ಸಂಬಂಧ ಮುರಿದುಬಿದ್ದ 8 ತಿಂಗಳ ನಂತರ ಆಕೆ ನನಗೆ ಪರಿಚಯವಾಗಿದ್ದಳು. ಅವರ ಸಂಬಂಧದಲ್ಲಿ ನಾನು ಹುಳಿ ಹಿಂಡಿರಲಿಲ್ಲ ಎಂದಿರುವ ಆದಿತ್ಯ," ಬ್ರೇಕಪ್​ ಸ್ಟೋರಿ ಹೇಳುವಾಗ ರಣವೀರ್​ ಸಿಂಗ್​ ತುಂಬಾನೇ ಡ್ರಾಮೆಟಿಕ್​ ಆಗಿದ್ದರು ಎಂದು ಆರೋಪಿಸಿದ್ದರು.
  Published by:Rajesh Duggumane
  First published: